PKL 8: ಪ್ರೋಕಬಡ್ಡಿ ಲೀಗ್​ನಲ್ಲಿ ಮಿಂಚುತ್ತಿರುವ ವಿದೇಶೀ ಆಟಗಾರರು ಇವರು

Pro Kabaddi League 2021: ಪ್ರೋಕಬಡ್ಡಿ ಲೀಗ್​ನಲ್ಲಿ ವಿದೇಶೀ ಆಟಗಾರರೆಂದರೆ ಪ್ರಮುಖವಾಗಿ ಕೇಳಿಬರುವ ಹೆಸರೆಂದರೆ ಜಾನ್ ಕುನ್ ಲೀ, ಮೆರಾಜ್ ಶೇಖ್, ಅಟ್ರಶಲಿ ಮೊದಲಾದವರು.

ಮೆರಾಜ್ ಶೇಖ್ ರೇಡಿಂಗ್ ಮಾಡಿ ತಪ್ಪಿಸಿಕೊಳ್ಳುತ್ತಿರುವುದು

ಮೆರಾಜ್ ಶೇಖ್ ರೇಡಿಂಗ್ ಮಾಡಿ ತಪ್ಪಿಸಿಕೊಳ್ಳುತ್ತಿರುವುದು

 • News18
 • Last Updated :
 • Share this:
  ಬೆಂಗಳೂರು: ಪ್ರೋಕಬಡ್ಡಿ ಲೀಗ್​ನಲ್ಲಿ (Pro Kabaddi League) ಹಲವು ವಿದೇಶೀ ಆಟಗಾರರು ಮಿಂಚಿದ್ದಾರೆ. ಪ್ರತೀ ತಂಡದಲ್ಲೂ ಒಬ್ಬರಾದರೂ ವಿದೇಶೀ ಆಟಗಾರರು ಇರಬೇಕು ಎಂಬ ನಿಯಮವೂ ಇದೆ. ಹೀಗಾಗಿ, ಎಲ್ಲಾ 12 ತಂಡಗಳಲ್ಲೂ ಫಾರೀನ್ ಪ್ಲೇಯರ್ಸ್ ಇದ್ದಾರೆ. ಭಾರತ ಬಿಟ್ಟರೆ ಕಬಡ್ಡಿಯಲ್ಲಿ ಪ್ರಬಲವಾಗಿರುವ ಬೇರೆ ದೇಶಗಳೆಂದರೆ ಇರಾನ್, ದಕ್ಷಿಣ ಕೊರಿಯಾ, ಪಾಕಿಸ್ತಾನ, ಬಾಂಗ್ಲಾದೇಶ.

  ಪ್ರೋ ಕಬಡ್ಡಿಯಲ್ಲಿ ಆಡುವ ವಿದೇಶೀ ಆಟಗಾರರಲ್ಲಿ ಬಹುತೇಕರು ಇರಾನ್ ಮತ್ತು ದಕ್ಷಿಣ ಕೊರಿಯಾದವರೇ. ಅದರಲ್ಲೂ ಇರಾನ್ ದೇಶದ ಕಬಡ್ಡಿ ಸ್ಟಾರ್​ಗಳಿಗೆ ಡಿಮ್ಯಾಂಡ್ ಹೆಚ್ಚು. ಇರಾನ್ ದೇಶದ ಆಟಗಾರರು ದೈಹಿಕವಾಗಿ ಹೆಚ್ಚು ಬಲಶಾಲಿಗಳಾಗಿದ್ದಾರೆ. ದಕ್ಷಿಣ ಕೊರಿಯಾದ ಆಟಗಾರರಲ್ಲಿ ವೇಗ ಹೆಚ್ಚು.

  ಮೆರಾಜ್ ಶೇಖ್: ಇರಾನ್ ದೇಶದ ಈ ಆಟಗಾರನ ರೇಡಿಂಗ್ ಮನಮೋಹಕ. ಇವರ ಸ್ಕಾರ್ಪಿಯನ್ ಕಿಕ್ ನೋಡಲು ಚಂದ. ರೇಡರ್ ಅಷ್ಟೇ ಅಲ್ಲ ಒಳ್ಳೆಯ ಡಿಫೆಂಡರ್ ಕೂಡ ಹೌದು.

  ಜಾಂಗ್ ಕುನ್ ಲೀ: ದಕ್ಷಿಣ ಕೊರಿಯಾದ ಈ ಆಟಗಾರ ಬಂಗಾಲ್ ವಾರಿಯರ್ಸ್ ಧಿರಿಸಿನಲ್ಲಿ ಭಾರತೀಯರಿಗೆ ಬಹಳ ಚಿರಪರಿಚಿತ. ಒಳ್ಳೆಯ ರೇಡರ್. ಪ್ರೋಕಬಡ್ಡಿ ಲೀಗ್​ನಲ್ಲಿ ಆಡಿರುವ ವಿದೇಶಿ ಆಟಗಾರರ ಪೈಕಿ ಅತಿ ಹೆಚ್ಚು ಅಂಕ ಗಳಿಸಿದ್ದಾರೆ.

  ಇದನ್ನೂ ಓದಿ: Bengaluru Bulls- ನಾನೇ ಸ್ಟಾರ್ಸ್ ಹುಟ್ಟುಹಾಕ್ತೀನಿ ಎಂದ ಬೆಂಗಳೂರು ಬುಲ್ಸ್ ಕೋಚ್ ರಣಧೀರ್ ಶೆರಾವತ್

  ಫಾಜಲ್ ಅಟ್ರಾಚಲಿ: ಇರಾನ್ ದೇಶದ ಈ ಆಟಗಾರನ ನಾಯಕತ್ವ ಗಮನ ಸೆಳೆಯುವಂಥದ್ದು. 2018ರಲ್ಲಿ ಇವರ ನಾಯಕತ್ವದ ಇರಾನ್ ತಂಡ ಭಾರತವನ್ನ ಸೋಲಿಸಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ಗೆದ್ದಿತ್ತು. ಈಗ ಯು ಮುಂಬಾ ತಂಡದ ನಾಯಕರಾಗಿದ್ಧಾರೆ.

  ಅಬೋಜರ್ ಮೊಹಜರ್​ಮಿಘಾನಿ: ಪ್ರೋಕಬಡ್ಡಿ ಲೀಗ್​ನಲ್ಲಿ ಆಡಿರುವ ಅತ್ಯುತ್ತಮ ಡಿಫೆಂಡರ್​ಗಳಲ್ಲಿ ಇವರೂ ಒಬ್ಬರು. ಐದನೇ ಸೀಸನ್​ನಿಂದ ಆಡುತ್ತಿರುವ ಇವರ ಟೆಕ್ನಿಕ್ ಗಮನ ಸೆಳೆಯುವಂಥದ್ದು.

  ಹಡಿ ಓಶಟೋರಕ್: ಇರಾನ್ ದೇಶದ ಈ ಆಟಗಾರ ತನ್ನ ದೈಹಿಕ ಬಲ ಮತ್ತು ವೇಗಕ್ಕೆ ಹೆಸರುವಾಸಿ. ರೇಡರ್ ಅನ್ನು ತನ್ನ ಬಲದಿಂದ ಕೋರ್ಟ್​ನಿಂದ ಹೊರನೂಕುವ ಟೆಕ್ನಿಕ್ ಸಿದ್ಧಿಸಿಕೊಂಡಿದ್ದಾರೆ. ಈ ವರ್ಷ ಅವರು ಗುಜರಾತ್ ಜೈಂಟ್ಸ್ ತಂಡದ ಪರ ಆಡುತ್ತಿದ್ದಾರೆ.

  ಅಬುಲ್​ಫಜಲ್ ಮಗ್​ಸೂದ್​ಲೂಮಹಲಿ: ಇರಾನ್ ದೇಶದ ಅಬುಲ್ ಫಜಲ್ ಪ್ರೋಕಬಡ್ಡಿ ಲೀಗ್​ನ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಮೂರು ಬಾರಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡದಲ್ಲಿದ್ದ ಅಬುಲ್ ಫಜಲ್ ಅವರು ಈ ಬಾರಿ ಬೆಂಗಳೂರು ಬುಲ್ಸ್ ತಂಡಕ್ಕೆ ಶಕ್ತಿ ತುಂಬಲಿದ್ದಾರೆ. ಪವನ್ ಶೆರಾವತ್ ಅವರ ರೇಡಿಂಗ್ ಸಾಮರ್ಥ್ಯದಿಂದ ಬಲಿಷ್ಠವಾಗಿರುವ ಬುಲ್ಸ್ ತಂಡಕ್ಕೆ ಅಬುಲ್ ಫಜಲ್ ಆಗಮನ ಇನ್ನಷ್ಟು ಪುಷ್ಟಿ ಸಿಕ್ಕಂತಾಗಿದೆ.

  ಇದನ್ನೂ ಓದಿ: ಬೆಂಗಳೂರು ಬುಲ್ಸ್​ಗೆ ಕಿಚ್ಚ ಸುದೀಪ್ ಫುಲ್ ಚಾರ್ಜ್; ಮಾಜಿ ಸೌತ್ ಆಫ್ರಿಕಾ ಕ್ರಿಕೆಟಿಗ ಬೌಲ್ಡ್

  ಡಾಂಗ್ ಜಿಯೋನ್ ಲೀ: ದಕ್ಷಿಣ ಕೊರಿಯಾದ ಈ ರೇಡರ್ ಮೂರು ಸೀಸನ್​ನಲ್ಲಿ ಭರ್ಜರಿ ಆಟ ಆಡಿದ್ಧಾರೆ. ಅಚ್ಚರಿ ಎಂದರೆ ಜಾನ್ ಕುನ್ ಲೀ ಅವರಿಂದ ಪ್ರೇರಿತರಾಗಿ ಕಬಡ್ಡಿ ಆಟಕ್ಕೆ ಇತ್ತೀಚೆಗಷ್ಟೇ ಎಂಟ್ರಿ ಆಗಿದ್ದ ಜಿಯೋನ್ ಲೀ ಕೆಲವೇ ವರ್ಷದಲ್ಲಿ ಪ್ರಬಲ ಆಟಗಾರನಾಗಿ ರೂಪುಗೊಂಡಿದ್ಧಾರೆ. ಈ ಬಾರಿ ಅವರು ಬೆಂಗಳೂರು ಬುಲ್ಸ್ ತಂಡದ ಪರ ಆಡುತ್ತಿದ್ಧಾರೆ.

  ಫರ್ಹಾದ್ ಮಿಲಘರ್ದನ್: ಇರಾನ್ ದೇಶದ ಇವರು ಅದ್ಭುತ ಆಲ್​ರೌಂಡರ್. ಮೂರು ಸೀಸನ್​​ಗಳಿಂದ ಆಡುತ್ತಿರುವ ಇವರು ಒಟ್ಟು 153 ಅಂಕಗಳನ್ನ ಗಳಿಸಿದ್ಧಾರೆ. ಇವರು ಔಟಾದ ಪ್ರಮಾಣ ತೀರಾ ಕಡಿಮೆ. ಮೂರೂ ಸೀಸನ್​ನಲ್ಲಿ ಇವರು ತೆಲುಗು ಟೈಟಾನ್ಸ್ ತಂಡದಲ್ಲಿ ಆಡಿದ್ದಾರೆ.
  Published by:Vijayasarthy SN
  First published: