• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • FIFA World Cup Final 2022: ವಿಶ್ವಕಪ್ ಫೈನಲ್‌ಗೆ ಶಾರುಖ್ ಖಾನ್ ಎಂಟ್ರಿ! ಕಿಂಗ್​ ಖಾನ್​ ಫೇವರಿಟ್​ ಪ್ಲೇಯರ್​ ಇವರಂತೆ

FIFA World Cup Final 2022: ವಿಶ್ವಕಪ್ ಫೈನಲ್‌ಗೆ ಶಾರುಖ್ ಖಾನ್ ಎಂಟ್ರಿ! ಕಿಂಗ್​ ಖಾನ್​ ಫೇವರಿಟ್​ ಪ್ಲೇಯರ್​ ಇವರಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

FIFA World Cup Final 2022: ಶಾರುಖ್ ಖಾನ್ ಶನಿವಾರ ಟ್ವಿಟರ್‌ನಲ್ಲಿ 'ಆಸ್ಕ್ ಎಸ್‌ಆರ್‌ಕೆ' ಸೆಷನ್ ಅನ್ನು ಆಯೋಜಿಸಿದ್ದರು. ಈ ವೇಳೆ ಅಭಿಮಾನಿಗಳು ಫಿಫಾ ವಿಶ್ವಕಪ್​ 2022 ಕುರಿತು ಕೇಳಿದ ಪ್ರಶ್ನೆಗಳಿಗೆ ಆಸಕ್ತಿಕರ ಉತ್ತರಗಳನ್ನು ನೀಡಿದ್ದಾರೆ.

  • Share this:

ಬಾಲಿವುಡ್‌ನ ಕಿಂಗ್ ಖಾನ್ ಸುಮಾರು ಮೂರು ವರ್ಷಗಳ ನಂತರ ಹಿರಿತೆರೆಗೆ ಮರಳುತ್ತಿದ್ದಾರೆ. ಪಠಾಣ್ (Pathaan) ಜನವರಿ 25 ರಂದು ಬಿಡುಗಡೆಯಾಗಲಿದೆ.  ಶಾರುಖ್ ಖಾನ್ ಈ ಚಿತ್ರಕ್ಕಾಗಿ ಭರ್ಜರಿ ಪ್ರಚಾರವನ್ನೂ ಮಾಡುತ್ತಿದ್ದು, ಇದರ ಭಾಗವಾಗಿ ಶಾರುಖ್ ಖಾನ್ ( Shah Rukh Khan) ಶನಿವಾರ ಟ್ವಿಟರ್‌ನಲ್ಲಿ 'ಆಸ್ಕ್ ಎಸ್‌ಆರ್‌ಕೆ' ಸೆಷನ್ ಅನ್ನು ಆಯೋಜಿಸಿದ್ದರು. ಈ ವೇಳೆ ಅಭಿಮಾನಿಗಳು ಫಿಫಾ ವಿಶ್ವಕಪ್​ 2022 (FIFA World Cup Final 2022) ಕುರಿತು ಕೇಳಿದ ಪ್ರಶ್ನೆಗಳಿಗೆ ಆಸಕ್ತಿಕರ ಉತ್ತರಗಳನ್ನು ನೀಡಿದ್ದಾರೆ. ಅದರಲ್ಲಿಯೂ ಅಭಿಮಾನಿಗಳು ಮೆಸ್ಸಿ ಮತ್ತು ಎಂಬಪ್ಪೆ ಅವರ ಕುರಿತ ಪ್ರಶ್ನೆಗೆ ಕಿಂಗ್​ ಖಾನ್​ ನೀಡಿದ ಉತ್ತರ ಇದೀಗ ಸಖತ್ ವೈರಲ್ ಆಗುತ್ತಿದೆ.


ಯಾರ ಹೃದಯಲ್ಲಿ ಇಲ್ಲ ಮೆಸ್ಸಿ:


ನಾಳೆ ನಡೆಎಯಲಿರುವ ಫಿಫಾ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಫ್ರಾನ್ಸ್ ಮತ್ತು ಅರ್ಜೆಂಟೀನಾ ಸೆಣಸಾಡಲಿದೆ. ಈ ಪಂದ್ಯಕ್ಕಾಗಿ ಕೋಟ್ಯಾಂತರ ಜನ ಕಾತುರದಿಂದ ಕಾಯುತ್ತಿದ್ದಾರೆ. ಈ ಪಂದ್ಯವಳಿಯ ರಂಗು ಇದೀಗ ಶಾರೂಖ್ ಅವರಿಗೂ ತಟ್ಟಿದೆ. ಅವರ ಆಸ್ಕ್ ಎಸ್‌ಆರ್‌ಕೆ ಸೆಷನ್​ನಲ್ಲಿ ಅಭಿಮಾನಿಯೊಬ್ಬರು ಕಿಂಗ್​ ಖಾನ್​ ಬಳಿ ನೀವು ಯಾವ ತಂಡವನ್ನು ಬೆಂಬಲಿಸುತ್ತೀರಿ ಎಂದು ಅಭಿಮಾನಿಯೊಬ್ಬರು ಕೇಳಿದರು. ಇದಕ್ಕೆ ಉತ್ತರಿಸಿರುವ ಶಾರುಖ್, ‘ಅರೆ ಯಾರ್ ಹೃದಯದಲ್ಲಿ ಮೆಸ್ಸಿ ಇಲ್ಲ ಹೇಳಿ? ಆದರೆ Mbappe ಅವರನ್ನು ಸಹ ವೀಕ್ಷಿಸಲು ಸಂತಸವಾಗುತ್ತದೆ‘ ಎಂಬರ್ಥದಲ್ಲಿ ಉತ್ತರ ನೀಡಿದ್ದಾರೆ. ಸದ್ಯ ಈ ಉತ್ತರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.ಪಠಾಣ್​ ಪ್ರಚಾರಕ್ಕಾಗಿ ಫಿಫಾ:


ಪಠಾಣ್ ಚಿತ್ರದ ಪ್ರಚಾರಕ್ಕಾಗಿ ಶಾರುಖ್ ಖಾನ್ ಕತಾರ್ ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಳೆ ವಿಶ್ವಕಪ್ ಫೈನಲ್‌ನಲ್ಲಿ ಸ್ಟುಡಿಯೋದಲ್ಲಿ ಇರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಶಾರುಖ್ ಖಾನ್ ಸಾಮಾನ್ಯವಾಗಿ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಈ ಬಾರಿ ಅವರು ಫುಟ್​ಬಾಲ್​ ಮೈದಾನದಲ್ಲಿ ಕಾಣಿಸಿಕೊಳ್ಳುವುದಾಗಿ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಡಿಸೆಂಬರ್ 18 ರಂದು ಲುಸಿಲ್ಲೆ ಐಕಾನಿಕ್ ಸ್ಟೇಡಿಯಂನಲ್ಲಿ ವಿಶ್ವಕಪ್ ಫೈನಲ್ ಫೈಟ್​ ನಡೆಯಲಿದೆ.

View this post on Instagram


A post shared by Shah Rukh Khan (@iamsrk)

ಆ ಪಂದ್ಯದ ಸಂದರ್ಭದಲ್ಲಿ, ಶಾರುಖ್ ಖಾನ್ ಸ್ಟುಡಿಯೋದಲ್ಲಿ ಫುಟ್ಬಾಲ್ ಬಗ್ಗೆ ಚರ್ಚಿಸುತ್ತಾರೆ. ಇವರೊಂದಿಗೆ ವೇಯ್ನ್ ರೂನಿ ಕೂಡ ಇರಲಿದ್ದಾರೆ. ಡಿಸೆಂಬರ್ 12 ರಂದು 'ಪಠಾಣ್' ಚಿತ್ರದ ಮೊದಲ ಹಾಡು ಬೆಸರಂ ರಂಗ್ ಬಿಡುಗಡೆಯಾಗಿದೆ. ಈ ನಡುವೆ ಹಾಡಿನ ಬಗ್ಗೆ ವಿವಾದ ಶುರುವಾಗಿದೆ. ಹಾಡಿನ ದೃಶ್ಯವನ್ನು ಹಂಚಿಕೊಳ್ಳುವ ಮೂಲಕ ಚಿತ್ರಕ್ಕೆ ಬಹಿಷ್ಕಾರ ಹಾಕುವಂತೆ ಒತ್ತಾಯ ಕೇಳಿಬಂದಿದೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ‘ಬೈಕಾಟ್​ ಪಠಾಣ್​‘ ಎಂಬ ಹ್ಯಾಶ್​ಟ್ಯಾಗ್​ ಟ್ರೆಂಡ್​ ಆಗಿದೆ.


ಇದನ್ನೂ ಓದಿ: Pathaan: ಇವರಿಗೆ ಹಿಜಾಬ್​ ಧರಿಸಿದ್ರೂ ಆಗಲ್ಲ, ಬಿಕಿನಿ ಹಾಕಿದ್ರೂ ಸಹಿಸಲ್ಲ: 'ಪಠಾಣ್​'ಗೆ ಸಂಸದೆ ನುಸ್ರತ್ ಬೆಂಬಲ!


ಬಹುತಾರಾಗಣದ ಚಿತ್ರ ಪಠಾಣ್​:


ಇನ್ನು, ‘ಪಠಾಣ್’ ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ. ಆದಿತ್ಯ ಚೋಪ್ರಾ ಬಂಡವಾಳ ಹೂಡಿದ್ದಾರೆ. ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ, ಡಿಂಪಲ್ ಕಪಾಡಿಯಾ, ಅಶುತೋಷ್ ರಾಣಾ, ಗೌತಮ್, ಏಕ್ತಾ ಕೌರ್ ಸಿನಿಮಾದಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಚಿತ್ರದಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Published by:shrikrishna bhat
First published: