ಕ್ರೈಸ್ಟ್​​​ಚರ್ಚ್ ಶೂಟ್​ಔಟ್ ಪ್ರಕರಣ; ನ್ಯೂಜಿಲೆಂಡ್-ಬಾಂಗ್ಲಾ ಟೆಸ್ಟ್ ರದ್ದು

ಪಂದ್ಯ ರದ್ದಾದ ಬಗ್ಗೆ ಟ್ವೀಟ್​ ಮಾಡಿರುವ ನ್ಯೂಜಿಲೆಂಡ್ ತಂಡ ನ್ಯೂಜಿಲೆಂಡ್​ ಹಾಗೂ ಬಾಂಗ್ಲಾ ನಡುವೆ ನಡೆಯಬೇಕಿದ್ದ ಮೂರನೇ ಪಂದ್ಯವನ್ನು ರದ್ದು ಮಾಡಲಾಗಿದೆ. ಎರಡೂ ರಾಷ್ಟ್ರಗಳು ಒಟ್ಟಾಗಿ ಈ ನಿರ್ಧಾರಕ್ಕೆ ಬಂದಿವೆ ಎಂದಿದೆ.

Rajesh Duggumane | news18
Updated:March 15, 2019, 12:40 PM IST
ಕ್ರೈಸ್ಟ್​​​ಚರ್ಚ್ ಶೂಟ್​ಔಟ್ ಪ್ರಕರಣ; ನ್ಯೂಜಿಲೆಂಡ್-ಬಾಂಗ್ಲಾ ಟೆಸ್ಟ್ ರದ್ದು
ಬಾಂಗ್ಲಾ ಆಟಗಾರ ತಮೀಮ್​
  • News18
  • Last Updated: March 15, 2019, 12:40 PM IST
  • Share this:
ಕ್ರೈಸ್ಟ್​ಚರ್ಚ್​ (ಮಾ.15):  ನ್ಯೂಜಿಲೆಂಡ್​ ಕ್ರೈಸ್ಟ್​​​ಚರ್ಚ್​ನ ಮಸೀದಿ ಮೇಲೆ ನಡೆದ ಗುಂಡಿನ ದಾಳಿ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್​-ಬಾಂಗ್ಲದೇಶ ನಡುವೆ ಇಂದು ನಡೆಯಬೇಕಿದ್ದ ಮೂರನೇ ​ ಟೆಸ್ಟ್​ ಪಂದ್ಯವನ್ನು ರದ್ದು ಮಾಡಲಾಗಿದೆ.

ಹ್ಯಾಗ್ಲೆ ಪಾರ್ಕ್​ ಸಮೀಪದ ಮಸೀದಿ ಬಳಿ ಬಾಂಗ್ಲಾ ಕ್ರಿಕೆಟ್​ ತಂಡ ತೆರಳಿತ್ತು. ಗುಂಡಿನ ದಾಳಿ ನಡೆದ ನಂತರ ಎಲ್ಲ ಆಟಗಾರರು ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ಬಾಂಗ್ಲಾ ದೇಶದ ಪತ್ರಕರ್ತ ಮೊಹ್ಮದ್​ ಇಸ್ಲಾಮ್​ ಟ್ವೀಟ್ ಮಾಡಿದ್ದಾರೆ. ದೇವರು ನಮ್ಮನ್ನು ರಕ್ಷಿಸಿದ್ದಾನೆ ಎಂದು ಆಟಗಾರರು ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ. ಮಸೀದಿ ಸಮೀಪ 6 ಜನರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಪಂದ್ಯ ರದ್ದಾದ ಬಗ್ಗೆ ಟ್ವೀಟ್​ ಮಾಡಿರುವ ನ್ಯೂಜಿಲೆಂಡ್ ತಂಡ, “ನ್ಯೂಜಿಲೆಂಡ್​ ಹಾಗೂ ಬಾಂಗ್ಲಾ ನಡುವೆ ನಡೆಯಬೇಕಿದ್ದ ಮೂರನೇ ಪಂದ್ಯವನ್ನು ರದ್ದು ಮಾಡಲಾಗಿದೆ. ಎರಡೂ ರಾಷ್ಟ್ರಗಳು ಒಟ್ಟಾಗಿ ಈ ನಿರ್ಧಾರಕ್ಕೆ ಬಂದಿವೆ. ಈ ದಾಳಿಯಿಂದ ಹಾನಿಗೊಳಗಾದವರ ಬಗ್ಗೆ ನಾವು ಮರುಕ ವ್ಯಕ್ತಪಡಿಸುತ್ತೇವೆ,” ಎಂದಿದೆ.


ಇದನ್ನೂ ಓದಿ: ನ್ಯೂಜಿಲೆಂಡ್​ನ ಎರಡು ಮಸೀದಿಗಳಲ್ಲಿ ಶೂಟೌಟ್​; ಕೂದಲೆಳೆಯಲ್ಲಿ ಬಚಾವ್​ ಆಯ್ತು ಬಾಂಗ್ಲಾ ಕ್ರಿಕೆಟ್​ ತಂಡ!

ಸದ್ಯ ಪೊಲೀಸ್​ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಕ್ರಿಕೆಟ್​ ಆಟಗಾರರನ್ನು ಗುರಿಯಾಗಿಸಿಕೊಂಡೇ ಈ ದಾಳಿ ನಡೆದಿದೆಯೇ ಎನ್ನುವ ಅನುಮಾನ ಕಾಡಿದೆ. ಇನ್ನು, ಶೂಟೌಟ್​ ವೇಳೆ ಸಾಕಷ್ಟು ಮಂದಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ದಾಳಿಗೆ ಸಾಕಷ್ಟು ಮಂದಿ ಖಂಡನೆ ವ್ಯಕ್ತಪಡಿಸಿದ್ದಾರೆ.

First published:March 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading