ಹೀಗಿರುವಾಗ ಮಹೀಂದ್ರಾ ಕಂಪನಿ ಹಾಗೂ ಸ್ಪೋರ್ಟ್ 18 ಫುಟ್ಬಾಲ್ ಹೀರೋಗಳ ನೆನಪಿಸಿಕೊಳ್ಳುವ ಅದ್ಭುತ ಕೆಲಸವನ್ನು ಮಾಡಿದ್ದು, ಇದಕ್ಕೆ ಇ-ಕಾಮರ್ಸ್ ಪ್ಲ್ಯಾಟ್ಫಾರ್ಮ್ಗಳು , ಬ್ಯಾಂಕಿಂಗ್, ಹಣಕಾಸು ಸೇವೆಯ ಆ್ಯಪ್ಗಳು, ಆಟೋ, ಫ್ಯಾಶನ್, ಹಾಸ್ಪಿಟಾಲಿಟಿ ಮತ್ತು ಫಿನ್ಟೆಕ್ನಾದ್ಯಂತ 50 ಕ್ಕೂ ಹೆಚ್ಚು ಬ್ರ್ಯಾಂಡ್ಗಳು FIFA ವಿಶ್ವಕಪ್ನ Viacom18 ಸ್ಪೋರ್ಟ್ಸ್ ಜೊತೆ ಕೈ ಜೋಡಿಸಿದೆ.
ಮಹೀಂದ್ರಾ ಮತ್ತು ಸ್ಪೋರ್ಟ್ಸ್ 18 ಸಹಭಾಗಿತ್ವದಲ್ಲಿ ಭಾರತೀಯರಿಗೆ ಫುಟ್ಬಾಲ್ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಯಾರಿಗೂ ತಿಳಿಯದ ಹೀರೋಗಳ ಬಗ್ಗೆ ತಿಳಿಸಿಕೊಡುವ ಹೊಸ ಪ್ರಯತ್ನ ಮಾಡಿದ್ದು, ಈ ಮೂಲಕ ಲಕ್ಷಾಂತರ ಅಭಿಮಾನಿಗಳ ಈ ಆಶಯವನ್ನು ನನಸು ಮಾಡುವತ್ತ ಹೊಸ ಹೆಜ್ಜೆ ಇಟ್ಟಿದೆ.
Sports18 ರ ಮತ್ತು JioCinema ನ FIFA ವಿಶ್ವಕಪ್ ಕತಾರ್ 2022 ರ ಪ್ರಮುಖ ಪ್ರಾಯೋಜಕರಾದ ಮಹೀಂದ್ರಾ ದೇಶಾದ್ಯಂತ ವೀಕ್ಷಕರಿಗೆ ತಮ್ಮ SUV ಶ್ರೇಣಿಯ ಹಲವಾರು ವಾಹನಗಳಲ್ಲಿ ಫುಟ್ಬಾಲ್ ಆಟಗಾರರ ಜೀವನಗಾಥೆಯನ್ನು ಪ್ರದರ್ಶನ ಮಾಡಿದೆ. ಮಹೀಂದ್ರ ರೈಸ್ ಎಕ್ಸ್ಪ್ಲೋರ್ ದಿ ಇಂಪಾಸಿಬಲ್ ಹೆಸರಿನಲ್ಲಿ ಮಹೀಂದ್ರಾ ಬ್ರಾಂಡ್ ಸಿದ್ಧಾಂತವನ್ನು ಜೀವಂತವಾಗಿರಿಸುವಲ್ಲಿ ಇದು ಸಹಾಯ ಮಾಡುತ್ತದೆ.
ಇದರ ಮೊದಲ ಪ್ರದರ್ಶನದಲ್ಲಿ ಪುಣೆಯ ರಿಯಾನ್ ಗೊಧಿನೊ ಅವರು ಕಾಣಿಸಿಕೊಂಡಿದ್ದು, ಅವರು ಫುಟ್ಬಾಲ್ ಆಟಗಾರರಾಗಲು ಕಷ್ಟಪಟ್ಟ ಬಗ್ಗೆ ಹಾಗೂ ಅವರ ಸಾಧನೆಯ ಬಗ್ಗೆ ಜನರಿಗೆ ತಿಳಿಸಿಕೊಡಲಾಗಿದೆ. ಅದ್ಭುತ ಫುಟ್ಬಾಲ್ ಆಟಗಾರರಾಗಿರುವ ಈ ರಿಯಾನ್ ಗೊಧಿನೊ ಹ್ಯಾಪಿ ಫೀಟ್ ಎಫ್ಎ ಎನ್ನುವ ಫುಟ್ಬಾಲ್ ಅಕಾಡೆಮಿ ಸ್ಥಾಪನೆ ಮಾಡಿದ್ದು,ಇದು ಯುವ ಪ್ರತಿಭೆಗಳಿಗೆ ಫುಟ್ಬಾಲ್ ತರಬೇತಿ ನೀಡುತ್ತದೆ.
ಇದನ್ನೂ ಓದಿ: ಫಿಫಾ ವಿಶ್ವಕಪ್ ಅಂತ್ಯವಾಗುತ್ತಿದ್ದಂತೆಯೇ ಕತಾರ್ ಕಥೆ ಏನು? ಗಲ್ಫ್ ರಾಷ್ಟ್ರದ ಮುಂದಿನ ನಿರ್ಧಾರಗಳೇನು?
ಸಣ್ಣದಾಗಿ ಆರಂಭವಾಗಿದ್ದ ಅವರ ಅಕಾಡೆಮಿ ನಂತರ ಪುಣೆಯಲ್ಲಿ ಏಳು ಬ್ರಾಂಚ್ ಗಳಿಗೆ ವಿಸ್ತಾರವಾಗಿದೆ. ಈಗ ಲಾಲಿಗಾ ಫುಟ್ಬಾಲ್ ಶಾಲೆಗಳೊಂದಿಗೆ ಸಂಯೋಜಿತವಾಗಿದ್ದು, ರಿಯಾನ್ ಅವರ ಸತತ ಪ್ರಯತ್ನಗಳು ಫಲ ನೀಡಲು ಪ್ರಾರಂಭಿಸಿದ್ದು, ಅವರ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಕಾಜೋಲ್ ಡಿಸೋಜಾ ಅವರು ಇತ್ತೀಚೆಗೆ FIFA U-17 ವಿಶ್ವಕಪ್ಗೆ ಅರ್ಹತೆ ಪಡೆದಿದ್ದಾರೆ.
ಅಲ್ಲದೇ, ಈ ಸರಣಿಯ ಮುಂದಿನ ಎರಡು ಸಂಚಿಕೆಗಳು ಕಾಶ್ಮೀರ ಮತ್ತು ಈಶಾನ್ಯ ಭಾರತದಲ್ಲಿ ಫುಟ್ಬಾಲ್ ಸಂಬಂಧಿತ ಕೆಲಸ ಮಾಡುವ ಜನರ ಕಥೆಗಳನ್ನು ಹೇಳುತ್ತವೆ. ಹೇಗೆ ಈ ವ್ಯಕ್ತಿಗಳು ಪ್ರತಿಭೆಗಳಿಗೆ ಸಾಥ್ ನೀಡುತ್ತಾರೆ ಮತ್ತು ಮಕ್ಕಳಲ್ಲಿ ಕ್ರೀಡೆಯ ಪ್ರೀತಿಯನ್ನು ಬೆಳೆಸುತ್ತಾರೆ ಎಂಬುದನ್ನ ತಿಳಿಸಿದೆ.
ದಾಖಲೆ ಬರೆದ ಜಿಯೋ ಸಿನಿಮಾ
ಕತಾರ್ 2022 ಈ ವಿಶ್ವಕಪ್ ಭಾರತದಲ್ಲಿ ಅತಿಹೆಚ್ಚು ವೀಕ್ಷಿಸಲಾದ FIFA ವಿಶ್ವಕಪ್ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಮತ್ತೊಂದು ವಿಶೇಷ ಎಂದರೆ ಮೊದಲ ಬಾರಿಗೆ ಟಿವಿಯನ್ನು ಡಿಜಿಟಲ್ ವೀಕ್ಷಕರು ಹಿಂದಿಕ್ಕಿದ್ದಾರೆ.
FIFA ವರ್ಲ್ಡ್ ಕಪ್ ಕತಾರ್ 2022 ರ ವ್ಯಾಪ್ತಿಯು JioCinema ನಲ್ಲಿ 100mn ದಾಟುವ ನಿರೀಕ್ಷೆಯಿದೆ.
JioCinema ನವೆಂಬರ್ 20 ರಿಂದ iOS ಮತ್ತು Android ಎರಡರಲ್ಲೂ ಮೂರು ವಾರಗಳವರೆಗೆ ಡೌನ್ಲೋಡ್ ಮಾಡಲಾದ ನಂ. 1 ಉಚಿತ ಅಪ್ಲಿಕೇಶನ್ ಆಗಿ ಹೊರಹೊಮ್ಮಿದೆ.
JioCinema ಹಿಂದೆಂದೂ ಜನ ಕಂಡಿರದ ಹೈಪ್ ಮೋಡ್ನೊಂದಿಗೆ ವೀಕ್ಷಕರ ಲೈವ್ ಅನುಭವವನ್ನು ಹೆಚ್ಚಿಸಿದೆ.
ಹಾಗೆಯೇ, Snap Inc. ಜೊತೆಗಿನ ಪಾಲುದಾರಿಕೆ ಬಳಕೆದಾರರಿಗೆ ಹಿಂದೆಂದೂ ನೋಡಿರದ AR ಲೆನ್ಸ್ ಅನ್ನು ಸಹ ನೀಡುತ್ತಿದ್ದು, ಜನರಿಗೆ ಫುಟ್ಬಾಲ್ ಆಟದ ಸುಂದರ ಅನುಭವ ನೀಡುತ್ತಿದೆ.
ಭಾರತದಲ್ಲಿ ಫುಟ್ಬಾಲ್ನ ಹೀರೋಗಳನ್ನು ನೆನಪಿಸಿಕೊಳ್ಳುವ ಸೀರೀಸ್ ಅನ್ನು ಸಹ ಮಹೀಂದ್ರಾದೊಂದಿಗೆ ಸೇರಿ ವಯೋಕಾಂ ನಿರ್ಮಿಸಿದೆ.
ಇನ್ನು ಇ-ಕಾಮರ್ಸ್, ಬ್ಯಾಂಕಿಂಗ್, ಹಣಕಾಸು ಸೇವೆಗಳು, ಆಟೋ, ಫ್ಯಾಶನ್, ಹಾಸ್ಪಿಟಾಲಿಟಿ ಮತ್ತು ಫಿನ್ಟೆಕ್ನಾದ್ಯಂತ 50 ಕ್ಕೂ ಹೆಚ್ಚು ಬ್ರ್ಯಾಂಡ್ಗಳು FIFA ವಿಶ್ವಕಪ್ Viacom18 ಸ್ಪೋರ್ಟ್ಸ್ ಜೊತೆ ಕೈ ಜೋಡಿಸಿವೆ.
ಅಲ್ಲದೇ ಲೂಯಿಸ್ ಫಿಗೊ, ರಾಬರ್ಟ್ ಪೈರ್ಸ್, ವೇಯ್ನ್ ರೂನಿ, ಗಿಲ್ಬರ್ಟೊ ಸಿಲ್ವಾ ಮತ್ತು ಸಾಲ್ ಕ್ಯಾಂಪ್ಬೆಲ್ ಸೇರಿದಂತೆ ವಿಶ್ವಕಪ್ ತಾರೆಗಳು ಜಿಯೋ ಸಿನಿಮಾದ ವಿಶ್ವ ದರ್ಜೆಯ ಸ್ಟುಡಿಯೋಗಳಲ್ಲಿ ಲೈವ್ ಕಾಮೆಂಟರಿ ನೀಡಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ ಫೈನಲ್ಗೆ ಶಾರುಖ್ ಖಾನ್ ಎಂಟ್ರಿ! ಕಿಂಗ್ ಖಾನ್ ಫೇವರಿಟ್ ಪ್ಲೇಯರ್ ಇವರಂತೆ
ಈ ಸರಣಿಯ ಎಲ್ಲಾ ಮೂರು ಸಂಚಿಕೆಗಳು JioCinema ಮತ್ತು Sports18 ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಲಭ್ಯವಿದ್ದು, ಈ ರೀತಿಯ ಸಾಧಕರು ಮತ್ತು ಇತರರು ಫುಟ್ಬಾಲ್ ಕ್ಷೇತ್ರದಲ್ಲಿ ಪ್ರತಿಭೆಗಳನ್ನು ಅಭಿವೃದ್ಧಿಪಡಿಸಲು ತುಂಬಾ ಕಷ್ಟಪಟ್ಟು ಮತ್ತು ಸದ್ದಿಲ್ಲದೆ ಕೆಲಸ ಮಾಡುವುದರಿಂದ, ವಿಶ್ವಾದ್ಯಂತ ಕ್ರೀಡಾಕೂಟದಲ್ಲಿ ಭಾರತ ಪ್ರತಿನಿಧಿಸುವ ಕನಸು ಶೀಘ್ರದಲ್ಲೇ ನನಸಾಗಲಿದೆ ಎನ್ನಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ