• Home
  • »
  • News
  • »
  • sports
  • »
  • FIFA World Cup 2022: ಈ ರೀತಿಯ ಟೀ ಶರ್ಟ್‌ ಧರಿಸಿದಕ್ಕೆ ಪತ್ರಕರ್ತನ ಬಂಧನ, ಫಿಫಾ ವಿಶ್ವಕಪ್​ನಲ್ಲಿ ಹೆಚ್ಚಾಯ್ತು ನಿಯಮಗಳ ಕಿರಿಕಿರಿ

FIFA World Cup 2022: ಈ ರೀತಿಯ ಟೀ ಶರ್ಟ್‌ ಧರಿಸಿದಕ್ಕೆ ಪತ್ರಕರ್ತನ ಬಂಧನ, ಫಿಫಾ ವಿಶ್ವಕಪ್​ನಲ್ಲಿ ಹೆಚ್ಚಾಯ್ತು ನಿಯಮಗಳ ಕಿರಿಕಿರಿ

ಫಿಫಾ ವಿಶ್ವಕಪ್‌

ಫಿಫಾ ವಿಶ್ವಕಪ್‌

FIFA World Cup 2022: ಈ ಬಾರಿ ಕತಾರ್​ ಅನೇಕ ವಿಚಿತ್ರ ಕಾನೂನುಗಳನ್ನು ಜಾರಿಗೆ ತಂದಿದೆ. ಅದರಂತೆ ಕತಾರ್‌ನಲ್ಲಿ ನಡೆದ ವೇಲ್ಸ್‌ ವಿರುದ್ಧದ ಯುಎಸ್‌ಎ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಕಾಮನಬಿಲ್ಲು (ರೈನ್‌ಬೋ) ಟೀ ಶರ್ಟ್‌ ಧರಿಸಿದ್ದ ಪತ್ರಕರ್ತರೊಬ್ಬರನ್ನು ಬಂಧಿಸಿರುವ ಘಟನೆ ವರದಿಯಾಗಿದೆ.

ಮುಂದೆ ಓದಿ ...
  • Share this:

ಕತಾರ್‌ನಲ್ಲಿ (Qatar) ಫುಟ್ಬಾಲ್‌ನ ವಿಶ್ವ ಹಬ್ಬ (world festival of football) ಫಿಫಾ ವಿಶ್ವಕಪ್ 2022 (FIFA World Cup 2022) ನಡೆಯುತ್ತಿದೆ. ಜಗತ್ತಿನ ಶ್ರೇಷ್ಠ ಫುಟ್ಬಾಲ್ ತಂಡಗಳ (football team), ಅತೀ ಶ್ರೇಷ್ಠ ಆಟಗಾರರು (Players) ಈ ಪ್ರತಿಷ್ಠಿತ ವಿಶ್ವಕಪ್ ತಮ್ಮದಾಗಿಸಿಕೊಳ್ಳಲು ಸೆಣಸಾಡುತ್ತಿದ್ದಾರೆ. ಆದರೆ ಈ ಬಾರಿ ಕತಾರ್​ ಅನೇಕ ವಿಚಿತ್ರ ಕಾನೂನುಗಳನ್ನು ಜಾರಿಗೆ ತಂದಿದೆ. ಅದರಂತೆ ಕತಾರ್‌ನಲ್ಲಿ ನಡೆದ ವೇಲ್ಸ್‌ ವಿರುದ್ಧದ ಯುಎಸ್‌ಎ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಕಾಮನಬಿಲ್ಲು (ರೈನ್‌ಬೋ) ಟೀ ಶರ್ಟ್‌ ಧರಿಸಿದ್ದ ಪತ್ರಕರ್ತರೊಬ್ಬರನ್ನು ಬಂಧಿಸಿರುವ ಘಟನೆ ವರದಿಯಾಗಿದೆ. ರೈನ್‌ಬೋ ಪ್ರಿಂಟ್‌ ಇರುವ ಟೀ ಶರ್ಟ್‌ ಧರಿಸಿ ಬಂದಿದ್ದಕ್ಕೆ ಭದ್ರತಾ ಸಿಬ್ಬಂದಿ ಕೆಲಕಾಲ ಅವರನ್ನು ಬಂಧಿಸಿದ್ದಾರೆ ಎಂದು ಯುಎಸ್‌ ಕ್ರೀಡಾ ಪತ್ರಕರ್ತರೊಬ್ಬರು ತಿಳಿಸಿದ್ದಾರೆ.


ಪತ್ರಕರ್ತನನ್ನು ತಡೆದ ಕತಾರ್​ ಸಿಬ್ಬಂದಿ:


ಸಲಿಂಗ ಸಂಬಂಧಗಳು ಕಾನೂನು ಬಾಹಿರವಾಗಿರುವ ದೇಶದಲ್ಲಿ ಎಲ್ಜಿಬಿಟಿಕ್ಯು (LGBTQ ) ಸಮುದಾಯವನ್ನು ಬೆಂಬಲಿಸಲು ಕಾಮನಬಿಲ್ಲು ಟೀ ಶರ್ಟ್ ಧರಿಸಿ ಕತಾರ್‌ನ ವಿಶ್ವಕಪ್ ಕ್ರೀಡಾಂಗಣಕ್ಕೆ ಪ್ರವೇಶಿಸಲು ಪ್ರಯತ್ನಿಸಿದ ಅಮೆರಿಕದ ಪತ್ರಕರ್ತರನ್ನು ಬಂಧಿಸಿದ್ದರು. ಸಿಬಿಎಸ್ ಸ್ಪೋರ್ಟ್ಸ್‌ಗಾಗಿ ಕೆಲಸ ಮಾಡುವ ಮತ್ತು ಜನಪ್ರಿಯ ಸಬ್‌ಸ್ಟ್ಯಾಕ್ ಅಂಕಣವನ್ನು ಬರೆಯುವ ಗ್ರಾಂಟ್ ವಾಲ್ ಅವರನ್ನು ತಡೆಹಿಡಿದು ಬಂಧಿಸಲಾಗಿದೆ. ಅಲ್ ರಯಾನ್‌ನಲ್ಲಿರುವ ಅಹ್ಮದ್ ಬಿನ್ ಅಲಿ ಸ್ಟೇಡಿಯಂನಲ್ಲಿ ವೇಲ್ಸ್‌ ವಿರುದ್ಧದ ಅಮೆರಿಕಾ ಪಂದ್ಯ ವೀಕ್ಷಿಸಲು ಬಂದ ವೇಳೆ ಅವರನ್ನು ತಡೆ ಹಿಡಿಯಲಾಗಿತ್ತು.


ಅವರು ಧರಿಸಿದ್ದ ಎಲ್ಜಿಬಿಟಿಕ್ಯು ಬೆಂಬಲಿತ ರೇನ್‌ ಬೋ ಟೀ ಶರ್ಟ್‌ ಅನ್ನು ತೆಗೆಯುವಂತೆ ಹೇಳಿದರು ಮತ್ತು ಘಟನೆಯ ಬಗ್ಗೆ ಟ್ವೀಟ್ ಮಾಡಿದಾಗ ಅವರ ಫೋನ್ ಕಿತ್ತುಕೊಳ್ಳಲಾಗಿದೆ ಎಂದು ಗ್ರಾಂಟ್ ವಾಲ್ ಆರೋಪಿಸಿದ್ದಾರೆ.


ಟ್ವಿಟರ್‌ನಲ್ಲಿ ಘಟನೆ ಪೋಸ್ಟ್‌ ವೈರಲ್:


ಈ ಎಲ್ಲಾ ಘಟನೆಯನ್ನು ಗ್ರಾಂಟ್ ವಾಲ್ ತಮ್ಮ ಟ್ವಿಟರ್‌ನಲ್ಲಿ ವಿವರಿಸಿದ್ದಾರೆ. ರೇನ್‌ಬೋ ಟೀ ಶರ್ಟ್‌ ಹಾಕಿದ್ದಕ್ಕೆ ನನ್ನನ್ನು 25 ನಿಮಿಷಗಳ ಕಾಲ ಬಂಧಿಸಿ ಶರ್ಟ್ ತೆಗೆಯುವಂತೆ ಹೇಳಲಾಯಿತು ಎಂದು ಟ್ವೀಟ್‌ ಮಾಡಿದ್ದಾರೆ. ಮತ್ತೊಂದು ಸರಣಿ ಟ್ವೀಟ್‌ನಲ್ಲಿ ನಾನೀಗ ಚೆನ್ನಾಗಿದ್ದೇನೆ, ಆದರೆ ಅದು ಅನಗತ್ಯ ಪರೀಕ್ಷೆಯಾಗಿತ್ತು. ನಾನು ಮಾಧ್ಯಮ ಕೇಂದ್ರದಲ್ಲಿದ್ದೇನೆ ಎಂದು ಬರೆದುಕೊಂಡಿದ್ದರು.


ಇದನ್ನೂ ಓದಿ: IPL 2023 Mini Auction: ಐಪಿಎಲ್​ಗೆ ಎಂಟ್ರಿ ಕೊಡಲಿದ್ದಾರೆ ಟಿ20 ಸ್ಪೆಷಲಿಸ್ಟ್, ಈ ಆಟಗಾರನ ಖರೀದಿಗೆ ನಡೆಯಲಿದೆ ಬಿಗ್​ ಫೈಟ್​


ವಾಲ್‌ ಬಳಿ ಕ್ಷಮೆಯಾಚಿಸಿದ ಭದ್ರತಾ ಸಿಬ್ಬಂದಿ:


ತದನಂತರ ಭದ್ರತಾ ಕಮಾಂಡರ್ ತನ್ನ ಬಳಿಗೆ ಬಂದು ಕ್ಷಮೆಯಾಚಿಸಿ ಒಳಗೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟರು ಎಂದು ವಾಲ್ ಹೇಳಿದರು. ಅಲ್ಲದೇ ಫಿಫಾ ಪ್ರತಿನಿಧಿ ಕೂಡ ವಾಲ್‌ ಬಳಿ ಬಂದು ಕ್ಷಮೆಯಾಚಿಸಿದರು ಎಂದು ಅವರು ಹೇಳಿಕೊಂಡಿದ್ದಾರೆ. ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯನ್ನು ಬೆಂಬಲಿಸಲು ಪರಿಚಯಿಸಲಾದ ಬಹು-ಬಣ್ಣದ ಆರ್ಮ್‌ಬ್ಯಾಂಡ್ ಧರಿಸಿದ ಯಾವುದೇ ಆಟಗಾರನಿಗೆ ಹಳದಿ ಕಾರ್ಡ್‌ಗಳನ್ನು ನೀಡುವುದಾಗಿ FIFA ಬೆದರಿಕೆ ಹಾಕಿದ ನಂತರ ಏಳು ಯುರೋಪಿಯನ್ ವಿಶ್ವಕಪ್ ರಾಷ್ಟ್ರಗಳು ಸೋಮವಾರದಂದು ತಮ್ಮ ನಾಯಕರಿಗೆ OneLove ಆರ್ಮ್‌ಬ್ಯಾಂಡ್‌ಗಳನ್ನು ಧರಿಸುವ ಯೋಜನೆಯನ್ನು ಕೈಬಿಟ್ಟವು.


ಕತಾರ್‌ನಲ್ಲಿ ಸಲಿಂಗಕಾಮ ಅಪರಾಧ:


ಕತಾರಿ ಕಾನೂನು ಸಲಿಂಗಕಾಮವನ್ನು ಅಪರಾಧವೆಂದು ಪರಿಗಣಿಸುತ್ತದೆ ಮತ್ತು ಸಲಿಂಗಕಾಮದ ಯಾವುದೇ ಲೈಂಗಿಕ ಕ್ರಿಯೆಗಳನ್ನು ಪ್ರದರ್ಶಿಸುವುದು ಕಂಡುಬಂದಲ್ಲಿ ಏಳು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸುತ್ತದೆ. ದೇಶದ ಷರಿಯಾ ಕಾನೂನಿನ ಅಡಿಯಲ್ಲಿ, ಸಲಿಂಗ ಸಂಬಂಧಗಳಿಗೆ ಗರಿಷ್ಠ ಶಿಕ್ಷೆ ಎಂದರೆ ಅದು ಮರಣದಂಡನೆಯಾಗಿದೆ.


ಕತಾರ್‌ ದೇಶದಲ್ಲಿ ಸಲಿಂಗ ಕಾಮವನ್ನು ಅಕ್ರಮ ಎಂದು ಪರಿಗಣಿಸಲಾಗುತ್ತಿರುವುದರಿಂದ ತನ್ನ ದೇಶಕ್ಕೆ ಬರುವ ಫುಟ್‌ಬಾಲ್ ಅಭಿಮಾನಿಗಳ ಪೈಕಿ ಸಲಿಂಗಿಗಳು ಇದ್ದರೆ ಅವರಿಗೆ ನಿಷೇಧ ಹೇರಲು ನಿರ್ಧರಿಸಿದೆ. ನಾವು ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಗೆ ವಿಶ್ವದ ಎಲ್ಲೆಡೆಯ ಜನರನ್ನು ಸ್ವಾಗತಿಸುತ್ತೇವೆ ಆದ್ರೆ ಸಲಿಂಗಿಗಳಿಗೆ ಎಂಟ್ರಿ ಇಲ್ಲ ಎಂದು ಕತಾರ್ ದೇಶ ಸ್ಪಷ್ಟವಾಗಿ ಹೇಳಿದೆ.

Published by:shrikrishna bhat
First published: