Cristiano Ronaldo: ನವಜಾತ ಗಂಡು ಮಗು ಸಾವು: ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ರೊನಾಲ್ಡೋ ದಂಪತಿ

ಮ್ಯಾಂಚೆಸ್ಟರ್ ಯುನೈಟೆಡ್ ಸ್ಟಾರ್ ರೊನಾಲ್ಡೋ ಮತ್ತು ಜಾರ್ಜಿನಾ ರೋಡ್ರಿಗಸ್ ದಂಪತಿ ಕಳೆದ ಅಕ್ಟೋಬರ್ ನಲ್ಲಿ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದೇವೆ ಎಂದು ಬಹಿರಂಗಪಡಿಸಿದ್ದರು. ಆದರೆ ದುರದೃಷ್ಟವಶಾತ್ ಅವಳಿ ಮಕ್ಕಳಲ್ಲಿ ಗಂಡು ಮಗು ಸಾವನ್ನಪ್ಪಿದ್ದು, ಹೆಣ್ಣು ಮಗು ಆರೋಗ್ಯವಾಗಿದೆ.

ಕ್ರಿಸ್ಟಿಯಾನೋ ರೊನಾಲ್ಡೋ

ಕ್ರಿಸ್ಟಿಯಾನೋ ರೊನಾಲ್ಡೋ

  • Share this:
ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೋ (Football Player Cristiano Ronaldo) ಅವರ ನವಜಾತ ಗಂಡುಮಗು (Newborn Baby)ಸಾವನ್ನಪ್ಪಿದೆ. ಈ ಸಂಬಂಧ ರೊನಾಲ್ಡೋ ಮತ್ತು ಅವರ ಪತ್ನಿ ಜಾರ್ಜಿನಾ ರೋಡ್ರಿಗಸ್ (Georgina Rodriguez) ತಮ್ಮ ಅವಳಿ ಮಕ್ಕಳಲ್ಲಿ ನವಜಾತ ಗಂಡು ಮಗು (newborn baby son) ಮೃತಪಟ್ಟಿರುವ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಸಾಮಾಜಿಕ ಮಾಧ್ಯ(Social Media)ಮದಲ್ಲಿ ತಮ್ಮ ದುಃಖ ಹಂಚಿಕೊಂಡಿದ್ದು, 'ತಮ್ಮ ಅವಳಿ ಮಕ್ಕಳಲ್ಲಿ ನವಜಾತ ಗಂಡು ಮಗು ಸಾನವನ್ನಪ್ಪಿದ್ದು ಹೆಣ್ಣುಮಗು (Baby Girl) ಬದುಕುಳಿದಿದೆ. "ನಾವು ಯಾವಾಗಲೂ ನಿನ್ನನ್ನು ಪ್ರೀತಿಸುತ್ತೇವೆ" ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ (Emotional Post) ಒಂದನ್ನು ಹಂಚಿಕೊಂಡಿದ್ದಾರೆ.

ಮ್ಯಾಂಚೆಸ್ಟರ್ ಯುನೈಟೆಡ್ ಸ್ಟಾರ್ ರೊನಾಲ್ಡೋ ಮತ್ತು ಜಾರ್ಜಿನಾ ರೋಡ್ರಿಗಸ್ ದಂಪತಿ ಕಳೆದ ಅಕ್ಟೋಬರ್ ನಲ್ಲಿ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದೇವೆ ಎಂದು ಬಹಿರಂಗಪಡಿಸಿದ್ದರು. ಆದರೆ ದುರದೃಷ್ಟವಶಾತ್ ಅವಳಿ ಮಕ್ಕಳಲ್ಲಿ ಗಂಡು ಮಗು ಸಾವನ್ನಪ್ಪಿದ್ದು, ಹೆಣ್ಣು ಮಗು ಆರೋಗ್ಯವಾಗಿದೆ.

ರೊನಾಲ್ಡೋ ಮತ್ತು ರೋಡ್ರಿಗಸ್ ಭಾವನಾತ್ಮಕ ಪೋಸ್ಟ್

ಮ್ಯಾಂಚೆಸ್ಟರ್ ಯುನೈಟೆಡ್ ಫಾರ್ವರ್ಡ್ ನ ಟ್ವಿಟ್ಟರ್‌ ಖಾತೆಯಲ್ಲಿ ಬಿಡುಗಡೆ ಮಾಡಿದ ಪೋಸ್ಟ್ ನಲ್ಲಿ, ಅವರು ಹೆಣ್ಣು ಮಗುವಿನ ಜನನವನ್ನು ಖಚಿತಪಡಿಸಿದ್ದಾರೆ. “ನಮ್ಮ ಅವಳಿ ಮಕ್ಕಳಲ್ಲಿ ಗಂಡು ಮಗು ತೀರಿಕೊಂಡಿದೆ ಎಂದು ನಾವು ದುಃಖದಿಂದ ಘೋಷಿಸಬೇಕಾಗಿದೆ, ಇದು ಯಾವುದೇ ತಂದೆ, ತಾಯಿ ಅನುಭವಿಸಬಹುದಾದ ದೊಡ್ಡ ನೋವು. ನಮ್ಮ ಹೆಣ್ಣು ಮಗುವಿನ ಆಗಮನವು ಈ ಕ್ಷಣ ನಮಗೆ ಸ್ವಲ್ಪ ಬದುಕುವ ಶಕ್ತಿ, ಭರವಸೆ ಮತ್ತು ಸಂತೋಷವನ್ನು ನೀಡಿದೆ.

ಆಸ್ಪತ್ರೆಯ ವೈದ್ಯರು ಮತ್ತು ದಾದಿಯರಿಗೆ ಅವರ ಎಲ್ಲಾ ತಜ್ಞರ ಆರೈಕೆ ಮತ್ತು ಬೆಂಬಲಕ್ಕಾಗಿ ನಾವು ಧನ್ಯವಾದ ಹೇಳಲು ಬಯಸುತ್ತೇವೆ. ಈ ನಷ್ಟದಿಂದ ನಾವೆಲ್ಲರೂ ಕುಗ್ಗಿಹೋಗಿದ್ದೇವೆ. ಮತ್ತು ಈ ಕಷ್ಟದ ಸಮಯದಲ್ಲಿ ನಾವು ಗೌಪ್ಯತೆಯನ್ನು ಬಯಸುತ್ತೇವೆ. ನಮ್ಮ ಮಗುವೇ, ನೀನು ನಮ್ಮ ದೇವತೆ. ನಾವು ಯಾವಾಗಲೂ ನಿನ್ನನ್ನು ಪ್ರೀತಿಸುತ್ತೇವೆ” ಎಂದು ರೊನಾಲ್ಡೋ ಮತ್ತು ರೋಡ್ರಿಗಸ್ ಜಂಟಿಯಾಗಿ ಸಹಿ ಮಾಡಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Viral Video: ಕ್ರಿಸ್ಟಿಯಾನೋ ರೊನಾಲ್ಡೊಗೆ ಸ್ಪರ್ಧೆ ನೀಡುವಂತೆ Football ಆಡುತ್ತೆ ಈ ಕೋಳಿ: ವಿಡಿಯೋ ನೋಡಿ

ನಾಲ್ಕು ಮಕ್ಕಳ ತಂದೆಯಾಗಿರುವ ರೊನಾಲ್ಡೊ

ರೊನಾಲ್ಡೋ ಈಗಾಗಲೇ ಇತರ ನಾಲ್ಕು ಮಕ್ಕಳಿಗೆ ತಂದೆಯಾಗಿದ್ದಾರೆ. ಪುತ್ರರಾದ ಕ್ರಿಸ್ಟಿಯಾನೋ ಜೂನಿಯರ್ ಮತ್ತು ಮಾಟಿಯೋ, ಹಾಗೂ ಪುತ್ರಿಯರಾದ ಇವಾ ಮತ್ತು ಅಲಾನಾ. ಕ್ರಿಸ್ಟಿಯಾನೋ ಜೂನಿಯರ್ 11 ವರ್ಷ ವಯಸ್ಸಿನವರಾಗಿದ್ದಾರೆ ಮತ್ತು ಮಾಟಿಯೊ ಹಾಗೂ ಇವಾ ನಾಲ್ಕು ವರ್ಷದ ಅವಳಿ ಮಕ್ಕಳು. ಅಲಾನಾ ನವೆಂಬರ್ 2017 ರಲ್ಲಿ ಜನಿಸಿದ ರೊನಾಲ್ಡೋ ಮತ್ತು ರೋಡ್ರಿಗಸ್‌ಗೆ ಸೇರಿದ ಮೊದಲ ಮಗಳು.




ಅಭಿಮಾನಿಗಳಿಂದ ಸಾಂತ್ವಾನ

"ನಿಮ್ಮ ನೋವು ನಮ್ಮ ನೋವು, ಕ್ರಿಸ್ಟಿಯಾನೋ" ಎಂದು ಮ್ಯಾಂಚೆಸ್ಟರ್ ಯುನೈಟೆಡ್ ಟ್ವೀಟ್ ಮಾಡಿದೆ. "ಈ ಸಮಯದಲ್ಲಿ ನಿಮಗೆ ಮತ್ತು ಕುಟುಂಬಕ್ಕೆ ಪ್ರೀತಿ ಮತ್ತು ಶಕ್ತಿಯನ್ನು ದೇವರು ನೀಡಲಿ ಎಂದು ಹೇಳಿದೆ.
ಮ್ಯಾಡ್ರಿಡ್ ತಮ್ಮ ಸಾಮಾಜಿಕ ಪುಟದಲ್ಲಿ ಪ್ರತಿಕ್ರಿಯಿಸಿ, "ನಮ್ಮ ಪ್ರೀತಿಯ ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಜಾರ್ಜಿನಾ ರೋಡ್ರಿಗಸ್ ಅವರು ನಿರೀಕ್ಷಿಸುತ್ತಿದ್ದ ಮಗುವಿನ ಸಾವಿನ ಬಗ್ಗೆ ತೀವ್ರವಾಗಿ ವಿಷಾದಿಸುತ್ತದೆ” ಎಂದು ಹೇಳಿದೆ.

ರೊನಾಲ್ಡೋ ಅವರ ಸಹೋದರಿ ಕಟಿಯಾ ಅವೆರೋ "ನಮ್ಮ ಪುಟ್ಟ ದೇವತೆ ಈಗಾಗಲೇ ತಂದೆಯ ಮಡಿಲಲ್ಲಿದ್ದಾರೆ” ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

37 ವರ್ಷದ ರೊನಾಲ್ಡೋ, ಐದು ಬಾರಿ ವರ್ಷದ ವಿಶ್ವ ಆಟಗಾರ, ಕಳೆದ ವರ್ಷ ರಿಯಲ್ ಮ್ಯಾಡ್ರಿಡ್ ಮತ್ತು ಜುವೆಂಟಸ್‌ನೊಂದಿಗೆ ಅನೇಕ ಟ್ರೋಫಿಗಳನ್ನು ಗೆದ್ದ ನಂತರ ಮ್ಯಾಂಚೆಸ್ಟರ್ ಯುನೈಟೆಡ್‌ಗೆ ಮರುಸೇರ್ಪಡೆಯಾದರು.

ಇದನ್ನೂ ಓದಿ:  Viral News: ಬಡ ಹುಡುಗನಿಗೆ ಈ ಟ್ರಾಫಿಕ್ ಪೊಲೀಸೇ ಟೀಚರ್; ಬಿಡುವಿನ ವೇಳೆ ಪಾಠ ಮಾಡೋ ಮಾಸ್ಟರ್

ಇಳಿಕೆ ಕಂಡ ನವಜಾತ ಶಿಶುಗಳ ಮರಣ ಪ್ರಮಾಣ

"ವಿಶ್ವಾದ್ಯಂತ 5 ವರ್ಷದೊಳಗಿನ ಒಟ್ಟು ಸಾವಿನ ಸಂಖ್ಯೆ 1990 ರಲ್ಲಿ 12.6 ಮಿಲಿಯನ್‌ನಿಂದ 2020 ರಲ್ಲಿ 5.0 ಮಿಲಿಯನ್‌ಗೆ ಇಳಿದಿದೆ" ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ. "1990 ರಿಂದ, ಜಾಗತಿಕವಾಗಿ 5 ವರ್ಷದೊಳಗಿನವರ ಮರಣ ಪ್ರಮಾಣವು 60% ರಷ್ಟು ಕಡಿಮೆಯಾಗಿದೆ. 1990 ರಲ್ಲಿ 1,000 ಜನನಗಳಿಗೆ 93 ಸಾವುಗಳು ಸಂಭವಿಸಿದರೆ 2020ರಲ್ಲಿ 37ಕ್ಕೆ ಇಳಿಕೆ ಕಂಡಿದೆ.
Published by:Mahmadrafik K
First published: