• Home
  • »
  • News
  • »
  • sports
  • »
  • FIFA World Cup 2022: ಈ ಇಬ್ಬರು ದಿಗ್ಗಜ ಆಟಗಾರರಿಗೆ ಇದು ಕೊನೆಯ ವಿಶ್ವಕಪ್! ಸಂಕಷ್ಟದಲ್ಲಿ ಮೆಸ್ಸಿ ತಂಡ

FIFA World Cup 2022: ಈ ಇಬ್ಬರು ದಿಗ್ಗಜ ಆಟಗಾರರಿಗೆ ಇದು ಕೊನೆಯ ವಿಶ್ವಕಪ್! ಸಂಕಷ್ಟದಲ್ಲಿ ಮೆಸ್ಸಿ ತಂಡ

ಫಿಫಾ ವಿಶ್ವಕಪ್‌

ಫಿಫಾ ವಿಶ್ವಕಪ್‌

FIFA World Cup 2022: ಫುಟ್ಬಾಲ್ ಪ್ರಿಯರಿಗೆ ಒಳ್ಳೆಯ ಸುದ್ದಿ. ಈ ವರ್ಷದ ಫಿಫಾ ವಿಶ್ವಕಪ್‌ಗಾಗಿ ಅಧಿಕಾರಿಗಳು ಗುಂಪು 'ಡ್ರಾ' ಬಿಡುಗಡೆ ಮಾಡಿದ್ದಾರೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಸಾಕರ್ ವಿಶ್ವಕಪ್ ಈ ವರ್ಷ ಕತಾರ್‌ನಲ್ಲಿ ನಡೆಯಲಿದೆ.

  • Share this:

ಫುಟ್ಬಾಲ್ (Football) ಪ್ರಿಯರಿಗೆ ಒಳ್ಳೆಯ ಸುದ್ದಿಯೊಂದು ಕೇಳಿಬಂದಿದೆ. ಈ ವರ್ಷದ ಫಿಫಾ ವಿಶ್ವಕಪ್‌ಗಾಗಿ (FIFA World Cup 2022) ಅಧಿಕಾರಿಗಳು ಗುಂಪು 'ಡ್ರಾ' (Draw)ಬಿಡುಗಡೆ ಮಾಡಿದ್ದಾರೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಸಾಕರ್ ವಿಶ್ವಕಪ್ ಈ ವರ್ಷ ಕತಾರ್‌ನಲ್ಲಿ (Qatar) ನಡೆಯಲಿದೆ. ಈ ಮೆಗಾ ಈವೆಂಟ್ ನವೆಂಬರ್ 21 ರಿಂದ ಡಿಸೆಂಬರ್ 18ರ ವರೆಗೆ ನಡೆಯಲಿದೆ. ಈ ಮೆಗಾ ಈವೆಂಟ್‌ನಲ್ಲಿ ಪ್ರತಿ ಗುಂಪಿಗೆ ನಾಲ್ಕು ತಂಡಗಳಂತೆ ಒಟ್ಟು 32 ತಂಡಗಳು ತಮ್ಮ ಅದೃಷ್ಟ ಪರೀಕ್ಷೆ ನಡೆಸಲಿವೆ. ಆದಾಗ್ಯೂ, ಕೋವಿಡ್ 19 ಕಾರಣದಿಂದಾಗಿ, ಕೆಲವು ತಂಡಗಳು ಇನ್ನೂ ವಿಶ್ವಕಪ್‌ಗೆ ಅರ್ಹತೆ ಪಡೆದಿಲ್ಲ, ಆದ್ದರಿಂದ ಒಟ್ಟು 37 ತಂಡಗಳೊಂದಿಗೆ ಗುಂಪು ‘ಡ್ರಾ‘ ಹಂತವನ್ನು ಬಿಡುಗಡೆ ಮಾಡಲಾಗಿದೆ. ಆದರೆ ವಿಶ್ವಕಪ್‌ನಲ್ಲಿ ಕೇವಲ 32 ತಂಡಗಳು ಭಾಗವಹಿಸಲಿವೆ. ಆತಿಥೇಯ ರಾಷ್ಟ್ರ ಕತಾರ್ ಮತ್ತು ಈಕ್ವೆಡಾರ್ ನಡುವಿನ ಪಂದ್ಯದಲ್ಲಿ ಟೂರ್ನಿ ಆರಂಭವಾಗಲಿದೆ. ಡಿಸೆಂಬರ್ 18 ರಂದು ಫೈನಲ್ ನಡೆಯಲಿದೆ.


ಈ ದಿಗ್ಗಜ ಆಟಗಾರರಿಗೆ ಇದು ಕೊನೆ ವಿಶ್ವಕಪ್​:


ಪೋರ್ಚುಗಲ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಅರ್ಜೆಂಟೀನಾ ಸ್ಟಾರ್ ಲಿಯೋನೆಲ್ ಮೆಸ್ಸಿಗೆ ಇದು ಕೊನೆಯ ವಿಶ್ವಕಪ್ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇಬ್ಬರೂ ಈಗಾಗಲೇ ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲಿದ್ದಾರೆ. ಈ ಬಾರಿ ಅವರು ತಮ್ಮ ತಂಡವನ್ನು ವಿಶ್ವಕಪ್ ಚಾಂಪಿಯನ್ ಮಾಡಲು ನಿರ್ಧರಿಸಿದ್ದಾರೆ. ಈ ಬಾರಿಯೂ 2006ರ ಚಾಂಪಿಯನ್, 2020ರ ಯುರೋ ಕಪ್ ಚಾಂಪಿಯನ್ ಇಟಲಿ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ.


ಇಟಲಿ ವಿಶ್ವಕಪ್‌ಗೆ ಅರ್ಹತೆ ಪಡೆಯದಿರುವುದು ಸತತ ಎರಡನೇ ಬಾರಿ. 2018ರಲ್ಲಿಯೂ ಇಟಲಿ ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. ಕ್ರಿಸ್ಟಿಯಾನೊ ರೊನಾಲ್ಡೊ ಅವರ ಪೋರ್ಚುಗಲ್ ಕೂಡ ನಾರ್ತ್ ಮೆಸಿಡೋನಿಯಾ ವಿರುದ್ಧ ಜಯಗಳಿಸುವ ಮೂಲಕ ವಿಶ್ವಕಪ್‌ಗೆ ಅರ್ಹತೆ ಗಳಿಸಿತ್ತು.


ಇದನ್ನೂ ಓದಿ: Matthew Wade: 11 ತಿಂಗಳಲ್ಲಿ ಕೇವಲ 1 ಬಾರಿ ಔಟ್, ಕ್ಯಾನ್ಸರ್ ಗೆದ್ದವ ಇದೀಗ T20 ಕ್ರಿಕೆಟ್​ನ ಗ್ರೇಟ್​ ಫಿನಿಶರ್!


ಸಂಕಷ್ಟದಲ್ಲಿ ಮೆಸ್ಸಿ ತಂಡ:


ಮೆಸ್ಸಿ ನೇತೃತ್ವದ ಅರ್ಜೆಂಟೀನಾಗೆ ಡ್ರಾ ಹಂತದಲ್ಲಿ ಕಠಿಣ  ಪ್ರತಿಸ್ಪರ್ಧಿ ಎದುರಾಗಿದೆ. C ಗುಂಪಿನಲ್ಲಿರುವ ಅರ್ಜೆಂಟೀನಾ ಪ್ರೀ ಕ್ವಾರ್ಟರ್ ತಲುಪಲು ಬೆವರು ಹರಿಸಬೇಕಿದೆ. ಏಕೆಂದರೆ ಆ ಗುಂಪಿನಲ್ಲಿ ಮೆಕ್ಸಿಕೊ ಮತ್ತು ಪೋಲೆಂಡ್ ಕಠಿಣ ಪ್ರತಿಸ್ಪರ್ಧಿಗಳಿದ್ದಾರೆ. ಪ್ರತಿ ಗುಂಪಿನಲ್ಲಿ 4 ತಂಡಗಳಿವೆ. ಪ್ರತಿ ತಂಡವು ಇತರ ಮೂರು ತಂಡಗಳ ವಿರುದ್ಧ ಒಂದು ಪಂದ್ಯವನ್ನು ಆಡುತ್ತದೆ. ಗುಂಪು ಹಂತದ ನಂತರ ಅಗ್ರ 2 ತಂಡಗಳು ಮಾತ್ರ ಪ್ರಿಕ್ವಾರ್ಟರ್‌ಗೆ ಅರ್ಹತೆ ಪಡೆಯುತ್ತವೆ. E ಗುಂಪಿನಲ್ಲಿ ಮಾಜಿ ಚಾಂಪಿಯನ್ ಸ್ಪೇನ್ (2010) ಮತ್ತು ಜರ್ಮನಿ (2014) ಸಹ ಸೇರಿವೆ. ಜಪಾನ್ ಕೂಡ ಇರುವುದರಿಂದ ಈ ಗುಂಪು ಆಸಕ್ತಿದಾಯಕವಾಗಿದ್ದು, ನಿರೀಕ್ಷೆ ಹೆಚ್ಚಿಸಿದೆ.


ಇದನ್ನೂ ಓದಿ: IND vs SA: ಇಂದು ಭಾರತ-ಆಫ್ರಿಕಾ ಮೊದಲ ಟಿ20 ಪಂದ್ಯ, ಹೇಗಿರಲಿದೆ ಉಭಯ ತಂಡಗಳ ಪ್ಲೇಯಿಂಗ್​ 11


ಯಾವ ತಂಡಗಳು ಯಾವ ಗುಂಪಿನಲ್ಲಿವೆ?:


ಗುಂಪು A: ಕತಾರ್, ನೆದರ್ಲ್ಯಾಂಡ್ಸ್, ಸೆನೆಗಲ್, ಈಕ್ವೆಡಾರ್
ಗುಂಪು B: ಇಂಗ್ಲೆಂಡ್, ಯುಎಸ್, ಇರಾನ್, ವೇಲ್ಸ್ ಅಥವಾ ಸ್ಕಾಟ್ಲೆಂಡ್ ಅಥವಾ ಉಕ್ರೇನ್
ಗುಂಪು C: ಅರ್ಜೆಂಟೀನಾ, ಮೆಕ್ಸಿಕೋ, ಪೋಲೆಂಡ್, ಸೌದಿ ಅರೇಬಿಯಾ
ಗುಂಪು D: ಫ್ರಾನ್ಸ್, ಡೆನ್ಮಾರ್ಕ್, ಟುನೀಶಿಯಾ, ಪೆರು ಅಥವಾ ಆಸ್ಟ್ರೇಲಿಯಾ ಅಥವಾ ಯುಎಇ
ಗುಂಪು E: ಸ್ಪೇನ್, ಜರ್ಮನಿ, ಜಪಾನ್, ಕೋಸ್ಟರಿಕಾ ಅಥವಾ ನ್ಯೂಜಿಲೆಂಡ್
ಗುಂಪು F: ಬೆಲ್ಜಿಯಂ, ಕ್ರೊಯೇಷಿಯಾ, ಮೊರಾಕೊ, ಕೆನಡಾ
ಗುಂಪು G: ಬ್ರೆಜಿಲ್, ಸ್ವಿಟ್ಜರ್ಲೆಂಡ್, ಸೆರ್ಬಿಯಾ, ಕ್ಯಾಮರೂನ್
ಗುಂಪು H: ಪೋರ್ಚುಗಲ್, ಉರುಗ್ವೆ, ದಕ್ಷಿಣ ಕೊರಿಯಾ, ಘಾನಾ

Published by:shrikrishna bhat
First published: