'ಹರಾಜಿನಲ್ಲಿ ಯುವಿಯನ್ನು ಪಡೆದುಕೊಳ್ಳಿ': ಸಿಎಸ್​ಕೆಗೆ ಅಭಿಮಾನಿಗಳಿಂದ ಭಾರೀ ಉತ್ತಡ

ಈ ಹಿಂದೆ ಕೂಡ ಯುವಿ ಸಿಎಸ್​​​ಕೆ ತಂಡ ಸೇರಬೇಕೆಂದು ಧೋನಿ ಬಳಿ ಟ್ವಿಟರ್ ಮೂಲಕ ಅನೇಕರು ಬೇಡಿಕೆ ಇಟ್ಟಿದ್ದರು. ಜೊತೆಗೆ ಮೊನ್ನೆಯಷ್ಟೆ ಸಿಎಸ್​ಕೆ ಟ್ವಿಟರ್​ನಲ್ಲಿ ನಮ್ಮ ತಂಡಕ್ಕೆ ಯಾರನ್ನೆಲ್ಲ ಸೇರಿಸಿಕೊಳ್ಳಬಹುದು ಎಂಬ ಸಲಹೆ ಕೇಳಿತ್ತು.

Pic: Twitter

Pic: Twitter

  • News18
  • Last Updated :
  • Share this:
ಚೆನ್ನೈ: 2019ರ ಇಂಡಿಯನ್ ಪ್ರೀಮಿಯರ್ ಲೀಗ್​(ಐಪಿಎಲ್​​) ಗೆ ಇನ್ನೇನು ಕೆಲವು ತಿಂಗಳುಗಳಷ್ಟೆ ಬಾಕಿ ಉಳಿದಿವೆ. ಅಲ್ಲದೆ ಡಿ. 18 ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು, ಫ್ರಾಂಚೈಸಿಗಳು ಸಕಲ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಅಭಿಮಾನಿಗಳು ಹರಾಜಿನಲ್ಲಿ  ಯುವರಾಜ್​ರನ್ನು ಪಡೆದುಕೊಳ್ಳಿ ಎಂದು ಸಿಎಸ್​ಕೆಗೆ ಸಲಹೆ ನೀಡಿದ್ದಾರೆ.

ಈ ಹಿಂದೆ ಕೂಡ ಯುವಿ ಸಿಎಸ್​​​ಕೆ ತಂಡ ಸೇರಬೇಕೆಂದು ಧೋನಿ ಬಳಿ ಟ್ವಿಟರ್ ಮೂಲಕ ಅನೇಕರು ಬೇಡಿಕೆ ಇಟ್ಟಿದ್ದರು. ಜೊತೆಗೆ ಮೊನ್ನೆಯಷ್ಟೆ ಸಿಎಸ್​ಕೆ ಟ್ವಿಟರ್​ನಲ್ಲಿ ನಮ್ಮ ತಂಡಕ್ಕೆ ಯಾರನ್ನೆಲ್ಲ ಸೇರಿಸಿಕೊಳ್ಳಬಹುದು ಎಂಬ ಸಲಹೆ ಕೇಳಿತ್ತು. ಈಗ ಹರಾಜು ಪ್ರಕ್ರಿಯೆಗೆ ಇನ್ನೇನು ಮೂರು ದಿನಗಳು ಬಾಕಿ ಇರುವಂತೆ ಮತ್ತೆ ಫ್ಯಾನ್ಸ್​ ಟ್ವಿಟರ್ ಮೂಲಕ ಸಿಕ್ಸರ್​​​ ಕಿಂಗ್ ಚೆನ್ನೈ ತಂಡ ಸೇರಬೇಕು ಎನ್ನುತ್ತಿದ್ದಾರೆ.

ಇದನ್ನೂ ಓದಿ: ಕೊಹ್ಲಿ-ರಹಾನೆ ಅರ್ಧಶತಕ: ದಿನದಾಟಕ್ಕೆ ಭಾರತ 172/3

ಅದೇನೆ ಇದ್ದರು ರಾಷ್ಟ್ರೀಯ ತಂಡಕ್ಕೆ ಸ್ಥಾನ ಪಡೆಯಲು ಪರದಾಡುತ್ತಿರುವ ಯುವರಾಜ್ ಸಿಂಗ್ ಅವರ ಬೇಡಿಕೆ ಮಾತ್ರ ಐಪಿಎಲ್​​​ನಲ್ಲಿ ಕಡಿಮೆಯಾಗಿಲ್ಲ. ಈ ಬಾರಿ ಐಪಿಎಲ್​ನಲ್ಲಿ ಯುವರಾಜ್ ಅವರ ಮೂಲ ಬೆಲೆ 1 ಕೋಟಿ ನಿಗದಿ ಪಡಿಸಲಾಗಿದೆ. ಜೊತೆಗೆ 1.5 ಕೋಟಿಗಿಂತ ಅಧಿಕ ಮೂಲ ಬೆಲೆ ಭಾರತದ ಯಾವೊಬ್ಬ ಆಟಗಾರ ಹೊಂದಿಲ್ಲ. ಹಿಂದಿನ ಆವೃತ್ತಿಯಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾಗಿದ್ದ ಜೈದೇವ್ ಉನಾದ್ಕಟ್ ಅವರ ಈ ಬಾರಿಯ ಬೆಲೆಯು 1.5 ಕೋಟಿ ಒದೆ. ಇನ್ನು ಇವರ ಜೊತೆಯಲ್ಲಿ ಅಕ್ಷರ್ ಪಟೇಲ್, ವೃದ್ದಿಮಾನ್ ಸಾಹ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ಅವರ ಮೂಲ ಬೆಲೆ ಒಂದು ಕೋಟಿ ನಿಗದಿಪಡಿಸಲಾಗಿದೆ.

       
First published: