ಫಾರ್ಮ್​​ನಲ್ಲಿದ್ದರು, ಸಾಧನೆ ಮಾಡಿದ್ದರು ಭಾರತ ಕ್ರಿಕಟ್ ತಂಡದಲ್ಲಿ ಈ ಆಟಗಾರರಿಗೆ ಸ್ಥಾನವಿಲ್ಲ

news18
Updated:September 8, 2018, 3:34 PM IST
ಫಾರ್ಮ್​​ನಲ್ಲಿದ್ದರು, ಸಾಧನೆ ಮಾಡಿದ್ದರು ಭಾರತ ಕ್ರಿಕಟ್ ತಂಡದಲ್ಲಿ ಈ ಆಟಗಾರರಿಗೆ ಸ್ಥಾನವಿಲ್ಲ
  • News18
  • Last Updated: September 8, 2018, 3:34 PM IST
  • Share this:
ನ್ಯೂಸ್ 18 ಕನ್ನಡ

ದೇಶಿ ಕ್ರಿಕೆಟ್​​​ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಅಂತರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗುತ್ತದೆ ಅಂದುಕೊಂಡರೆ ಆ ಹಾದಿ ಭಾರತ ಕ್ರಿಕೆಟ್ ತಂಡದಲ್ಲಿ ಸುಗಮವಿಲ್ಲ. ಮಯಾಂಕ್ ಅಗರ್ವಾಲ್ ಅವರು ಕಳೆದ ಒಂದು ವರ್ಷದಿಂದ ಭರ್ಜರಿ ಫಾರ್ಮ್​​​ನಲ್ಲಿದ್ದು, 2017-18ರ ರಣಜಿಯಲ್ಲಿ 1 ಸಾವಿರ ಗಳಿಸಿದ ಏಕೈಕ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಇಷ್ಟೆಲ್ಲಾ ಸಾಧನೆ ಮಾಡಿದರು ಅಗರ್ವಾಲ್​​ಗೆ ಇಂಗ್ಲೆಂಡ್​ ಟೆಸ್ಟ್​​ ಸರಣಿ ಜೊತೆಗೆ ಏಷ್ಯಾ ಕಪ್​​​ನಲ್ಲೂ ಅವಕಾಶ ಸಿಗಲಿಲ್ಲ. ಈ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಕೂಡ ಆಯ್ಕೆ ಸಮಿತಿ ವಿರುದ್ಧ ಕಿಡಿಕಾರಿದ್ದರು. ಇನ್ನು ಬಿಸಿಸಿಐ 'ಕಳೆದ 1 ವರ್ಷದಿಂದ ಅಗರ್ವಾಲ್ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ, ಅವರಿಗೆ ಶೀಘ್ರದಲ್ಲೇ ಅವಕಾಶ ನೀಡಲಾಗುವುದು' ಎಂಬ ಮಾತು ಹೇಳಿದೆಯಷ್ಟೆ. ಸದ್ಯ ಇದೇ ಸಾಲಿಗೆ ಕರ್ನಾಟಕದ ಮತ್ತೊಬ್ಬ ಆಟಗಾರ ಕರುಣ್ ನಾಯರ್ ಕೂಡ ಸೇರಿದ್ದಾರೆ. ಆದರೆ ಈ ಬಾರಿ ಆಯ್ಕೆ ಸಮಿತಿ ವಿರುದ್ಧ ಕ್ರಿಕೆಟ್ ದಿಗ್ಗಜರೇ ಗರಂ ಆಗಿದ್ದಾರೆ.

ಬ್ಯಾಟಿಂಗ್ ವೈಫಲ್ಯದಿಂದ ಟೀಂ ಇಂಡಿಯಾ ಆಂಗ್ಲರ ನಾಡಲ್ಲಿ ಟೆಸ್ಟ್​ ಸರಣಿ ಗೆಲ್ಲುವ ಕನಸು ಈಗಾಗಲೇ ಭಗ್ನಗೊಂಡಿದೆ. 5ನೇ ಟೆಸ್ಟ್​ ಆದರು ಗೆದ್ದು ಮಾನ ಉಳಿಸುವ ಪ್ಲಾನ್​​ನಲ್ಲಿರುವ ಕೊಹ್ಲಿ, ಆಡುವ 11ರ ಬಳಗದ ಆಯ್ಕೆಯಲ್ಲಿ ಎಡವಿದ್ದಾರೆ. ಕರುಣ್ ನಾಯರ್ ಅವರು ಇಂಗ್ಲೆಂಡ್ ಟೆಸ್ಟ್​ ಸರಣಿಗೆ ಆಯ್ಕೆ ಆಗಿದ್ದು ಬಿಟ್ಟರೆ, ಒಂದು ಪಂದ್ಯದಲ್ಲೂ ಅವಕಾಶ ನೀಡಲಿಲ್ಲ. ಬದಲಾಗಿ ಹನುಮ ವಿಹಾರಿ 5ನೇ ಟೆಸ್ಟ್​ನಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಈ ಹಿಂದೆ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್​ನಲ್ಲಿ ನಾಯರ್ ಅಜೇಯ 303 ರನ್ ಬಾರಿಸಿದ್ದರು. ಜೊತೆಗೆ ಟೆಸ್ಟ್ ಕ್ರಿಕೆಟ್​ನಲ್ಲಿ ವಿರೇಂದ್ರ ಸೆಹ್ವಾಗ್ ನಂತರ ತ್ರಿಶತಕ ಬಾರಿಸಿದ ಏಕೈಕ ಆಟಗಾರ ಕರುಣ್ ನಾಯರ್ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಭರ್ಜರಿ ಫಾರ್ಮ್​​ ಜೊತೆಗೆ ಅತ್ಯುತ್ತಮ ಸಾಧನೆ ಮಾಡಿರುವ ಕರುಣ್​​ಗೆ ತಂಡಕ್ಕೆ ಆಯ್ಕೆಯಾದರು, ಆಡುವ 11ರ ಬಳಗದಲ್ಲಿ ಮಾತ್ರ ಸ್ಥಾನ ಸಿಗಲಿಲ್ಲ. ಸದ್ಯ ಈ ಬಗ್ಗೆ ಲಿಟಲ್ ಮಾಸ್ಟರ್ ಸುನೀಲ್ ಗವಾಸ್ಕರ್ ಕೂಡ ಮೌನ ಮುರಿದಿದ್ದಾರೆ.

'ಭಾರತ ಕ್ರಿಕೆಟ್ ತಂಡದಲ್ಲಿ ತ್ರಿಶತಕ ಗಳಿಸಿದವರೆಂದರೆ ಅದು ವಿರೇಂದ್ರ ಸೆಹ್ವಾಗ್ ಹಾಗೂ ಕರುಣ್ ನಾಯರ್. ಆದರು ನಾಯರ್​ಗೆ ಮಾತ್ರ ಆಡುವ 11ರ ಬಳಗದಲ್ಲಿ ಅವಕಾಶ ನೀಡಿಲ್ಲ. ಇಂಗ್ಲೆಂಡ್ ವಿರುದ್ಧವೇ ತ್ರಿಶತಕ ಬಾರಿಸಿದ್ದ ಇವರಿಗೆ ಆಡಿಸದೆ ಇರುವುದಕ್ಕೆ ಏನು ಕಾರಣ ಎಂಬುದು ತಿಳಿಯುತ್ತಿಲ್ಲ' ಎಂದು ಗವಾಸ್ಕರ್ ಕಿಡಿಕಾರಿದ್ದಾರೆ.

ಒಟ್ಟಾರೆ ಇತ್ತೀಚೆಗೆ ಫಾರ್ಮ್​​ನಲ್ಲಿದ್ದರು, ಉತ್ತಮ ಸಾಧನೆ ಮಾಡಿದರು ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದು ಕಷ್ಟ ಎಂಬ ಸ್ಥಿತಿ ಉಂಟಾಗಿದೆ. ಎಲ್ಲಾದರು ಸ್ಥಾನ ಸಿಕ್ಕರು ಆಡುವ 11ರ ಬಳಗಕ್ಕೆ ಆಯ್ಕೆಯಾಗುವುದು ಅನುಮಾನವೆ.
First published: September 8, 2018, 3:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading