ಯುದ್ಧಪೀಡಿತರಿಗೆ ನೆರವು ನೀಡಿ ಮಾನವೀಯತೆ ಮೆರೆದ ಕ್ರಿಸ್ಟಿಯಾನೊ ರೊನಾಲ್ಡೊ

2014 ರಲ್ಲಿ ರಿಯಲ್​ ಮ್ಯಾಡ್ರಿಡ್​ ತಂಡವನ್ನು 10ನೇ ಬಾರಿ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕ್ರಿಸ್ಟಿಯಾನೊ, ತನಗೆ ಸಿಕ್ಕಿದ ಪ್ರಶಸ್ತಿ ಮೊತ್ತವನ್ನು ಮೂರು ಸೇವಾ ಸಂಘಟನೆಗಳಿಗೆ ದಾನವಾಗಿ ನೀಡಿದ್ದರು.

zahir | news18
Updated:May 18, 2019, 7:55 PM IST
ಯುದ್ಧಪೀಡಿತರಿಗೆ ನೆರವು ನೀಡಿ ಮಾನವೀಯತೆ ಮೆರೆದ ಕ್ರಿಸ್ಟಿಯಾನೊ ರೊನಾಲ್ಡೊ
@palestinechronicle
zahir | news18
Updated: May 18, 2019, 7:55 PM IST
ಫುಟ್​ಬಾಲ್​ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ ತಾನೇಗೆ ಇತರೆ ವಿಶ್ವ ತಾರೆಗಳಿಕ್ಕಿಂತ ಭಿನ್ನ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಈಗಾಗಲೇ ಯುದ್ದದಿಂದ ತತ್ತರಿಸಿ ಹೋಗಿರುವ ಪ್ಯಾಲೆಸ್ತೀನ್​ನ ಗಾಝಾ ನಿವಾಸಿಗಳಿಗಾಗಿ ಕ್ರಿಸ್ಟಿಯಾನೊ 1.5 ಮಿಲಿಯನ್ ಡಾಲರ್ ದಾನ ನೀಡಿದ್ದಾರೆ ಎಂದು ವರದಿಯಾಗಿದೆ. ಅಂದರೆ ಈ ಫುಟ್​ಬಾಲ್ ದಿಗ್ಗಜ ನೀಡಿರುವುದು ಸುಮಾರು 10.5 ಕೋಟಿ ರೂ.

ಇಸ್ರೇಲ್ ದಾಳಿಯಿಂದ ತೀವ್ರ ಸಂಕಷ್ಟದಲ್ಲಿರುವ ಗಾಝಾ ನಗರದ ಮುಸ್ಲಿಮರು ಪವಿತ್ರ ರಂಜಾನ್ ಉಪವಾಸವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇವರ ನೆರೆವಿಗಾಗಿ ಕ್ರಿಸ್ಟಿಯಾನೊ ಬೃಹತ್ ಮೊತ್ತವನ್ನು ದೇಣಿಗೆಯಾಗಿ ನೀಡಿದ್ದಾರೆ. ವಿಶ್ವ ಐಕ್ಯತೆ, ಸಾಮರಸ್ಯ, ಸೌಹಾರ್ದತೆಯನ್ನು ಸಾರಲು ಹಾಗೂ ಮಾನವೀಯತೆಯನ್ನು ಎತ್ತಿ ಹಿಡಿಯಲು ರೊನಾಲ್ಡೊ ಪ್ಯಾಲೆಸ್ತೀನಿಯರಿಗೆ ಸಹಾಯ ಮಾಡಿದ್ದಾರೆ ಎಂದು ಟೆಲಿಸರ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ವಿಶ್ವದ ದುಬಾರಿ ಕ್ರೀಡಾಪಟು ಎನಿಸಿಕೊಂಡಿರುವ ಪೋರ್ಚುಗೀಸ್ ಸ್ಟ್ರೈಕರ್ ಸದ್ಯ ಯುವೆಂಟಸ್ ಕ್ಲಬ್ ಪರ ಆಡುತ್ತಿದ್ದಾರೆ. ಫುಟ್​ಬಾಲ್​ ಅಂಗಳದ ಆಕ್ರಮಣಕಾರಿ ಆಟಗಾರ ಎಂದೇ ಖ್ಯಾತಿ ಪಡೆದಿರುವ ಕ್ರಿಸ್ಟಿಯಾನೊ, ಮೈದಾನದ ಹೊರಗೆ ಮಾತ್ರ ಮಾನವೀಯತೆಯ ಸರದಾರನಾಗಿ ಹಲವು ಬಾರಿ  ಗುರುತಿಸಿಕೊಂಡಿದ್ದರು.




2011 ರಲ್ಲಿ ದೊರೆತ 'ಗೋಲ್ಡನ್ ಬೂಟ್'​ ಪ್ರಶಸ್ತಿಯನ್ನು ಹರಾಜಿಗಿಟ್ಟಿದ್ದ ಪೋರ್ಚುಗಲ್ ತಾರೆ, ಇದರಿಂದ ದೊರೆತ 1.2 ಮಿಲಿಯನ್ ಪೌಂಡ್​ ಮೊತ್ತವನ್ನು ಯುದ್ದ ಪೀಡಿತ ಪ್ಯಾಲೇಸ್ತೀನ್​ನ ಶಾಲೆಗಳ ಪುನರ್ಸ್ಥಾಪನೆಗೆ ದಾನ ಮಾಡಿದ್ದರು. ಹಾಗೆಯೇ 2013 ರಲ್ಲಿ ಲಭಿಸಿದ ಫುಟ್​ಬಾಲ್​ ಲೋಕದ ಆಸ್ಕರ್ ಎಂದು ಕರೆಯಲ್ಪಡುವ 'ಬಾಲನ್ ಡಿ ಒರ್' ಪ್ರಶಸ್ತಿಯನ್ನು ಕೂಡ ಹರಾಜಿಗೆ ನೀಡಿದ್ದರು. ಇದರಿಂದ ದೊರೆತ 5.3 ಲಕ್ಷ ​ ಪೌಂಡ್​ ಅನ್ನು 'ಮೇಕ್ ಎ ವಿಶ್' ಎಂಬ ಸಂಸ್ಥೆಗೆ ನೀಡಿ ಅನಾರೋಗ್ಯ ಪೀಡಿತ ಮಕ್ಕಳ ಶ್ರುಶೂಷೆಗೆ ರೊನಾಲ್ಡೊ ನೆರವಾಗಿದ್ದರು.



2014 ರಲ್ಲಿ ರಿಯಲ್​ ಮ್ಯಾಡ್ರಿಡ್​ ತಂಡವನ್ನು 10ನೇ ಬಾರಿ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕ್ರಿಸ್ಟಿಯಾನೊ, ತನಗೆ ಸಿಕ್ಕಿದ ಪ್ರಶಸ್ತಿ ಮೊತ್ತವನ್ನು ಮೂರು ಸೇವಾ ಸಂಘಟನೆಗಳಿಗೆ ದಾನವಾಗಿ ನೀಡಿದ್ದರು. ಅದೇ ರೀತಿ ಸಾಮಾಜಿಕ ತಾಣದಲ್ಲಿ ವಿವಾದಕ್ಕೀಡಾಗಿದ್ದ 'ಐಸ್ ಬಕೆಟ್'​ ಚಾಲೆಂಜ್​ನಲ್ಲೂ ಭಾಗವಹಿಸಿ ಲಭಿಸಿದ್ದ ಫಂಡ್​ ಅನ್ನು 'ಮೊಟೊರ್ ನ್ಯೂರೊನ್' ಕಾಯಿಲೆ ಬಾಧಿಸಿದವರ ಚಿಕಿತ್ಸೆಗೆ ರೊನಾಲ್ಡೊ ನೀಡಿದ್ದರು. ಈ ರೀತಿಯಾಗಿ ಹಲವು ಬಾರಿ ಮಾನವೀಯತೆ ಮರೆದಿರುವ CR7 ಮತ್ತೊಮ್ಮೆ ಗಾಝಾ ಪಾಲಿನ ಜನರಿಗೆ ಸಹಾಯಹಸ್ತ ಚಾಚಿರುವುದು ಮೆಚ್ಚಲೇಬೇಕು.



ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ

ಇದನ್ನೂ ಓದಿ: ವಿಶ್ವಕಪ್ ಪ್ರಶಸ್ತಿ ಮೊತ್ತ ಪ್ರಕಟ: ಚಾಂಪಿಯನ್ ತಂಡಕ್ಕೆ ಸಿಗಲಿರುವ ಮೊತ್ತ ಎಷ್ಟು ಗೊತ್ತೆ?

First published:May 18, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...