ಕೊಲಂಬಿಯಾದ ಫುಟ್ಬಾಲ್ ಆಟಗಾರ ಮತ್ತು ಅರ್ಜೆಂಟೀನಾದ ಮೊದಲ ಡಿವಿಷನ್ ಪ್ಲೇಯರ್ ಆಂಡ್ರೆಸ್ ಬಾಲಂಟಾ (Andres Balanta) ತರಬೇತಿಯಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. 22 ವರ್ಷ ವಯಸ್ಸಿನ ಆಂಡ್ರೆಸ್ ಬಾಲಂಟಾ ಅಟ್ಲೆಟಿಕೊ ಟುಕುಮನ್ಗಾಗಿ ಆಡಿದ್ದರು, ಅಲ್ಲಿ ಅವರು 2021/22 ಋತುವಿನಲ್ಲಿ ಏಳು ಬಾರಿ ಕಾಣಿಸಿಕೊಂಡಿದ್ದರು. ಬಾಲಂಟಾ - ಕೊಲಂಬಿಯಾದ ಕ್ಯಾಲಿಯಲ್ಲಿ ಜನಿಸಿದ ಅವರು ತರಬೇತಿಯ ಸಮಯದಲ್ಲಿ ಕುಸಿದುಬಿದ್ದರು. ಈ ವೇಳೆ ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಆಂಡ್ರೆಸ್ ಬಾಲಂಟಾ ನಿಧನರಾಗಿದ್ದಾರೆ.
ಅಭ್ಯಾಸದ ವೇಳೆ ನಿಧನ:
ಮಿಡ್ಫೀಲ್ಡರ್ ಕೊಲಂಬಿಯಾದ ಯುವ ಶ್ರೇಣಿಯಲ್ಲಿ ಆಡಿದ್ದರು. ಅಲ್ಲದೇ ಬೇಸಿಗೆಯಲ್ಲಿ ಅರ್ಜೆಂಟೀನಾಕ್ಕೆ ತೆರಳಿ ನಂತರ ಅಲ್ಲಿನ ತಂಡದಲ್ಲಿ ಭಾಗಿ ಆಗುವ ಕನಸನ್ನು ಹೊಂದಿದ್ದರಂತೆ. ಅಲ್ಲದೇ ಮುಂದಿನ ಫುಟ್ಬಾಲ್ ವಿಶ್ವಕಪ್ ನಲ್ಲಿ ಅರ್ಜೆಂಟೀನಾ ತಂಡದ ಪರವಾಘಿ ಆಡುವ ಮಹತ್ವದ ಕನಸನ್ನು ಹೊಂದಿದ್ದರಂತೆ. ಸದ್ಯ ಅವರ ಸಾವಿನಿಂದ ಕ್ಲಬ್ನ ಬೆಂಬಲಿಗರು ತೀವ್ರ ದುಃಖಿತರಾಗಿದ್ದಾರೆ. ಜೊತೆಗೆ ಅವರು ನಮ್ಮ ತಂಡದ ಸದ್ಯರಾಗಿ ಮಾತ್ರವಲ್ಲದೇ ಕುಟುಂಬದ ಸದಸ್ಯರೂ ಆಗಿದ್ದರು ಎಂದು ಟೀಂ ತಿಳಿಸಿದೆ.
ಕೊಲಂಬಿಯಾದ ಫುಟ್ಬಾಲ್ ಫೆಡರೇಶನ್ ತನ್ನ ವಿವಿಧ ವಿಭಾಗಗಳಲ್ಲಿ ಕೊಲಂಬಿಯಾ ರಾಷ್ಟ್ರೀಯ ತಂಡದ ಆಟಗಾರ ಆಂಡ್ರೆಸ್ ಬಾಲಂಟಾ ಅವರ ಸಾವಿಗೆ ವಿಷಾದಿಸಿದೆ. ಇಂಡೋನೇಷ್ಯಾದಲ್ಲಿ 2019 ರ ಅಂಡರ್-20 ವಿಶ್ವಕಪ್ನಲ್ಲಿ ತಮ್ಮ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು.
ಕೇರಳದಿಂದ ಕತಾರ್ಗೆ ಕಾರಿನಲ್ಲೇ ಪ್ರಯಾಣ:
ಕೇರಳದ ನಾಜಿ ನೌಶಿ ಎಂಬ ಮಹಿಳೆ ಫಿಫಾ ವಿಶ್ವಕಪ್ನಲ್ಲಿ ನಡೆಯುವ ಅರ್ಜೆಂಟೀನಾದ ಪಂದ್ಯವನ್ನು ವೀಕ್ಷಿಸಲು ಕಸ್ಟಮೈಸ್ ಮಾಡಿದ ಮಹೀಂದ್ರ ಥಾರ್ ಎಸ್ಯುವಿಯಲ್ಲಿ ಭಾರತದಿಂದ ಕತಾರ್ಗೆ ತೆರಳಿದ್ದಾರೆ. ಭಾರತದಲ್ಲಿ ಲಿಯೋನೆಲ್ ಮೆಸ್ಸಿ ಹಾಗೂ ರೊನಾಲ್ಡೊಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ನಾಜಿ ಕೂಡ ಅರ್ಜೆಂಟೀನಾದ ನಾಯಕ ಲಿಯೋನೆಲ್ ಮೆಸ್ಸಿಯ ದೊಡ್ಡ ಅಭಿಮಾನಿಯಾಗಿದ್ದು, ಅವರ ಆಟವನ್ನು ನೋಡಲು ಕೇರಳದಿಂದ ಕತಾರ್ಗೆ ತನ್ನ ಕಾರಿನಲ್ಲಿಯೇ ಒಬ್ಬರೇ ಪ್ರಯಾಣ ಮಾಡಿದ್ದಾರೆ.
ಇದನ್ನೂ ಓದಿ: Dwayne Bravo: ಪೊಲಾರ್ಡ್ ಬಳಿಕ ಮತ್ತೊಬ್ಬ ವಿಂಡೀಸ್ ಆಟಗಾರ ನಿವೃತ್ತಿ! ನೀವು ಚಾಂಪಿಯನ್ ಫಾರೆವರ್ ಎಂದ ಸಿಎಸ್ಕೆ!
ಲಿಯೋನೆಲ್ ಮೆಸ್ಸಿ ಆಡುವುದನ್ನು ನಾನು ನೋಡಲೇಬೇಕು:
ಈ ನಡುವೆ ನಡೆದ ಅರ್ಜೆಂಟೀನಾ ಹಾಗೂ ಸೌದಿ ಅರೇಬಿಯಾ ನಡುವಿನ ಪಂದ್ಯದಲ್ಲಿ ಅರ್ಜೆಂಟೀನಾ ಸೋತಾಗ ನೌಶಿಯಗೆ ತುಂಬಾ ಬೇಸರವಾಗಿತ್ತಂತೆ. ಭರವಸೆ ಕಳೆದುಕೊಳ್ಳದ ಫುಟ್ಬಾಲ್ ಪ್ರೇಮಿ ಮುಂದಿನ ಪಂದ್ಯದಲ್ಲಿ ತನ್ನ ನೆಚ್ಚಿನ ತಂಡ ಗೆಲ್ಲುತ್ತದೆ ಎಂಬ ಭರವಸೆಯಿಂದ ಪ್ರಯಾಣವನ್ನು ಮುಂದುವರೆಸಿದರು. ಈ ವೇಳೆ ಪತ್ರಿಕೆಗೆ ಹೇಳಿಕೆ ನೀಡಿರುವ ನೌಶಿ, "ನನ್ನ ಹೀರೋ ಲಿಯೋನೆಲ್ ಮೆಸ್ಸಿ ಆಡುವುದನ್ನು ನಾನು ನೋಡಲೇಬೇಕು ಎಂಬುದು ನನ್ನ ಮಹದಾಸೆ. ಈ ನಡುವೆ ಸೌದಿ ಅರೇಬಿಯಾ ವಿರುದ್ಧದ ಸೋಲು ನನಗೆ ನಿರಾಸೆಯನ್ನುಂಟು ಮಾಡಿತ್ತು. ಆದರೆ ಟ್ರೋಫಿ ಗೆಲ್ಲುವ ಹಾದಿಯಲ್ಲಿ ಇದೆಲ್ಲಾ ಸಣ್ಣ ಒಂದು ಅಡ್ಡಿ ಎಂದು ನನಗೆ ಖಾತ್ರಿಯಿದೆ" ಎಂದಿದ್ದಾರೆ.
ಇದನ್ನೂ ಓದಿ: IND vs BAN: ಪ್ರೈಮ್-ಹಾಟ್ಸ್ಟಾರ್ನಲ್ಲಿ ಭಾರತ-ಬಾಂಗ್ಲಾ ಪಂದ್ಯ ಬರಲ್ಲ! ಹಾಗಿದ್ರೆ ಲೈವ್ ಸ್ಟ್ರೀಮಿಂಗ್ ನೋಡೋದು ಎಲ್ಲಿ?
ಈ ಅತ್ಯದ್ಭುತ ಪ್ರಯಾಣಕ್ಕೆ ತಯಾರಿ ನಡೆಸುತ್ತಿರುವಾಗ ಸಮಯಕ್ಕೆ ಸರಿಯಾಗಿ ತನ್ನ ಕಾರನ್ನು ಸಿದ್ಧಪಡಿಸಿ ನೀಡಿದ್ದಕ್ಕೆ ಮಹೀಂದ್ರಾ ಕಂಪನಿಯ ಪ್ರಯತ್ನವನ್ನು ನಾಜಿ ಶ್ಲಾಘಿಸಿದ್ದಾರೆ. ಈ ಕಾರಿಗೆ ಮಲಯಾಳಂನಲ್ಲಿ "ಊಲು" ಎಂದು ಸುಂದರವಾದ ಅಡ್ಡಹೆಸರನ್ನು ಸಹ ಇಟ್ಟಿದ್ದಾರೆ. ಕನ್ನಡದಲ್ಲಿ ಊಲು ಎಂದರೆ ಅವಳು ಎಂದರ್ಥ ಬರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ