ಒಂದು ತಿಂಗಳ ಕಾಲ ಫುಟ್ಬಾಲ್ ಪ್ರೇಮಿಗಳನ್ನು ರಂಜಿಸಿದ ಫಿಫಾ ವಿಶ್ವಕಪ್ 2022ಗೆ ಅದ್ಧೂರಿ ತೆರೆಬಿದ್ದಿದೆ. ಫೈನಲ್ ಪಂದ್ಯದಲ್ಲಿ ಮೆಸ್ಸಿ ನಾಯಕತ್ವದ ಅರ್ಜೆಂಟಿನಾ ಮತ್ತು ಎಂಬಾಪೆ ನಾಯಕತ್ವದ ಫ್ರಾನ್ಸ್ ತಂಡಗಳು ಸೆಣಸಾಡಿದವು. ಅಂತಿಮ ಕ್ಷಣದವರೆಗಿನ ರೋಚಕ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಮೆಸ್ಸಿ ನಾಯಕತ್ವದ ಅರ್ಜೆಂಟಿನಾ ಗೆದ್ದು ಫಿಫಾ ವಿಶ್ವಕಪ್ 2022ರ ಚಾಂಪಿಯನ್ ಆಗಿ ಹೊರಹೊಮ್ಮಿದೆ. 3-3 ಗೋಲ್ಗಳ ಮೂಲಕ ಪಂದ್ಯ ಟೈ ಆದಾಗ ಪೆನಾಲ್ಟಿ ಶೂಟ್ಔಟ್ನಲ್ಲಿ 4-2 ಅಂತರದಿಂದ ಅರ್ಜೆಂಟೀನಾ ಗೆಲುವಿನ ನಗೆ ಬೀರಿತು. ಈ ಮೂಲಕ ಅರ್ಜೆಂಟಿನಾ ತಂಡ ಮೆಸ್ಸಿಗೆ ಗೆಲುವಿನ ಉಡುಗೊರೆ ನೀಡಿದೆ.
ಉಭಯ ತಂಡಗಳ ಭರ್ಜರಿ ಪೈಪೋಟಿ:
ಇನ್ನು, ಪಂದ್ಯದ ಆರಂಭದಿಂದಲೇ ಅರ್ಜೆಂಟಿನಾ ತಂಡವು ಫ್ರಾನ್ಸ್ ಮೇಲೆ ಹಿಡಿತ ಸಾಧಿಸಿತು. ಅರ್ಜೆಂಟೀನಾ ಮೊದಲಾರ್ಧದಲ್ಲಿ ಎರಡು ಗೋಲುಗಳಿಂದ ಮುನ್ನಡೆ ಹೊಂದಿತ್ತು. ಅರ್ಜೆಂಟೀನಾ ಪರ 23ನೇ ನಿಮಿಷದಲ್ಲಿ ನಾಯಕ ಲಿಯೋನೆಲ್ ಮೆಸ್ಸಿ ಮತ್ತು 36ನೇ ನಿಮಿಷದಲ್ಲಿ ಏಂಜೆಲ್ ಡಿ ಮರಿಯಾ ಗೋಲು ಗಳಿಸಿದರು. ಪೆನಾಲ್ಟಿ ಕಿಕ್ನಿಂದ ಮೆಸ್ಸಿ ಗೋಲು ಗಳಿಸಿದರೆ, ಡಿ ಮರಿಯಾ ಅದ್ಭುತ ಆಟದಿಂದ ಗೋಲನ್ನು ಗಳಿಸಿದರು. ಬಳಿಕ ಸೆಕೆಂಡ್ ಹಾಫ್ನ 79ನೇ ನಿಮಿಷದಲ್ಲಿ ಫ್ರಾನ್ಸ್ ನಾಯಕ ಎಂಬಾಪೆ ಪೆನಾಲ್ಟಿ ಕಿಕ್ ಮೂಲಕ ಮೊದಲ ಗೋಲ್ ಗಳಿಸಿದರೆ, ಬಳಿಕ ಕೇವಲ 2 ನಿಮಿಷದ ಅಂತರದಲ್ಲಿ 81ನೇ ನಿಮಿಷದಲ್ಲಿ 2ನೇ ಗೋಲ್ ಗಳಿಸಿದರು. ಈ ವೇಳೆ ಪಂದ್ಯದ ಗತಿಯೇ ಬದಲಾಗಿ 2-2 ಗೋಲ್ ಮೂಲಕ ಸಮಬಲ ಸಾಧಿಸಿತು.
ARGENTINA ARE WORLD CHAMPIONS!! 🇦🇷#FIFAWorldCup | #Qatar2022
— FIFA World Cup (@FIFAWorldCup) December 18, 2022
ಟ್ರೋಫಿ ಅನಾವರಣಗೊಳಿಸಿದ ದೀಪಿಕಾ:
ಇನ್ನು, ಫಿಫಾ ವಿಶ್ವಕಪ್ಗೆ ಇಂದು ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಎಂಟ್ರಿಕೊಟ್ಟಿದ್ದರು. ಫಿಫಾ ವಿಶ್ವಕಪ್ ಟ್ರೋಫಿಯನ್ನು ದೀಪಿಕಾ ಇಂದು ಅನಾವರಣಗೊಳಿಸಿದರು. ಇವರ ಜೊತೆಗೆ ಸ್ಪೇನ್ನ ಮಾಜಿ ನಾಯಕ ಐಕರ್ ಕ್ಯಾಸಿಯಸ್ ಸಹ ಮೈದಾನದಲ್ಲಿ ಟ್ರೋಫಿ ಅನಾವರಣದ ವೇಳೆ ಕಾಣಿಸಿಕೊಂಡರು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ನೋರಾ ಫತೇಹಿ ಸಹ ಭಾಗಿ ಆಗುವ ಮೂಲಕ ಫಿಫಾ ವಿಶ್ವಕಪ್ನಲ್ಲಿ ಬಾಳಿವುಡ್ ರಂಗು ತಂದರು. ಒಟ್ಟಾರೆಯಾಗಿ ವಿಶ್ವಕಪ್ನಲ್ಲಿ ಅರ್ಜೆಂಟೇನಾ ಗೆಲ್ಲುವ ಮೂಲಕ ಕಾಲ್ಚೆಂಡಿನ ಆಟಕ್ಕೆ ಅದ್ಧೂರಿ ತೆರೆ ಬಿದ್ದಿದೆ.
ಇದನ್ನೂ ಓದಿ: FIFA World Cup 2022: ಭಾರತದಲ್ಲಿ ಇತಿಹಾಸ ನಿರ್ಮಿಸಿದ ಫಿಫಾ ವಿಶ್ವಕಪ್, ಟಿವಿ ಪ್ರೇಕ್ಷಕರನ್ನು ಹಿಂದಿಕ್ಕಿದ ಡಿಜಿಟಲ್
ಫ್ರಾನ್ಸ್-ಅರ್ಜೆಂಟಿನಾ ತಂಡಗಳು:
ಅರ್ಜೆಂಟಿನಾ ತಂಡ: ಎಮಿಲಿಯಾನೊ ಮಾರ್ಟಿನೆಜ್ (ಗೋಲ್ಕೀಪರ್), ನಹುಯೆಲ್ ಮೊಲಿನಾ, ಕ್ರಿಶ್ಚಿಯನ್ ರೊಮೆರೊ, ನಿಕೋಲಸ್ ಒಟಮೆಂಡಿ, ನಿಕೋಲಸ್ ಟ್ಯಾಗ್ಲಿಯಾಫಿಕೊ, ರೊಡ್ರಿಗೊ ಡಿ ಪಾಲ್, ಎಂಜೊ ಫೆರ್ನಾಂಡಿಸ್, ಅಲೆಕ್ಸಿಸ್ ಮೆಕ್ಅಲಿಸ್ಟರ್, ಏಂಜೆಲ್ ಡಿ ಮಾರಿಯಾ, ಲಿಯೋನೆಲ್ ಮೆಸ್ಸಿ (ನಾಯಕ), ಜೂಲಿಯನ್ ಅಲ್ವಾರೆಜ್.
ಫ್ರಾನ್ಸ್ ತಂಡ: ಲೊರಿಸ್ - ಕಾಂಟೆ, ವರಾನೆ, ಉಪಮೆಕಾನೊ, ಹೆರ್ನಾಂಡೆಜ್ - ಗ್ರೀಜ್ಮನ್, ಚೌಮೇನಿ, ರಾಬಿಯೊಟ್ - ಒ. ಡೆಂಬೆಲೆ, ಎಂಬಪ್ಪೆ (ನಾಯಕ), ಗಿರೌಡ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ