Sports Injury: ಯುವ ಕ್ರೀಡಾಪಟುಗಳಿಗೆ ಫಿಟ್ನೆಸ್ ಸಲಹೆಗಳು: ಸಾಮಾನ್ಯ ಗಾಯಗಳಿಗೆ ಚಿಕಿತ್ಸೆ ಹೇಗೆ ಮಾಡಬೇಕು? ಇಲ್ಲಿದೆ ವಿವರ

ಕ್ರೀಡಾಪಟುಗಳಲ್ಲಿ, ಕ್ರೀಡಾ ಗಾಯಗಳೆಂದರೆ ಮೊಣಕಾಲು, ಭುಜ ಮತ್ತು ಕೀಲುಗಳಲ್ಲಿ ಉಂಟಾಗುವ ಗಾಯಗಳು ಸರ್ವೆಸಾಮಾನ್ಯವಾಗಿದೆ. ಸಾಮಾನ್ಯವಾಗಿ ಉಂಟಾಗುವ ಕ್ರೀಡಾ ಗಾಯಗಳು, ಅವುಗಳಿಗೆ ಚಿಕಿತ್ಸೆ ಮತ್ತು ಯುವ ಕ್ರೀಡಾಪಟುಗಳಲ್ಲಿ ಗಾಯಗಳನ್ನು ತಡೆಗಟ್ಟಲು ಮುಖ್ಯವಾಗಿ ಮಾಡಬೇಕಾಗಿರುವ ಮತ್ತು ಮಾಡಬಾರದ ವಿಚಾರಗಳ ಬಗ್ಗೆ ನೀವು ಇಲ್ಲಿ ತಿಳಿದುಕೊಳ್ಳಬೇಕಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
ಕ್ರೀಡೆ (Sports) ಎಂದರೆ ಬರೀ ಆಟವಲ್ಲ. ಅದು ಒಬ್ಬ ವ್ಯಕ್ತಿಯ ಸರ್ವಾಂಗ ದೇಹಕ್ಕೂ (Body) ಸಿಗುವ ಹೊಸ ಚೈತನ್ಯ. ಇನ್ನು ಈ ಕ್ರೀಡೆಯಲ್ಲಿ ಭಾಗವಹಿಸುವವರು ತುಂಬಾ ಶಕ್ತಿಶಾಲಿಗಳು ಅವರಿಗೆ ಯಾವ ಗಾಯಗಳು ಆಗುವುದಿಲ್ಲ, ಒಂದು ವೇಳೆ ಆ ಗಾಯಗಳು ಆದರೂ ಸಹ ಅವುಗಳ ನೋವನ್ನು (Pain) ತಡೆದುಕೊಳ್ಳುವ ಕಷ್ಟಸಹಿಷ್ಣುತೆ ಅವರಲ್ಲಿ ಇರುತ್ತದೆ ಎಂದು ಹೇಳುವವರ ಮಾತು ಕೇಳಿಯೇ ಇರುತ್ತೆವೆ. ಇನ್ನು ಹೊಸದಾಗಿ ಕ್ರೀಡೆಯಲ್ಲಿ ಭಾಗವಹಿಸುವ ಹೊಸ ಕ್ರೀಡಾಪಟುಗಳಿಗೆ ಗಾಯಗಳು ಹೆಚ್ಚು. ಆದರೆ ಗಾಯಗಳು (injury) ಆಗದಂತೆ ತಡೆಗಟ್ಟುವುದು ಹೇಗೆ? ಯಾವ ಗಾಯಗಳು ಹೆಚ್ಚು ಸಾಮಾನ್ಯವೆಂದು ತಿಳಿಯುವುದು? ಎಂಬೆಲ್ಲ ಮಾಹಿತಿಯನ್ನು ಈ ಲೇಖನದಲ್ಲಿಂದು ನಾವು ತಿಳಿಯೋಣ.

ಕ್ರೀಡಾಪಟುಗಳಲ್ಲಿ, ಕ್ರೀಡಾ ಗಾಯಗಳೆಂದರೆ ಮೊಣಕಾಲು, ಭುಜ ಮತ್ತು ಕೀಲುಗಳಲ್ಲಿ ಉಂಟಾಗುವ ಗಾಯಗಳು ಸರ್ವೆಸಾಮಾನ್ಯವಾಗಿದೆ. ಸಾಮಾನ್ಯವಾಗಿ ಉಂಟಾಗುವ ಕ್ರೀಡಾ ಗಾಯಗಳು, ಅವುಗಳಿಗೆ ಚಿಕಿತ್ಸೆ ಮತ್ತು ಯುವ ಕ್ರೀಡಾಪಟುಗಳಲ್ಲಿ ಗಾಯಗಳನ್ನು ತಡೆಗಟ್ಟಲು ಮುಖ್ಯವಾಗಿ ಮಾಡಬೇಕಾಗಿರುವ ಮತ್ತು ಮಾಡಬಾರದ ವಿಚಾರಗಳ ಬಗ್ಗೆ ನೀವು ಇಲ್ಲಿ ತಿಳಿದುಕೊಳ್ಳಬೇಕಾಗಿದೆ.

ಕ್ರೀಡಾ ಗಾಯಗಳ ಕುರಿತು ತಜ್ಞರು ಮಾತು ಹೀಗಿದೆ:
ಕ್ರೀಡಾ ಗಾಯಗಳ ಕುರಿತು "ಕ್ರೀಡಾ ಗಾಯಗಳನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ತೀವ್ರವಾದ ಗಾಯ, ಅತಿಯಾದ ಬಳಕೆಯಿಂದ ಉಂಟಾಗುವ ಗಾಯ ಮತ್ತು ಕೊನೆಯದು ದೀರ್ಘಕಾಲದ ಕ್ರೀಡಾ ಗಾಯಗಳು" ಎಂದು ಸುದ್ದಿ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ, ನವಿ ಮುಂಬೈನ ಮೆಡಿಕೋವರ್ ಆಸ್ಪತ್ರೆಯ ಕನ್ಸಲ್ಟೆಂಟ್ ಆರ್ಥ್ರೋಸ್ಕೊಪಿಕ್ ಸರ್ಜನ್ ಮತ್ತು ಸ್ಪೋರ್ಟ್ಸ್ ಮೆಡಿಸಿನ್ ಸ್ಪೆಷಲಿಸ್ಟ್ ಡಾ.ಷರೀಫ್ ದುಡೇಕುಲಾ ಹೇಳಿದರು.

ಸಾಮಾನ್ಯ ಕ್ರೀಡಾ ಗಾಯಗಳು:
ಡಾ. ಷರೀಫ್ ದುಡೇಕುಲಾ ಅವರು ಅತ್ಯಂತ ಸಾಮಾನ್ಯವಾದ ಕ್ರೀಡಾ ಗಾಯಗಳನ್ನು ಇಲ್ಲಿ ನಮಗೆಲ್ಲ ತಿಳಿಸಿದ್ದಾರೆ.

 • ಎರಡು ಮೂಳೆಗಳನ್ನು ಸಂಪರ್ಕಿಸುವ ಅಸ್ಥಿರಜ್ಜು ಉಳುಕು.

 • ಸ್ನಾಯುರಜ್ಜು ಸ್ಟ್ರೈನ್ ಇದು ಮೂಳೆಯ ಮೇಲೆ ಸ್ನಾಯುವಿನ ಜೋಡಣೆಯಾಗಿದೆ.

 • ಮೊಣಕಾಲಿನ ಗಾಯಗಳು, ಸಾಮಾನ್ಯವಾಗಿ ಮುಂಭಾಗದ ಅಸ್ಥಿರಜ್ಜು ಮೇಲೆ ಪರಿಣಾಮ ಬೀರುತ್ತವೆ.

 • ಭುಜದ ಗಾಯಗಳು, ಸಾಮಾನ್ಯವಾಗಿ ಭುಜದ ಮುಂಭಾಗದಲ್ಲಿ ಉಳುಕು ಉಂಟಾಗುವುದು.

 • ಟೆನ್ನಿಸ್ /ಗಾಲ್ಫರ್ ನಿಂದ ಉಂಟಾಗುವ ಮೊಣಕೈ ಗಾಯ ಅಥವಾ ಉಳುಕು.

 • ಜೋರಾಗಿ ಓಡುವಾಗ ಅಥವಾ ಆಟ ಆಡುವಾಗ ಕೈ-ಕಾಲು ಮುರಿತ ಗಾಯಗಳು ಸಂಭವಿಸುತ್ತವೆ.

 • ಮೊಣಕಾಲಿನ ಗಾಯ ಎಲ್ಲ ಕ್ರೀಡೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಗಾಯವಾಗಿದೆ


ಇದರ ಕುರಿತು ಡಾ. ಷರೀಫ್‌ ಅವರು “ಮೊಣಕಾಲಿನ ಮುಂಭಾಗದ ಅಸ್ಥಿರಜ್ಜು ಗಾಯವಾಗಿದ್ದರೆ, ಆ ಮೊಣಕಾಲಿನ ಗಾಯದ ನಂತರ ರೋಗಿಯಲ್ಲಿ ಕಾಣಿಸಿಕೊಳ್ಳುವ ನೋವು, ಅದರ ಪರಿಣಾಮ ಉಂಟಾಗುವ ಊತ, ಹೀಗೆ ಈ ಗಾಯಗಳ ಲಕ್ಷಣಗಳು ಒಂದೇ ಆಗಿರುತ್ತವೆ. ಅದಕ್ಕಾಗಿ ಕ್ರೀಡೆಯಲ್ಲಿ ಆಗುವ ಗಾಯಗಳಿಗೆ ಹೆಚ್ಚು ಭಯ ಪಡುವ ಅಗತ್ಯ ಇಲ್ಲ” ಎಂದು ಹೇಳುತ್ತಾರೆ.

ಇದನ್ನೂ ಓದಿ:  David Warner: ಮತ್ತೊಮ್ಮೆ ಭಾರತೀಯರ ಹೃದಯ ಗೆದ್ದ ವಾರ್ನರ್​, ಈ ಬಾರಿ ಅಂಥದ್ದೇನು​ ಮಾಡಿದ್ದಾರೆ ನೋಡಿ!

ಗಾಯಗಳಿಗೆ ಚಿಕಿತ್ಸೆ ಹೇಗೆ ನೀಡುವುದು?
ಡಾ. ಷರೀಫ್ ದುಡೇಕುಲಾ ಅವರ ಸಲಹೆಯ ಪ್ರಕಾರ "ತೀವ್ರ ಪರಿಸ್ಥಿತಿಗಳಲ್ಲಿ ಐಸ್ ಪ್ಯಾಕ್, ಮೊಣಕಾಲು ಅನ್ನು ನೇರವಾಗಿ ಇರಿಸುವುದು, ಸಾಕಷ್ಟು ನೋವು ನಿವಾರಕಗಳ ಸೇವನೆಗಳ ಮೂಲಕ ಚಿಕಿತ್ಸೆ ನೀಡಬಹುದು ಆದರೆ ನೋವು ಕಡಿಮೆಯಾದ ನಂತರ ಕೂಡಲೇ ಸಕ್ರಿಯ ಫಿಸಿಯೋಥೆರಪಿಗೆ ಹೋಗಬೇಕಾಗುತ್ತದೆ.

ಯುವ ಕ್ರೀಡಾಪಟುಗಳಲ್ಲಿ ಗಾಯಗಳನ್ನು ತಡೆಗಟ್ಟಲು ಮುಖ್ಯವಾಗಿ ಮಾಡಬೇಕಾಗಿರುವ ಮತ್ತು ಮಾಡಬಾರದ ಕೆಲಸಗಳು:
ಮಾಡಬೇಕಾದ ಪ್ರಮುಖ ಕೆಲಸಗಳು:

 • ಗಾಯದ ನಂತರ, ಸಾಕಷ್ಟು ವಿಶ್ರಾಂತಿ ಪಡೆಯಬೇಕು.

 • ಗಾಯವಾದ ಜಾಗಕ್ಕೆ ಆಗಾಗ ಐಸ್‌ ಪ್ಯಾಕ್‌ ಹಾಕಿಕೊಳ್ಳುತ್ತಿರಬೇಕು.

 • ಗಾಯವಾದ ಅಂಗಕ್ಕೆ ಬ್ರೇಸ್ ಅಥವಾ ಸ್ಪ್ಲಿಂಟೇಜ್ ಹಾಕಿಕೊಳ್ಳಬೇಕು.

 • ಗಾಯ ವಾಸಿಯಾದ ನಂತರ ಸಾಕಷ್ಟು ವಿಶ್ರಾಂತಿ ಪಡೆಯಬೇಕು.

 • ಓಪನ್ ಫ್ರಾಕ್ಚರ್ ಇದ್ದಲ್ಲಿ ಟಿಟಿ ಇಂಜೆಕ್ಷನ್ ತೆಗೆದುಕೊಳ್ಳಬೇಕು.


ಮಾಡಬಾರದ ಕೆಲಸಗಳು:

 • ಗಾಯಕ್ಕೆ ಬಿಸಿನೀರನ್ನು ಸೋಕಿಸಬಾರದು.

 • ಗಾಯದ ಸ್ಥಳದಲ್ಲಿ ಮಸಾಜ್ ಮಾಡಬಾರದು.

 • ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೆ ಕ್ರೀಡಾ ಚಟುವಟಿಕೆಯನ್ನು ಮಾಡಬಾರದು.

 • ಮತ್ತೆ ಮತ್ತೆ ಕೀಲುಗಳ ಮೇಲೆ ಒತ್ತಡ ಉಂಟಾಗುವಂತೆ ಮಾಡಬಾರದು. ಅಂದರೆ ಸಾಕಷ್ಟು ವಿಶ್ರಾಂತಿ ಪಡೆಯಬೇಕು.

 • ನೋವು ನಿವಾರಣೆಯಾದ ತಕ್ಷಣ ಓಡಾಡುವುದು ಮರೆಯಬೇಡಿ.


ಇದನ್ನೂ ಓದಿ:  Anil Kumble Family: ಕನ್ನಡಿಗ ಅನಿಲ್ ಕುಂಬ್ಳೆ ಕುಟುಂಬದ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ

ಕ್ರೀಡೆ ಎಂದರೆ ಗಾಯಗಳು ಸಾಮಾನ್ಯ. ಈ ಸಲಹೆಗಳನ್ನು ಅನುಸರಿಸುವ ಮೊದಲು ನೀವು ಒಮ್ಮೆ ವೈದ್ಯರ ಸಂಪರ್ಕ ಪಡೆಯುವುದು ಇನ್ನು ಉತ್ತಮ.
Published by:Ashwini Prabhu
First published: