Virat Kohli: ಮಹಿಳಾ ಅಭಿಮಾನಿಯಿಂದ ವಿರಾಟ್ ಕೊಹ್ಲಿಗೆ ಕಿಸ್; ವಿಡಿಯೋ ವೈರಲ್

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

Virat Kohli: ಇತ್ತೀಚಿನ ದಿನಗಳಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಅನೇಕ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಅದರಂತೆ ಇದೀಗ ಒಂದು ವಿಡಿಯೋ ಸಹ ಸಖತ್ ವೈರಲ್ ಆಗುತ್ತಿದೆ.

  • Share this:

ಇತ್ತೀಚಿನ ದಿನಗಳಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರ ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಅದೇ ರೀತಿ ಇದೀಗ ಕೊಹ್ಲಿ ಅವರ ಮತ್ತೊಂದು ವಿಡಿಯೋ ಸಖತ್ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಕೊಹ್ಲಿ ಮಹಿಳಾ ಅಭಿಮಾನಿಯೊಬ್ಬರಿಗೆ ಮುತ್ತಿಕ್ಕುತ್ತಿರುವ (Kiss) ದೃಶ್ಯವಿದೆ. ಆದಾಗ್ಯೂ, ನೀವು ಸೂಕ್ಷ್ಮವಾಗಿ ಗಮನಿಸಿದರೆ, ಅದರ ಸತ್ಯವೇ ಬೇರೆ ಇದೆ. ವಿರಾಟ್ ಪ್ರಸ್ತುತ ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಿರತರಾಗಿದ್ದಾರೆ. 4 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದೆ. ಸರಣಿಯ ಮೂರನೇ ಟೆಸ್ಟ್ ಪಂದ್ಯ ಮಾರ್ಚ್ 1 ರಿಂದ ಇಂದೋರ್‌ನಲ್ಲಿ ನಡೆಯಲಿದೆ. ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಆಟಗಾರರಿಗೆ ಸುದೀರ್ಘ ವಿರಾಮದಲ್ಲಿದ್ದಾರೆ.


ಅಭಿಮಾನಿಯಿಂದ ಕೊಹ್ಲಿಗೆ ಕಿಸ್:


ಅಸಲಿಗೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿರಾಟ್ ಕೊಹ್ಲಿಯ ವಿಡಿಯೋದಲ್ಲಿ ಮಹಿಳಾ ಅಭಿಮಾನಿಯೊಬ್ಬರು ಕೊಹ್ಲಿಯ ಮೇಣದ ಪ್ರತಿಮೆಗೆ ಮುತ್ತಿಟ್ಟಿದ್ದಾರೆ. ದೆಹಲಿಯ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ವಿರಾಟ್ ಮೇಣದ ಪ್ರತಿಕೃತಿಯನ್ನು ಸ್ಥಾಪಿಸಲಾಗಿದೆ. ವಿರಾಟ್ ಪ್ರತಿಮೆಯ ಬಳಿಗೆ ಬಂದ ತಕ್ಷಣ ಮಹಿಳಾ ಅಭಿಮಾನಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಚುಂಬಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ವೈರಲ್ ವಿಡಿಯೋ ನೋಡಿ ಜನರು ವಿಭಿನ್ನ ರೀತಿಯಲ್ಲಿ ತಮಾಷೆಯ ಕಮೆಂಟ್ ಮಾಡುತ್ತಿದ್ದಾರೆ.ವಿರಾಟ್ 25,000 ರನ್ ದಾಖಲೆ:


ಇನ್ನು, ವಿರಾಟ್ ಕೊಹ್ಲಿ ದೆಹಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಅಂತರಾಷ್ಟ್ರೀಯ ವೃತ್ತಿಜೀವನದ 25,000 ರನ್ ಪೂರೈಸಿದರು. ಫಿರೋಜ್‌ಶಾ ಕೋಟ್ಲಾ ಸ್ಟೇಡಿಯಂನಲ್ಲಿ ನಡೆದ ಈ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ವಿವಾದಾತ್ಮಕವಾಗಿ ಔಟಾದರು, ಬಳಿಕ 2ನೇ ಇನ್ನಿಂಗ್ಸ್​ನಲ್ಲಿ ಅಲ್ಪ ಮೊತ್ತಕ್ಕೆ ಔಟ್​ ಆದರೂ ಸಹ ಹೊಸ ದಾಖಲೆ ಬರೆದಿದ್ದಾರೆ. ಅವರು 549 ಅಂತರಾಷ್ಟ್ರೀಯ ಇನ್ನಿಂಗ್ಸ್‌ಗಳಲ್ಲಿ ಈ ದಾಖಲೆ ಬರೆದಿದ್ದಾರೆ. ಇದು ಅತ್ಯಂತ ವೇಗದ 25 ಸಾವಿರ ರನ್​ ಆಗಿದೆ. ಇದಕ್ಕೂ ಮುನ್ನ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 577 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.


ಇದನ್ನೂ ಓದಿ: IND vs AUS: ಆಸೀಸ್​ ವಿರುದ್ಧದ 3ನೇ ಟೆಸ್ಟ್​ ರಾಹುಲ್​ ಔಟ್​? ಪ್ಲೇಯಿಂಗ್​ 11ನಲ್ಲಿ ಮಹತ್ವದ ಬದಲಾವಣೆ!


ಟೆಸ್ಟ್​ ಶತಕಕ್ಕಾಗಿ ಕಾಯುತ್ತಿರುವ ವಿರಾಟ್​ ಫ್ಯಾನ್ಸ್:


ಹೌದು, ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಬಾರಿಸಿ ಬಹಳ ವರ್ಷಗಳೇ ಕಳೆದಿವೆ. ಅವರು ನವೆಂಬರ್ 2019ರಲ್ಲಿ ಟೆಸ್ಟ್‌ನಲ್ಲಿ ತಮ್ಮ ಕೊನೆಯ ಶತಕವನ್ನು ಗಳಿಸಿದರು. ಆಗ ಕೋಲ್ಕತ್ತಾದ ಐತಿಹಾಸಿಕ ಐರ್ಡನ್ ಗಾರ್ಡನ್ಸ್‌ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ವಿರಾಟ್ ಶತಕ ಸಿಡಿಸಿದ್ದರು. ಪ್ರಸಕ್ತ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರು ಇದುವರೆಗೆ 3 ಇನ್ನಿಂಗ್ಸ್‌ಗಳಲ್ಲಿ 76 ರನ್ ಗಳಿಸಿದ್ದಾರೆ. ಹೀಗಾಗಿ ಮುಂದಿನ ಪಂದ್ಯದಲ್ಲಾದರೂ ಅವರು ಶತಕದ ಬರವನ್ನು ನೀಗಿಸುತ್ತಾರೆಯೇ ಎಂದು ಕಾದುನೋಡಬೇಕಿದೆ.
ಆಸ್ಟ್ರೇಲಿಯಾ ವಿರುದ್ಧದ 3 ಮತ್ತು 4 ಟೆಸ್ಟ್‌ಗೆ ಭಾರತದ ತಂಡ:


ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (WK), ಇಶಾನ್ ಕಿಶನ್ (WK), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಉಮೇಶ್ ಯಾದವ್, ಜಯದೇವ್ ಉನದ್ಕತ್.

Published by:shrikrishna bhat
First published: