• Home
  • »
  • News
  • »
  • sports
  • »
  • FIFA World Cup 2022: ಇಂಗ್ಲೆಂಡ್‌-ಇರಾನ್‌ ಫುಟ್ಬಾಲ್​ ಕದನ; ಒಂಟೆ ನುಡಿದ ಭವಿಷ್ಯ ವೈರಲ್

FIFA World Cup 2022: ಇಂಗ್ಲೆಂಡ್‌-ಇರಾನ್‌ ಫುಟ್ಬಾಲ್​ ಕದನ; ಒಂಟೆ ನುಡಿದ ಭವಿಷ್ಯ ವೈರಲ್

ಭವಿಷ್ಯ ನುಡಿದ ಒಂಟೆ

ಭವಿಷ್ಯ ನುಡಿದ ಒಂಟೆ

ಭವಿಷ್ಯದ ಹೇಳುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿರುವ ಒಂಟೆಗೆ ಇತ್ತೀಚೆಗೆ ಇಂಗ್ಲೆಂಡ್ ಮತ್ತು ಇರಾನ್ ನಡುವಿನ ಮೊದಲ ಗ್ರೂಪ್ ಬಿ ಪಂದ್ಯದ ಫಲಿತಾಂಶವನ್ನು ಊಹಿಸುವ ಟಾಸ್ಕ್‌ ಒಂದನ್ನು ನೀಡಲಾಗಿತ್ತು.

  • Share this:

ಫಿಫಾ ವಿಶ್ವಕಪ್ ಜ್ವರ ವಿಶ್ವದಾದ್ಯಂತ ಜೋರಾಗಿದೆ. ಫುಟ್‌ಬಾಲ್‌ ಅಭಿಮಾನಿಗಳಿಗೆ ಹಬ್ಬವಾಗಿರುವ ಫಿಫಾ ವಿಶ್ವಕಪ್‌ಗೆ (FIFA World Cup Match) ಭಾನುವಾರ ಅಧಿಕೃತ ಚಾಲನೆ ಸಿಕ್ಕಿದೆ. ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ದೋಹಾ ಸಮೀಪದ ಅಲ್​ಬೇತ್ ಕ್ರೀಡಾಂಗಣದಲ್ಲಿ ನಡೆಯಿತು. ನಂತರ ಆತಿಥೇಯ ಕತಾರ್ ಮತ್ತು ಈಕ್ವೆಡಾರ್ ನಡುವೆ ವಿಶ್ವಕಪ್‌ನ ಮೊದಲ ಪಂದ್ಯ ಕೂಡ ನಡೆದಿದ್ದು, ಉದ್ಘಾಟನಾ ಪಂದ್ಯದಲ್ಲಿ ಅತಿಥೇಯ ಕತಾರ್ ಸೋಲು ಕಂಡಿದೆ. ಅಲ್​ಬೇತ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಈಕ್ವೆಡಾರ್ ವಿರುದ್ಧ ಕತಾರ್ 0-2 ಗೋಲುಗಳ ಅಂತರದಿಂದ ಸೋಲನ್ನು ಅನುಭವಿಸಿದರೆ, ಈಕ್ವೆಡಾರ್ ಗೆಲುವಿನ ನಗೆ ಬೀರಿದೆ. ಇಂದಿನ ಮ್ಯಾಚ್ (FIFA World Cup 2022 England Iran) ಕುರಿತು ಸಖತ್ ಇಂಟರೆಸ್ಟಿಂಗ್ ಸುದ್ದಿಯೊಂದು ಇಲ್ಲಿದೆ.


ಇಂದು ಮೂರು ಪಂದ್ಯ
ಫಿಫಾ ವಿಶ್ವ ಕಪ್ ನ ಎರಡನೆಯ ದಿನವಾದ ಇಂದು ಮೂರು ಪಂದ್ಯಗಳು ನಡೆಯಲಿದ್ದು, ಸಂಜೆ 6.30ಕ್ಕೆ ಇಂಗ್ಲೆಂಡ್ – ಇರಾನ್ ಮುಖಾಮುಖಿಯಾಗಲಿದೆ. ರಾತ್ರಿ 9.30ಕ್ಕೆ ಸೆನೆಗಲ್ ಮತ್ತು ನೆದರ್ಲೆಂಡ್ಸ್‌ ತಂಡಗಳು ಸೆಣಸಲಿದ್ದು, 12.30ಕ್ಕೆ ಅಮೆರಿಕ – ವೇಲ್ಸ್ ತಂಡಗಳು ಹೋರಾಟ ನಡೆಸಲಿವೆ.


ಜೋರಾಗಿದೆ ಸೋಲು-ಗೆಲುವಿನ ಲೆಕ್ಕಾಚಾರ.. ಒಂಟೆಯ ಭವಿಷ್ಯವೇನು?
ಇನ್ನೂ ಇಂಗ್ಲೆಂಡ್ – ಇರಾನ್ ಪಂದ್ಯದ ನಡುವೆ ಹಲವಾರು ಲೆಕ್ಕಾಚಾರಗಳು ಸಹ ಶುರುವಾಗಿವೆ. ಭವಿಷ್ಯ, ಪ್ರೆಡಿಕ್ಷನ್‌ ಎಲ್ಲವೂ ಜೋರಾಗಿ ನಡೆಯುತ್ತಿವೆ. ಇನ್ನೂ ಭವಿಷ್ಯ ನುಡಿಯುವ ಬಗ್ಗೆ ಜನಪ್ರಿಯವಾಗಿರುವ ಮಿಸ್ಟಿಕ್‌ ಮಿಲ್ಲಿ ಎಂಬ ಅತೀಂದ್ರಿಯ ಶಕ್ತಿ ಹೊಂದಿದೆ ಎಂದು ನಂಬಲಾಗಿರುವ ಒಂಟೆಯೊಂದು ಇರಾನ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿನ ಆರಂಭ ಮಾಡಲಿದೆ ಎಂದು ಭವಿಷ್ಯವಾಣಿ ತೋರಿಸಿದೆ.

ಇಂಗ್ಲೆಂಡ್ ಗೆಲುವಿನ ಬಗ್ಗೆ ಸುಳಿವು ನೀಡಿದ ಅತೀಂದ್ರಿಯ ಒಂಟೆ
ಭವಿಷ್ಯದ ಹೇಳುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿರುವ ಒಂಟೆಗೆ ಇತ್ತೀಚೆಗೆ ಇಂಗ್ಲೆಂಡ್ ಮತ್ತು ಇರಾನ್ ನಡುವಿನ ಮೊದಲ ಗ್ರೂಪ್ ಬಿ ಪಂದ್ಯದ ಫಲಿತಾಂಶವನ್ನು ಊಹಿಸುವ ಟಾಸ್ಕ್‌ ಒಂದನ್ನು ನೀಡಲಾಗಿತ್ತು. ಮಿಲ್ಲಿ ಮುಂದೆ ಎರಡು ದೇಶದ ಧ್ವಜಗಳನ್ನು ಇರಿಸಲಾಗಿತ್ತು. ಒಂಟೆ ತನ್ನ ಮನಸ್ಸಿನಲ್ಲಿ ಯಾವುದೇ ಸಂದೇಹವಿಲ್ಲದೆ ಇಂಗ್ಲೆಂಡ್ ಧ್ವಜದ ಕಡೆಗೆ ಸ್ಪಷ್ಟವಾಗಿ ಸನ್ನೆ ಮಾಡಿ, ಗರೆಥ್ ಸೌತ್‌ಗೇಟ್‌ನ ಪುರುಷರ ವಿಜಯವನ್ನು ಖಾತರಿಪಡಿಸಿದೆ.


"ಒಂಟೆಯ ಭವಿಷ್ಯ ಎಂದಿಗೂ ಸುಳ್ಳಾಗಿಲ್ಲ"
ಬ್ರಿಟಿಷ್ ಪತ್ರಿಕೆ, ದಿ ಸನ್, ಒಂಟೆಯ ಭವಿಷ್ಯ ಎಂದಿಗೂ ತಪ್ಪಾಗುವುದಿಲ್ಲ ಎಂದು ಹೇಳುವ ಮಾಲೀಕರೊಂದಿಗೆ ಮಾತನಾಡಿದೆ. ಇಂಗ್ಲೆಂಡ್‌ಗೆ ಇದು ಶುಭಾರಂಭವಾಗಲಿದೆ. ಒಂಟೆಯ ಭವಿಷ್ಯ ಎಂದಿಗೂ ಸುಳ್ಳಾಗಿಲ್ಲ ಎಂದು ಎಸ್ಟೇಟ್ ಏಜೆಂಟ್ ಮಾಲೀಕರು ಜೆನ್ನಿ ಮತ್ತು ವೆರ್ನಾನ್ ಮೂರ್ ತಿಳಿಸಿದ್ದಾರೆ.


ಜೆನ್ನಿ ಅವರು ಮಾತನಾಡಿ "ಕ್ಯಾಮಿಲ್ಲಾ ತುಂಬಾ ಬಲವಾದ ಇಚ್ಛಾಶಕ್ತಿಯುಳ್ಳವಳು ಮತ್ತು ಆಹಾರದ ಸಮಯ ಯಾವಾಗ ಎಂದು ಯಾವಾಗಲೂ ತಿಳಿದಿರುತ್ತದೆ. ಆದ್ದರಿಂದ ವಿಶ್ವಕಪ್ ಫಲಿತಾಂಶಗಳನ್ನು ಊಹಿಸುವ ಅವಳ ಸಾಮರ್ಥ್ಯದಲ್ಲಿ ನಮಗೆ ಸಂಪೂರ್ಣ ನಂಬಿಕೆಯಿದೆ." ಎಂದಿದ್ದಾರೆ,


ಒಂಟೆಗಳಿಗೆ ಕತಾರ್‌ನಲ್ಲಿ ವಿಶೇಷ ಸ್ಥಾನಮಾನ
ಒಂಟೆಗಳು ವಿಶ್ವ ಕಪ್ ಆತಿಥೇಯ ನಗರವಾದ ಕತಾರ್‌ನಲ್ಲಿ ವಿಶೇಷ ಸ್ಥಾನಮಾನವನ್ನು ಹೊಂದಿವೆ, ಅಲ್ಲಿ ಅವುಗಳನ್ನು ಒಂಟೆ ಓಟದ ಅತ್ಯಂತ ಜನಪ್ರಿಯ ಕ್ರೀಡೆಗಾಗಿ ಬೆಳೆಸಲಾಗುತ್ತದೆ.


ಇದನ್ನೂ ಓದಿ: IND vs NZ: ಎಷ್ಟೇ ಅದ್ಭುತವಾಗಿ ಆಡಿದರೂ ತಂಡದಲ್ಲಿಲ್ಲ ಸ್ಥಾನ! ಯಾಕೆ ಈ ತಾರತಮ್ಯ ಅಂತಿದ್ದಾರೆ ಫ್ಯಾನ್ಸ್


ನಿಜವಾಗಿತ್ತು 2010 ರ ಭವಿಷ್ಯ
2010 ರ ದಕ್ಷಿಣ ಆಫ್ರಿಕಾ ವಿಶ್ವಕಪ್‌ನಲ್ಲಿ, ಪಾಲ್ ದಿ ಆಕ್ಟೋಪಸ್ ಫೈನಲ್‌ನಲ್ಲಿ ಸ್ಪೇನ್ ಹಾಲೆಂಡ್ ಅನ್ನು ಸೋಲಿಸುತ್ತದೆ ಎಂದು ಯಶಸ್ವಿಯಾಗಿ ಭವಿಷ್ಯ ನುಡಿದ ನಂತರ ಈ ಒಂಟೆ ಭವಿಷ್ಯದ ಸುದ್ದಿ ವೈರಲ್‌ ಆಗಿದೆ.


ಇಂಗ್ಲೆಂಡ್ ಮತ್ತು ಇರಾನ್ ಪಂದ್ಯ
ದೋಹಾದ ಅಲ್ ಖಲೀಫಾ ಇಂಟರ್ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಹ್ಯಾರಿ ಕೇನ್ ಬಳಗ, ಏಷ್ಯಾದ ಫುಟ್ಬಾಲ್ ಶಕ್ತಿಗಳಲ್ಲಿ ಒಂದಾಗಿರುವ ಇರಾನ್ ತಂಡವನ್ನು ಎದುರಿಸಲಿದೆ. ಇದುವರೆಗೆ 16 ಸಲ ವಿಶ್ವಕಪ್‌ನಲ್ಲಿ ಆಡಿರುವ ಇಂಗ್ಲೆಂಡ್, ಒಮ್ಮೆ ಮಾತ್ರ ಕಪ್‌ ಗೆದ್ದಿದೆ. ಇರಾನ್ 1998, 2006 ಮತ್ತು 2018 ರಲ್ಲಿ ಆರಂಭಿಕ ಪಂದ್ಯವನ್ನು ಗೆದ್ದಿತು, ಆದರೆ 2002, 2010 ಮತ್ತು 2014 ರಲ್ಲಿ ಸೋತಿತ್ತು.


ಇದನ್ನೂ ಓದಿ: FIFA World Cup 2022: ಕ್ರೀಡಾಂಗಣದಲ್ಲಿ ಇಲ್ಲ ಬಿಯರ್ ಮಾರಾಟ! ಕತಾರ್ ಸರ್ಕಾರದ ಈ ನಿರ್ಧಾರ ಯಾಕೆ ಗೊತ್ತಾ?


ಇಂಗ್ಲೆಂಡ್ ಮತ್ತು ಇರಾನ್ ಫುಟ್ಬಾಲ್ ಪಂದ್ಯವು ಇಂದು (ನವೆಂಬರ್ 21) ರಂದು ಸಂಜೆ 6:30 ಕ್ಕೆ (ಭಾರತೀಯ ಕಾಲಮಾನ) ಖಲೀಫಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.

Published by:ಗುರುಗಣೇಶ ಡಬ್ಗುಳಿ
First published: