• Home
  • »
  • News
  • »
  • sports
  • »
  • FIFA World Cup 2022: ಭಾರತದಲ್ಲಿ ಇತಿಹಾಸ ನಿರ್ಮಿಸಿದ ಫಿಫಾ ವಿಶ್ವಕಪ್, ಟಿವಿ ಪ್ರೇಕ್ಷಕರನ್ನು ಹಿಂದಿಕ್ಕಿದ ಡಿಜಿಟಲ್

FIFA World Cup 2022: ಭಾರತದಲ್ಲಿ ಇತಿಹಾಸ ನಿರ್ಮಿಸಿದ ಫಿಫಾ ವಿಶ್ವಕಪ್, ಟಿವಿ ಪ್ರೇಕ್ಷಕರನ್ನು ಹಿಂದಿಕ್ಕಿದ ಡಿಜಿಟಲ್

ಫಿಫಾ ವಿಶ್ವಕಪ್‌

ಫಿಫಾ ವಿಶ್ವಕಪ್‌

FIFA World Cup 2022: ಫಿಫಾ ವಿಶ್ವಕಪ್​ ಕತಾರ್ 2022 ವಿಶ್ವದಾದ್ಯಂತ ಟಿವಿ ಪ್ರೇಕ್ಷಕರನ್ನು ಹೆಚ್ಚು ಸೆಳೆದಿದೆ ಎಂದು ವರದದಿಯಾಗಿದೆ. ಅದರಲ್ಲಿಯೂ ಭಾರತದಲ್ಲಿ ಇದೇ ಮೊದಲು ಫುಟ್​ಬಾಲ್​ ಇಷ್ಟೊಂದು ಸಂಖ್ಯೆಯಲ್ಲಿ ವೀಕ್ಷಿಸಿದ್ದು, ಅದರಲ್ಲಿಯೂ ಟಿವಿ ಗಿಂತ ಡಿಜಿಟಲ್​ ಮಾಧ್ಯಮದ ವೀಕ್ಷಣೆ ಹೆಚ್ಚಳವಾಗಿದೆ.

ಮುಂದೆ ಓದಿ ...
  • Share this:

ಫಿಫಾ ವಿಶ್ವಕಪ್​ 2022ಗೆ ಇಂದು ಅಧಿಕೃತವಾಗಿ ತೆರೆಬಿಳಲಿದೆ. ಇಂದು ಅರ್ಜೆಂಟೀನಾ ಮತ್ತು ಪ್ರಾನ್ಸ್ ನಡುವೆ ಪ್ರಶಸ್ತಿಗಾಗಿ ಫೈನಲ್​ ಕಾದಾಟ ನಡೆಯಲಿದೆ. ಆದರೆ ಈ ಬಾರಿ ಕಳೆದೆಲ್ಲಾ ಫಿಫಾ ವಿಶ್ವಕಪ್​ಗಿಂತ (FIFA World Cup 2022) ಹೆಚ್ಚಿನ ವೀಕ್ಷಣೆಯು ಭಾರತದಲ್ಲಿ ಆಗಿದೆ ಎನ್ನುವುದು ವಿಶೇಷವಾಗಿದೆ. ಹೌದು, ಕತಾರ್ ವಿಶ್ವಕಪ್‌ ವೀಕ್ಷಣೆಯಲ್ಲಿ ಭಾರತ ಹೊಸ ಸಾಧನೆ ಮಾಡಿದೆ. ಫುಟ್ಬಾಲ್ ವಿಶ್ವಕಪ್ ಇತಿಹಾಸದಲ್ಲಿ, ಕತಾರ್‌ನಲ್ಲಿ ನಡೆದ ವಿಶ್ವಕಪ್ ಅನ್ನು ಭಾರತದಲ್ಲಿ (India) ಅತಿ ಹೆಚ್ಚು ವೀಕ್ಷಿಸಲಾಗಿದೆ. ಪ್ರಮುಖವಾಗಿ, ಡಿಜಿಟಲ್ (Digital) ವೀಕ್ಷಕರು ಇತಿಹಾಸದಲ್ಲಿ ಮೊದಲ ಬಾರಿಗೆ ವಿಶ್ವಕಪ್‌ಗಾಗಿ ಟಿವಿ ಪ್ರೇಕ್ಷಕರನ್ನು ಹಿಂದಿಕ್ಕಿದ್ದಾರೆ ಎನ್ನುವುದು ಇಲ್ಲಿ ಗಮನಾರ್ಹವಾಗಿದೆ.


ಟಿವಿ ಪ್ರೇಕ್ಷಕರನ್ನು ಹಿಂದಿಕ್ಕಿದ್ದ ಡಿಜಿಟಲ್:


ಇನ್ನು, ಕತಾರ್ ಫಿಫಾ ವಿಶ್ವಕಪ್ 2022 ಅನ್ನು ಆನ್‌ಲೈನ್‌ನಲ್ಲಿ ಸ್ಟ್ರೀಮ್ ಮಾಡುತ್ತಿರುವ ಜಿಯೋ ಸಿನಿಮಾ ಮೂಲಕ ಭಾರತದಿಂದ 10 ಕೋಟಿಗೂ ಹೆಚ್ಚು ಜನರು ಪಂದ್ಯಗಳನ್ನು ವೀಕ್ಷಿಸಿದ್ದಾರೆ ಎಂದು ವರದಿಯಾಗಿದೆ. Jio Cinema ನವೆಂಬರ್ 20 ರಿಂದ ಮೂರು ವಾರಗಳವರೆಗೆ iOS ಮತ್ತು Android ಮೊಬೈಲ್​ಗಳಲ್ಲಿ ಅತೀ ಹೆಚ್ಚು ಡೌನ್‌ಲೋಡ್ ಮಾಡಿದ ಅಪ್ಲಿಕೇಶನ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.


ಜಿಯೋ ಸಿನಿಮಾ ವೀಕ್ಷಕರಿಗೆ ವಿಶ್ವಕಪ್ ಅಉಭವನ್ನು ವಿಶೇಷವಾಗಿ ನೀಡಿದೆ. ಫುಟ್‌ಬಾಲ್ ಅಭಿಮಾನಿಗಳು FIFA ವರ್ಲ್ಡ್ ಕಪ್​ನ್ನು ಜಿಯೋ ಸಿನಿಮಾ ಅಫ್ಲಿಕೇಶನ್​ನಲ್ಲಿ ಆಡಿಯೋ-ದೃಶ್ಯದ ಜೊತೆಗೆ ಅದ್ಭುತವಾಗಿ ಆನಂದಿಸಿದ್ದಾರೆ. ಇದರಿಂದಾಗಿ ಈ ಬಾರಿ ಭಾರತದಲ್ಲಿ ಫಿಫಾ ವಿಶ್ವಕಪ್​ನ್ನು ಟಿವಿ ಗಳಲ್ಲಿ ನೋಡಿರುವುದಕ್ಕಿಂತ ಹೆಚ್ಚಾಗಿ ಜಿಯೋ ಸಿನಿಮಾ ಆಫ್​ ಗಳ ಮೂಲಕ ವೀಕ್ಷಿಸಿದ್ದಾರೆ. ಹೀಗಾಗಿ ಇದೇ ಮೊದಲ ಬಾರಿಗೆ ಡಿಜಿಟಲ್ ಮಾಧ್ಯಮವು ಟಿವಿ ಯನ್ನು ವೀಕ್ಷಣೆಯಲ್ಲಿ ಹಿಂದಿಕ್ಕಿದೆ.


ಇದನ್ನೂ ಓದಿ: WTC Points Table: 150 ನಿಮಿಷ, 2 ಗೆಲುವುಗಳು, ಬದಲಾದ ಲೆಕ್ಕಾಚಾರ; ಟಾಪ್-2 ನಲ್ಲಿ ಟೀಂ ಇಂಡಿಯಾ


ಸ್ಥಳಿಯ ಭಾಷೆಯಲ್ಲಿ ಫಿಫಾ:


ವೇಯ್ನ್ ರೂನಿ, ಲೂಯಿಸ್ ಫಿಗೊ, ರಾಬರ್ಟ್ ಪೈರ್ಸ್, ಗಿಲ್ಬರ್ಟೊ ಸಿಲ್ವಾ ಮತ್ತು ಸಾಲ್ ಕ್ಯಾಂಪ್‌ಬೆಲ್ ಸೇರಿದಂತೆ ವಿಶ್ವಕಪ್ ತಾರೆಗಳು ಜಿಯೋ ಸಿನಿಮಾದ ವಿಶ್ವ ದರ್ಜೆಯ ಸ್ಟುಡಿಯೋಗಳಲ್ಲಿ ಲೈವ್ ಕಾಮೆಂಟರಿ ಮತ್ತು ಪಂದ್ಯದ ವಿಶ್ಲೇಷಣೆ ನೀಡಿದ್ದಾರೆ. ಕೇರಳದ ಸಂತೋಷ್ ಟ್ರೋಫಿ ತಾರೆಯರಾದ ಜೋಪಾಲ್ ಅಂಚೇರಿ, ಮೊಹಮ್ಮದ್ ರಫಿ, ಸುಶಾಂತ್ ಮ್ಯಾಥ್ಯೂ ಮತ್ತು ಫಿರೋಜ್ ಮೊಹಮ್ಮದ್ ಅವರಲ್ಲದೆ, ಖ್ಯಾತ ಕಾಮೆಂಟೇಟರ್‌ಗಳಾದ ಅನು ಜೋಸೆಫ್ ಮತ್ತು ಎಲ್ಡೋಪೋಲ್ ಪುದುಶೇರಿ ಕೂಡ ಮಲಯಾಳಂನಲ್ಲಿ ವಿಶ್ವಕಪ್ ವಿಶೇಷತೆಯನ್ನು ವೀಕ್ಷಕರಿಗೆ ನೀಡಿದ್ದಾರೆ. ಮಲಯಾಳಂ ಮತ್ತು ಇಂಗ್ಲಿಷ್ ಜೊತೆಗೆ, ಹಿಂದಿ ಮತ್ತು ಬಂಗಾಳಿ ಪಂದ್ಯಗಳು ಜಿಯೋ ಸಿನಿಮಾದಲ್ಲಿ ಲೈವ್ ಆಗಿ ಲಭ್ಯವಿವೆ.


42 ಮಿಲಿಯನ್​ ವೀಕ್ಷಣೆ:


ನವೆಂಬರ್ 20ರಂದು ಪ್ರಾರಂಭವಾದ FIFA ವಿಶ್ವಕಪ್​ಗೆ ವಿಶ್ವದಾದ್ಯಂತೆ ಉತ್ತಮ ರೆಸ್ಪಾನ್ಸ್ ದೊರಕಿದೆ. ಅಲ್ಲದೇ ಒಂದು ವರದಿಯ ಪ್ರಕಾರ, ಈವರೆಗೆ ಒಟ್ಟು ಎಲ್ಲಾ ಪಂದ್ಯಗಳ ವೀಕ್ಷಣೆಯು 42.2 ಮಿಲಿಯನ್ ತಲುಪಿದೆ ಎಂದು ಹೇಳಲಾಗಿದೆ. ಅಂದರೆ ಇದು ಸರಾಸರಿ ಪಂದ್ಯದ ವ್ಯಾಪ್ತಿ 5.9 ಮಿಲಿಯನ್ ಆಗಿದೆ. ಅದರಲ್ಲಿಯೂ ಭಾರತದಲ್ಲಿ ಕೇರಳ (13.1 ಮಿಲಿಯನ್), ಪಶ್ಚಿಮ ಬಂಗಾಳ (8.69 ಮಿಲಿಯನ್), ಅಸ್ಸಾಂ/ಈಶಾನ್ಯ/ಸಿಕ್ಕಿಂ (7.1 ಮಿಲಿಯನ್), ತಮಿಳುನಾಡು/ಪುದುಚೇರಿ (2.7 ಮಿಲಿಯನ್), ಮತ್ತು ಮಹಾರಾಷ್ಟ್ರ/ಗೋವಾ (2.3) ಮಿಲಿಯನ್) ವೀಕ್ಷಣೆ ಆಗಿದೆ.


ಬ್ರೆಜಿಲ್ vs ಸ್ವಿಟ್ಜರ್ಲೆಂಡ್ ಪಂದ್ಯವು 13 ಮಿಲಿಯನ್ ವೀಕ್ಷಕರನ್ನು ಹೊಂದಿರುವ ಪಂದ್ಯಾವಳಿಯಲ್ಲಿ ಹೆಚ್ಚು ತಲುಪಿದ ಪಂದ್ಯವಾಗಿದೆ. ಅಧಿಕೃತ FIFA ಪ್ರಸಾರ ಹಕ್ಕು ಹೊಂದಿರುವ Viacom18, Sports18 ಮತ್ತು Sports 18 HD ಯಲ್ಲಿ ಪಂದ್ಯಗಳನ್ನು ಪ್ರಸಾರ ಮಾಡುತ್ತಿದೆ. ಆದರೆ ಪಂದ್ಯಗಳನ್ನು ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಲೈವ್ ಸ್ಟ್ರೀಮ್ ಮಾಡಲಾಗುತ್ತಿದ್ದು, ಇದು ಈ ಬಾರಿ ಅತೀ ಹೆಚ್ಚು ಡೌನ್​ಲೋಡ್​ ಆದ ಆ್ಯಪ್​ ಆಗಿದೆ.


ಇತಿಹಾಸದ ನಿರ್ಮಿಸಿದ ಫಿಫಾ:


ಕತಾರ್ 2022 ಈ ವಿಶ್ವಕಪ್​ ಭಾರತದಲ್ಲಿ ಅತಿಹೆಚ್ಚು ವೀಕ್ಷಿಸಲಾದ FIFA ವಿಶ್ವಕಪ್‌ ಎಂಬ ಖ್ಯಾತಿಗೆ ಪಾತ್ರವಾಗಿದೆ. ಮತ್ತೊಂದು ವಿಶೇಷ ಎಂದರೆ ಮೊದಲ ಬಾರಿಗೆ ಟಿವಿಯನ್ನು ಡಿಜಿಟಲ್ ವೀಕ್ಷಕರು ಹಿಂದಿಕ್ಕಿದ್ದಾರೆ. FIFA ವರ್ಲ್ಡ್ ಕಪ್ ಕತಾರ್ 2022 ರ ವ್ಯಾಪ್ತಿಯು JioCinema ನಲ್ಲಿ 100mn ದಾಟುವ ನಿರೀಕ್ಷೆಯಿದೆ.  JioCinema ನವೆಂಬರ್ 20 ರಿಂದ iOS ಮತ್ತು Android ಎರಡರಲ್ಲೂ ಮೂರು ವಾರಗಳವರೆಗೆ ಡೌನ್‌ಲೋಡ್ ಮಾಡಲಾದ ನಂ. 1 ಉಚಿತ ಅಪ್ಲಿಕೇಶನ್ ಆಗಿ ಹೊರಹೊಮ್ಮಿದೆ.


JioCinema ಹಿಂದೆಂದೂ ಜನ ಕಂಡಿರದ ಹೈಪ್ ಮೋಡ್‌ನೊಂದಿಗೆ ವೀಕ್ಷಕರ ಲೈವ್ ಅನುಭವವನ್ನು ಹೆಚ್ಚಿಸಿದೆ. ಹಾಗೆಯೇ, Snap Inc. ಜೊತೆಗಿನ ಪಾಲುದಾರಿಕೆ ಬಳಕೆದಾರರಿಗೆ ಹಿಂದೆಂದೂ ನೋಡಿರದ AR ಲೆನ್ಸ್ ಅನ್ನು ಸಹ ನೀಡುತ್ತಿದ್ದು, ಜನರಿಗೆ ಫುಟ್​ಬಾಲ್​ ಆಟದ ಸುಂದರ ಅನುಭವ ನೀಡುತ್ತಿದೆ. ಭಾರತದಲ್ಲಿ ಫುಟ್‌ಬಾಲ್‌ನ ಹೀರೋಗಳನ್ನು ನೆನಪಿಸಿಕೊಳ್ಳುವ ಸೀರೀಸ್​ ಅನ್ನು ಸಹ ಮಹೀಂದ್ರಾದೊಂದಿಗೆ ಸೇರಿ ವಯೋಕಾಂ ನಿರ್ಮಿಸಿದೆ.

Published by:shrikrishna bhat
First published: