• Home
  • »
  • News
  • »
  • sports
  • »
  • FIFA World Cup Qatar 2022: ಫಿಫಾ ವಿಶ್ವಕಪ್​​ ವೀಕ್ಷಕ ವಿವರಣೆ ನೀಡಲು 'ಜಿಯೋ ಸಿನಿಮಾ'ಗೆ ಬಂದ ಫುಟ್ಬಾಲ್​ ದಿಗ್ಗಜರು!

FIFA World Cup Qatar 2022: ಫಿಫಾ ವಿಶ್ವಕಪ್​​ ವೀಕ್ಷಕ ವಿವರಣೆ ನೀಡಲು 'ಜಿಯೋ ಸಿನಿಮಾ'ಗೆ ಬಂದ ಫುಟ್ಬಾಲ್​ ದಿಗ್ಗಜರು!

ಜಿಯೋ ಸಿನಿಮಾ

ಜಿಯೋ ಸಿನಿಮಾ

ವೇಯ್ನ್​​​ ರೂನಿ, ಲೂಯಿಸ್​​ ಫಿಗೊ, ರಾಬರ್ಟ್​​ ಪೈರ್ಸ್​, ಗಿಲ್ಬರ್ಟೊ ಸಿಲ್ವಾ ಮತ್ತು ಸಾಲ್​ ಕ್ಯಾಂಪ್​​ಬೆಲ್​​ ಸೇರಿದಂತೆ ವಿಶ್ವದ ದಿಗ್ಗಜ ತಾರೆಗಳು ಜಿಯೋ ಸಿನಿಮಾದ ವಿಶ್ವದರ್ಜೆಯ ಸ್ಟುಡಿಯೋಗಳಲ್ಲಿ ಲೈವ್ ಕಾಮೆಂಟರಿಯನ್ನು ನೀಡಿದ್ದಾರೆ. ಈ ಮೂಲಕ ಹಲವು ವಿಶೇಷತೆಗಳಿಗೆ ಜಿಯೋ ಸಿನಿಮಾ ವೇದಿಕೆಯಾಗಿದೆ.

ಮುಂದೆ ಓದಿ ...
  • Share this:

ಕತಾರ್​ನಲ್ಲಿ(Qatar) ನಡೆಯುತ್ತಿರುವ ಫಿಫಾ ವಿಶ್ವಕಪ್​​ಗೆ (FIFA World Cup 2022) ಕೆಲವೇ ಗಂಟೆಗಳಲ್ಲಿ ಅಧಿಕೃತವಾಗಿ ತೆರೆಬೀಳಲಿದೆ. ನವೆಂಬರ್​​ 20 ರಿಂದ ಆರಂಭವಾಗಿದ್ದ ಫುಟ್ಬಾಲ್ ಹಬ್ಬ, ಕಳೆದ ನಾಲ್ಕು ವಾರಗಳಿಂದ ಫುಟ್​​​ಬಾಲ್ ಪ್ರೇಮಿಗಳಿಗೆ (Football Lovers) ಹಬ್ಬದೂಟವನ್ನು ಉಣಬಡಿಸಿತ್ತು. ಕ್ರಿಕೆಟ್​ ವಿಶ್ವಕಪ್​​ನಲ್ಲಿ (Cricket World Cup) ಕೇವಲ 16 ತಂಗಳು ಮಾತ್ರ ಭಾಗವಾದರೇ, ಫಿಫಾ ವಿಶ್ವಕಪ್​ನಲ್ಲಿ ಬರೋಬ್ಬರಿ 32 ತಂಡಗಳು ಕಪ್​​ಗಾಗಿ ಹೋರಾಟ ಮಾಡಿದ್ದವು. ಫುಟ್​​ಬಾಲ್​​ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕತಾರ್​​, ವಿಶ್ವಕಪ್​​ಗೆ ಅತಿಥ್ಯ ವಹಿಸಿಕೊಂಡಿತ್ತು. ಅಲ್ಲದೇ ವಿಶ್ವಕಪ್​​ಗಾಗಿಯೇ ಸುಮಾರು 7 ಅತ್ಯಾಧುನಿಕ ಕ್ರೀಡಾಂಗಣಗಳನ್ನು (Football Stadium) ನಿರ್ಮಿಸಿತ್ತು.


ಕತಾರ್​​ ವಿಶ್ವಕಪ್​​​ನಲ್ಲಿ ಭಾರತವೂ ಹೆಮ್ಮ ಪಡುವಂತಹ ಹಲವು ಸಂಗತಿಗಳಿವೆ. ವಿಶ್ವಕಪ್​ ಆಯೋಜನೆಯಿಂದ ಹಿಡಿದು ವೀಕ್ಷಕರವರೆಗೂ ಭಾರತೀಯ ಹಾಜರಿಯನ್ನು ನೋಡಬಹುದಾಗಿದೆ. ಏಕೆಂದರೆ ಕತಾರ್​ನಲ್ಲಿ ನಡೆಯುತ್ತಿರುವ ವಿಶ್ವಕಪ್ ​​ಅನ್ನು ಭಾರತದಲ್ಲಿ ಅತೀ ಹೆಚ್ಚು ವೀಕ್ಷಿಸಲಾಗಿದೆ. ಪ್ರಮುಖವಾಗಿ ಭಾರತದಲ್ಲಿ ಡಿಜಿಟಲ್​ ವೀಕ್ಷಕರು ಇದೇ ಮೊದಲ ಬಾರಿಗೆ ಟಿವಿ ವೀಕ್ಷಕರನ್ನು ಹಿಂದಿಕ್ಕಿದ್ದಾರೆ.


ಭಾರತದಲ್ಲಿ 10 ಕೋಟಿಗೂ ಹೆಚ್ಚು ಜನರಿಂದ ವಿಶ್ವಕಪ್ ವೀಕ್ಷಣೆ


ಕತಾರ್​​ ಫಿಫಾ ವಿಶ್ವಕಪ್​ಅನ್ನು ಭಾರತದಲ್ಲಿ ಆನ್​​ಲೈನ್​​ ಮೂಲಕ ಜಿಯೋ ಸಿನಿಮಾ ಸ್ಟ್ರೀಮ್​ ಮಾಡುತ್ತಿದೆ. ಜಿಯೋ ಸಿನಿಮಾ ಮೂಲಕ 10 ಕೋಟಿಗೂ ಹೆಚ್ಚು ಮಂದಿ ವೀಕ್ಷಿಸುತ್ತಿದ್ದಾರೆ ಎಂದು ವರದಿಯಾಗಿದೆ. ಜಿಯೋ ಸಿನಿಮಾ ನವೆಂಬರ್​ 20 ರಿಂದ ಮೂರು ವಾರಗಳವರೆಗೂ iOS ಮತ್ತು Androiನಲ್ಲಿ ಹೆಚ್ಚು ಡೌನ್​​ಲೋಡ್​​ ಆದ ಮೊಬೈಲ್ ಅಪ್ಲಿಕೇಶನ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.


ಆ ಮೂಲಕ ಜಿಯೋ ಸಿನಿಮಾ ಫುಟ್​​ಬಾಲ್​ ವೀಕ್ಷಕರಿಗೆ ಹೊಸ ಅನುಭವನನ್ನು ಸೃಷ್ಟಿಸಿದೆ. ಫುಟ್​​ಬಾಲ್​ ಅಭಿಮಾನಿಗಳು ಫಿಫಾ ವಿಶ್ವಕಪ್​​ಅನ್ನು ಜಿಯೋ ಸಿನಿಮಾ ಮೂಲಕ ಅದ್ಭುತ ಆಡಿಯೋ-ವಿಡಿಯೋ ತಂತ್ರಜ್ಞಾನಗಳ ಜೊತೆಗೆ ಆನಂದಿಸಿದ್ದಾರೆ.


ಇದನ್ನೂ ಓದಿ: FIFA World Cup 2022: ಭಾರತದಲ್ಲಿ ಇತಿಹಾಸ ನಿರ್ಮಿಸಿದ ಫಿಫಾ ವಿಶ್ವಕಪ್, ಟಿವಿ ಪ್ರೇಕ್ಷಕರನ್ನು ಹಿಂದಿಕ್ಕಿದ ಡಿಜಿಟಲ್


ವಿಶ್ವದ ದಿಗ್ಗಜ ಸ್ಟಾರ್​ಗಳಿಂದ ವೀಕ್ಷಕ ವಿವರಣೆ


ವೇಯ್ನ್​​​ ರೂನಿ, ಲೂಯಿಸ್​​ ಫಿಗೊ, ರಾಬರ್ಟ್​​ ಪೈರ್ಸ್​, ಗಿಲ್ಬರ್ಟೊ ಸಿಲ್ವಾ ಮತ್ತು ಸಾಲ್​ ಕ್ಯಾಂಪ್​​ಬೆಲ್​​ ಸೇರಿದಂತೆ ವಿಶ್ವದ ದಿಗ್ಗಜ ತಾರೆಗಳು ಜಿಯೋ ಸಿನಿಮಾದ ವಿಶ್ವದರ್ಜೆಯ ಸ್ಟುಡಿಯೋಗಳಲ್ಲಿ ಲೈವ್ ಕಾಮೆಂಟರಿ ಮತ್ತು ಆಳ ವಿಶ್ಲೇಷಣೆಯನ್ನು ನೀಡಿದ್ದಾರೆ.


ಇನ್ನು, ಕೇರಳದ ಖ್ಯಾತ ವೀಕ್ಷಕ ವಿವರಣೆಕಾರರಾದ ಅನು ಜೋಸೆಫ್​​, ಎಲ್ಡೋಪೋಲ್​​​ ಅವರು ಮಲಯಾಳಂನಲ್ಲಿ ವಿಶ್ವಕಪ್​ ವಿಶೇಷತೆಗಳನ್ನು ಪ್ರೇಕ್ಷಕರಿಗೆ ನೀಡಿದ್ದಾರೆ. ಭಾರತದಲ್ಲಿ ಮಲಯಾಳಂ ಮಾತ್ರವಲ್ಲದೇ ಇಂಗ್ಲೀಷ್​, ಹಿಂದಿ ಜೊತೆಗೆ ಬಂಗಾಳಿ ಭಾಷೆಯಲ್ಲಿ ಜಿಯೋ ಸಿನಿಮಾ ಮೂಲಕ ಲೈವ್​ ವೀಕ್ಷಣೆ ಲಭ್ಯವಿದೆ.


ಇದನ್ನೂ ಓದಿ: WTC Points Table: 150 ನಿಮಿಷ, 2 ಗೆಲುವುಗಳು, ಬದಲಾದ ಲೆಕ್ಕಾಚಾರ; ಟಾಪ್-2 ನಲ್ಲಿ ಟೀಂ ಇಂಡಿಯಾ


ಹಿಂದೆಂದೂ ಸಿಗದ ಅದ್ಭುತ ಧ್ವನಿ ಅನುಭವ


ನೆಟ್‌ವರ್ಕ್ 18 ಗ್ರೂಪ್‌ನ ವಯಾಕಾಮ್ 18 ಸ್ಪೋರ್ಟ್ಸ್ Snap Inc. ಜೊತೆ ಒಪ್ಪಂದ ಮಾಡಿಕೊಂಡು ಹಿಂದೆದೂ ಲಭ್ಯವಿರದ ಧ್ವನಿಯನ್ನು ಅನುಭವಿಸಿದ್ದು, ಪ್ರೇಕ್ಷಕರು ಹಿಂದೆಂದಿಗಿಂತಲೂ ವಿಭಿನ್ನ ಅನುಭವವನ್ನು ಪಡೆದುಕೊಂಡಿದ್ದಾರೆ. ಇದಕ್ಕಾಗಿ Snap Inc. ಜೊತೆಗೆ ಜಿಯೋ ಸಿನಿಮಾ ಕೆಲಸ ಮಾಡಿದೆ.


ಭಾರತದಲ್ಲಿ ಫುಟ್​​ಬಾಲ್​​ನ ದಿಗ್ಗಜರನ್ನು ಪರಿಚಯಿಸುವ ಸರಣಿಯನ್ನು ಮಹೀಂದ್ರಾ ಸಹ ನಿರ್ಮಿಸಿತ್ತು. ಅಲ್ಲದೇ ಇ-ಕಾಮರ್ಸ್​​​, ಬ್ಯಾಂಕಿಂಗ್​​, ಹಣಕಾಸು ಸೇವೆ, ಫ್ಯಾಷನ್​ ಸೇರಿದಂತೆ ಫಿನ್​ಟೆಕ್​​ನಂತಹ 50ಕ್ಕೂ ಹೆಚ್ಚು ಬ್ರ್ಯಾಂಡ್​​ಗಳು ಫಿಫಾ ವಿಶ್ವಕಪ್​​ನ Viacom18 ಸ್ಪೋರ್ಟ್​​ ಲೈವ್​ ಕವರೇಜ್​​ಅನ್ನು ಬೆಂಬಲಿಸಿದ್ದವು.

Published by:Sumanth SN
First published: