2ನೇ ಟೆಸ್ಟ್​​ಗೂ ಆಯ್ಕೆಯಾಗದ ಕನ್ನಡಿಗ ಮಯಾಂಕ್: ಪದಾರ್ಪಣೆ ಕನಸು ನುಚ್ಚುನೂರು..!

ಮಯಾಂಕ್ ಅಗರ್ವಾಲ್

ಮಯಾಂಕ್ ಅಗರ್ವಾಲ್

 • News18
 • Last Updated :
 • Share this:
  ವಿನಯ್ ಭಟ್, ನ್ಯೂಸ್ 18 ಕನ್ನಡ

  ದೇಶೀಯ ಕ್ರಿಕೆಟ್​​ನಲ್ಲಿ ಉತ್ತಮ ಪ್ರದರ್ಶನ ತೋರಿ ಟೀಂ ಇಂಡಿಯಾಕ್ಕೆ ಆಯ್ಕೆ ಆದರು ಆಡುವ 11ರ ಬಳಗದಲ್ಲಿ ಸ್ಥಾನ ಸಿಗುವುದಿಲ್ಲ ಎಂಬ ಮಾತು ಮತ್ತೆ ನಿಜವಾಗಿದೆ. ಇದರ ಜೊತೆಗೆ ಬಿಸಿಸಿಐ ಆಯ್ಕೆ ಸಮಿತಿ ಕನ್ನಡಿಗರನ್ನು ಕಡೆಗಣಿಸುತ್ತಿದೆ ಎಂಬ ವಿಚಾರ ಸತ್ಯ ಎಂಬಂತೆ ಕಂಡುಬರುತ್ತಿದೆ. ಇದಕ್ಕೆ ಉತ್ತಮ ಉದಾಹರಣೆ ಕರ್ನಾಟಕದ ಮಯಾಂಕ್ ಅಗರ್ವಾಲ್. ದೇಶಿ ಕ್ರಿಕೆಟ್​​ನ ರನ್ ಮೆಷಿನ್ ಎಂದೇ ಖ್ಯಾತಿ ಗಳಿಸಿರುವ ಮಯಾಂಕ್ ಅಗರ್ವಾಲ್​​ಗೆ ಮತ್ತೆ ನಿರಾಸೆಯಾಗಿದೆ.

  ಈ ಹಿಂದೆ ದೇಶಿ ಕ್ರಿಕೆಟ್​ ಹಾಗೂ ಲೀಸ್ಟ್​ ಎ ಪಂದ್ಯಗಳಲ್ಲಿ ರನ್ ಮಳೆ ಸುರಿಸಿದ್ದ ಅಗರ್ವಾಲ್ ಅವರನ್ನು ಅಂತರಾಷ್ಟ್ರೀಯ ಪಂದ್ಯಕ್ಕೆ ಆಯ್ಕೆ ಮಾಡಬೇಕು ಎಂಬ ಕೂಗು ಕ್ರಿಕೆಟ್ ವಲಯದಿಂದಲೇ ಕೇಳಿಬಂದಿತ್ತು. ಇದನ್ನೇ ಮನಗಂಡು ಬಿಸಿಸಿಐ ಕೊನೆಗೂ ವೆಸ್ಟ್​ ಇಂಡೀಸ್ ವಿರುದ್ಧ 2 ಪಂದ್ಯಗಳ ಟೆಸ್ಟ್​ ಸರಣಿಗೆ ಅಗರ್ವಾಲ್​​ರನ್ನು ಆಯ್ಕೆ ಮಾಡಿತ್ತು. ಸತತ ಕಾಯುವಿಕೆಯಿಂದ ಬೇಸತ್ತು ಹೋಗಿದ್ದ ಮಯಾಂಕ್​​ ಕೊನೆಗೂ ಅಂತರಾಷ್ಟ್ರೀಯ ಪಂದ್ಯಕ್ಕೆ ಆಯ್ಕೆಯಾಗಿದ್ದರು. ಆದರೆ, ಕೇವಲ ಆಯ್ಕೆ ಆಗಿದ್ದಷ್ಟೆ. ಮೊದಲ ಟೆಸ್ಟ್​​ನಲ್ಲಿ ಬೆಂಚ್ ಕಾಯಬೇಕಾಗಿ ಬಂದಿದ್ದ ಮಯಾಂಕ್​​ಗೆ, ಸದ್ಯ 2ನೇ ಟೆಸ್ಟ್​ನಲ್ಲೂ ಅದೇ ಪರಿಸ್ಥಿತಿ ಮುಂದುವರಿದಿದೆ. ಹೈದರಾಬಾದ್​ನಲ್ಲಿ ನಾಳೆಯಿಂದ ಆರಂಭವಾಗಲಿರುವ ಎರಡನೇ ಟೆಸ್ಟ್​ಗೆ ಬಿಸಿಸಿಐ ಆಯ್ಕೆ ಸಮಿತಿ 12 ಆಟಗಾರರನ್ನು ಪ್ರಕಟಿಸಿದ್ದು, ಮಯಾಂಕ್ ಅಗರ್ವಾಲ್ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಮೊದಲ ಟೆಸ್ಟ್​ನಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುವ ನಿರೀಕ್ಷೆಯಲ್ಲಿದ್ದ ಮಯಾಂಕ್​​ಗೆ ನಿರಾಸೆಯಾಗಿದ್ದರೆ, ಈಗ ಮತ್ತೆ ಬೆಂಚ್ ಕಾಯಬೇಕಾಗಿ ಬಂದಿದೆ.

  ಈ ಮೂಲಕ ಮಯಾಂಕ್ ಅಂತರಾಷ್ಟ್ರೀಯ ಪಂದ್ಯಕ್ಕೆ ಆಯ್ಕೆ ಆಗಿದ್ದಾರೆ ಆದರೂ, ಆಡುವ 11ರ ಬಳಗದಲ್ಲಿ ಸ್ಥಾನ ಸಿಗದಂತಾಗಿದೆ. ಅಂತರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಬೇಕು ಎಂಬ ಕನಸು ಹೊತ್ತಿದ್ದ ಮಯಾಂಕ್ ಕನಸು ಕೊನೆಗೂ ನುಚ್ಚುನೂರಾಗಿದೆ. ಇತ್ತೀಚೆಗಷ್ಟೆ ಇಂಗ್ಲೆಂಡ್ ಪ್ರವಾಸದ ವೇಳೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಕನ್ನಡಿಗ ಕರುಣ್ ನಾಯರ್, ಇಡೀ ಸರಣಿಯುದ್ದಕ್ಕೂ ಬೆಂಚ್ ಕಾಯಬೇಕಾಗಿ ಬಂತು. ಸದ್ಯ ಮಯಾಂಕ್ ವಿಚಾರದಲ್ಲೂ ಇದೇ ಆಗುತ್ತಿದ್ದು, ಬಿಸಿಸಿಐ ಕನ್ನಡಿಗರನ್ನು ಕಡೆಗಣಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

  ಬಿಸಿಸಿಐ ಆಯ್ಕೆ ಸಮಿತಿ ಮಯಾಂಕ್ ಅಗರ್ವಾಲ್​​​ರನ್ನು 2ನೇ ಟೆಸ್ಟ್​ಗೂ ಕಡೆಗಣಿಸಿದ್ದಕ್ಕೆ ಟ್ವಿಟ್ಟರಿಗರ ಪ್ರತಿಕ್ರಿಯೆ:

            

  First published: