• Home
  • »
  • News
  • »
  • sports
  • »
  • Sunil Chhetri: ಇದು ರೊನಾಲ್ಡೊ, ಮೆಸ್ಸಿ ಕಥೆಯಲ್ಲ, ನಮ್ಮ ನಾಯಕ ಸುನೀಲ್​ ಛೆಟ್ರಿ ಸ್ಟೋರಿ! ಫಿಫಾದಿಂದಲೇ ಗೌರವ

Sunil Chhetri: ಇದು ರೊನಾಲ್ಡೊ, ಮೆಸ್ಸಿ ಕಥೆಯಲ್ಲ, ನಮ್ಮ ನಾಯಕ ಸುನೀಲ್​ ಛೆಟ್ರಿ ಸ್ಟೋರಿ! ಫಿಫಾದಿಂದಲೇ ಗೌರವ

 ಸುನೀಲ್​ ಛೆಟ್ರಿ

ಸುನೀಲ್​ ಛೆಟ್ರಿ

Sunil Chhetri: ಭಾರತದ ಫುಟ್ಬಾಲ್ ದಿಗ್ಗಜ ಸುನಿಲ್ ಛೆಟ್ರಿ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲಾ ಹೇಳಿ, ಭಾರತೀಯರು ಫುಟ್ಬಾಲ್​ ಲೋಕದಲ್ಲಿ ಎಂದಿಗೂ ಮರೆಯದ ಹೆಸರು ಅಂದರೆ ಅದು ಸುನೀಲ್ ಛೆಟ್ರಿ ಎಂದು ಹೇಳಿದರೂ ತಪ್ಪಾಗಲಾರದು. ಇಂತಹ ದಿಗ್ಗಜ ಆಟಗಾರನಿಗೆ ಇದೀಗ ಫಿಫಾ ವಿಭಿನ್ನವಾಗಿ ಗೌರವ ಸಲ್ಲಿಸಿದೆ.

ಮುಂದೆ ಓದಿ ...
  • Share this:

ಕೆಲ ತಿಂಗಳುಗಳಲ್ಲ ಫುಟ್ಬಾಲ್ (Football)​ ಪ್ರಿಯರಿಗೆ ಹಬ್ಬವೊಂದು ಆರಂಭವಾಗಲಿದೆ. ಹೌದು, ಫಿಫಾ ವಿಶ್ವಕಪ್​ 2022 (FIFA World Cup 2022) ಇದೇ ನವೆಂಬರ್​ ತಿಂಗಳಿನಿಂದ ಆರಂಭವಾಗಲಿದೆ. ಇದಕ್ಕಾಗಿ ಕತಾರ್ (Qatar)​ ಅದ್ಧೂರಿಯಾಗಿ ಸಿದ್ಧಗೊಳ್ಳುತ್ತಿದೆ. ಇನ್ನು ತಿಂಗಳುಗಳು ಇರುವ ಮುಂಚಿತವಾಗಿಯೇ ಪ್ರಪಂಚದಾದ್ಯಂತ ಎಲ್ಲಡೆ ನಿಧಾನವಾಗಿ ಫುಟ್ಬಾಲ್​ ಜ್ವರ ಆರಂಭವಾಗಿದೆ. ಆದರೂ ಭಾರತದಲ್ಲಿ ಕ್ರಿಕೆಟ್​ಗೆ ಸಿಗುವಷ್ಟು ಮನ್ನಣೆಯಾಗಲಿ, ಕ್ರೇಜ್​ ಆಗಲಿ ಫುಟ್ಬಾಲ್​ಗೆ ಇಲ್ಲ. ಆದರೂ ಭಾರತದ ಫುಟ್ಬಾಲ್ ದಿಗ್ಗಜ ಸುನಿಲ್ ಛೆಟ್ರಿ (Sunil Chhetri) ಎಂದರೆ ಭಾರತದ ಪ್ರತಿಯೊಬ್ಬರಿಗೂ ತಿಳಿದಿರುವಂತಹ ಹೆಸರು. ಫುಟ್ಬಾಲ್ ಲೋಕದಲ್ಲಿ ವಿಭಿನ್ನ ಛಾಪು ಮೂಡಿಸಿರುವ ಆಟಗಾರ ಛೆಟ್ರಿ. ಅಂತಾರಾಷ್ಟ್ರ ಮಟ್ಟದಲ್ಲಿ ಭಾರತ ತಂಡ ಫುಟ್ಬಾಲ್​ ಲೋಕದಲ್ಲಿ ಅಷ್ಟಾಗಿ ಸಾಧನೆ ಮಾಡದಿದ್ದರೂ ಛೆಟ್ರಿ ಮಾತ್ರ ಅದ್ಭುತ ಸಾಧನೆ ಮಾಡಿದ್ದಾರೆ. ಅವರ ಈ ಸಾಧನೆಯನ್ನು ಇದೀಗ ಸ್ವತಃ ಫಿಫಾ ಸಹ ಗುರುತಿಸಿ, ವಿಶೇಷ ಗೌರವ ಸಲ್ಲಿಸಿದೆ.


ಛೆಟ್ರಿಗೆ ವಿಶೇಷ ಗೌರವ ಸಲ್ಲಿಸಿದ ಫಿಫಾ:


ಫುಟ್ಬಾಲ್ ದಿಗ್ಗಜ ಸುನಿಲ್ ಛೆಟ್ರಿ ಭಾರತ ಫುಟ್ಬಾಲ್ ತಂಡದ ನಾಯಕರಾಗಿದ್ದಾರೆ. ಭಾರತ ತಂಡ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚದಿದ್ದರೂ ಛೆಟ್ರಿ ಹೆಸರು ಮಾತ್ರ ಪ್ರಾಪಂಚಿಕ ಮಟ್ಟದಲ್ಲಿ ಇಂದಿಗೂ ಮಿನುಗುತ್ತಿದೆ. ಇಂತಹ ಅದ್ಭುತ ಆಟಗಾರನಿಗೆ ಇದೀಗ ಸ್ವತಃ ಫಿಫಾ ವಿಶೇಷ ಗೌರವ ನೀಡಿದೆ. ಸುನಿಲ್ ಛೆಟ್ರಿ ಅವರ ಬದುಕಿನ ಬಗ್ಗೆ ವಿಶೇಷ ಸಾಕ್ಷ್ಯಚಿತ್ರವೊಂದನ್ನು ಬಿಡುಗಡೆ ಮಾಡಿದೆ. 3 ಎಪಿಸೋಡ್​ಗಳ ಸರಣಿಯನ್ನು ರಿಲೀಸ್​ ಮಾಡಿದ್ದು, 'ಕ್ಯಾಪ್ಟನ್ ಫೆಂಟಾಸ್ಟಿಕ್‘ ಎಂದು ಹೆಸರಿಟ್ಟಿದೆ.ಈ ಕುರಿತು ಫಿಫಾ ಟ್ವಿಟರ್​ ಮೂಲಕ ಅಧಿಕೃತವಾಗಿ ತಿಳಿಸಿದ್ದು, FIFA+ ನಲ್ಲಿ ಈ ಡಾಕ್ಯುಮೆಂಟರಿಯನ್ನು ನೀವು ನೋಡಬಹುದಾಗಿದೆ. ಅಲ್ಲದೇ ಈ ಕುರಿತು ಟ್ವೀಟ್​ ಮಾಡಿರುವ ಫಿಫಾ, ‘ನಿಮಗೆಲ್ಲಾ ರೊನಾಲ್ಡೋ ಮತ್ತು ಮೆಸ್ಸಿ ಬಗ್ಗೆ ಗೊತ್ತೇ ಇದೆ. ಆದರೆ ಈಗ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಸಕ್ರಿಯವಾಗಿರುವ ಆಟಗಾರರ ಪೈಕಿ ಮೂರನೇ ಅತಿ ಹೆಚ್ಚು ಹೆಚ್ಚು ಗೋಲುಗಳಿಸಿದ ಆಟಗಾರನ ಬಗ್ಗೆ ತಿಳಿದಿಕೊಳ್ಳುವ ಸಮಯ. 'ಸುನಿಲ್ ಛೆಟ್ರಿ ‘ಕ್ಯಾಪ್ಟನ್ ಫೆಂಟಾಸ್ಟಿಕ್‘ ಫೀಫಾ +ನಲ್ಲಿ ಈಗ ಲಭ್ಯವಿದೆ‘ ಎಂದು ಬರೆದುಕೊಂಡಿದೆ.


ಇದನ್ನೂ ಓದಿ: FIFA World Cup 2022: ಈ ಇಬ್ಬರು ದಿಗ್ಗಜ ಆಟಗಾರರಿಗೆ ಇದು ಕೊನೆಯ ವಿಶ್ವಕಪ್! ಸಂಕಷ್ಟದಲ್ಲಿ ಮೆಸ್ಸಿ ತಂಡ


ವಿಶ್ವದ ಟಾಪ್​ 3ನೇ ಆಟಗಾರ ಛೆಟ್ರಿ:


ಹೌದು, ಈ ವಿಷಯ ಕೆಲವರಿಗಷ್ಟೇ ತಿಳಿದಿರಬಹುದು. ಏಕೆಂದರೆ ನಮ್ಮದೇಶದಲ್ಲಿ ಕ್ರಿಕೆಟ್​ಗೆ ಇರುವಷ್ಟು ಕ್ರೇಜ್​ ಫುಟ್ಬಾಲ್​ ಆಟದ ಮೇಲಿಲ್ಲ. ಛೆಟ್ರಿ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಈವರೆಗೆ ಒಟ್ಟು 84 ಗೋಲ್‌ಗಳನ್ನು ಬಾರಿಸಿದ್ದಾರೆ. ಇದು ವಿಶ್ವದಲ್ಲಿಯೇ ಸಕ್ರಿಯ ಫುಟ್ಬಾಲ್ ಆಟಗಾರರ ಪೈಕಿ 3ನೇ ಅತಿ ಹೆಚ್ಚು ಗೋಲ್​ ಗಳಿಸಿರುವ ಆಟಗಾರರಾಗಿದ್ದಾರೆ. ಇವರ ಹೊರತಾಗಿ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ (90) ಮತ್ತು ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ (117) ಗೋಲ್​ ಗಳಿಸುವ ಮೂಲಕ ಕ್ರಮವಾಗಿ ನಂಬರ್​ 1 ಮತ್ತು 2ನೇ ಸ್ಥಾನದಲ್ಲಿದ್ದಾರೆ.


ಇದನ್ನೂ ಓದಿ: IND vs SA: ದಕ್ಷಿಣ ಆಫ್ರಿಕಾ ಟಿ20 ಸರಣಿಯಿಂದ ಟೀಂ ಇಂಡಿಯಾದ 3 ಸ್ಟಾರ್​ ಪ್ಲೇಯರ್ಸ್​ ಔಟ್​, ಮೂವರು ಇನ್​


ಇನ್ನು, ಇದು ಮಾತ್ರವಲ್ಲದೇ ಛೆಟ್ರಿ ಈವರೆಗೆ 7 ಬಾರಿ AIFF ವರ್ಷದ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದಾರೆ. ಜೊತೆಗೆ 2021ರಲ್ಲಿ ಭಾರತ ಸರ್ಕಾರ ಫುಟ್ಬಾಲ್‌ನಲ್ಲಿ ನೀಡಿದ ಸಾಧನೆಯನ್ನು ಪರಿಗಣಿಸಿ ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ಕ್ರೀಡಾ ರತ್ನ ಪಶಸ್ತಿಯನ್ನು ನೀಡಿ ಗೌರವಿಸಿದೆ.

Published by:shrikrishna bhat
First published: