• Home
 • »
 • News
 • »
 • sports
 • »
 • FIFA Football World Cup 2022: ದಾಖಲೆಯನ್ನು ಮಾಡಿ ಇತಿಹಾಸ ಸೃಷ್ಟಿಸಿದ ಫಿಫಾ​ ಫುಟ್​ಬಾಲ್​ ವಿಶ್ವಕಪ್​ 2022! ಅಂತದ್ದೇನಾಗಿದೆ ವಿಶೇಷ?

FIFA Football World Cup 2022: ದಾಖಲೆಯನ್ನು ಮಾಡಿ ಇತಿಹಾಸ ಸೃಷ್ಟಿಸಿದ ಫಿಫಾ​ ಫುಟ್​ಬಾಲ್​ ವಿಶ್ವಕಪ್​ 2022! ಅಂತದ್ದೇನಾಗಿದೆ ವಿಶೇಷ?

ಫಿಫಾ ವಿಶ್ವಕಪ್ 2022

ಫಿಫಾ ವಿಶ್ವಕಪ್ 2022

ಈ ಬಾರಿ ಕತಾರ್​ನಲ್ಲಿ ನಡೆದಂತಹ ಫುಟ್​ಬಾಲ್​ ವಿಶ್ವಕಪ್​ 2022 ಎಲ್ಲರ ಗಮನಸೆಳೆದಿತ್ತ. ಅದ್ರಲ್ಲೂ ಇದುವರೆಗೆ ಯಾವುದೇ ಫುಟ್​ಬಾಲ್​ ಟೂರ್ನಮೆಂಟ್​ಗಳಲ್ಲಿ ಆಗದ ದಾಖಲೆಗಳು ಈ ಬಾರಿ ಫುಟ್​ಬಾಲ್​ ವಿಶ್ವಕಪ್​ ಟೂರ್ನಿಯಲ್ಲಿ ನಡೆದಿವೆ. ಹಾಗಿದ್ರೆ ಏನೆಲ್ಲಾ ದಾಖಲೆಗಳು ಈ ಬಾರಿ ಕತಾರ್​ ಫುಟ್​ಬಾಲ್ ವಿಶ್ವಕಪ್​ನಲ್ಲಿ ನಡೆದಿದೆ ಎಂಬುದನ್ನು ಇಲ್ಲಿ ತಿಳಿಯಿರಿ.

ಮುಂದೆ ಓದಿ ...
 • News18 Kannada
 • Last Updated :
 • New Delhi, India
 • Share this:

  ಪ್ರಸ್ತುತ ಕತಾರ್ 2022 ರ ಫಿಫಾ  ಫುಟ್ಬಾಲ್ ವಿಶ್ವಕಪ್ (FIFA Football World Cup 2022) ಪಂದ್ಯಾವಳಿಯು ಹಲವು ಕಾರಣಗಳಿಂದಾಗಿ ವಿಶೇಷ ಎನಿಸಿದೆ. ಈ ಒಟ್ಟಾರೆ ಟೂರ್ನಿಯು ಹಲವು ಮೊದಲುಗಳಿಗೆ ಕಾರಣವಾಗಿರುವುದು ಸಹ ವಿಶೇಷ ಎನ್ನಬಹುದು. ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲೇ ಮೊದಲ ಬಾರಿಗೆ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ನವೆಂಬರ್-ಡಿಸೆಂಬರ್ ಅವಧಿಯಲ್ಲಿ ಮೊದಲ ಬಾರಿಗೆ ಈ ಪಂದ್ಯಾವಳಿಯನ್ನು ಆಡಲಾಗಿದೆ. ನೂರು ವರ್ಷಗಳ ಇತಿಹಾಸದಲ್ಲೇ ಒಂದೇ ನಗರದಲ್ಲಿ ಹಲವು ಕ್ರೀಡಾಂಗಣಗಳಲ್ಲಿ ಆಡಲಾದ ಟೂರ್ನಿ ಇದಾಗಿದೆ. ಹೀಗೆ ಹಲವು ದಾಖಲೆಗಳಿಗೆ ಈ ಟೂರ್ನಾಮೆಂಟ್ ಸಾಕ್ಷಿಯಾಗಿದೆ. ಬನ್ನಿ ಇನ್ನು ಕೆಲವು ರೋಚಕ ಮೊದಲುಗಳು ಯಾವುವು ಎಂಬುದನ್ನು ನೋಡೋಣ.


  1. ವಿಶ್ವಕಪ್ ನಲ್ಲಿ ಗೋಲ್ ಬಾರಿಸಿದ 21ನೇ ಶತಮಾನದ ಮೊದಲ ಆಟಗಾರ:


  2018 ರಲ್ಲಿ ರಷ್ಯಾದಲ್ಲಿ ನಡೆದಿದ್ದ ವಿಶ್ವಕಪ್ ಸಂದರ್ಭದಲ್ಲಿ ಜೂಡ್ ಬೆಲ್ಲಿಂಘಾಮ್ ಚಾಂಪಿಯನ್ಶಿಪ್ ಕ್ರೀಡೆಯಲ್ಲಿ ತಮ್ಮ ಪಾದಾರ್ಪಣೆಯನ್ನೂ ಸಹ ಮಾಡಿರಲಿಲ್ಲ. ಆದರೆ, ಅವರು ಈ ಬಾರಿಯ ಕತಾರ್ ವಿಶ್ವಕಪ್ ನಲ್ಲಿ ಇರಾನ್ ವಿರುದ್ಧ ಗೋಲ್ ಬಾರಿಸುವ ಮೂಲಕ 21ನೇ ಶತಮಾನದ ಗೋಲ್ ಬಾರಿಸಿದ ಮೊದಲ ಆಟಗಾರನೆಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.


  2. ಮತ್ತೆ ಗಮನ ಸೆಳೆದ ಮೊದಲ ಸೌದಿ ಆಟಗಾರ:


  ಸಲೇಂ ಅಲ್ ದವ್ಸಾರಿ ಸೌದಿ ಅರೇಬಿಯಾದ ಒಬ್ಬ ಪ್ರತಿಭಾವಂತ ಫುಟ್ಬಾಲ್ ಆಟಗಾರ. ಜಯಶಾಲಿ ತಂಡಗಳನ್ನೇ ವಿಚಲಿತರನ್ನಾಸುವಂತಹ ಕೌಶಲ್ಯ ಅವರಿಗೆ ಒಲಿದಿದೆ. ಕಳೆದ ಬಾರಿ ರಷ್ಯಾದ ವಿಶ್ವಕಪ್ ಪಂದ್ಯಾವಳಿಯಲ್ಲಿ ಇದೇ ಆಟಗಾರ ಈಜಿಪ್ಟ್ ವಿರುದ್ಧ ತಡವಾಗಿ ಪಂದ್ಯ ಪ್ರವೇಶಿಸಿ ಗೋಲ್ ಬಾರಿಸುವ ಮೂಲಕ ಎದುರಾಳಿ ತಂಡ ದಿಗ್ಭ್ರಮೆಗೊಳ್ಳುವಂತೆ ಮಾಡಿದ್ದ. ಈ ಬಾರಿಯೂ ಸಹ ಸಲೇಂ ಇನ್ನೊಂದು ಪ್ರಬಲ ತಂಡವಾದ ಅರ್ಜೆಂಟೀನಾ ವಿರುದ್ಧ ತಮ್ಮ ಅದೇ ಕಳೆದ ಬಾರಿಯ ಸಾಧನೆ ಮತ್ತೊಮ್ಮೆ ಮಾಡಿ ತೋರಿಸಿದ್ದಾರೆ. ಮೆಸ್ಸಿಗಿಂತಲೂ ಹೆಚ್ಚಿನ ಗಮನ ಸೆಳೆಯುವಲ್ಲಿ ಸಲೇಂ ಯಶಸ್ವಿಯಾದರು.


  ಇದನ್ನೂ ಓದಿ: ಮೆಸ್ಸಿ ಜನಿಸಿದ್ದು ಅಸ್ಸಾಂನಲ್ಲಿ! ಹೊಸ ಚರ್ಚೆ ಹುಟ್ಟುಹಾಕಿದ ಕಾಂಗ್ರೆಸ್​ ಸಂಸದನ ಟ್ವೀಟ್​


  3. ನಾಲ್ಕು ವಿವಿಧ ವಿಶ್ವಕಪ್ ಗಳಲ್ಲಿ ಆಟವಾಡಿದ ಮೊದಲ ಕ್ರೊವೇಷಿಯಾ ಆಟಗಾರ:


  ಲುಕಾ ಮೋಡ್ರಿಕ್ ಅವರು ವಯಸ್ಸಾದಂತೆ ಮತ್ತಷ್ಟು ಅದ್ಭುತವಾಗಿ ರೂಪುಗೊಳ್ಳುತ್ತಿದ್ದಾರೆ ಎನ್ನಬಹುದು. 37 ಪ್ರಾಯದ ಲುಕಾ ಅವರು ಒಬ್ಬ ಕ್ರೊವೇಷಿಯನ್ ಆಟಗಾರರಾಗಿದ್ದು ನಾಲ್ಕು ವಿವಿಧ ವಿಶ್ವಕಪ್ ಗಳಲ್ಲಿ ಆಟವಾಡಿದ ಮೊದಲ ಆಟಗಾರರೆನಿಸಿದ್ದಾರೆ. ಅವರು ಮೊದಲ ಬಾರಿಗೆ 2006ರ ವಿಶ್ವಕಪ್ ನಲ್ಲಿ ಪಾದಾರ್ಪಣೆ ಮಾಡಿದ್ದರು. ಇಷ್ಟೇ ಅಲ್ಲದೆ ಅವರು ಫುಟ್ಬಾಲ್ ಇತಿಹಾಸದಲ್ಲಿ ಮೂರು ವಿವಿಧ ದಶಕಗಳಲ್ಲಿ ಯುರೋಪಿಯನ್ ಚಾಂಪಿಯನ್ಶಿಪ್ ಹಾಗೂ ವಿಶ್ವಕಪ್ ನಲ್ಲಿ ಆಡಿದ ಮೊದಲ ಫುಟ್ಬಾಲ್ ಆಟಗಾರ ಎಂಬ ಮನ್ನಣೆಗೆ ಪಾತ್ರರಾದರು.


  4. ವಿಶ್ವಕಪ್ ನಲ್ಲಿ ಪುರುಷ ಹಾಗೂ ಸ್ತ್ರೀ ತಂಡಗಳಿಗೆ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಮೊದಲ ತರಬೇತುದಾರ:


  ಜಾನ್ ಹರ್ಡ್ ಮನ್ ಮೊದಲ ಬಾರಿಗೆ ಕೆನಡಾ ಮಹಿಳಾ ಫುಟ್ಬಾಲ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದರು. ಅವರ ಅದ್ಭುತ ತರಬೇತಿ ಕೌಶಲ್ಯಗಳಿಂದಾಗಿ ಕೆನಡಾ ಮಹಿಳಾ ಫುಟ್ಬಾಲ್ ತಂಡವು ಉತ್ತಮ ಸಾಧನೆ ಮಾಡಿತು. ಅವರ ತರಬೇತಿಯಿಂದಾಗಿ ಕೆನಡಾದ ತಂಡವು 2012 ಹಾಗೂ 2016ರ ಒಲಿಂಪಿಕ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕಂಚಿನ ಪದಕ ಗೆಲ್ಲಲು ಯಶಸ್ವಿಯಾಗಿತ್ತು.


  5. ಇದನ್ನು ಗಮನಿಸಿದ್ದ ಕೆನಡಾ ಫುಟ್ಬಾಲ್ ಆಡಳಿತವು 2018 ರಲ್ಲಿ ಜಾನ್ ಅವರನ್ನು ಕೆನಡಾದ ಪುರುಷ ಫುಟ್ಬಾಲ್ ತಂಡದ ಕೋಚ್ ಆಗಿಯೂ ಕಾರ್ಯನಿರ್ವಹಿಸುವ ಉದ್ದೇಶದಿಂದ ನೇಮಿಸಿಕೊಂಡಿತು. ಕಳೆದ ಬುಧವಾರದಂದು ಕತಾರ್ ವಿಶ್ವಕಪ್ ಸಂದರ್ಭದಲ್ಲಿ ಕೆನಡಾ ಪಂದ್ಯದಲ್ಲಿ ಮೊದಲ ಬಾರಿಗೆ ಮೈದಾನದಲ್ಲಿ ತಮ್ಮ ಕಾರ್ಯಾಭಾರ ಹೊಂದಿದ ಮೇಲೆ ಅವರು ಮೊದಲ ಪುರುಷ ಹಾಗೂ ಸ್ತ್ರೀ ತಂಡಗಳಿಗೆ ಕೋಚ್ ಆಗಿ ಕಾರ್ಯ ನಿರ್ವಹಿಸಿದ ತರಬೇತುದಾರರಾಗಿ ಹೊರಹೊಮ್ಮಿದರು.


  6. ಸ್ಪೇನ್​ಗಾಗಿ ಗೋಲು ಬಾರಿಸಿದ ಅತಿ ಕಿರಿಯ ಆಟಗಾರ:


  ಕೊಸ್ಟಾರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಸ್ಪೇನ್ ಪರವಾಗಿ ಗೋಲು ಬಾರಿಸಿದ ಅತಿ ಕಿರಿಯ ಆಟಗಾರನೆಂಬ ಹೆಗ್ಗಳಿಕೆಗೆ ಗಾವಿ ಪಾತ್ರರಾದರು. ಪಂದ್ಯ ಆರಂಭಾವದ 75 ನಿಮಿಷಗಳ ನಂತರ ಗಾವಿ ಸ್ಪೇನ್ ಪರವಾಗಿ ಗೋಲು ಬಾರಿಸುವಲ್ಲಿ ಸಫಲರಾದರು ಹಾಗೂ ಈ ಮೂಲಕ ಅವರು ಗೋಲು ಬಾರಿಸಿದ ಸ್ಪೇನ್ ತಂಡದ ಮೊದಲ ಕಿರಿಯ ಆಟಗಾರನೆಂಬ ಖ್ಯಾತಿಗೆ ಪಾತ್ರರಾದರು. ಅವರು ಗೋಲ್ ಬಾರಿಸಿದ್ದ ಸಂದರ್ಭದಲ್ಲಿ 18 ವರ್ಷ110 ದಿನಗಳಷ್ಟು ವಯಸ್ಸಿನವರಾಗಿದ್ದರು.


  7. ನಿಗದಿಪಡಿಸಿದ ಸಮಯದಲ್ಲಿ ಗೋಲ್ ತಡೆಹಿಡಿದ ಮೊದಲ ಬೆಲ್ಜಿಯನ್ ಗೋಲ್ ಕೀಪರ್:


  ಕೆನಡಾ ತಂಡವು ವಿಶ್ವಕಪ್ ಆಟಗಳಲ್ಲಿ ತನ್ನ ಮೊದಲ ಗೋಲ್ ಬಾರಿಸಲು ಕಳೆದ 36 ವರ್ಷಗಳಿಂದ ಕಾಯುತ್ತಲೇ ಇತ್ತು. ಕೊನೆಗೂ ಪೆನಾಲ್ಟಿ ಶೂಟೌಟ್ ನಲ್ಲಿ ಕೆನಡಾಗೆ ಕಾಯುವಿಕೆಯನ್ನು ಅಂತ್ಯಗೊಳಿಸುವ ಅದೃಷ್ಟ ಒಲಿದು ಬಂದಿತ್ತು ಕಳೆದ ಬುಧವಾರ ಬೆಲ್ಜಿಯಮ್ ವಿರುದ್ಧದ ಪಂದ್ಯದಲ್ಲಿ. ಆದರೆ, ದುರದೃಷ್ಟವೆಂಬಂತೆ ಅವರು ಮತ್ತೆ ಕಾಯುವಂತಾಗಿದೆ. ಬೆಲ್ಜಿಯನ್ ಗೋಲ್ ಕೀಪರ್ ಕೊರ್ಟಾಯಿಸ್ ಅವರು ಬಲಗಡೆಗೆ ಡೈವ್ ಮಾಡುವ ಮೂಲಕ ನಿಗದಿಪಡಿಸಲಾದ ಸಮಯದಲ್ಲಿ ಗೋಲ್ ಅನ್ನು ತಡೆಹಿಡಿಯುವ ಮೂಲಕ ಮೊದಲ ಸಾಧನೆ ಮಾಡಿದ ಬೆಲ್ಜಿಯನ್ ಆಟಗಾರರಾದರು. ಇತ್ತ ಕೆನಡಾ ಬಂದಿದ್ದ ಅವಕಾಶವನ್ನು ಕೈಚೆಲ್ಲಿ ಕೂರುವಂತಾಯಿತು.


  8. ವಿಶ್ವಕಪ್ ನ ಪಂದ್ಯವೊಂದನ್ನು ಮೊದಲ ಬಾರಿಗೆ ಗೆಲ್ಲುವಲ್ಲಿ ಸಫಲರಾದ ಮೊದಲ ಓಷಿಯಾನಿಯಾದ ಕೋಚ್:


  59ರ ಪ್ರಾಯದ ಗ್ರಾಹಂ ಆರ್ನಾಲ್ಡ್ ಆಸ್ಟ್ರೇಲಿಯಾದ ತಂಡದ ಕೋಚ್ ಆಗಿದ್ದು ತಮ್ಮ ಮೊದಲ ಪಂದ್ಯವಾದ ಫ್ರಾನ್ಸ್ ವಿರುದ್ಧ ಸೋತಿದ್ದರು. ಈ ಸಂದರ್ಭದಲ್ಲಿ ತಂಡ ಎಡವಿ ಬೀಳಲು ಕಾರಣವಾಗಿದ್ದ ತಪ್ಪುಗಳನ್ನು ಅವರು ತಿದ್ದಲು ಪ್ರಯತ್ನಿಸಿದ್ದರು. ಅವರ ಪ್ರಯತ್ನಕ್ಕೆ ಫಲ ಎಂಬಂತೆ ಕಳೆದ ಬಾರಿ ಟುನಿಷಿಯಾ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ 1-0 ಮೂಲಕ ಗೆಲುವು ಸಾಧಿಸಿತು. ಈ ಮೂಲಕ ಗ್ರಾಹಂ ಅವರು ವಿಶ್ವಕಪ್ ನ ಪಂದ್ಯವೊಂದನ್ನು ಮೊದಲ ಬಾರಿಗೆ ಗೆಲ್ಲುವಲ್ಲಿ ಸಫಲರಾದ ಮೊದಲ ಓಷಿಯಾನಿಯಾದ ಕೋಚ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.


  9. ಐದು ವಿಶ್ವಕಪ್ ಗಳಲ್ಲಿ ಸಹಾಯ ಮಾಡಿದ ಮೊದಲ ಆಟಗಾರನಾಗಿ ಮೆಸ್ಸಿ ಹೆಗ್ಗಳಿಕೆ:


  ಅರ್ಜೆಂಟೀನಾದ ಖ್ಯಾತ ಆಟಗಾರ ಲಿಯೊನೆಲ್ ಮೆಸ್ಸಿ ಸಾಕಷ್ಟು ಪ್ರಖ್ಯಾತರು. ಪಂದ್ಯ ನಡೆಯುವಾಗ ತಂಡ ಗೋಲ್ ಬಾರಿಸಲು ಮೈದಾನದಲ್ಲಿ ಮಂಚೂಣಿಯಲ್ಲಿ ನಿಂತು ಸಾತ್ ನೀಡುವಲ್ಲಿ ಮೆಸ್ಸಿ ಮತ್ತೆ ತಮ್ಮ ಸಾಧನೆ ತೋರಿದರು. ಆಟಕ್ಕೆ ಒಂದೊಳ್ಳೆ ಅಡಿಪಾಯ ಹಾಕಿ ಅರ್ಜೆಂಟೀನಾ ತಂಡ ಮುನ್ನಡೆಯುವಂತೆ ಮೆಸ್ಸಿ ಸಾತ್ ನೀಡಿದರು. ಈ ಮೂಲಕ ಅವರು ಸತತ ಐದು ವಿಶ್ವಕಪ್ ಪಂದ್ಯಗಳಲ್ಲಿ ಈ ರೀತಿಯ ತಮ್ಮ ಬೆಂಬಲ ಹಾಗೂ ಗೋಲ್ ಬಾರಿಸಿದ ಮೊದಲ ಆಟಗಾರನಾಗಿ ಹೊರಹೊಮ್ಮಿದರು.


  10. ವಿಶ್ವಕಪ್ ನಲ್ಲಿ ಗೋಲ್ ಬಾರಿಸಿದ ಮೊದಲ ಕೆನಡಿಯನ್:


  ಈಗಾಗಲೇ ತಮ್ಮ ಹಿಂದಿನ ಪಂದ್ಯ ಬೆಲ್ಜಿಯಮ್ ಜೊತೆ ನಡೆದಿದ್ದಾಗ 36 ವರ್ಷದಲ್ಲೇ ಮೊದಲ ಗೋಲ್ ಬಾರಿಸುವಂತಹ ಅವಕಾಶವನ್ನು ಕೆನಡಾ ಹಾಳು ಮಾಡಿಕೊಂಡಿತ್ತು. ಆದರೆ ನಂತರದ ಪಂದ್ಯವು ಕೆನಡಾದ ಇತಿಹಾಸದಲ್ಲಿ ಅಚ್ಚಳಿಯದೆ ಬರೆಯುವಂತಾಯಿತು. ಕೆನಡಾದ ಅಲ್ಫೊನ್ಸೊ ಡೇವಿಸ್ ಅವರು ಗೋಲ್ ಬಾರಿಸುವ ಮೂಲಕ ಕೆನಡಾದ ಗೋಲ್ ಬಾರಿಸಿದ ಮೊದಲ ವ್ಯಕ್ತಿಯಾಗಿ ಮನ್ನಣೆಗಳಿಸಿದರು.


  11. ಎರಡು ವಿಶ್ವಕಪ್ ನಲ್ಲಿ ಮೂರು ಸತತ ಗೋಲ್ ಬಾರಿಸಿದ ಮೊದಲ ದಕ್ಷಿಣ ಅಮೆರಿಕಾ ಮೂಲದ ಎನ್ನರ್ ವ್ಯಾಲೆನ್ಸಿಯಾ:


  ಇಕ್ವೇಡಾರ್ ಆಟಗಾರ ಈ ಬಾರಿಯ ಕತಾರ್ ವಿಶ್ವಕಪ್ ನಲ್ಲಿ ಇನ್ನೊಂದು ಮೊದಲ ಅದ್ಭುತ ಸಾಧನೆ ಮಾಡಿದರು. ಕಳೆದ ಬಾರಿಯ ವಿಶ್ವಕಪ್ ಪಂದ್ಯದಲ್ಲಿ ಎನ್ನರ್ ಬ್ರೇಜಿಲ್ ವಿರುದ್ಧ ಮೂರು ಗೋಲುಗಳನ್ನು ಬಾರಿಸಿದ್ದರು. ಈ ಬಾರಿಯ ವಿಶ್ವಕಪ್ ನಲ್ಲೂ ಸಹ ಅವರು ಮತ್ತೆ ಕತಾರ್ ವಿರುದ್ಧ ಮೂರು ಗೋಲುಗಳನ್ನು ಬಾರಿಸುವ ಮೂಲಕ ಸತತ ಎರಡು ವಿಶ್ವಕಪ್ ನಲ್ಲಿ ಮೂರು ಗೋಲುಗಳನ್ನು ಬಾರಿಸಿದ ಮೊದಲ ದಕ್ಷಿಣ ಅಮೆರಿಕ ಆಟಗಾರನೆಂಬ ಖ್ಯಾತಿಗೆ ಪಾತ್ರರಾದರು.


  12. ನೆದರ್ಲ್ಯಾಂಡಿನ ಕೋಡಿ ಗಾಕ್ಪೊ ಅವರು ವಿಶ್ವಕಪ್ ಗ್ರೂಪ್ ಹಂತದಲ್ಲಿ ಆಡಿದ ಎಲ್ಲ ಮೂರು ಪಂದ್ಯಗಳಲ್ಲಿ ಗೋಲ್ ಬಾರಿಸಿದ ಮೊದಲ ಆಟಗಾರನಾಗಿ ತಮ್ಮ ದಾಖಲೆಯನ್ನು  ಕತಾರ್ ವಿಶ್ವಕಪ್​ನಲ್ಲಿ ಮಾಡಿದರು.


  13. ಸ್ಟಿಫನಿ ಫ್ರಾಪಾರ್ಟ್ ಈ ಬಾರಿಯ ಕತಾರ್ ವಿಶ್ವಕಪ್​ನಲ್ಲಿ ಪಂದ್ಯವೊಂದಕ್ಕೆ ರೆಫರಿ ಆಗಿ ಕಾರ್ಯ ನಿರ್ವಹಿಸುವ ಮೂಲಕ ಇತಿಹಾಸದಲ್ಲಿ ಪುರುಷರ ಫುಟ್ಬಾಲ್ ಪಂದ್ಯಕ್ಕೆ ಮೊದಲ ಮಹಿಳಾ ರೆಫರಿಯಾಗಿ ಕಾರ್ಯನಿರ್ವಹಿಸಿದ ಸಾಧನೆ ಮಾಡಿದರು. ಜರ್ಮನಿ ಹಾಗೂ ಕೊಸ್ಟಾರಿಕಾ ನಡುವಿನ ಪಂದ್ಯಕ್ಕೆ ರೆಫರಿಯಾಗುವ ಮೂಲಕ ಸ್ಟಿಫನಿ ಈ ಸಾಧನೆ ಮಾಡಿದರು.


  14. ಜಪಾನ್ ತಂಡದ ಮ್ಯಾನೇಜರ್ ಹಜಿಮೆ ಮೊರಿಯಾಸು ಅವರು ವಿಶ್ವಕಪ್​ನ ಹಂತವೊಂದರಲ್ಲಿ ಟಾಪ್ ಸ್ಥಾನವನ್ನು ಅಲಂಕರಿಸಿದ ಮೊದಲ ಏಷಿಯನ್ ಮೂಲದ ಮ್ಯಾನೇಜರ್ ಆಗಿ ಹೊರಹೊಮ್ಮಿದ್ದಾರೆ. ಕಳೆದ ಬಾರಿಯ ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಜಪಾನ್ 2-1 ಗೆಲುವು ಸಾಧಿಸಿದಾಗ ಗ್ರೂಪ್ ಹಂತದಲ್ಲಿ ಮ್ಯಾನೇಜರ್ ಸ್ಥಾನದಲ್ಲಿ ಹಜಿಮೆ ತಮ್ಮ ಉತ್ತನ ಸ್ಥಾನ ಪಡೆದುಕೊಂಡರು.


  15. ಸ್ಪೇನಿನ ರೊಡ್ರಿ ಅವರು ವಿಶ್ವಕಪ್ ಪಂದ್ಯಾವಳಿಗಳಲ್ಲಿ 215 ಪಾಸ್ ಗಳನ್ನು ನಿರ್ವಹಿಸಿದ ಮೊದಲ ಆಟಗಾರನಾಗಿ ದಾಖಲೆ ನಿರ್ಮಿಸಿದರು. ಮೈದಾನದಲ್ಲಿ ಆಟ ಆಡುವಾಗ ಪಾಸ್ ನೀಡುವಿಕೆ ಬಲು ಮಹತ್ವದ ಅಂಶವಾಗಿದ್ದು ಅದರಿಂದಲೇ ಗೋಲುಗಳಾಗುತ್ತವೆ. ಸದ್ಯ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಸ್ ನಿರ್ವಹಿಸಿದ ವ್ಯಕ್ತೊಯಾಗಿ ರೊಡ್ರಿ ದಾಖಲೆ ಬರೆದರು.


  16. 24 ವರ್ಷದೊಳಗಿನವವರ ವಿಭಾಗದಲ್ಲಿ 8 ವಿಶ್ವಕಪ್ ಗೋಲುಗಳನ್ನು ಬಾರಿಸಿದ ಮೊದಲ ಆಟಗಾರನಾಗಿ ಫ್ರಾನ್ಸಿನ ಕೈಲಿಯನ್ ಬಪ್ಪೆ ತಮ್ಮ ಹೆಸರನ್ನು ದಾಖಲಿಸಿದರು.


  17. ಇನ್ನೊಂದು ಮೊದಲ ವಿಭಾಗದಲ್ಲಿ ಸ್ವಿಸ್ ಮೂಲದ ಅಟಗಾರನೂ ತಮ್ಮ ಹೆಸರನ್ನು ದಾಖಲಿಸಿದರು. ಸ್ವಿಸ್ ಮೂಲದ ಕ್ಸೆರ್ಡಾನ್ ಶಾಕಿರಿ ಅವರು ಮೂರು ಸತತ ವಿಶ್ವಕಪ್ ಪಂದ್ಯದಲ್ಲಿ ಗೋಲ್ ಬಾರಿಸಿದ ಮೊದಲ ಸ್ವಿಸ್ ಆಟಗಾರನಾಗಿ ದಾಖಲೆ ಬರೆದುಕೊಂಡರು.


  18. ಪೋರ್ಚುಗೀಸ್ ತಂಡದ ಗೊಂಕಾಲೋ ರಾಮೋಸ್ ಅವರು ಈ ಬಾರಿಯ ಕತಾರ್ ವಿಶ್ವಕಪ್ ನಲ್ಲಿ ವಿಶ್ವಕಪ್ ಪಂದ್ಯವೊಂದರ ಪಾದಾರ್ಪಣೆ ಮಾಡಿದಾಗ ಹ್ಯಾಟ್ರಿಕ್ ಗೋಲು ಬಾರಿಸಿದ ಮೊದಲ ಪೋರ್ಚುಗೀಸ್ ಆಟಗಾರನೆಂಬ ಖ್ಯಾತಿಗೆ ಪಾತ್ರರಾದರು.


  19. ಮೊರಕ್ಕೊ ತಂಡದ ಗೋಲ್ ಕೀಪರ್ ಯಾಸಿನ್ ಬೌನೌ ಅವರು ಎರಡು ಗೋಲುಗಳನ್ನು ತಡೆಯುವ ಮೂಲಕ ವಿಶ್ವಕಪ್ಪಿನ ಪೆನಲ್ಟಿಯನ್ನು ಉಳಿಸಿದ ಮೊದಲ ಆಫ್ರಿಕನ್ ಆಟಗಾರನಾಗಿ ದಾಖಲೆ ಬರೆದರು.


  20. ಇನ್ನೊಂದು ವಿಶೇಷವಾದ ಮೊದಲ ಸಾಧನೆಯಲ್ಲಿ ಮೊರಕ್ಕೊ ತಂಡ ಸಾಧನೆ ಮಾಡಿದೆ. ಹೌದು, ಮೊದಲ ಬಾರಿಗೆ ಮೊರಕ್ಕೊ ತಂಡ ವಿಶ್ವಕಪ್ ನ ಸೆಮಿ ಫೈನಲ್ ಹಂತ ತಲುಪಿತು. ಈ ಮೂಲಕ ಸೆಮಿ ಫೈನಲ್ ಹಂತ ತಲುಪಿದ ಮೊದಲ ಆಫ್ರಿಕನ್ ತಂಡವಾಗಿ ಮೊರಕ್ಕೊ ದಾಖಲೆ ಬರೆಯಿತು.


  21. ಕ್ರಿಕೆಟ್ ಹಾಗೂ ಫುಟ್ಬಾಲ್ ಈ ಎರಡು ರೀತಿಯ ಆಟಗಳಲ್ಲಿ ಆಟಗಾರರ ವಯಸ್ಸು ಎಂಬುದು ಸಾಕಷ್ಟು ಪ್ರಾಮುಖ್ಯತೆ ಹೊಂದಿರುತ್ತದೆ. 35 ದಾಟಿದ ನಂತರ ಅಥವಾ 40ರ ಪ್ರಾಯದಲ್ಲಿ ಆಟಗಾರರು ಹೆಚ್ಚಾಗಿ ನಿವೃತ್ತಿ ಪಡೆಯುತ್ತಾರೆ. ಆದರೆ, ಈ ಬಾರಿಯ ಕತಾರ್ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಬ್ರೇಜಿಲ್ ತಂಡದ ದಾನಿ ಅಲ್ವ್ಸ್ ಅವರು 39ರ ಪ್ರಾಯದಲ್ಲೂ ವಿಶ್ವಕಪ್ ಆಡಿದ ಮೊದಲ ಆಟಗರನಾಗಿ ಹೊರಹೊಮ್ಮಿದರು.


  22. ಸಾಮಾನ್ಯವಾಗಿ ಫುಟ್ಬಾಲ್ ಪಂದ್ಯದಲ್ಲಿ ಸಬ್ಸ್ಟಿಟ್ಯೂಟ್ ಅಂತ ಇರ್ತಾರೆ. ಇವರು ಆಟಗಾರನೊಬ್ಬನ ಪರ್ಯಾಯಿ ಆಗಿ ಆಡುವಂಥವರು. ಈ ಬಾರಿಯ ವಿಶ್ವಕಪ್ಪಿನಲ್ಲಿ ಸಬ್ಸ್ಟಿಟ್ಯೂಟ್ ಆಗಿ ಆಡಲು ಮೈದಾನ ಪ್ರವೇಶಿಸಿದ ಮೊದಲ ನಿಮಿಷದಲ್ಲೇ ಫ್ರಾನ್ಸ್ ಪರ ಗೋಲ್ ಬಾರಿಸಿದ ಮೊದಲ ಆಟಗಾರರಾಗಿ ರಾಂಡಾಲ್ ಕೊಲೊ ಮುವಾನಿ ಅವರು ದಾಖಲೆ ಬರೆದರು.


  ಇನ್ನು ಲಿಯೊನೆಲ್ ಮೆಸ್ಸಿ ಸಹ ಈ ಬಾರಿಯ ಕತಾರ್ ವಿಶ್ವಕಪ್ ನಲ್ಲಿ ತಮ್ಮ ಹೆಸರಿನಲ್ಲಿ ಒಂದು ಅದ್ಭುತ ದಾಖಲೆ ಬರೆದುಕೊಂಡರು. ವಿಶ್ವಕಪ್ಪಿನ ಪ್ರತಿ ರೌಂಡಿನಲ್ಲೂ ಗೋಲ್ ಬಾರಿಸಿದ ಮೊದಲ ಆಟಗಾರನೆಂಬ ಮನ್ನಣೆಗೆ ಮೆಸ್ಸಿ ಪಾತ್ರರಾದರು.

  Published by:Prajwal B
  First published: