ಇಂಗ್ಲೆಂಡ್​ ನೆಲದಲ್ಲಿ ಭಾರತೀಯ ಐದು ಬ್ಯಾಟ್ಸ್​ಮನ್​ಗಳ ಅವಿಸ್ಮರಣೀಯ ಇನ್ನಿಂಗ್ಸ್​ಗಳು

news18
Updated:July 24, 2018, 4:02 PM IST
ಇಂಗ್ಲೆಂಡ್​ ನೆಲದಲ್ಲಿ ಭಾರತೀಯ ಐದು ಬ್ಯಾಟ್ಸ್​ಮನ್​ಗಳ ಅವಿಸ್ಮರಣೀಯ ಇನ್ನಿಂಗ್ಸ್​ಗಳು
Indian batsman Mahendra Singh Dhoni looses track of the ball after deflecting shot off a Chris Tremlett delivery during the fifth day of the first test between England and India at Lords cricket ground, in London, 23 July 2007. AFP PHOTO/CHRIS YOUNG / AFP PHOTO / CHRIS YOUNG
news18
Updated: July 24, 2018, 4:02 PM IST
ನ್ಯೂಸ್ 18 ಕನ್ನಡ

ಆಂಗ್ಲರ ನೆಲದಲ್ಲಿ ಭಾರತ ಈಗಾಗಲೇ ಟಿ-20 ಸರಣಿ ಗೆದ್ದು ಏಕದಿನ ಸರಣಿಯಲ್ಲಿ ಸೋಲುಂಡಿದೆ. ಹೀಗಾಗಿ ಸದ್ಯ ಟೆಸ್ಟ್ ಸರಣಿಯ ಮೇಲೆ ಗೆಲುವಿನ ಕಣ್ಣಿಟ್ಟಿದೆ. ಭಾರತೀಯ ಬ್ಯಾಟ್ಸ್​ಮನ್​ಗಳು ಈಗಾಗಲೇ ಕಠಿಣ ಅಭ್ಯಾಸಲ್ಲಿ ತೋಡಗಿದ್ದು, ಬ್ಯಾಟಿಂಗ್​ನಲ್ಲಿ ತಮ್ಮ ಕರಾಮತ್ತು ತೋರಲು ಸಜ್ಜಾಗುತ್ತಿದ್ದಾರೆ. ಈ ಹಿಂದೆಯೂ ಭಾರತೀಯ ಬ್ಯಾಟ್ಸ್​​ಮನ್​ಗಳು ಇಂಗ್ಲೆಂಡ್​ನಲ್ಲಿ ಮರೆಯಲಾಗದ ಅವಿಸ್ಮರಣೀಯ ಪ್ರದರ್ಶನ ತೋರಿದ್ದಾರೆ. ಈ ಬ್ಯಾಟ್ಸ್​​ಮನ್​ಗಳು ಭಾರತವನ್ನು ಸೋಲಿನಂಚಿನಿಂದ ಪಾರಾಗುವಂತೆ ಮಾಡಿದ್ದಾರೆ. ಇದರಲ್ಲಿ ಅತ್ಯುತ್ತಮ 5 ಬ್ಯಾಟ್ಸ್​ಮನ್​ಗಳನ್ನು ನೋಡುವುದಾದರೆ...

ದಿಲಿಪ್ ವೆಂಗ್ಸರ್ಕರ್(1986, ಹೆಡಿಂಗ್ಲೆ)ವೆಂಗ್ಸರ್ಕರ್ ಅವರು ಇಂಗ್ಲೆಂಡ್ ವಿರುದ್ಧ ಆಡಿರುವ ಹೆಚ್ಚಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಇಂಗ್ಲೆಂಡ್ ವಿರುದ್ಧದ 23 ಪಂದ್ಯಗಳಲ್ಲಿ ಇವರು 960 ರನ್ ಬಾರಿಸಿದ್ದಾರೆ. 1986ರಲ್ಲಿ ಹೆಡಿಂಗ್ಲೆನಲ್ಲಿ ನಡೆದ ಪಂದ್ಯದಲ್ಲಿ ವೆಂಗ್ಸರ್ಕರ್ ಅವರ 61 ರನ್​​ನ ಫಲವಾಗಿ ಭಾರತ 272 ರನ್ ಗಳಿಸಲು ನೆರವಾಗಿತ್ತು. ಬಳಿಕ ಎರಡನೇ ಇನ್ನಿಂಗ್ಸ್​ನಲ್ಲಿ ಭಾರತ ದಿಡೀರ್ ಕುಸಿತ ಕಂಡು ಕೇವಲ 35 ರನ್ ಆಗುವ ಹೊತ್ತಿಗೆ ತನ್ನ 4 ಪ್ರಮುಖ ವಿಕೆಟ್ ಕಳೆದುಕೊಂಡು ದುಸ್ತಿತಿಗೆ ತಲುಪಿತ್ತು. ಈ ಸಂದರ್ಭ ಕ್ರೀಸ್​ ಕಚ್ಚಿ ಆಡಿದ ವೆಂಗ್ಸರ್ಕರ್ ಅವರು 102 ರನ್ ಸಿಡಿಸಿ ಇಂಗ್ಲೆಂಡ್ 408 ರನ್​ಗಳ ಟಾರ್ಗೆಟ್ ನೀಡಿತ್ತು. 128 ರನ್​ಗೆ ಇಂಗ್ಲೆಂಡ್ ಸರ್ವಪತನ ಕಂಡು ಭಾರತ 3 ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿತ್ತು.

ಸಚಿನ್ ತೆಂಡೂಲ್ಕರ್ (1990, ಓಲ್ಡ್ ಟ್ರಾಫೋರ್ಡ್​)


Loading...

ಈ ಪಂದ್ಯದಲ್ಲಿ ಸಚಿನ್ ಅವರು ಅಂತರಾಷ್ಟ್ರೀಯಾ ಟೆಸ್ಟ್​ ಕ್ರಿಕೆಟ್​ನಲ್ಲಿ ಮೊದಲ ಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಅದು ಕೂಡ ಕೇವಲ 17 ವರ್ಷ ಪ್ರಾಯದಲ್ಲಿ ಎಂಬುದು ವಿಶೇಷ. ಭಾರತಕ್ಕೆ ಗೆಲ್ಲಲು 408 ರನ್ ಗುರಿ ನೀಡಿದ್ದ ಇಂಗ್ಲೆಂಡ್ 109 ರನ್ ಆಗುವ ಹೊತ್ತಿಗೆ ಭಾರತ 4 ವಿಕೆಟ್ ಕಳೆದುಕೊಂಡಿತು. ಈ ಸಂದರ್ಭ ಮನೋಜ್ ಪ್ರಭಾಕರ್ ಜೊತೆಯಾದ ಸಚಿನ್ ಇನ್ನಿಂಗ್ಸ್​ ಕಟ್ಟಿ ಭಾರತಕ್ಕೆ ಗೆಲುವು ತಂದು ಕೊಟ್ಟಿದ್ದರು. ಈ ಪಂದ್ಯದಲ್ಲಿ ತೆಂಡೂಲ್ಕರ್ ಅಜೇಯ 119 ರನ್ ಬಾರಿಸಿದ್ದರು.

ಸೌರವ್ ಗಂಗೂಲಿ (1996, ಲಾರ್ಡ್ಸ್​​)ಅದು 1996ರಲ್ಲಿ ಭಾರತ-ಇಂಗ್ಲೆಂಡ್ ನಡುವಣ ಎರಡನೇ ಟೆಸ್ಟ್ ಪಂದ್ಯ. 3 ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ಒಂದು ಪಂದ್ಯ ಗೆದ್ದಿದ್ದು, ಭಾರತಕ್ಕೆ ಎರಡನೇ ಟೆಸ್ಟ್ ಗೆಲ್ಲಲೇ ಬೇಕಾಗಿತ್ತು. ಈ ಸಂದರ್ಭ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗಂಗೂಲಿಗೆ ಯಾವೊಬ್ಬ ಬ್ಯಾಟ್ಸ್​ಮನ್​ಗಳು ಸಾತ್​ ನೀಡಲಿಲ್ಲ. ಒಂದು ಕಡೆ ವಿಕೆಟ್ ಉರುಳುತ್ತಿದ್ದರೆ ಇತ್ತ ಕ್ರೀಸ್​ ಕಚ್ಚಿ ಬ್ಯಾಟಿಂಗ್ ಮಾಡಿದ ಗಂಗೂಲಿ 20 ಬೌಂಡರಿ ಜೊತೆಗೆ 131 ರನ್​ ಬಾರಿಸಿದ್ದರು. ಇದರಿಂದ ಭಾರತ 429 ರನ್ ಕಲೆಹಾಕಿ ಉತ್ತಮ ಲೀಡ್ ಪಡೆದುಕೊಂಡಿತು. ಅಲ್ಲದೆ ಕೊನೆಯ ಟೆಸ್ಟ್ ಪಂದ್ಯದಲ್ಲೂ ಗಂಗೂಲಿ ಅವರ ಮತ್ತೊಂದು ಶತಕ ಭಾರತಕ್ಕೆ ನೆರವಾಗಿತ್ತು.

ರಾಹುಲ್ ದ್ರಾವಿಡ್ (2002, ಹೆಡಿಂಗ್ಲೆ)ರಾಹುಲ್ ದ್ರಾವಿಡ್ ಅವರ ಅತ್ಯುತ್ತಮ ಇನ್ನಿಂಗ್ಸ್​ ಎಂದರೆ 2011ರಲ್ಲಿ ಬಾರಿಸಿದ ತ್ರಿಶತಕ. ಆದರೆ ಕ್ರಿಕೆಟ್ ಅಭಿಮಾನಿಗಳಲ್ಲಿ ಈಗಲೂ ದ್ರಾವಿಡ್ ಅವರ ಮರೆಯಲಾಗದಂತ ಇನ್ನಿಂಗ್ಸ್​ ಎಂದರೆ 2002ರಲ್ಲಿ ಹೆಡಿಂಗ್ಲೆನಲ್ಲಿ ಆಡಿದ ಆಟ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಆರಂಭದಲ್ಲೆ ವಿರೇಂದ್ರ ಸೆಹ್ವಾಗ್ ಅವರ ವಿಕೆಟ್​ ಕಳೆದಿಕೊಂಡಿತು. 3ನೇ ಕ್ರಮಾಂಕದಲ್ಲಿ ಕ್ರೀಸ್​ಗಿಳಿದ ದ್ರಾವಿಡ್ ಅದ್ಭುತ ಆಟ ಪ್ರದರ್ಶಿಸಿದ್ದರು. 429 ನಿಮಿಷಗಳ ಕಾಲ ಕ್ರೀಸ್​​ನಲ್ಲಿದ್ದ ದ್ರಾವಿಡ್ 23 ಬೌಂಡರಿಗಳ ಜೊತೆಗೆ 148 ರನ್ ಬಾರಿಸಿ ಭಾರತಕ್ಕೆ ಜಯ ತಂದು ಕೊಟ್ಟಿದ್ದರು. ಅಲ್ಲದೆ ಈ ಪಂದ್ಯದಲ್ಲಿ ದ್ರಾವಿಡ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದರು.

ಮಹೇಂದ್ರ ಸಿಂಗ್ ಧೊನಿ (2007, ಲಾರ್ಡ್ಸ್​​)2007ರಲ್ಲಿ ಲಾರ್ಡ್ಸ್​​ನಲ್ಲಿ ನಡೆಯುತ್ತಿದ್ದ ಪಂದ್ಯ ಭಾರತಕ್ಕೆ ಮುಖ್ಯವಾಗಿತ್ತು. ಧೊನಿ ಈ ಪಂದ್ಯದಲ್ಲಿ ಶತಕ ಸಿಡಿಸಿಲ್ಲವಾದರು ಮಳೆಯ ನಡುವೆ ಪಂದ್ಯ ಡ್ರಾ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಭಾರತಕ್ಕೆ ಗೆಲ್ಲಲು 380 ರನ್​ಗಳ ಗುರಿ ನೀಡಿದ್ದ ಇಂಗ್ಲೆಂಡ್ 145 ರನ್ ಆಗುವಷ್ಟರಲ್ಲಿ ಭಾರತ 5 ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭ ವಿವಿಎಸ್ ಲಕ್ಷಣ್ ಜೊತೆಯಾದ ಧೋನಿ ಉತ್ತಮ ಇನ್ನಿಂಗ್ಸ್​ ಕಟ್ಟಿದರು. 86 ರನ್​ಗಳ ಜೊತೆಯಾಟ ನೀಡಿ ಲಕ್ಷಣ್ ಔಟ್ ಆದರು. ಆದರು ಒಬ್ಬಂಟಿಯಾಗಿ ಕ್ರೀಸ್​​ ಕಚ್ಚಿ ಆಡಿದ ಧೊನಿ 159 ಎಸೆತಗಳಲ್ಲಿ 10 ಬೌಂಡರಿ ಜೊತೆಗೆ 76 ರನ್ ಕಲೆಹಾಕಿದ್ದರು. 282 ರನ್​ಗೆ 9 ವಿಕೆಟ್ ಕಳೆದುಕೊಂಡಿದ್ದಾಗ ಜೋರಾಗಿ ಮಳೆ ಸುರಿದ ಕಾರಣ ಪಂದ್ಯವನ್ನು ಡ್ರಾ ಮೂಲಕ ಅಂತ್ಯಗೊಳಿಸಲಾಯಿತು. ಮೂರು ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ ಭಾರತ 1-0 ಅಂತರದೊಂದಿಗೆ ಜಯ ಸಾಧಿಸಿತ್ತು.
First published:July 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...