ಫಿಫಾ ವಿಶ್ವಕಪ್ ಕತಾರ್ 2022 ಮುಕ್ತಾಯಗೊಂಡಿದ್ದರೂ ಡಿಜಿಟಲ್ ಕ್ಷೇತ್ರದಲ್ಲಿ ನಡೆದ ಹೊಸ ಉದಯದಂತೆ ಫುಟ್ಬಾಲ್ ಕ್ರೀಡೆಯನ್ನು ಲೈವ್ ಟೆಲಿಕಾಸ್ಟ್ ಮಾಡುವ ಮೂಲಕ ಜಿಯೋ ಸಿನಿಮಾ ಹೊಸ ಉದಯಕ್ಕೆ ಸಾಕ್ಷಿಯಾಗಿದೆ. ದೂರದರ್ಶನದಿಂದ ಬಳಕೆದಾರರು ಹೇಗೆ ಡಿಜಿಟಲ್ ಪರದೆಗೆ ತಮ್ಮನ್ನು ಬದಲಾಯಿಸಿದ ಮಾದರಿಯಲ್ಲಿಯೇ ಜಿಯೋ ಸಿನಿಮಾ ಕೂಡ ಹೊಸ ಕ್ರಾಂತಿಯನ್ನೇ ನಡೆಸಿದೆ.
32 ಮಿಲಿಯನ್ ವೀಕ್ಷಕರು ಲೈವ್ ಟೆಲಿಕಾಸ್ಟ್ಗೆ ಸಾಕ್ಷಿ
1986 ನಂತರ ಮೊದಲ ಬಾರಿಗೆ ವಿಶ್ವಕಪ್ ಅನ್ನು ಎತ್ತತಿಹಿಡಿದ ಅರ್ಜೆಂಟೀನಾದ ಸಂಭ್ರಮಕ್ಕೆ ಇನ್ನಷ್ಟು ಮೆರುಗು ಬರಿಸುವ ನಿಟ್ಟಿನಲ್ಲಿ ಅತ್ಯಂತ ಅಸಾಮಾನ್ಯವಾದ ವಿಶ್ವಕಪ್ನ ಫೈನಲ್ ಅನ್ನು ವೀಕ್ಷಿಸಲು ಜಿಯೋ ಸಿನಿಮಾದ ಮೂಲಕ 32 ಮಿಲಿಯನ್ ವೀಕ್ಷಕರು ಕ್ರೀಡೆಯ ಲೈವ್ ಟೆಲಿಕಾಸ್ಟ್ಗೆ ಸಾಕ್ಷಿಯಾಗಿದ್ದಾರೆ.
ಭಾರತವನ್ನು ಅತಿ ಹೆಚ್ಚು ಡಿಜಿಟಲ್ ವೀಕ್ಷಕರ ಮಾರುಕಟ್ಟೆಗಳಲ್ಲಿ ಒಂದಾಗಿಸಿದೆ
110 ಮಿಲಿಯನ್ಗಿಂತಲೂ ಹೆಚ್ಚಿನ ವೀಕ್ಷಕರು ಡಿಜಿಟಲ್ ಪ್ಲ್ಯಾಟ್ಫಾರ್ಮ್ನಲ್ಲಿ ವೀಕ್ಷಣೆಯನ್ನು ನಡೆಸಿದ್ದು ಭಾರತವನ್ನು FIFA ವಿಶ್ವಕಪ್ಗಾಗಿ ಅತಿ ಹೆಚ್ಚು ಡಿಜಿಟಲ್ ವೀಕ್ಷಕರ ಮಾರುಕಟ್ಟೆಗಳಲ್ಲಿ ಒಂದಾಗಿಸಿದೆ.
ನಂ. 1 ಉಚಿತ ಆ್ಯಪ್
ಸ್ಪೋರ್ಟ್ಸ್ 18 ಹಾಗೂ ಜಿಯೋ ಸಿನಿಮಾಗಳಲ್ಲಿ ವೀಕ್ಷಕರು ಉಸಿರು ಬಿಗಿಹಿಡಿದುಕೊಂಡೇ, ಹೆಚ್ಚಿನ ಕಾತರ ಹಾಗೂ ತಳಮಳದಿಂದ ಅರ್ಜೆಂಟೀನಾ ಹಾಗೂ ಫ್ರಾನ್ಸ್ ನಡುವಿನ ಅಂತಿಮ ಹಣಾಹಣಿಯನ್ನು ವೀಕ್ಷಿಸಿದ್ದು 40 ಶತಕೋಟಿ ನಿಮಿಷಗಳ ವೀಕ್ಷಣಾ ಸಮಯಕ್ಕೆ ಸಾಕ್ಷಿಯಾಯಿತು ಅಂತೆಯೇ ಐಓಎಸ್ ಹಾಗೂ ಆ್ಯಂಡ್ರಾಯ್ಡ್ನಲ್ಲಿ ಡೌನ್ಲೋಡ್ ಮಾಡಲಾದ ನಂ. 1 ಉಚಿತ ಆ್ಯಪ್ ಎಂಬ ಹೆಗ್ಗಳಿಗೆಕೆಗೂ ಜಿಯೋ ಸಿನಿಮಾ ಪಾತ್ರವಾಯಿತು.
ಹೈಪ್ ಮೋಡ್ನಲ್ಲಿ ಲೈವ್ ಟೆಲಿಕಾಸ್ಟ್
ಭಾರತದಲ್ಲಿರುವ ಹೆಚ್ಚಿನ ಗ್ರಾಹಕ ವರ್ಗ ತಮ್ಮ ತಮ್ಮ ಸ್ಮಾರ್ಟ್ಫೋನ್ಗಳು ಹಾಗೂ ಸಂಪರ್ಕಿತ ಟಿವಿಗಳಲ್ಲಿ ಪಂದ್ಯಾಟವನ್ನು ವೀಕ್ಷಿಸಲು ಆದ್ಯತೆ ನೀಡಿರುವುದೇ ಅಪ್ಲಿಕೇಶನ್ನ ತ್ವರಿತ ಏರಿಕೆಗೆ ಕಾರಣವಾಗಿದೆ ಎಂಬುದಂತೂ ನಿಜವಾಗಿದೆ.
ಜಿಯೋ ಸಿನಿಮಾ ಕೂಡ ವೀಕ್ಷಕರ ವೀಕ್ಷಣಾ ಮಟ್ಟವನ್ನು ವರ್ಧಿಸುವ ಹಿನ್ನಲೆಯಲ್ಲಿ ಹೈಪ್ ಮೋಡ್ನಲ್ಲಿ ಲೈವ್ ಟೆಲಿಕಾಸ್ಟ್ ಅನ್ನು ಪ್ರಸಾರ ಮಾಡಿದೆ ಈ ಹೈಪ್ ಮೋಡ್ ಲೈವ್ ಪಂದ್ಯಾಟದ ಸಮಯದಲ್ಲಿಯೇ ತಮ್ಮ ಬೆರಳ ತುದಿಯಲ್ಲೇ ಆಟವನ್ನು ಇನ್ನಷ್ಟು ಮನರಂಜನೀಯವಾಗಿಸುವ ಬೇರೆ ಬೇರೆ ವೈಶಿಷ್ಟ್ಯಗಳನ್ನು ಒದಗಿಸುತ್ತದೆ.
ಪಂದ್ಯಾಟದ ಮಲ್ಟಿ-ಕ್ಯಾಮೆರಾ ವೀಕ್ಷಣೆಯನ್ನು ಒದಗಿಸುವುದರ ಜೊತೆಗೆ ಪಂದ್ಯಾಟದ ವಿವರ, ರಿಯಲ್ ಟೈಮ್ ಸ್ಟೇಟಸ್ ಹಾಗೂ ಮರೆಯಲಾದ ಕ್ಷಣವನ್ನು ಪುನಃ ನೆನಪಿಗೆ ತಂದುಕೊಳ್ಳಲು ಸಹಕಾರಿಯಾಗಿರುವ ಟೈಮ್ ವೀಲ್ ವಿಶೇಷತೆಯನ್ನೊಳಗೊಂಡಿದೆ.
ಈವೆಂಟ್ನ ಡಿಜಿಟಲ್ ವೀಕ್ಷಕರನ್ನು ಹೆಚ್ಚಿನ OEM ಮತ್ತು CTV ಪ್ಲ್ಯಾಟ್ಫಾರ್ಮ್ಗಳಾದ ಜಿಯೋ STB, ಆ್ಯಪಲ್ ಟಿವಿ, ಅಮೆಜಾನ್ ಫೈರ್ಸ್ಟಿಕ್, ಸೋನಿ, ಸ್ಯಾಮ್ಸಂಗ್, ಎಲ್ಜಿ, ಮತ್ತು ಶ್ಯೋಮಿ ಮುಂತಾದವುಗಳಲ್ಲಿ ಕೂಡ ಹೆಚ್ಚಿನ ಬೆಂಬಲದೊಂದಿಗೆ ಪ್ರಸಾರ ಮಾಡಲಾಗಿದೆ.
CTV ವೀಕ್ಷಕರು ಜಿಯೋ ಸಿನಿಮಾದ ಮೂಲಕ ಮೊದಲ ಬಾರಿಗೆ UHD 4K ನಲ್ಲಿ ವಿಶ್ವದ ಅತ್ಯಂತ ಪ್ರತಿಷ್ಠಿತ ಫುಟ್ಬಾಲ್ ಪಂದ್ಯಾವಳಿಯನ್ನು ವೀಕ್ಷಿಸಿದರು.
ಪ್ರಯತ್ನಕ್ಕೆ ತಕ್ಕ ಪ್ರತಿಫಲ
FIFA ವರ್ಲ್ಡ್ ಕಪ್ ಕತಾರ್ 2022 ರ ವಿಶ್ವದರ್ಜೆಯ ಪ್ರಸ್ತುತಿಗೆ ಗ್ರಾಹಕರು ಸಾಕ್ಷಿಯಾಗಿಬೇಕೆಂಬ ಹಿನ್ನಲೆಯಿಂದ ನಾವು ಪ್ರಯತ್ನಿಸಿದ್ದು ಅದರಲ್ಲಿ ಯಶಸ್ಸನ್ನು ಸಾಧಿಸಿದ್ದೇವೆ ಹೀಗಾಗಿ ವಿಶ್ವಕಪ್ನಲ್ಲಿ ನಮ್ಮ ದೇಶ ಭಾಗವಹಿಸದೇ ಇದ್ದರೂ ಡಿಜಿಟಲ್ನಲ್ಲಿ ಹೆಚ್ಚು ವೀಕ್ಷಿಸಿದ ಕ್ರೀಡಾಕೂಟವಾಗಿ ಭಾರತ ಹೆಸರು ಮಾಡಿದೆ ಎಂದು Viacom18 ಸ್ಪೋರ್ಟ್ಸ್ ಸಿಇಒ ಅನಿಲ್ ಜಯರಾಜ್ ತಿಳಿಸಿದ್ದಾರೆ.
ಡಿಜಿಟಲ್ನ ಶಕ್ತಿಯನ್ನು ಈ ಯಶಸ್ಸು ಪ್ರದರ್ಶಸಿದ್ದು ವೀಕ್ಷಕರು ಹಾಗೂ ಫಿಫಾ ಅಭಿಮಾನಿಗಳು ತಮ್ಮ ಮೆಚ್ಚಿನ ಈವೆಂಟ್ ಅನ್ನು ಡಿಜಿಟಲ್ನಲ್ಲಿ ವೀಕ್ಷಿಸಲು ಆದ್ಯತೆ ನೀಡಿದ್ದಾರೆ.
ಇಷ್ಟಲ್ಲದೆ FIFA ವಿಶ್ವಕಪ್ ಗೋಲ್ಡನ್ ಬೂಟ್ ವಿಜೇತ ಕೈಲಿಯನ್ ಎಂಬಪ್ಪೆ ಮತ್ತು FIFA ವಿಶ್ವಕಪ್ ಮತ್ತು ಗೋಲ್ಡನ್ ಬಾಲ್ ವಿಜೇತ ಲಿಯೋನೆಲ್ ಮೆಸ್ಸಿಯ ಅಸಾಮಾನ್ಯ ಪ್ರದರ್ಶನವನ್ನು ಕಣ್ತುಂಬಿಕೊಂಡಿದ್ದಾರೆ.
ವೇಯ್ನ್ ರೂನಿ, ಲೂಯಿಸ್ ಫಿಗೋ, ರಾಬರ್ಟ್ ಪೈರ್ಸ್, ಗಿಲ್ಬರ್ಟೊ ಸಿಲ್ವಾ ಮತ್ತು ಸೋಲ್ ಕ್ಯಾಂಪ್ಬೆಲ್ ಸೇರಿದಂತೆ ವರ್ಲ್ಡ್ ಕಪ್ ಹೀರೋಗಳು ಸ್ಪೋರ್ಟ್ಸ್ 18 ಮತ್ತು ಜಿಯೋ ಸಿನಿಮಾದ ವಿಶ್ವದರ್ಜೆಯ ಸ್ಟುಡಿಯೋಗಳಲ್ಲಿ ಲೈವ್ ಕಾಮೆಂಟರಿಯನ್ನು ನೀಡಿದ್ದಾರೆ. ಅಭಿಮಾನಿಗಳಿಗೆ ವಿಶ್ವದರ್ಜೆಯ ಮಟ್ಟದಲ್ಲಿ ಕ್ರೀಡಾಕೂಟದ ರಸದೌತಣವನ್ನು ಉಣಬಡಿಸಿದ್ದಾರೆ.
ಬ್ರ್ಯಾಂಡ್ಗಳ ಸ್ಥಾನದಲ್ಲೂ ಏರಿಕೆ
ಫುಟ್ಬಾಲ್ ಅಭಿಮಾನಿಗಳು ಮಾತ್ರವಲ್ಲದೆ ಜಿಯೋ ಸಿನಿಮಾ ಹಾಗೂ ಸ್ಪೋರ್ಟ್ಸ್ 18ನಲ್ಲಿ ವಿಶ್ವದ ಅತ್ಯಂತ ಪ್ರತಿಷ್ಠಿತ ಫುಟ್ಬಾಲ್ ಪಂದ್ಯಾವಳಿಯೊಂದಿಗೆ ಪಾಲುದಾರಿಕೆ ಹೊಂದಿರುವ ಬ್ರ್ಯಾಂಡ್ಗಳು ಕೂಡ ಹಿಂದೆಂದಿಗಿಂತಲೂ ಹೆಚ್ಚಿನ ಸ್ಥಾನಮಾನಗಳನ್ನು ಗಳಿಸಿಕೊಂಡಿವೆ.
ಇ-ಕಾಮರ್ಸ್, ಬ್ಯಾಂಕಿಂಗ್, ಹಣಕಾಸು ಸೇವೆಗಳು, ಆಟೋ, ಫ್ಯಾಷನ್, ಆತಿಥ್ಯ ಮತ್ತು ಫಿನ್ಟೆಕ್ನಾದ್ಯಂತ 50 ಕ್ಕೂ ಹೆಚ್ಚು ಬ್ರ್ಯಾಂಡ್ಗಳು ವಿಶ್ವಕಪ್ನ ಲೈವ್ ಕವರೇಜ್ಗೆ ಬೆಂಬಲವನ್ನೊದಗಿಸಿವೆ ಹೀಗೆ ಇನ್ನಷ್ಟು ಹೆಚ್ಚು ಆತ್ಮೀಯವಾಗಿ ಗ್ರಾಹಕರನ್ನು ತಲುಪಿವೆ.
ಸೋಶಿಯಲ್ ಮೀಡಿಯಾಗಳ ಮೂಲಕವೂ ಅಪ್ಡೇಟ್ ಲಭ್ಯ
ಇತ್ತೀಚಿನ ಅಪ್ಡೇಟ್ಗಳು, ಸ್ಕೋರ್ಗಳು ಮತ್ತು ವೀಡಿಯೊಗಳಿಗಾಗಿ, ಅಭಿಮಾನಿಗಳು ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್ ಮತ್ತು ಯೂಟ್ಯೂಬ್ನಲ್ಲಿ ಸ್ಪೋರ್ಟ್ಸ್ 18 ಅನ್ನು ಅನುಸರಿಸಬಹುದು ಮತ್ತು ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್ ಮತ್ತು ಯೂಟ್ಯೂಬ್ನಲ್ಲಿ ಜಿಯೋ ಸಿನಿಮಾವನ್ನು ಫಾಲೋ ಮಾಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ