ಈಗಂತೂ ಬಹುತೇಕರ ಬಾಯಲ್ಲಿ ಈ ಫಿಫಾ ಫುಟ್ಬಾಲ್ ವಿಶ್ವಕಪ್ ನಲ್ಲಿ (FIFA World Cup 2022) ನಡೆಯುತ್ತಿರುವ ಪಂದ್ಯಗಳದ್ದೆ ಮಾತು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇತ್ತೀಚೆಗೆ ಜಪಾನ್ (Japan) ಫುಟ್ಬಾಲ್ ತಂಡವು ವಿಶ್ವಕಪ್ ನಲ್ಲಿ ನಾಲ್ಕನೇ ಬಾರಿಗೆ 16ನೇ ಸುತ್ತನ್ನು ತಲುಪಿತ್ತು. ಆದರೆ ಈಗ ಆ 16ನೇ ಸುತ್ತಿನಲ್ಲಿ 1-1 ಗೋಲುಗಳಾಗಿದ್ದರಿಂದ ಪೆನಾಲ್ಟಿ ಕಿಕ್ ಅನ್ನು ನೀಡಲಾಯಿತು. ಇದರಲ್ಲಿ ಕ್ರೊವೇಷಿಯಾ (Croatia National Football Team) ವಿರುದ್ಧ ಜಪಾನ್ ತಂಡವು 3-1 ಗೋಲುಗಳಿಂದ ಸೋಲನುಭವಿಸಿತು. ಆದರೆ ಇದರ ಬಳಿಕ ಈ ಜಪಾನ್ ಸೋಲಿನ ವಿಚಾರವಾಗಿ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಸಾಮಾಜಿಕ ತಾಲತಾಣದಲ್ಲಿ ಫುಟ್ಬಾಲ್ ವಿಶ್ವಕಪ್ ನ ಒಂದು ಫೋಟೋವನ್ನು ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ.
ಮಹೀಂದ್ರಾ ಅವರು ಹಂಚಿಕೊಂಡ ಫೋಟೋ:
ತಮ್ಮ ಇತ್ತೀಚಿನ ಪೋಸ್ಟ್ ನಲ್ಲಿ ಮಹೀಂದ್ರಾ ಗ್ರೂಪ್ ಅಧ್ಯಕ್ಷರು ಜಪಾನ್ ಫುಟ್ಬಾಲ್ ತಂಡದ ಮ್ಯಾನೇಜರ್ ಹಜಿಮೆ ಮೊರಿಯಾಸು ಅವರ ಹೃದಯಸ್ಪರ್ಶಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಫಿಫಾ ವಿಶ್ವಕಪ್ ನಲ್ಲಿ ಸೋಮವಾರ ನಡೆದ ಪೆನಾಲ್ಟಿ ಶೂಟೌಟ್ ನಲ್ಲಿ ಕ್ರೊವೇಷಿಯಾ ವಿರುದ್ಧ 3-1 ಗೋಲುಗಳಿಂದ ಸೋತ ನಂತರವೂ ಸಹ ಕೃತಜ್ಞತೆ ಭಾವನೆಯಿಂದ ಕ್ರೀಡಾಂಗಣದಲ್ಲಿರುವ ಅಭಿಮಾನಿಗಳ ಎದುರು ತಲೆಬಾಗಿದ್ದಾರೆ.
Just two words to describe this: Dignity. Grace.
(Team Japan manager Hajime Moriyasu bowing to fans in gratitude) pic.twitter.com/wH2rNMhZ2A
— anand mahindra (@anandmahindra) December 6, 2022
ಫೋಟೋ ಸಖತ್ ವೈರಲ್:
ಮಹೀಂದ್ರಾ ಅವರು ಈ ಫೋಟೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾಗಿನಿಂದ ಇದು 20,000 ಕ್ಕೂ ಹೆಚ್ಚು ಲೈಕ್ ಗಳನ್ನು ಮತ್ತು ಹಲವಾರು ಕಾಮೆಂಟ್ಗಳು ಬಂದಿದೆ. ತುಂಬಾ ವಿನಮ್ರ ಮನೋಭಾವ ಎಂದು ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಬರೆದಿದ್ದಾರೆ. "ಈ ವ್ಯಕ್ತಿ, ಅವನ ತಂಡ, ಅವನ ದೇಶ ಮತ್ತು ಅವರ ಸಮಗ್ರತೆ ಮತ್ತು ನಮ್ರತೆಯ ಸಂಸ್ಕೃತಿಯ ಬಗ್ಗೆ ಗೌರವ ಹೊಂದಿದ್ದಾರೆ ಎಂದು ಇನ್ನೊಬ್ಬರು ಪ್ರತಿಕ್ರಯಿಸಿದ್ದಾರೆ.
ಇದನ್ನೂ ಓದಿ: Team India: ಟೀಂ ಇಂಡಿಯಾಗೆ ಗುಡ್ ಬೈ ಹೇಳ್ತಾರಾ ಗಬ್ಬರ್ ಸಿಂಗ್? ODI ವಿಶ್ವಕಪ್ ಆಡಲ್ವಾ ಧವನ್?
ಮೂರನೆಯವರು ಪ್ರತಿಕ್ರಿಯಿಸಿ ಸಣ್ಣ ತಪ್ಪುಗಳಿಂದಾಗಿ ಜಪಾನ್ ಆ ಪಂದ್ಯವನ್ನು ಸೋತಿತು. ಆದರೆ, ಅವರು ಫುಟ್ಬಾಲ್ ನಕ್ಷೆಯಲ್ಲಿ ಏಷ್ಯಾದ ಪಟ್ಟಿಯನ್ನು ಮೇಲಕ್ಕೆ ಎತ್ತಿದ್ದಾರೆ ಎಂದು ಹೇಳಿದರು. ಜಪಾನ್ ತಮ್ಮ ಮೌಲ್ಯಗಳಿಂದ ಜನರನ್ನು ಪ್ರಭಾವಿಸುತ್ತಲೇ ಇರುತ್ತದೆ ಎಂದು ನಾಲ್ಕನೆಯ ಬಳಕೆದಾರರು ಹೇಳಿದರು.
ಪೆನಾಲ್ಟಿ ಕಿಕ್ ನಲ್ಲಿ ಸೋತ ಜಪಾನ್:
ಟೈಬ್ರೇಕರ್ ಆಗಿ ಎರಡೂ ತಂಡಗಳು ಪಂದ್ಯಲ್ಲಿ 1-1 ಗೋಲುಗಳ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರೆ, ಆಯೋಜಕರು ನಂತರ ಪೆನಾಲ್ಟಿ ಕಿಕ್ ಅನ್ನು ನೀಡಿದರು. ಕ್ರೊವೇಷಿಯನ್ನರು 3 ಗೋಲುಗಳನ್ನು ಗಳಿಸುವಲ್ಲಿ ಯಶಸ್ವಿಯಾದರೆ, ಜಪಾನ್ ಕೇವಲ ಒಂದು ಗೋಲು ಗಳಿಸುವಲ್ಲಿ ಯಶಸ್ವಿಯಾಯಿತು.
ಈ ಸೋಲಿನಿಂದಾಗಿ ಜಪಾನ್ ತಂಡದ ತನ್ನ ಎಂಟರ ಘಟ್ಟವನ್ನು ತಲುಪುವ ಪ್ರಯತ್ನವು ನುಚ್ಚುನೂರಾಯಿತು. ಮತ್ತೊಂದೆಡೆ, ಕ್ರೊವೇಷಿಯಾ ಈಗ ಕೊನೆಯ ಎಂಟರ ಘಟ್ಟದಲ್ಲಿ ಬ್ರೆಜಿಲ್ ತಂಡವನ್ನು ಎದುರಿಸಲಿದೆ. ಈಗ ಸೋತು ವಿಶ್ವಕಪ್ ನಿಂದ ಹೊರ ಬಿದ್ದಿರುವ ಜಪಾನ್ ತಂಡದ ಮುಂದಿರುವ ಟೂರ್ನಿಗಳು ಯಾವುವು ಅಂತ ಅನೇಕರಿಗೆ ತಿಳಿದುಕೊಳ್ಳಬೇಕೆಂಬ ಕುತೂಹಲ ಇದ್ದೇ ಇರುತ್ತದೆ. ಜಪಾನ್ ನಾಲ್ಕು ಬಾರಿ ಗೆದ್ದಿರುವ ಏಷ್ಯನ್ ಕಪ್ ಪಂದ್ಯಾವಳಿಗೆ ಈಗಾಗಲೇ ಅರ್ಹತೆ ಪಡೆದಿದೆ. ಕೋವಿಡ್ -19 ಅನ್ನು ಉಲ್ಲೇಖಿಸಿ ಚೀನಾ ಹಿಂದೆ ಸರಿದ ನಂತರ 2024 ರ ಜನವರಿಯಲ್ಲಿ ನಿಗದಿಯಾಗಿದ್ದ ಈ ಟೂರ್ನಿಯು ಕತಾರ್ ಗೆ ಸ್ಥಳಾಂತರಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ