ಆಸ್ಟ್ರೇಲಿಯಾ ಪ್ರವಾಸದ ಅಮೂಲ್ಯ ಕ್ಷಣ ಮೆಲುಕು ಹಾಕಿದ ಕನ್ನಡಿಗ ಮಯಾಂಕ್

27 ವರ್ಷ ಪ್ರಾಯದ ಮಯಾಂಕ್ ಅಗರ್ವಾಲ್ ಆಸ್ಟ್ರೇಲಿಯಾದಲ್ಲಿನ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ನಾನು ಟೀಂ ಇಂಡಿಯಾದ ಸದಸ್ಯನಾಗಿರುವುದಕ್ಕೆ ತುಂಬಾನೆ ಸಂತೋಷ ನೀಡಿದೆ ಎಂದಿದ್ದಾರೆ.

Vinay Bhat | news18
Updated:January 11, 2019, 6:20 PM IST
ಆಸ್ಟ್ರೇಲಿಯಾ ಪ್ರವಾಸದ ಅಮೂಲ್ಯ ಕ್ಷಣ ಮೆಲುಕು ಹಾಕಿದ ಕನ್ನಡಿಗ ಮಯಾಂಕ್
ಮಯಾಂಕ್ ಅಗರ್ವಾಲ್
Vinay Bhat | news18
Updated: January 11, 2019, 6:20 PM IST
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿ ಮಿಂಚಿದ ಕನ್ನಡಿಗ ಮಯಾಂಕ್ ಅಗರ್ವಾಲ್ ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ.

ಸರಣಿ ಮಧ್ಯೆಯೆ ಕಾಂಗರೂಗಳ ನಾಡಿಗೆ ಕಾಲಿಟ್ಟ ಮಯಾಂಕ್ ಮೊದಲ ಪಂದ್ಯದಲ್ಲೆ ಅರ್ಧಶತಕ ಸಿಡಿಸಿ ತಮ್ಮ ಆಯ್ಕೆಯನನು ಸಮರ್ಥಿಸಿ ಕೊಂಡರು. ದೇಶೀಯ ಕ್ರಿಕೆಟ್​ನ ಈ ರನ್​ ಮೆಶೀನ್ ಆಸ್ಟ್ರೇಲಿಯಾ ಮಣ್ಣಿನಲ್ಲಿ 73,516 ಪ್ರೇಕ್ಷಕರ ಮುಂದೆ ಚೊಚ್ಚಲ ಟೆಸ್ಟ್​ ಪಂದ್ಯವನ್ನು ಆಡಿದರು. ಎರಡನೇ ಟೆಸ್ಟ್​​ನಲ್ಲೂ ಅಬ್ಬರಿಸಿದ ಮಯಾಂಕ್ ಸಾಧನೆಯ ಶಿಖರದ ಮೊದಲ ಮೆಟ್ಟಿಲು ಏರಿದ್ದಾರೆ.

ಇದನ್ನೂ ಓದಿ: ನಾಳೆ ಭಾರತ-ಆಸ್ಟ್ರೇಲಿಯಾ ಮೊದಲ ಏಕದಿನ: ಹೇಗಿರಲಿದೆ ಕೊಹ್ಲಿ ಪಡೆಯ 11ರ ಬಳಗ?

27 ವರ್ಷ ಪ್ರಾಯದ ಮಯಾಂಕ್ ಅಗರ್ವಾಲ್ ಆಸ್ಟ್ರೇಲಿಯಾದಲ್ಲಿನ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, 'ನಾನು ಟೀಂ ಇಂಡಿಯಾದ ಸದಸ್ಯನಾಗಿರುವುದಕ್ಕೆ ತುಂಬಾನೆ ಸಂತೋಷ ನೀಡಿದೆ' ಎಂದಿದ್ದಾರೆ.

'ಮೊದಲ ಬಾರಿ ವಿರಾಟ್ ಕೊಹ್ಲಿ ನನಗೆ ಕ್ಯಾಪ್ ನೀಡಿದ ಆ ಅಮೂಲ್ಯ ಕ್ಷಣ ಎಂದಿಗೂ ಮರೆಯಲು ಸಾಧ್ಯವಿಲ್ಲ. ಮೊದಲ ಬಾರಿ ಅಂತರಾಷ್ಟ್ರೀಯ ಪಂದ್ಯದಲ್ಲಿ ಕಣಕ್ಕಿಳಿಯುವಾಗ ಎಲ್ಲರೂ ಖುಷಿಯಿಂದ ನನ್ನನ್ನು ಹಾರೈಸಿದರು. ಆದರೆ, ಶತಕ ಅಂಚಿನಲ್ಲಿ ಎಡವಿರುವುದು ನನಗೆ ಬೇಸರ ತಂದಿದೆ. ಆದರೆ, ಆ ತಪ್ಪಿನಿಂದ ಒಳ್ಳೆಯ ಪಾಠವನ್ನು ಕಲಿತಿರುವೆ. ಮುಂದೆ ಆರೀತಿಯ ತಪ್ಪು ಮಾಡದಂತೆ ನಿಗವಹಿಸಬೇಕು ಎಂದಿದ್ದಾರೆ.

ಇದನ್ನೂ ಓದಿ: ಆಸೀಸ್ ವಿರುದ್ಧ ಮೊದಲ ಏಕದಿನ ಪಂದ್ಯದಿಂದ ಹಾರ್ದಿಕ್-ರಾಹುಲ್ ಔಟ್
Loading...

ಆಡಿದ ಎರಡು ಟೆಸ್ಟ್​ ಪಂದ್ಯಗಳಲ್ಲಿ ತುಂಬಾ ಕಲಿತಿದ್ದೇನೆ. ನನ್ನ ಆತ್ಮವಿಶ್ವಾಸ ದುಪ್ಪಟ್ಟಾಗಿದೆ. ಧೈರ್ಯದಿಂದ ಎದುರಾಳಿಗರನ್ನು ಎದುರಿಸುವ ಶಕ್ತಿ ನನಗಿದೆ ಎಂದರು. ಸದ್ಯ ಟೆಸ್ಟ್​ ಕ್ರಿಕೆಟ್​ನತ್ತ ಹೆಚ್ಚು ಗಮನ ಹರಿಸುತ್ತಿರುವೆ.  ಏಕದಿನ ತಂಡಕ್ಕೆ ಸೇರಿವ ಬಗ್ಗೆ ಆಲೋಚನೆಯಿಲ್ಲ. ಅವಕಾಶ ಸಿಕ್ಕರೆ ಎಲ್ಲ ಮಾಧರಿಯಲ್ಲಿ ಆಡಲು ನಾನು ತಯಾರಿದ್ದೇನೆ ಎಂದು ಮಯಾಂಕ್ ಹೇಳಿದ್ದಾರೆ.

First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...