ಜಿನ್ನಾ ಮಂಡಲ್ ಪ್ರಸಕ್ತ ಐಪಿಎಲ್‌ನಲ್ಲಿ (IPL 2023) ಕೆಕೆಆರ್ ಪರ ನೆಟ್ ಬೌಲಿಂಗ್ ಮಾಡುತ್ತಿದ್ದಾರೆ. ಜಿನ್ನಾ ಮಂಡಲ್ (Jinnah Mondal) ಅವರ ತಂದೆ ರಫೀಕುಲ್ ಮಂಡಲ್ ಅವರು ವೃತ್ತಿಯಲ್ಲಿ ಮೀನುಗಾರರಾಗಿದ್ದಾರೆ. ಮೀನುಗಾರಿಕೆಯ ಜೊತೆಗೆ ಜಮೀನಿನಲ್ಲಿಯೂ ಕೃಷಿ ಮಾಡುತ್ತಾರೆ. ಅವರಿಗೆ ಕ್ರಿಕೆಟ್ ಕನಸಾಗಿತ್ತು. ಗದ್ದೆಯಲ್ಲಿ ಕೆಲಸ ಮಾಡುವುದರ ಜೊತೆಗೆ, ಟಿವಿ ಹೊಂದಿರುವವರ ಮನೆಗೆ ಬಾಗಿಲಿನ ಹೊರಗೆ ನಿಂತು ನೋಡುತ್ತಿದ್ದರು. ಜಿನ್ನಾ ಅವರ ಕ್ರಿಕೆಟ್ ಹಳ್ಳಿಯ ಬೀದಿಗಳಲ್ಲಿ ಪ್ರಾರಂಭವಾಯಿತು. ಅಲ್ಲಿಂದ ಅಕ್ಕಪಕ್ಕದ ಮೈದಾನದಲ್ಲಿ ಟೆನಿಸ್ ಚೆಂಡಿನೊಂದಿಗೆ ಆಟವಾಡಲು ಆರಂಭಿಸಿದ ಜಿನ್ನಾ ಮಂಡಲ್ ಉತ್ತರ 24 ಪರಗಣ ಜಿಲ್ಲೆಯ ಬಸಿರ್ಹತ್‌ನ ಬಿಬಿಪುರ ಗ್ರಾಮದಲ್ಲಿ ಜನಿಸಿದರು.
ಕಷ್ಟದಿಂದ ಬೆಳದ ಪ್ರತಿಭೆ:
ಹಳ್ಳಿಯಲ್ಲಿ ಜಿನ್ನಾ ಅವರಿಗೆ ಉತ್ತಮ ತರಬೇತುದಾರರು ಅಥವಾ ಕ್ರಿಕೆಟ್ ಕೋಚಿಂಗ್ ಸೆಂಟರ್‌ಳು ಸಿಗಲಿಲ್ಲ. ಜಿನ್ನಾ ಚೆನ್ನಾಗಿ ಟೆನಿಸ್ ಆಡುವ ಮೂಲಕ ಆ ಪ್ರದೇಶದ ಕ್ರಿಕೆಟ್ ಪ್ರೇಮಿಯ ಗಮನ ಸೆಳೆದರು. ನಂತರ ಕೋಲ್ಕತ್ತಾದ ಸಂಬರನ್ ಬ್ಯಾನರ್ಜಿ ಅಕಾಡೆಮಿಯಲ್ಲಿ ತರಬೇತಿ ಪಡೆದರು. ಅವರ ಆಟವನ್ನು ನೋಡಿದ ತರಬೇತುದಾರರು ಉಚಿತವಾಗಿ ಆಟ ಕಲಿಸಲು ಒಪ್ಪಿದರು. ಅವರ ಮನೆ ಕೋಲ್ಕತ್ತಾದಿಂದ ಬಹಳ ದೂರದಲ್ಲಿತ್ತು. ಇದು ಆತನಿಗೆ ಅಡ್ಡಿಯಾಗಿತ್ತು. ಕಾಕ್ರಾ ಮಿರ್ಜಾನಗರ ನಿಲ್ದಾಣವು ಅವರ ಸ್ವಂತ ಮನೆಯಿಂದ 10 ಕಿ.ಮೀ ದೂರದಲ್ಲಿತ್ತು. ಆದರೆ ಕ್ರಿಕೆಟ್ ಮೇಲಿನ ಪ್ರೀತಿ ಅವರಿಗೆ ಅಡ್ಡಿಯಾಗಲಿಲ್ಲ.
ಜಿನ್ನಾ ಅವರು ದಿನ ಬೆಲಗಿನ ಜಾವ 10 ಕಿ.ಮೀ ದೂರವನ್ನು ಸೈಕಲ್ ಮೂಲಕ ಪ್ರಯಾಣಿಸಿ ಕೋಲ್ಕತ್ತಾದ ತರಬೇತಿ ಕೇಂದ್ರಕ್ಕೆ ಬರುತ್ತಿದ್ದರು. ಆದರೆ, ಇದನ್ನು ಕಂಡ ಸ್ಥಳೀಯ ಪರೋಪಕಾರಿ ಕಾಜಿ ಮಹ್ಮದ್ ಹಸನ್ ಅಲ್ಲಿಂದಲೇ ಅಭ್ಯಾಸಕ್ಕೆ ಜಾಗ ನೀಡಿದರು. ಇಂದು ಅವರು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನೆಟ್ ಬೌಲರ್ ಆಗಿದ್ದಾರೆ. ಹೆಸರು ಜಿನ್ನಾ ಮಂಡಲ್.
ಇದನ್ನೂ ಓದಿ: IPL 2023 Playoffs: ಆರ್ಸಿಬಿ ನಿಮ್ಮ ನಂಬಿಕೆಗೆ ಮೋಸ ಮಾಡಲ್ಲ, ನಾವು ಪ್ಲೇ ಆಫ್ಗೆ ಹೋಗ್ತೀವಿ ಎಂದ ಫ್ರಾಂಚೈಸಿ!
ಜಿನ್ನಾ ತಂದೆ ಮೀನುಗಾರರು:
ಜಿನ್ನಾ ಅವರು ಮನೆಯಲ್ಲಿದ್ದಾಗ ಕೆಲವೊಮ್ಮೆ ತಮ್ಮ ತಂದೆಯೊಂದಿಗೆ ಮೀನುಗಾರಿಕೆಗೆ ಹೋಗುತ್ತಿದ್ದರು. ತನ್ನ ಮಗನ ಬಗ್ಗೆ ಮಾತನಾಡಿದ ಅವರ ತಂದೆ, ‘ಜಿನ್ನಾ ಬಡತನದಿಂದ ಬೆಳೆದನು, ಎಂದಿಗೂ ಉತ್ತಮವಾದ ಬೂಟುಗಳು ಮತ್ತು ಬಟ್ಟೆಗಳನ್ನು ಖರೀದಿಸಲು ಸಾಧ್ಯವಾಗಲಿಲ್ಲ. ಆದರೂ, ಅವರು ಇಚ್ಛಾಶಕ್ತಿ ಮತ್ತು ಕಠಿಣ ಪರಿಶ್ರಮದ ಮೂಲಕ ಆಟವಾಡುವುದನ್ನು ಮುಂದುವರೆದನು. ಅವನು ಯಶಸ್ವಿಯಾಗುತ್ತಾನೆ ಎಂದು ನಮಗೆ ತಿಳಿದಿತ್ತು‘ ಎಂದು ಹೇಳಿದ್ದಾರೆ.
ಜಿನ್ನಾ ಅವರ ಮಾತಿನಲ್ಲಿ ಹೇಳುವುದಾದರೆ, "ನನಗೆ ಕ್ರಿಕೆಟ್ ಬಗ್ಗೆ ಉತ್ಸಾಹವಿತ್ತು ಆದರೆ ಸ್ಕೋಪ್ ಇರಲಿಲ್ಲ. ಹಾಗಾಗಿ ನಾನು ಟೆನಿಸ್ ಬಾಲ್‌ನೊಂದಿಗೆ ಆಡಲು ಪ್ರಾರಂಭಿಸಿದೆ. ನಂತರ ನಮ್ಮ ಚಿಕ್ಕಪ್ಪ ನನ್ನನ್ನು ಕ್ರಿಕೆಟ್ ಆಡಲು ಕೋಲ್ಕತ್ತಾಗೆ ಕರೆದೊಯ್ದರು ಅಲ್ಲಿಂದ ಪ್ರಯಾಣ ಪ್ರಾರಂಭವಾಯಿತು. ನಾನು ಈಗ ಎರಡನೇ ಡಿವಿಷನ್‌ನಲ್ಲಿ ಜಿಲ್ಲೆಗಾಗಿ ಆಡಿದ್ದೇನೆ, ಇದರಿಂದ ನನಗೆ ಐಪಿಎಲ್‌ನಲ್ಲಿ ನೆಟ್ ಬೌಲರ್ ಆಗಿ ಅವಕಾಶ ಸಿಕ್ಕಿತು. 2018 ಮತ್ತು 2019 ರ ಅವಧಿಯಲ್ಲಿ ನಾನು ನೆಟ್ ಬೌಲರ್ ಆಗಿ ಆಡಿದ್ದೇನೆ ಈಗ ನಾನು ಅದನ್ನು ಎಲ್ಲಾ ಸಮರ್ಪಣೆಯೊಂದಿಗೆ ಮುಂದುವರಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಅವರ ಬಳಿ ಮನೆಯಿಂದ ಕೋಲ್ಕತ್ತಾಗೆ ಅವರ ಪ್ರಯಾಣದ ಬಗ್ಗೆ ಕೇಳಿದಾಗ, "ಇದು ತುಂಬಾ ತೊಂದರೆದಾಯಕ ಮತ್ತು ಒತ್ತಡದಿಂದ ಕೂಡಿತ್ತು. ಮೊದಲ ರೈಲನ್ನು ಹಿಡಿಯಲು ನಾನು ನನ್ನ ಮನೆಯಿಂದ ನಿಲ್ದಾಣಕ್ಕೆ ಸೈಕಲ್‌ನಲ್ಲಿ ಹೋಗಬೇಕಾಗಿತ್ತು ಮತ್ತು ನಂತರ ರೈಲಿನ ಉದ್ದಕ್ಕೂ ನಿಂತು ಪ್ರಯಾಣಿಸುತ್ತಿದ್ದೆ. ಇಡೀ ದಿನ ಅಭ್ಯಾಸ ಮಾಡುವುದು ತುಂಬಾ ದಣಿದ ನಂತರ ಇನ್ನೂ ನಾನು ಮುಂದುವರಿಸಲು ಬಯಸುತ್ತಿದ್ದೆ ಏಕೆಂದರೆ ಇದು ನಾನು ಹೆಚ್ಚು ಇಷ್ಟಪಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ