ದಾಖಲೆ ಬರೆದ ಫಿಫಾ ವಿಶ್ವಕಪ್ 2018: ಭಾರತದಲ್ಲಿ ಅತಿ ಹೆಚ್ಚು ವೀಕ್ಷಣೆ

news18
Updated:July 28, 2018, 11:08 PM IST
ದಾಖಲೆ ಬರೆದ ಫಿಫಾ ವಿಶ್ವಕಪ್ 2018: ಭಾರತದಲ್ಲಿ ಅತಿ ಹೆಚ್ಚು ವೀಕ್ಷಣೆ
news18
Updated: July 28, 2018, 11:08 PM IST
ನ್ಯೂಸ್ 18 ಕನ್ನಡ

ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿ ರಷ್ಯಾದ ಆತಿಥ್ಯದಲ್ಲಿ ನಡೆದಿದೆ ಆದರು ಭಾರತದಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಜುಲೈ 15 ರಂದು ನಡೆದ ಫ್ರಾನ್ಸ್​ ಹಾಗೂ ಕ್ರೋವೇಶಿಯಾ ನಡುವಣ ಫೈನಲ್ ಪಂದ್ಯ ಟಿವಿ ಮೂಲಕ ಅತಿ ಹೆಚ್ಚು ಮಂದಿ ವೀಕ್ಷಿಸಿದ ದೇಶ ಭಾರತವಾಗಿದ್ದು ನೂತನ ದಾಖಲೆ ಬರೆದಿದೆ.

ಈ ಬಗ್ಗೆ ಸ್ವತಃ ಸೋನಿ ಪಿಕ್ಚರ್ಸ್​​ ನೆಟ್​​​ವರ್ಕ್​​ ಇಂಡಿಯಾ ಹೇಳಿದ್ದು, ಟಿವಿ ಮೂಲಕ ಫ್ರಾನ್ಸ್​-ಕ್ರೋವೇಶಿಯಾ ನಡುವಣ ಫೈನಲ್ ಪಂದ್ಯ ಅತಿ ಹೆಚ್ಚು ವೀಕ್ಷಣೆಕಂಡ ಅಂತರಾಷ್ಟ್ರೀಯ ಫುಟ್ಬಾಲ್ ಪಂದ್ಯ ಭಾರತದ್ದಾಗಿದೆ ಎಂದು ತಿಳಿಸಿದೆ. ಜೂನ್ 14ರಂದು ರಷ್ಯಾದಲ್ಲಿ ಆರಂಭವಾದ ಪಂದ್ಯ ಜುಲೈ 15 ರಂದು ಕೊನೆಗೊಂಡಿತ್ತು. ಮಾಸ್ಕೋದಲ್ಲಿ ಜುಲೈ 15ರಂದು ನಡೆದ ಫೈನಲ್ ಪಂದ್ಯವನ್ನು ಭಾರತದಲ್ಲಿ 5.11 ಕೋಟಿ ಮಂದಿ ವೀಕ್ಷಣೆ ಮಾಡಿದ್ದಾರೆ. ಜೊತೆಗೆ ಇಡೀ ಫಿಪಾ ವಿಶ್ವಕಪ್ ಟೂರ್ನಿಯನ್ನು ಸುಮಾರು 26 ಕೋಟಿ ಮಂದಿ ವೀಕ್ಷಣೆ ಮಾಡಿದ್ದಾರೆ. ಇದು ಕೂಡ ದಾಖಲೆಯಾಗಿದ್ದು, ಈ ಹಿಂದೆ ನಡೆದ ಯಾವ ವಿಶ್ವಕಪ್ ಟೂರ್ನಿಯು ಭಾರತದಲ್ಲಿ ಈ ಮಟ್ಟಿಗೆ ವೀಕ್ಷಣೆಕಂಡ ಇತಿಹಾಸ ಇಲ್ಲ ಎಂದು ಹೇಳಿದೆ.

ಇನ್ನು ಭಾರತದಲ್ಲಿ ಫಿಪಾ ವಿಶ್ವಕಪ್​​ನ ನೇರಪ್ರಸಾರ ಹಕ್ಕು ಹೊಂದಿದ್ದ ಎಸ್​​​​​ಪಿಎನ್​​​​​​​​​​ ಹೇಳುವ ಪ್ರಕಾರ, ಒಟ್ಟು 64 ಪಂದ್ಯವನ್ನು ಲೈವ್​ನಲ್ಲಿ 11 ಕೋಟಿ ಪ್ರೇಕ್ಷಕರು ಕಣ್ತುಂಬಿಕೊಂಡಿದ್ದು, ಪಶ್ಚಿಮ ಬಂಗಾಳದಲ್ಲಿ 2.2 ಕೋಟಿ ಮಂದಿ ನೋಡಿದ್ದಾರೆ. ಅಂತೆಯೆ ಕೆರಳಲದಲ್ಲಿ 1.78 ಕೋಟಿ ಜನರು ಟಿವಿಯಲ್ಲಿ ವೀಕ್ಷಿಸಿದ್ದಾರೆ ಎಂದು ತಿಳಿಸಿದೆ.
First published:July 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ