• Home
 • »
 • News
 • »
 • sports
 • »
 • ಬೆಂಗಳೂರಿನಲ್ಲಿದ್ದ ನಂಗೆ Puneeth Rajkumar ನಿಧನದ ನಷ್ಟ ಎಂಥದ್ದು ಬಲ್ಲೆ: ಸುನೀಲ್ ಛೇಟ್ರಿ

ಬೆಂಗಳೂರಿನಲ್ಲಿದ್ದ ನಂಗೆ Puneeth Rajkumar ನಿಧನದ ನಷ್ಟ ಎಂಥದ್ದು ಬಲ್ಲೆ: ಸುನೀಲ್ ಛೇಟ್ರಿ

ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಫಿಲಂ ಚೇಂಬರ್ ಅಧ್ಯಕ್ಷ ಜೈರಾಜ್, ಒಂದು ಸಂಸ್ಥೆಯ ವಿರುದ್ಧ ಈ ರೀತಿ ಸುಳ್ಳು ಆರೋಪಗಳನ್ನು ಮಾಡೋದು ತಪ್ಪು. ಫಿಲಂ ಚೇಂಬರ್ ಯಾರ ಬಳಿಯೂ ಚಂದಾ ಎತ್ತಿಲ್ಲ. ನಮ್ಮ ಸಂಸ್ಥೆಯಲ್ಲಿಗೇ ಹಣವಿದ್ದು, ನಾವೇ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳುವ ಮೂಲಕ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಫಿಲಂ ಚೇಂಬರ್ ಅಧ್ಯಕ್ಷ ಜೈರಾಜ್, ಒಂದು ಸಂಸ್ಥೆಯ ವಿರುದ್ಧ ಈ ರೀತಿ ಸುಳ್ಳು ಆರೋಪಗಳನ್ನು ಮಾಡೋದು ತಪ್ಪು. ಫಿಲಂ ಚೇಂಬರ್ ಯಾರ ಬಳಿಯೂ ಚಂದಾ ಎತ್ತಿಲ್ಲ. ನಮ್ಮ ಸಂಸ್ಥೆಯಲ್ಲಿಗೇ ಹಣವಿದ್ದು, ನಾವೇ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳುವ ಮೂಲಕ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

Sunil Chhetri- ಬೆಂಗಳೂರು ಫುಟ್ಬಾಲ್ ಕ್ಲಬ್​ನ ಸ್ಟಾರ್ ಆಟಗಾರ ಸುನೀಲ್ ಛೇಟ್ರಿ ಬೆಂಗಳೂರಿನಲ್ಲಿ ಹಲವು ವರ್ಷ ವಾಸಿಸಿದ್ದವರು. ಹೀಗಾಗಿ ತನಗೆ ಪುನೀತ್ ರಾಜಕುಮಾರ್ ನಿಧನ ಎಷ್ಟು ಆಘಾತಕಾರಿ ಎಂದು ಗೊತ್ತು ಎಂದಿದ್ಧಾರೆ.

 • News18
 • Last Updated :
 • Share this:

  ಬೆಂಗಳೂರು, ಅ. 29: ಸ್ಯಾಂಡಲ್​ವುಡ್​ನ ಪವರ್ ಸ್ಟಾರ್ 46 ವರ್ಷದ ಪುನೀತ್ ರಾಜಕುಮಾರ್ ಅವರು ಇಂದು ಅಕಾಲಿಕ ಮರಣವಪ್ಪಿ ಬಹಳ ದೊಡ್ಡ ಶಾಕ್ ಕೊಟ್ಟಿದ್ದಾರೆ. ಅವರ ನಿಧನಕ್ಕೆ ದೇಶಾದ್ಯಂತ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ವಿವಿಧ ಚಿತ್ರರಂಗಗಳ ದಿಗ್ಗಜರು ಕಂಬನಿ ಮಿಡಿದಿದ್ದಾರೆ. ಹಲವು ಕ್ರೀಡಾಪಟುಗಳೂ ದುಃಖ ವ್ಯಕ್ತಪಡಿಸಿದ್ದಾರೆ.


  ಭಾರತದ ನಂಬರ್ ಒನ್ ಫುಟ್ಬಾಲ್ ತಾರೆ ಸುನೀಲ್ ಛೇಟ್ರಿ ಅವರು ಪುನೀತ್ ರಾಜಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ್ಧಾರೆ. ತಾನು ಕಳೆದ ದಶಕದಲ್ಲಿ ಬೆಂಗಳೂರಿನಲ್ಲಿದ್ದೆ. ಪುನೀತ್ ರಾಜಕುಮಾರ್ ಅವರ ನಿಧನದಿಂದ ಎಷ್ಟು ನಷ್ಟ ಆಗಿದೆ ಎಂದು ಬಲ್ಲೆ ಎಂದು ಅವರು ಹೇಳಿದ್ಧಾರೆ. ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡದ ಆಟಗಾರರಾಗಿರುವ ಸುನೀಲ್ ಛೇಟ್ರಿ ಅಂತರರಾಷ್ಟ್ರೀಯ ಫುಟ್ಬಾಲ್​ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಕ್ರಿಸ್ಟಿಯಾನೊ ರೊನಾಲ್ಡೊ, ಲಿಯೋನೆಲ್ ಮೆಸ್ಸಿ ಸಾಲಿನಲ್ಲಿದ್ದಾರೆ.


  ಅನೇಕ ಮಾಜಿ ಮತ್ತು ಹಾಲಿ ಕ್ರಿಕೆಟಿಗರೂ ಪುನೀತ್ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ. ಅವರ ವೀರೇಂದ್ರ ಸೆಹ್ವಾಗ್, ಅನಿಲ್ ಕುಂಬ್ಳೆ, ಹರ್ಭಜನ್ ಮೊದಲಾದವರು ಪ್ರಮುಖರು. ಪುನೀತ್ ರಾಜಕುಮಾರ್ ಬಹಳ ಸರಳ ಹಾಗೂ ಸಜ್ಜನ ವ್ಯಕ್ತಿಯಾಗಿದ್ದರು ಎಂದು ಸೆಹ್ವಾಗ್ ಹೇಳಿದ್ಧಾರೆ. ಚಿತ್ರರಂಗ ಒಂದು ಅಮೂಲ್ಯ ಮುತ್ತನ್ನು ಕಳೆದುಕೊಂಡಿದೆ. ತಾನು ಕಂಡ ಅತ್ಯುತ್ತಮ ವ್ಯಕ್ತಿತ್ವಗಳಲ್ಲಿ ಅವರೂ ಒಬ್ಬರು ಎಂದು ಅನಿಲ್ ಕುಂಬ್ಳೆ ತಿಳಿಸಿದ್ದಾರೆ. ಜೀವನ ಎಷ್ಟು ಅನಿಶ್ಚಿತ ಅಲ್ಲವಾ ಎಂದು ಸ್ಪಿನ್ನರ್ ಹರ್ಭಜನ್ ಸಿಂಗ್ ಉದ್ಗರಿಸಿದ್ದಾರೆ.


  ವೀರೇಂದ್ರ ಸೆಹ್ವಾಗ್, ಮಾಜಿ ಕ್ರಿಕೆಟಿಗ: ಪುನೀತ್ ರಾಜಕುಮಾರ್ ನಿಧನದ ಸುದ್ದಿ ಕೇಳಿ ಬೇಸರವಾಯಿತು. ಬಹಳ ಸರಳ, ಸಜ್ಜನ ವ್ಯಕ್ತಿ. ಅವರು ಇಹಲೋಕ ತ್ಯಜಿಸಿದ್ದು ಭಾರತೀಯ ಸಿನಿಮಾಗೆ ಆಘಾತವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.


  ಅನಿಲ್ ಕುಂಬ್ಳೆ, ಮಾಜಿ ಕ್ರಿಕೆಟಿಗ: ಚಿತ್ರರಂಗ ಒಂದು ಅಮೂಲ್ಯ ಮುತ್ತನ್ನು ಕಳೆದುಕೊಂಡಿದೆ. ನಾನು ಕಂಡ ಅತ್ಯುತ್ತಮ ವ್ಯಕ್ತಿತ್ವಗಳಲ್ಲಿ ಅವರೂ ಒಬ್ಬರು. ಬಹಳ ಸರಳ ವ್ಯಕ್ತಿ. ಬಹಳ ಬೇಗ ಬಿಟ್ಟು ಹೋಗಿದ್ದಾರೆ. ಅವರ ಕುಟುಂಬ, ಸ್ನೇಹಿತರು ಮತ್ತು ಅಪಾರ ಅಭಿಮಾನಿಗಳಿಗೆ ನನ್ನ ಸಂತಾಪ ಇದೆ.


  ಹರ್ಭಜನ್ ಸಿಂಗ್, ಮಾಜಿ ಕ್ರಿಕೆಟಿಗ: ಪುನೀತ್ ನಿಧನದ ಸುದ್ದಿ ಕೇಳಿ ಆಘಾತ ಎನಿಸಿತು. ಜೀವನ ಎಷ್ಟು ಅನಿಶ್ಚಿತ ಅಲ್ಲವಾ. ಕುಟಂಬ ಮತ್ತು ಸ್ನೇಹಿತರಿಗೆ ಸಂತಾಪ ಇದೆ. ವಾಹೇಗುರು.


  ಸುನೀಲ್ ಛೇಟ್ರಿ, ಫುಟ್ಬಾಲ್ ಸ್ಟಾರ್: ಬೆಂಗಳೂರಿನಲ್ಲಿ ಕಳೆದ ವರ್ಷ ವಾಸಿಸಿದ್ದ ನನಗೆ ಪುನೀತ್ ರಾಜಕುಮಾರ್ ನಿಧನದಿಂದ ಎಂಥ ನಷ್ಟ ಆಗಿದೆ ಎಂದು ಚೆನ್ನಾಗಿ ಬಲ್ಲೆ. ಅವರ ಕುಟುಂಬ ಹಾಗೂ ಎಲ್ಲಾ ದುಃಖಿತರಿಗೂ ಆ ದೇವರು ಬಲ ಕೊಡಲಿ.


  ಮಯಂಕ್ ಅಗರ್ವಾಲ್, ಸುರೇಶ್ ರೈನಾ, ರಾಬಿನ್ ಉತ್ತಪ್ಪ ಮೊದಲಾದ ಇನ್ನೂ ಅನೇಕರು ಪುನೀತ್ ನಿಧನಕ್ಕೆ ಆಘಾತ ವ್ಯಕ್ತಪಡಿಸಿದ್ಧಾರೆ.
  ಪುನೀತ್ ನಿಧನ:


  ಇಂದು ಜಿಮ್​ನಲ್ಲಿ ವರ್ಕೌಟ್ ಮಾಡುವಾಗ ಪುನೀತ್ ರಾಜಕುಮಾರ್ ಅವರಿಗೆ ದೊಡ್ಡ ಹೃದಯಾಘಾತ ಆಗಿದೆ. ವಿಕ್ರಮ್ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ಅವರ ಪಾರ್ಥಿವ ಶರೀರವನ್ನ ಸಾರ್ವಜನಿಕ ವೀಕ್ಷಣೆಗೆ ಇಡಲಾಗಿದೆ. ನಾಳೆ ಶನಿವಾರ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಲಾಗಿದೆ.


  ಕ್ರೀಡೆ ಮತ್ತು ಪುನೀತ್:


  ಹಲವು ಹಿಟ್ ಚಿತ್ರಗಳಿಗೆ ನಾಯಕನಟನಾಗಿರುವ ಪುನೀತ್ ರಾಜಕುಮಾರ್ ತಮ್ಮ ಪ್ರೊಡಕ್ಷನ್ ಕಂಪನಿ ಮೂಲಕ ಕೆಲ ಸದಭಿರುಚಿಯ ಚಿತ್ರಗಳನ್ನ ನಿರ್ಮಿಸಿದ್ದಾರೆ. ಉದಯೋನ್ಮುಖ ನಿರ್ದೇಶಕರು ಮತ್ತು ನಟರಿಗೆ ಅವರು ತಮ್ಮ ಪ್ರೊಡಕ್ಷನ್ ಸಂಸ್ಥೆಯಲ್ಲಿ ಅವಕಾಶ ಕೊಟ್ಟು ಬೆಳೆಸುವ ಕೆಲಸ ಮಾಡುತ್ತಿದ್ದರು. ಇದರ ಜೊತೆಗೆ ಪುನೀತ್ ರಾಜಕುಮಾರ್ ಕ್ರೀಡೆಗಳೊಂದಿಗೂ ತಮ್ಮನ್ನ ಜೋಡಿಸಿಕೊಂಡಿದ್ದಾರೆ. ಪ್ರೋಕಬಡ್ಡಿಯ ಬ್ರಾಂಡ್ ಅಂಬಾಸಡರ್ ಆಗಿದ್ದರು. ಫುಟ್​ಸಾಲ್ ಎಂಬ ಕ್ರೀಡೆಯಲ್ಲಿ ಬೆಂಗಳೂರಿನ ಫ್ರಾಂಚೈಸಿಯನ್ನ ಖರೀದಿಸಿದ್ದರು.

  Published by:Vijayasarthy SN
  First published: