21ನೇ ಫಿಫಾ ವಿಶ್ವಕಪ್ ಟೂರ್ನಿಗೆ ಅದ್ಧೂರಿ ಚಾಲನೆ

  • News18
  • 5-MIN READ
  • Last Updated :
  • Share this:

    ನ್ಯೂಸ್ 18 ಕನ್ನಡ

     ಮಾಸ್ಕೋ( ಜೂ. 14): 21ನೇ ಫಿಫಾ ವಿಶ್ವಕಪ್ ಟೂರ್ನಿಗೆ ಅದ್ಧೂರಿ ಚಾಲನೆ ದೊರಕಿದೆ. 800 ಸಾವಿರ ಜನರ ಸಮ್ಮುಖದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಫಿಫಾ ವಿಶ್ಕಪ್​​ಗೆ ಅಧಿಕೃತ ಚಾಲನೆ ನೀಡಿದರು.

    ಮೊದಲಿಗೆ ಚಿಕ್ಕ ಬಾಲಕನೊಬ್ಬ ರಷ್ಯಾದ್ಯಂತ ಚೆಂಡನ್ನ ಆಡುವಂತೆ ವಿಡಿಯೋ ಪ್ಲೇ ಆಯಿತು. ನಂತರ ರೊನಾಲ್ಡೊ ಬ್ರಿಟನ್​​​ ಪಾಪ್​ ಸಿಂಗರ್​​ ರಾಬಿ ವಿಲಿಯಮ್ಸನ್​ ಲೆಟ್ ಮಿ ಎಂಟರ್​​ಟೈನ್ ಯು ಎಂಬ ಆಲ್ಬಂ ಸಾಂಗ್​ ಹಾಡುವ ಮೂಲಕ ಮೈದಾನಕ್ಕೆ ಎಂಟ್ರಿ ಕೊಟ್ಟರು. .ಅಲ್ಲದೆ, ನೂರಾರು ಕಲಾವಿದರೊಂದಿಗೆ ಕ್ರೀಡಾಪಟುಗಳು ಸಖತ್ ಸ್ಟೇಪ್ಸ್ ಹಾಕಿದ್ರು. ಕಲರ್‌ಫುಲ್ ವರ್ಣರಂಜಿತ ಕಾರ್ಯಕ್ರಮ ಕಂಡು ನೆರದಿದ್ದ ಜನ ಸ್ಟೇಡಿಯಂನಲ್ಲಿ ಕುಣಿದು ಕುಪ್ಪಳಿಸಿದರು..

    2010ರ ಫಿಫಾ ವಿಶ್ವಕಪ್ ವಿಜೇತವಾದ ಸ್ಪೇನ್ ತಂಡದ ನಾಯಕ ಐಕರ್ ಕ್ಯಾಸಿಲಾಸ್ ಅವರು ಟ್ರೋಫಿಯನ್ನು ತಂದು ಪ್ರೇಕ್ಷಕರಿಗೆ ಪ್ರದರ್ಶಿಸಿದರು. ಬಳಿಕ ಮಾಸ್ಕೋದ ಲಜ್ನಿಕಿ ಕ್ರೀಡಾಂಗಣದಲ್ಲಿ ನಡೆದ ವರ್ಣರಂಚಿತ ಕಾರ್ಯಕ್ರಮದಲ್ಲಿ ಬ್ರಿಟೀಷ್ ಪಾಪ್ ಗಾಯಕ ರಾಬಿ ವಿಲಿಯಮ್ಸ್ ಅವರು ರಸಮಂಜರಿ ಕಾರ್ಯಕ್ರಮ ನೀಡಿ ನೆರೆದಿದ್ದ ಅಭಿಮಾನಿಗಳನ್ನು ರಂಚಿಸಿದರು. ಆದರೆ ರಾಬಿ ಅವರ ಪ್ರಸಿದ್ಧ ಗೀತೆ ‘ಪಾರ್ಟಿ ಲೈಕ್ ಅ ರಷ್ಯನ್’ ಹಾಡನ್ನು ಕಾರಾಣಾಂತರದಿಂದ ಹೇಳಲು ಸಾಧ್ಯವಾಗಲಿಲ್ಲ. ಬದಲಿಗೆ ಇತರ ಹಿಟ್ ಗೀತೆಯನ್ನು ಹಾಡಿದರು. ಅಲ್ಲದೆ ಜಿಮ್​​ನ್ಯಾಸ್ಟಿಕ್, ಟ್ರ್ಯಾಂಪೊಲಿನಿಸ್ಟ್​​ ಸೇರಿದಂತೆ ಅನೇಕ ಕಾರ್ಯಕ್ರಮಗಳು ಕಣ್ಮನ ಸೆಳೆಯಿತು.

     



     


    ಜೊತೆಗೆ ಫುಟ್ಬಾಲ್​​ನ ಸ್ಟಾರ್ ಆಟಗಾರ ಪೋರ್ಚುಗಲ್​​ ತಂಡದ ರೋನಾಲ್ಡೋ ಕೂಡ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

    First published: