ಇಂಗ್ಲೆಂಡ್ ತಂಡದ ಮಾಜಿ ಆಲ್‌ರೌಂಡರ್ ಮತ್ತು ನಾಯಕ ಆಂಡ್ರ್ಯೂ ಫ್ಲಿಂಟಾಫ್ (Andrew Flintoff) ಬಿಬಿಸಿ ಶೋ ಟಾಪ್ ಗೇರ್‌ನ (BBC Top Gear) ಸಂಚಿಕೆಯ ಚಿತ್ರೀಕರಣದ ವೇಳೆ ಕಾರು ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಸರ್ರೆಯ ಡನ್ಸ್‌ಫೋಲ್ಡ್ ಪಾರ್ಕ್ ಏರೋಡ್ರೋಮ್‌ನಲ್ಲಿ ಸೋಮವಾರ ಕಾರು ಅಪಘಾತ ಸಂಭವಿಸಿದೆ. ಆದರೆ, ಘಟನೆಯ ನಂತರ ಆಂಗ್ಲ ಮಾಧ್ಯಮಗಳು ವರದಿ ಮಾಡಿದಂತೆ ಫ್ಲಿಂಟಾಫ್ ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ತಿಳಿದುಬಂದಿದೆ. ಈ ಮಾಜಿ ಇಂಗ್ಲಿಷ್ ಕ್ರಿಕೆಟಿಗ 2010ರಲ್ಲಿ ಆಟದಿಂದ ನಿವೃತ್ತರಾದರು ಮತ್ತು ಅಂದಿನಿಂದ ದೂರದರ್ಶನ ರಿಯಾಲಿಟಿ ಶೋಗಳಲ್ಲಿ ನಿಯಮಿತವಾಗಿದ್ದಾರೆ.
ಬಿಬಿಸಿ ಟಾಪ್ ಗೇರ್ ಹೋಸ್ಟ್:
ಅವರು 2019ರಲ್ಲಿ ಪ್ರಖ್ಯಾತ ಬಿಬಿಸಿ ಕ್ರೀಡಾ ಕಾರ್ಯಕ್ರಮ ಟಾಪ್ ಗೇರ್ ಅನ್ನು ಹೋಸ್ಟ್ ಮಾಡುತ್ತಿದ್ದಾರೆ. ಇದೇ ರೀತಿ ಕಾರ್ಯಕ್ರಮದ ಚಿತ್ರೀಕರಣದ ವೇಳೆ ಫ್ಲಿಂಟಾಫ್ ಟೆಸ್ಟ್ ಟ್ರ್ಯಾಕ್‌ನಲ್ಲಿ ಅಪಘಾತಕ್ಕೆ ಒಳಗಾಗಿದ್ದಾರೆ. ತಕ್ಷಣ ಸಿಬ್ಬಂದಿಗಳು ಮತ್ತು ವೈದ್ಯರು ಅವರನ್ನು ಆಸ್ಪತ್ರೆಗೆ ದಾಖಲಸಿಇದ್ದು, ಚಿಕಿತ್ಸೆ ನಡೆಯುತ್ತಿದ್ದು, ಯಾವುದೇ ಪ್ರಾಣಾಪಾಯವಿಲ್ಲ ಎಂದು ತಿಳಿದುಬಂದಿದೆ.
Andrew Flintoff suffers injury in a car crash, he's fine now.
Wishing him a speedy recovery!
— Mufaddal Vohra (@mufaddal_vohra) December 14, 2022
ಏರ್ ಆ್ಯಂಬುಲೆನ್ಸ್ ಮೂಲಕ ಸ್ಥಳಾಂತರ:
ಚಿತ್ರೀಕರಣಕ್ಕಾಗಿ ಎಲ್ಲಾ ಸಾಮಾನ್ಯ ಆರೋಗ್ಯ ಮತ್ತು ಸುರಕ್ಷತಾ ಕ್ರಮಗಳು ಸಹ ನೋಡಿಕೊಳ್ಳಲಾಗಿತ್ತು. ಸ್ವಲ್ಪ ಸಮಯದ ನಂತರ ಏರ್ ಆ್ಯಂಬುಲೆನ್ಸ್ ಮೂಲಕ ಫ್ರೆಡ್ಡಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸದ್ಯಕ್ಕೆ ಚಿತ್ರೀಕರಣವನ್ನು ಮುಂದೂಡಲಾಗಿದೆ ಮತ್ತು ಫ್ರೆಡ್ಡಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಇಂಗ್ಲೆಂಡ್ ಮಾಧ್ಯಮಗಳು ವರದಿ ಮಾಡಿದೆ. ಇದಕ್ಕೂ ಮುನ್ನ 2019 ರಲ್ಲಿ ಪ್ರಸಿದ್ಧ ದೂರದರ್ಶನ ಕಾರ್ಯಕ್ರಮದ ಮತ್ತೊಂದು ಸಂಚಿಕೆಯ ಚಿತ್ರೀಕರಣದ ಸಮಯದಲ್ಲಿ ಫ್ಲಿಂಟಾಫ್ ಅಪಘಾತಕ್ಕೆ ಒಳಗಾಗಿದ್ದರು. ಆಗಲೂ ಸಹ ಯಾವುದೇ ಹೆಚ್ಚಿನ ತೊಂದರೆ ಆಗದೆಯೇ ವಾಪಸ್ಸಾಗಿದ್ದರು.
ಇದನ್ನೂ ಓದಿ: Team India: ಅನಾರೋಗ್ಯದಿಂದ ಬಳಲುತ್ತಿದ್ದಾರೆ ಟೀಂ ಇಂಡಿಯಾ ಯಂಗ್ ಪ್ಲೇಯರ್, ಸಂಪೂರ್ಣ ಟೂರ್ನಿಯಿಂದಲೇ ಔಟ್!
ಆಂಡ್ರ್ಯೂ ಫ್ಲಿಂಟಾಫ್ ವೃತ್ತಿ ಜೀವನ:
ಇಂಗ್ಲೆಂಡ್ ತಂಡದ ಮಾಜಿ ನಾಯಕ ಆಂಡ್ರ್ಯೂ ಫ್ಲಿಂಟಾಫ್ ತಂಡದ ಅನೇಕ ಗೆಲುವಿನಲ್ಲಿ ಪ್ರಮುಖಪಾತ್ರ ನಿರ್ವಹಿಸಿದ್ದಾರೆ. ಅಲ್ಲದೇ ಅವರು ತಮ್ಮ ಆಲ್‌ರೌಂಡರ್ ಪ್ರದರ್ಶನ ಮತ್ತು ನಾಯಕತ್ವದಿಂದ ಹೆಚ್ಚು ಪ್ರಸಿದ್ಧರಾಗಿದ್ದರು. ಅವರು ತಮ್ಮ ನಿವೃತ್ತಿಯವರೆಗೆ ಇಂಗ್ಲೆಂಡ್ ಪರ 79 ಟೆಸ್ಟ್ ಮತ್ತು 141 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಬಳಿಕ ಅವರು 2009 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. 2005ರ ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ಪರ ಅಮೋಘ ಪ್ರದರ್ಶನ ನೀಡಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದರು.
ಅವರು ಒಟ್ಟು 79 ಟೆಸ್ಟ್ ಪಂದ್ಯಗಳಿಂದ 5 ಶತಕ ಮತ್ತು 26 ಅರ್ಧಶತಕದ ನೆರವಿನಿಂದ 3845 ರನ್ ಮತ್ತು 226 ವಿಕೆಟ್ ಪಡೆದಿದ್ದಾರೆ. ಅದರಂತೆ 141 ಏಕದಿನ ಪಂದ್ಯಗಳಲ್ಲಿ 3 ಶತಕ 18 ಅರ್ಧಶತಕ ಗಳಿಸಿ 3394 ರನ್ ಗಳಿಸಿದರೆ, 119 ವಿಕೆಟ್ ಪಡೆದಿದ್ದಾರೆ. ಟಿ20 ಕ್ರಿಕೆಟ್ನಲ್ಲಿ 7 ಪಂದ್ಯಗಳನ್ನಾಡಿರುವ ಪ್ಲಿಂಟಾಫ್ 62 ರನ್ ಮತ್ತು 5 ವಿಕೆಟ್ ಪಡೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ