ಮೊದಲ ಏಕದಿನ ಪಂದ್ಯ: ರಬಡಾ-ಶಮ್ಸಿ ದಾಳಿಗೆ ಲಂಕಾ ತತ್ತರ: ಆಫ್ರಿಕಾಕ್ಕೆ 5 ವಿಕೆಟ್​ಗಳ ಜಯ

news18
Updated:July 29, 2018, 5:12 PM IST
ಮೊದಲ ಏಕದಿನ ಪಂದ್ಯ: ರಬಡಾ-ಶಮ್ಸಿ ದಾಳಿಗೆ ಲಂಕಾ ತತ್ತರ: ಆಫ್ರಿಕಾಕ್ಕೆ 5 ವಿಕೆಟ್​ಗಳ ಜಯ
news18
Updated: July 29, 2018, 5:12 PM IST
ನ್ಯೂಸ್ 18 ಕನ್ನಡ

ಶ್ರೀಲಂಕಾದ ಡಂಬುಲದಲ್ಲಿ ನಡೆದ ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಏಕದಿನ ಪಂದ್ಯದಲ್ಲಿ ಆಫ್ರಿಕನ್ನರು 5 ವಿಕೆಟ್​​ಗಳ ಭರ್ಜರಿ ಜಯ ಸಾಧಿಸಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಶ್ರೀಲಂಕಾ ತಂಡ 34.3 ಓವರ್​​ 193 ರನ್​ಗಳಿಸಿ ಆಲೌಟ್ ಆಯಿತು. ಲಂಕಾ ಪರ ಕುಸಾಲ್ ಪೆರೆರಾ 82 ಹಾಗೂ ತಿಸಾರ ಪೆರೆರಾ 49 ರನ್​ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​​ಮನ್​ಗಳ ಸ್ಕೋರ್ 15ರ ಗಡಿ ದಾಟಲಿಲ್ಲ. ರಬಡಾ ಹಾಗೂ ಶಮ್ಸಿ ಅವರ ಬೌಲಿಂಗ್ ದಾಳಿಗೆ ತತ್ತರಿಸಿದ ಶ್ರೀಲಂಕಾ 200ರ ಗಡಿ ದಾಟಲು ಸಾಧ್ಯವಾಗಿಲ್ಲ. ಆಫ್ರಿಕಾ ಪರ ರಬಡಾ 41 ರನ್​​ ನೀಡಿ ಹಾಗು ಶಮ್ಸಿ 33 ರನ್​ ನೀಡಿ ತಲಾ 4 ವಿಕೆಟ್ ಪಡೆದು ಮಿಂಚಿದರು. 194 ರನ್​​ಗಳ ಗುರಿ ಬೆನ್ನಟ್ಟಿದ ಆಫ್ರಿಕಾಕ್ಕೆ ಕ್ವಿಂಟನ್ ಡಿಕಾಕ್ ಹಾಗೂ ಫಾಫ್ ಡುಪ್ಲೆಸಿಸ್ ಉತ್ತಮ ಜೊತೆಯಾಟ ನೀಡಿದರು. ಡಿಕಾಕ್ ಹಾಗೂ ಡುಪ್ಲೆಸಿಸ್ 86 ರನ್​ಗಳ ಕಾಣಿಕೆ ನೀಡಿ, ಇಬ್ಬರೂ 47 ರನ್​ ಬಾರಿಸಿ ಔಟ್ ಆದರು. ಬಳಿಕ ಸ್ಪೋಟಕ ಬ್ಯಾಟಿಂಗ್ ನಡೆಸಿದ ಜೆಪಿ ಡುಮಿನಿ ಅಜೇಯ 53 ರನ್​ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ದ. ಆಫ್ರಿಕಾ 31 ಓವರ್​​ನಲ್ಲಿ 5 ವಿಕೆಟ್ ಕಳೆದುಕೊಂಡು 196 ರನ್ ಬಾರಿಸಿ 5 ಪಂದ್ಯಗಳ ಏಕದಿನ ಸರಣಿಯಲ್ಲಿ 1-0ಯ ಮುನ್ನಡೆ ಸಾಧಿಸಿದೆ. ಲಂಕಾ ಪರ ಅಖಿಲಾ ಧನಂಜಯ್ 50 ರನ್​ ನೀಡಿ 3 ವಿಕೆಟ್ ಪಡೆದರು. ಎರಡನೇ ಏಕದಿನ ಪಂದ್ಯ ಆಗಸ್ಟ್​ 1 ರಂದು ನಡೆಯಲಿದ್ದು, ಆ. 14ಕ್ಕೆ ಒಂದು ಟಿ-20 ಕದನ ಆಡಲಿದೆ.
First published:July 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ