Viral Video: ಕಣ್ಣೀರಿನೊಂದಿಗೆ ವಿಂಬಲ್ಡನ್​ ಟೂರ್ನಿಯಿಂದ ಹೊರ ನಡೆದ ಸೆರೆನಾ ವಿಲಿಯಮ್ಸ್

23 ಗ್ರ್ಯಾಂಡ್ ಸ್ಲಾಮ್​ಗಳನ್ನು ಗೆದ್ದಿರುವ 39ರ ಹರೆಯದ ಸೆರೆನಾ ವಿಲಿಯಮ್ಸ್​ ಈ ಬಾರಿ ಪ್ರಶಸ್ತಿ ಗೆದ್ದರೆ ದಾಖಲೆಯನ್ನು ಸರಿಗಟ್ಟುವ ಅವಕಾಶವಿತ್ತು.

Serena Williams

Serena Williams

 • Share this:
  ಟೆನಿಸ್ ಅಂಗಳದ ಕೃಷ್ಣ ಸುಂದರಿ ಎಂದೇ ಖ್ಯಾತರಾಗಿರುವ ಅಮೆರಿಕಾದ ಸ್ಟಾರ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಈ ಬಾರಿಯ ವಿಂಬಲ್ಡನ್ ಟೆನಿಸ್ ಟೂರ್ನಿಗೆ ಕಣ್ಣೀರಿನೊಂದಿಗೆ ವಿದಾಯ ಹೇಳಿದ್ದಾರೆ. ಲಂಡನ್‌ನ ಆಲ್ ಇಂಗ್ಲೆಂಡ್‌ ಕ್ಲಬ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಅಲಿಯಾಕ್ಸಂದ್ರ ಸಾಸ್ನೋವಿಚ್ ವಿರುದ್ಧದ ಮೊದಲ ಸುತ್ತಿನ ಪಂದ್ಯದಲ್ಲಿ 3-1 ಮುನ್ನಡೆ ಸಾಧಿಸಿದ್ದ ಸೆರೆನಾ ಗೆಲ್ಲುವ ಫೇವರೇಟ್ ಎನಿಸಿಕೊಂಡಿದ್ದರು. ಆದರೆ ದುರಾದೃಷ್ಟ ಪಂದ್ಯದ ಜಾರಿ ಬಿದ್ದು ಮೊಣಕಾಲಿಗೆ ಗಾಯ ಮಾಡಿಕೊಂಡರು.

  ಬಳಿಕ ವೈದ್ಯರ ತಂಡ ಚಿಕಿತ್ಸೆ ನೀಡಿತಾದರೂ ಪಂದ್ಯವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಈ ವೇಳೆ ಪಂದ್ಯದಿಂದ ಹಿಂದೆ ಸರಿಯುವುದಾಗಿ ತಿಳಿಸಿದ ಸೆರೆನಾ ಮೈದಾನವನ್ನು ತೊರೆಯುವ ಮುನ್ನ ಬಿಕ್ಕಿ ಬಿಕ್ಕಿ ಅತ್ತರು. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.  23 ಗ್ರ್ಯಾಂಡ್ ಸ್ಲಾಮ್​ಗಳನ್ನು ಗೆದ್ದಿರುವ 39ರ ಹರೆಯದ ಸೆರೆನಾ ವಿಲಿಯಮ್ಸ್​ ಈ ಬಾರಿ ಪ್ರಶಸ್ತಿ ಗೆದ್ದರೆ ದಾಖಲೆಯನ್ನು ಸರಿಗಟ್ಟುವ ಅವಕಾಶವಿತ್ತು. ಆಸ್ಟ್ರೇಲಿಯಾದ ಮಾಜಿ ಆಟಗಾರ್ತಿ ಮಾರ್ಗರೆಟ್ ಕೋರ್ಟ್‌ 24 ಗ್ರ್ಯಾಂಡ್ ಸ್ಲಾಮ್​ಗಳನ್ನು ಗೆಲ್ಲುವ ಮೂಲಕ ಮಹಿಳಾ ವಿಭಾಗದಲ್ಲಿ ಅತೀ ಹೆಚ್ಚು ಪ್ರಶಸ್ತಿ ಗೆದ್ದ ದಾಖಲೆ ಹೊಂದಿದ್ದಾರೆ. ಈ ದಾಖಲೆಯನ್ನು ಮುರಿಯುವ ವಿಶ್ವಾಸದಲ್ಲಿದ್ದ 7 ಬಾರಿಯ ವಿಂಬಲ್ಡನ್ ಚಾಂಪಿಯನ್​ ಸೆರೆನಾ ನೋವಿನೊಂದಿಗೆ ವಿದಾಯ ಹೇಳಿದ್ದಾರೆ. ಕೆಲ ಮೂಲಗಳ ಪ್ರಕಾರ ಇದು ಸೆರೆನಾ ಅವರ ಕೊನೆಯ ವಿಂಬಲ್ಡನ್ ಟೂರ್ನಿ ಆಗಲಿದ್ದು, ಮುಂದಿನ ವರ್ಷ ಟೆನಿಸ್ ಅಂಗಳಕ್ಕೆ ಗುಡ್​ ಬೈ ಹೇಳಲಿದ್ದಾರೆ ಎನ್ನಲಾಗಿದೆ.
  Published by:zahir
  First published: