• Home
  • »
  • News
  • »
  • sports
  • »
  • FIFA World Cup 2022: ಒಂದೇ ಒಂದು ಪಂದ್ಯ ಗೆದ್ದಿದ್ದಕ್ಕೆ ದೇಶಕ್ಕೆ ರಜೆ ಘೋಷಿಸಿದ ದೊರೆ, ಇನ್ನು ಕಪ್​ ಗೆದ್ರೆ ಏನ್​ ಕಥೆ ಎಂದ ನೆಟ್ಟಿಗರು

FIFA World Cup 2022: ಒಂದೇ ಒಂದು ಪಂದ್ಯ ಗೆದ್ದಿದ್ದಕ್ಕೆ ದೇಶಕ್ಕೆ ರಜೆ ಘೋಷಿಸಿದ ದೊರೆ, ಇನ್ನು ಕಪ್​ ಗೆದ್ರೆ ಏನ್​ ಕಥೆ ಎಂದ ನೆಟ್ಟಿಗರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

FIFA World Cup 2022: ಫಿಫಾ ವಿಶ್ವಕಪ್ 2022 ರಲ್ಲಿ ಮಂಗಳವಾರ ಕತಾರ್‌ನ ಲುಸೇಲ್ ಕ್ರೀಡಾಂಗಣದಲ್ಲಿ ನಡೆದ ಸಿ ಗುಂಪಿನ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಸೌದಿ ಅರೇಬಿಯಾ ಭರ್ಜರಿ ಜಯ ಸಾಧಿಸಿತು. ಜನರ ಸಂತಸವನ್ನು ಅಲ್ಲಿನ ಸರ್ಕಾರ ಮತ್ತಷ್ಟು ಹೆಚ್ಚಿಸಿದೆ.

  • Share this:

ಫಿಫಾ ವಿಶ್ವಕಪ್‌ 2022ರಲ್ಲಿ (FIFA World Cup 2022) ಸೌದಿ ಅರೇಬಿಯಾ (Saudi Arabia) ಐತಿಹಾಸಿಕ ವಿಜಯದ ನಂತರ, ಮಂಗಳವಾರದಿಂದ ದೇಶದ ಎಲ್ಲೆಡೆ ಸಂಭ್ರಮಾಚರಣೆ ನಡೆಯುತ್ತಿದೆ. ಜನರ ಭಾವನೆಗಳನ್ನು ಪರಿಗಣಿಸಿ ಅಲ್ಲಿನ ಸರ್ಕಾರ ಈ ನಿಟ್ಟಿನಲ್ಲಿ ದೊಡ್ಡ ಘೋಷಣೆ ಮಾಡಿದೆ. ಈ ವಿಷಯವನ್ನು ಸ್ಥಳೀಯ ಪತ್ರಿಕೆ ಸೌದಿ ಗೆಜೆಟ್ ಟ್ವೀಟ್ ಮಾಡಿದೆ, 2022 ರ FIFA ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ವಿರುದ್ಧ ಸೌದಿ ಅರೇಬಿಯಾದ ಅದ್ಭುತ ವಿಜಯದ ಸಂಭ್ರಮದಲ್ಲಿ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ವಲಯದ ಉದ್ಯೋಗಿಗಳು ಮತ್ತು ಶಾಲೆಗಳನ್ನು ಬುಧವಾರ ಅಂದರೆ ಇಂದು ರಜೆ ನೀಡಲಾಗಿದೆ ಎಂದು ರಾಜ ಸಲ್ಮಾನ್ (Salman of Saudi Arabia) ಆದೇಶಿಸಿದ್ದಾರಂತೆ. ಈ ಮೂಲಕ ಸೌದಿಯ ಜನರ ಸಂತಸವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.


ಸೌದಿ ಗೆಲುವಿನ ಶುಭಾರಂಭ:


ಸೌದಿ ಅರೇಬಿಯಾ ವಿಶ್ವಕಪ್‌ನಲ್ಲಿ ವಿಶ್ವದ 51ನೇ ಶ್ರೇಯಾಂಕಿತ ತಂಡ. ಆದರೆ ಕಳೆದ ದಿನ ಸೌದಿ ಫಿಫಾ ವಿಶ್ವಕಪ್​ನಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಅರ್ಜೆಂಟೀನಾ ತಂಡ ಕಳೆದ 36 ಪಂದ್ಯಗಳಲ್ಲಿ ಅಜೇಯವಾಗಿತ್ತು, ಆದರೆ ಸೌದಿ ಅರೇಬಿಯಾ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಅರ್ಜೆಂಟೀನಾ ಮತ್ತು ಸೌದಿ ಅರೇಬಿಯಾ ನಡುವಿನ ಸ್ಪರ್ಧೆಯು ಏಕಪಕ್ಷೀಯವಾಗಿರುತ್ತದೆ ಎಂದು ನಂಬಲಾಗಿತ್ತು. ಪಂದ್ಯದ 10ನೇ ನಿಮಿಷದಲ್ಲಿ ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿ ತಮ್ಮ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು.



ದ್ವಿತೀಯಾರ್ಧದಲ್ಲಿ ಬದಲಾದ ಕಥೆ:


ಸೌದಿ ಅರೇಬಿಯಾ ಪಂದ್ಯದ ಎರಡನೇ ಆಫ್‌ನಲ್ಲಿ ಅದ್ಭುತವಾಗಿ ಆಡಿತು. ಸೌದಿ ಪರ ಸಲೇಹ್ ಅಲ್ಶೆಹ್ರಿ 48ನೇ ನಿಮಿಷದಲ್ಲಿ ಗೋಲು ಬಾರಿಸಿ ಪಂದ್ಯವನ್ನು 1-1ರಲ್ಲಿ ಸಮಬಲಗೊಳಿಸಿದರು. ಅದೇ ಸಮಯದಲ್ಲಿ, ಸೌದಿ ಅರೇಬಿಯಾ 53 ನೇ ನಿಮಿಷದಲ್ಲಿ ಈ ಮುನ್ನಡೆಯನ್ನು ದ್ವಿಗುಣಗೊಳಿಸಿತು. ಸೇಲಂ ಅಲ್ದ್ಸಾರಿ ಎರಡನೇ ಗೋಲು ಬಾರಿಸಿ ತಂಡವನ್ನು 2-1 ಅಂತರದಿಂದ ಮುನ್ನಡೆಸಿದರು. ಸೌದಿ ಅರೇಬಿಯಾ ಪಂದ್ಯದ ಕೊನೆಯವರೆಗೂ ಈ ಮುನ್ನಡೆ ಕಾಯ್ದುಕೊಂಡಿತು.


ಇದನ್ನೂ ಓದಿ: FIFA World Cup 2022: 6 ಸಾವಿರ ಶವಗಳ ಮೇಲೆ ನಡಿತಿರೋದು ಫಿಫಾ ವಿಶ್ವಕಪ್, ಫುಟ್​ಬಾಲ್​ಗಾಗಿ ಸತ್ತವರ ಕಥೆ ಕೇಳೋರ‍್ಯಾರು?


ಈ ಐತಿಹಾಸಿಕ ಗೆಲುವಿನೊಂದಿಗೆ ಸೌದಿ ಅರೇಬಿಯಾ ತಂಡವು ನಾಕೌಟ್ ಸುತ್ತಿಗೆ ತಲುಪುವ ಭರವಸೆಯನ್ನು ಹೆಚ್ಚಿಸಿದೆ . ಸೌದಿ ಅರೇಬಿಯಾ ವಿಶ್ವಕಪ್‌ನ ಸಿ ಗುಂಪಿನಲ್ಲಿದೆ. ಈ ಗುಂಪಿನಲ್ಲಿ ಅರ್ಜೆಂಟೀನಾ ಮತ್ತು ಮೆಕ್ಸಿಕೊ ಹೊರತುಪಡಿಸಿ, ಮೆಕ್ಸಿಕೊ ಮತ್ತು ಪೋಲೆಂಡ್ ತಂಡಗಳಿವೆ. ಸೌದಿ ಅರೇಬಿಯಾ ತಂಡವು ಈ ಎರಡೂ ದೇಶಗಳಲ್ಲಿ ಒಂದನ್ನು ಸೋಲಿಸಿದರೆ, ಅದು ನಾಕೌಟ್ ಸುತ್ತಿಗೆ ತಲುಪುವ ಸ್ಪರ್ಧಿಯಾಗಲಿದೆ.


ಉಳಿದ 2 ಪಂದ್ಯಗಳು ಟೈ:


ಅಲ್ಲದೆ ನಿನ್ನೆ ನಡೆದ ಇನ್ನೂ ಎರಡು ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ. ಸಿ ಗುಂಪಿನ ಭಾಗವಾಗಿ ಮೆಕ್ಸಿಕೊ ಮತ್ತು ಪೋಲೆಂಡ್ ನಡುವಿನ ಪಂದ್ಯ 0-0 ಗೋಲುಗಳಿಂದ ಟೈ ಆಯಿತು. ಎರಡೂ ತಂಡಗಳಿಗೆ 10 ಅಂಕ ನೀಡಲಾಗಿದೆ. ಗ್ರೂಪ್-ಡಿ ಭಾಗವಾಗಿ ಡೆನ್ಮಾರ್ಕ್ ಮತ್ತು ಟ್ಯುನೀಷಿಯಾ ನಡುವಿನ ಪಂದ್ಯವೂ ಟೈನಲ್ಲಿ ಅಂತ್ಯಗೊಂಡಿತು. ಉಭಯ ತಂಡಗಳು 10 ಅಂಕ ಗಳಿಸಿದವು.

Published by:shrikrishna bhat
First published: