ಚೆನ್ನೈ ಸೂಪರ್ ಕಿಂಗ್ಸ್​ ತಂಡಕ್ಕೆ ಸಿಕ್ಸರ್​ಗಳ ಸರದಾರ: ಧೋನಿ ಜೊತೆ ಕಣಕ್ಕಿಳಿಯಲಿದ್ದಾರೆ ಯುವಿ?

ಧೋನಿ ತಂಡದಲ್ಲಿ ಯುವಿ ಆಡಿದರೆ ಕಂಡಿತ ಉತ್ತಮ ಫಾರ್ಮ್​ಗೆ ಮರಳುತ್ತಾರೆ, ಯುವರಾಜ್​ರನ್ನು ಸಿಎಸ್​ಕೆ ತಂಡಕ್ಕೆ ಸೇರಿಸಿಕೊಳ್ಳಿ ಎಂದು ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ

ಎಂ. ಎಸ್ ಧೋನಿ-ಯುವರಾಜ್ ಸಿಂಗ್

ಎಂ. ಎಸ್ ಧೋನಿ-ಯುವರಾಜ್ ಸಿಂಗ್

  • News18
  • Last Updated :
  • Share this:
12ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಗೆ ಇನ್ನೇನು ಕೆಲವು ತಿಂಗಳುಗಳಷ್ಟೆ ಬಾಕಿ ಉಳಿದಿವೆ. ಆಟಗಾರರ ಹರಾಜಿಗೂ ಸಕಲ ಸಿದ್ಧತೆಗಳೂ ನಡೆಯುತ್ತಿವೆ. ಈ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್​ ತಂಡಕ್ಕೆ ಈ ಆಟಗಾರನನ್ನು ಸೇರಿಸಿಕೊಳ್ಳಿ ಎಂದು ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ.

ಇದನ್ನೂ ಓದಿಅಂತರಾಷ್ಟ್ರೀಯ ಕ್ರಿಕೆಟ್​ಗೆ ಯುವರಾಜ್ ಸಿಂಗ್ ವಿದಾಯ..?

ಮುಂಬರುವ 12ನೇ ಆವೃತ್ತಿಯ ಐಪಿಎಲ್​​​ನಲ್ಲಿ ಸಿಕ್ಸರ್​ಗಳ ಸರದಾರ ಯುವರಾಜ್ ಸಿಂಗ್ ಧೋನಿ ಜೊತೆ ಚೆನ್ನೈ ಸೂಪರ್ ಕಿಂಗ್ಸ್​ ತಂಡದಲ್ಲಿ ಕಣಕ್ಕಿಳಿಯ ಬೇಕು ಎಂದು ಯುವಿ ಹಾಗೂ ಸಿಎಸ್​ಕೆ ಅಭಿಮಾನಿಗಳು ಬೇಡಿಕೆಯಿಟ್ಟಿದ್ದಾರೆ. ಸದ್ಯ ಕಳಪೆ ಫಾರ್ಮ್​​ನಲ್ಲಿರುವ ಯುವಿ ಟೀಂ ಇಂಡಿಯಾದಿಂದ ಹೊರಗುಳಿದು ವರ್ಷಗಳೆ ಕಳೆದಿವೆ. ಜೊತೆಗೆ ಕಳೆದ ಬಾರಿ ಐಪಿಎಲ್​​ನಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ಪರ ಆಡಿದ್ದ ಯುವಿಯನ್ನು ಈಗಾಗಲೇ ಹರಾಜಿಗೂ ಮುನ್ನ ತಂಡ ಕೈ ಬಿಟ್ಟಿದೆ.

ಸದ್ಯ ಚೆನ್ನೈ ಅಭಿಮಾನಿಗಳು ಯುವರಾಜ್​ರನ್ನು ಸಿಎಸ್​ಕೆ ತಂಡಕ್ಕೆ ಸೇರಿಸಿಕೊಳ್ಳಿ, ಧೋನಿ ತಂಡದಲ್ಲಿ ಯುವರಾಜ್ ಆಡಿದರೆ ಕಂಡಿತ ಉತ್ತಮ ಫಾರ್ಮ್​ಗೆ ಮರಳುತ್ತಾರೆ. ಒಳ್ಳೆಯ ಪ್ರದರ್ಶನ ತೋರುತ್ತಾರೆ ಎಂದು ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಯುವರಾಜ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಬೇಕು ಎಂದು ಅಭಿಯಾನವನ್ನೇ ಆರಂಭಿಸಿದ್ದಾರೆ.

       ಈ ಹಿಂದಿನ ದಾಖಲೆಗಳನ್ನು ನೋಡುವುದಾದರೆ, ಎಂ. ಎಸ್ ಧೋನಿ ಹಾಗೂ ಯುವರಾಜ್ ಸಿಂಗ್ ಜೋಡಿಯಾಗಿ ಭಾರತಕ್ಕೆ ಅದೆಷ್ಟೋ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಜೊತೆಗೆ 2011ರ ವಿಶ್ವಕಪ್​​ನಲ್ಲಿ ಧೋನಿ ಜೊತೆಗೂಡಿ ಯುವಿ ಅದ್ಭುತ ಪ್ರದರ್ಶನ ತೋರಿದ್ದರು. ಒಟ್ಟಾರೆ ಡಿಸೆಂಬರ್ ತಿಂಗಳಲ್ಲಿ ಐಪಿಎಲ್​​ ಹರಾಜು ಪ್ರಕ್ರಿಯೆ ನಡೆಯಲಿದ್ದು, ಅಭಿಮಾನಿಗಳ ಒತ್ತಾಯದ ಮೇರೆಗೆ ಚೆನ್ನೈ ಫ್ರಾಂಚೈಸಿ ಯುವರಾಜ್​ರನ್ನು ತಂಡಕ್ಕೆ ಸೇರಿಸಿಕೊಳ್ಳುತ್ತಾರ ಎಂಬುದು ಕಾದುನೋಡಬೇಕಿದೆ.
First published: