News18 India World Cup 2019

3ನೇ ಟೆಸ್ಟ್​​ನಲ್ಲಿ ಟೀಂ ಇಂಡಿಯಾ ಗೆಲುವಿಗೆ ಕಾರಣವಾಗಿದ್ದು ಈ 5 ಅಂಶಗಳು

news18
Updated:August 22, 2018, 5:08 PM IST
3ನೇ ಟೆಸ್ಟ್​​ನಲ್ಲಿ ಟೀಂ ಇಂಡಿಯಾ ಗೆಲುವಿಗೆ ಕಾರಣವಾಗಿದ್ದು ಈ 5 ಅಂಶಗಳು
twitter
news18
Updated: August 22, 2018, 5:08 PM IST
ನ್ಯೂಸ್ 18 ಕನ್ನಡ

ನ್ಯಾಟಿಂಗ್​ಹ್ಯಾಮ್​​ನ ಟ್ರೆಂಟ್​ ಬ್ರಿಡ್ಜ್​​​ ಅಂಗಳದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಣ 3ನೇ ಟೆಸ್ಟ್​ ಪಂದ್ಯದಲ್ಲಿ ಕೊಹ್ಲಿ ಪಡೆ 203 ರನ್​​ಗಳಿಂದ ಗೆದ್ದು ಸರಣಿ ಜೀವಂತವಾಗಿರಿಸಿದೆ. ಭಾರತ ನೀಡಿದ್ದ 521 ರನ್​ಗಳ ಬೃಹತ್ ಮೊತ್ತ ಬೆನ್ನಟ್ಟಿದ ಇಂಗ್ಲೆಂಡ್ 317 ರನ್​ಗೆ ಸರ್ವಪತನ ಕಂಡಿದೆ. ಆದರೆ ಭಾರಕ್ಕೆ ಗೆಲುವು ಅಷ್ಟೊಂದು ಸುಲಭವಾಗಿ ದಕ್ಕಿಲ್ಲ. ಹಾಗಾದರೆ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವಿಗೆ ಕಾರಣವಾದ 5 ಪ್ರಮುಖ ಅಂಶಗಳನ್ನು ನೋಡುವುದಾದರೆ…

ಆರಂಭಿಕರು:'50, 19, 0, 0'. ಇದು ಮೊದಲ ಎರಡು ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಆರಂಭಿಕರ ಜೊತೆಯಾಟ. ಆದರೆ ಈ ಪಂದ್ಯದಲ್ಲಿ ಆರಂಭಿಕರಾಗಿ ಶಿಖರ್ ಧವನ್ ಹಾಗೂ ಕೆ. ಎಲ್. ರಾಹುಲ್ ಕಣಕ್ಕಿಳಿದರು. ಈ ಜೋಡಿ ಮೊದಲನೇ ವಿಕೆಟ್​ಗೆ 60 ರನ್​ಗಳ ಜೊತೆಯಾಟ ನೀಡಿ ಉತ್ತಮ ಆರಂಭ ಒದಗಿಸಿದರು. ಇದು ಟೀಂ ಇಂಡಿಯಾ ಗೆಲುವಿನ ಕಾರಣಗಳಲ್ಲೂ ಒಂದಾಗಿದೆ.

ಕೇವಲ ಕೊಹ್ಲಿ ಆಟ ಮಾತ್ರವಲ್ಲ:
Loading...ಹೌದು, ನಾಯಕನ ಜವಾಬ್ದಾರಿಯನ್ನು ಕೊಹ್ಲಿ ಅವರು ಪ್ರತೀ ಪಂದ್ಯದಲ್ಲಿ ಚೆನ್ನಾಗೆ ನಿಭಾಹಿಸಿದ್ದರು. ಆದರೆ ಉಪನಾಯಕ ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ ಪೂಜಾರ ಅವರ ಬ್ಯಾಟ್​​ನಿಂದ ಕಳೆದ 2 ಟೆಸ್ಟ್​​ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ಬರಲಿಲ್ಲ. ಆದರೆ ಈ ಆಟಗಾರರು 3ನೇ ಟೆಸ್ಟ್​ನಲ್ಲಿ ತಮ್ಮ ನೈಜ್ಯ ಪ್ರದರ್ಶನ ತೋರಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೊದಲ ಇನ್ನಿಂಗ್ಸ್​ನಲ್ಲಿ ಕೊಹ್ಲಿ ಹಾಗೂ ರಹಾನೆ ಜೊತೆಯಾಟ ತಂಡದ ಮೊತ್ತ ಏರಿಕೆಗೆ ಕಾರಣವಾಯಿತು. ಕೊಹ್ಲಿ ಮೊದಲ ಇನ್ನಿಂಗ್ಸ್​ನಲ್ಲಿ 97 ರನ್ ಬಾರಿಸಿದರೆ, ರಹಾನೆ 81 ರನ್​ಗಳ ಕಾಣಿಕೆ ನೀಡಿದರು. ಅಂತೆಯೆ ಎರಡನೇ ಇನ್ನಿಂಗ್ಸ್​ನಲ್ಲಿ ಕೊಹ್ಲಿ ಶತಕ ಹಾಗು ಪೂಜಾರ ಅವರ 72 ರನ್​​ ಇಂಗ್ಲೆಂಡ್​ಗೆ ಬೆಟ್ಟದಂತ ಟಾರ್ಗೆಟ್ ನೀಡಲು ನೆರವಾಯಿತು.

ಸ್ಲಿಪ್​​ನಲ್ಲಿ ಹಿಡಿದ ಕ್ಯಾಚ್:ಸ್ಲಿಪ್​​ನಲ್ಲಿ ನಿಂತು ಕ್ಯಾಚ್ ಹಿಡಿಯುವುದು ಎಂದರೆ ಅದು ಸುಲಭದ ಮಾತಲ್ಲ. ಆದರೆ ಈ ಬಾರಿ ಟೀಂ ಇಂಡಿಯಾ ಆಟಗರಾರರು ಪ್ರಮುಖ ಕ್ಯಾಚ್​ಗಳನ್ನು ಕೈ ಚೆಲ್ಲದೆ ಇದ್ದಿದ್ದು ಗೆಲುವಿಗೆ ಕಾರಣ. ಒಟ್ಟು 3 ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಸ್ಲಿಪ್​​ನಲ್ಲಿ ಭಾರತದ 15 ಕ್ಯಾಚ್​ಗಳನ್ನು ಕೈಚೆಲ್ಲಿದೆ. ಆದರೆ ಭಾರತ ಕೇವಲ 6 ಕ್ಯಾಚ್​​​​ಗಳನ್ನಷ್ಟೆ ಡ್ರಾಪ್​​​ ಮಾಡಿತ್ತು. ಅದರಲ್ಲು ಕೆ. ಎಲ್. ರಾಹುಲ್ ಅವರು 3ನೇ ಟೆಸ್ಟ್​ನಲ್ಲಿ ಒಟ್ಟಾರೆ 7 ಕ್ಯಾಚ್ ಹಿಡಿದು ದಾಖಲೆ ಪುಟ ಸೇರಿದ್ದಾರೆ.

ಆಲ್ರೌಂಡರ್ ಪ್ರದರ್ಶನ:ಟೀಂ ಇಂಡಿಯಾ ಗೆಲುವಿನಲ್ಲಿ ಹಾರ್ದಿಕ್ ಪಾಂಡ್ಯ ಅವರ ಪ್ರದರ್ಶನ ಮುಖ್ಯವಾಗಿದೆ. ಆಲ್ರೌಂಡರ್ ಪ್ರದರ್ಶನ ತೋರಿದ ಪಾಂಡ್ಯ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 6 ಓವರ್​ ಮಾಡಿ 28 ರನ್ ನೀಡಿ 5 ವಿಕೆಟ್ ಕಿತ್ತಿದ್ದರೆ, 2ನೇ ಇನ್ನಿಂಗ್ಸ್​ನಲ್ಲಿ 52 ಎಸೆತಗಳಲ್ಲಿ ಅಜೇಯ 52 ರನ್ ಸಿಡಿಸಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಹಾಗೂ ಆಂಗ್ಲರ ಮೊತ್ತ ಇಳಿಸುವಲ್ಲಿ ಪ್ರಮುಖವಾದರು.

ಪರಿಪೂರ್ಣವಾದ ತಂಡ:3ನೇ ಟೆಸ್ಟ್ ಆರಂಭಕ್ಕೂ ಮುನ್ನ ಭಾರತ ತಂಡದಲ್ಲಿ ಬದಲಾವಣೆ ಗಾಳಿ ಬೀಸದಿದ್ದಲ್ಲಿ ಪಂದ್ಯ ಗೆಲ್ಲಲು ಕಷ್ಠ ಎಂದು ಹೇಳಲಾಗುತ್ತಿತ್ತು. ಅದರಂತೆ ಟೀಂ ಇಂಡಿಯಾ 2 ಪ್ರಮುಖ ಬದಲಾವಣೆ ಮಾಡಿ ಹಾಗೂ ಅದರಲ್ಲಿ ಯಶಸ್ವಿ ಕೂಡ ಆಯಿತು. ಕುಲ್ದೀಪ್ ಯಾದವ್ ಬದಲು ಸ್ಥಾನ ಪಡೆದ ಜಸ್​ಪ್ರೀತ್ ಬುಮ್ರಾ ಮೊದಲ ಇನ್ನಿಂಗ್ಸ್​ನಲ್ಲಿ 2 ವಿಕೆಟ್ ಕಿತ್ತರೆ, 2ನೇ ಇನ್ನಿಂಗ್ಸ್​ನಲ್ಲಿ 5 ಪ್ರಮುಖ ವಿಕೆಟ್ ಕಿತ್ತು ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳನ್ನು ಪೆವಿಲಿಯನ್​ಗೆ ಅಟ್ಟಿದರು. ಇನ್ನು ಚೊಚ್ಚಲ ಟೆಸ್ಟ್ ಪಂದ್ಯವಾಡಿದ ರಿಷಭ್ ಪಂತ್ ಅವರ ಪಾತ್ರ ಕೂಡ ಪಂದ್ಯದ ಗೆಲುವಿನಲ್ಲಿ ಕಾರಣವಿದೆ. ಕೀಪಿಂಗ್​ನಲ್ಲಿ ಅದ್ಭುತ ಪ್ರದರ್ಶನ ತೋರಿದ ಪಂತ್ ಮೊದಲ ಪಂದ್ಯದಲ್ಲೇ ಒಟ್ಟು 6 ಕ್ಯಾಚ್ ತಮ್ಮ ಖಾತೆಗೆ ಸೇರಿಸಿದ್ದಾರೆ.
First published:August 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...