Ruturaj Gaikwad: ಗ್ರೌಂಡ್ಸ್‌ಮ್ಯಾನ್‌ಗೆ ಅವಮಾನ ಮಾಡಿದ ಋತುರಾಜ್‌ ಗಾಯಕ್ವಾಡ್‌: ನೆಟ್ಟಿಗರು ಫುಲ್ ಗರಂ

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಪಂದ್ಯದ ಸಂದರ್ಭದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಬಂದ ಗ್ರೌಂಡ್ಸ್‌ಮ್ಯಾನ್ಗೆ ಅವಮಾನ ಮಾಡಿದರೆಂದು ಕ್ರಿಕೆಟ್ ಪ್ರೇಮಿಗಳು ಋತುರಾಜ್ ಮೇಲೆ ಕೋಪಗೊಂಡಿದ್ದಾರೆ . ಅದಲ್ಲದೆ ಅವರು ಈ ರೀತಿಯಾಗಿ ವರ್ತಿಸುತ್ತಿರುವ ವಿಡಿಯೋದ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

ಋತುರಾಜ್ ಗಾಯಕ್ವಾಡ್

ಋತುರಾಜ್ ಗಾಯಕ್ವಾಡ್

  • Share this:
ಭಾರತೀಯ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ (Ruturaj Gaikwad) ಸೆಲ್ಫಿ ತೆಗೆದುಕೊಳ್ಳಲು ಬಂದ ಗ್ರೌಂಡ್ಸ್‌ಮ್ಯಾನ್ ಜೊತೆ ಅಗೌರವ ತೋರಿ ಭಾರಿ ಟ್ರೋಲ್ ಗೆ (Troll) ಗುರಿಯಾಗಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಪಂದ್ಯದ ಸಂದರ್ಭದಲ್ಲಿ ಸೆಲ್ಫಿ (Selfie) ತೆಗೆದು ಕೊಳ್ಳಲು ಬಂದ ಗ್ರೌಂಡ್ಸ್‌ಮ್ಯಾನ್ಗೆ ಅವಮಾನ ಮಾಡಿದರೆಂದು ಕ್ರಿಕೆಟ್ ಪ್ರೇಮಿಗಳು ಋತುರಾಜ್ ಮೇಲೆ ಕೋಪಗೊಂಡಿದ್ದಾರೆ. ಅದಲ್ಲದೆ ಅವರು ಈ ರೀತಿಯಾಗಿ ವರ್ತಿಸುತ್ತಿರುವ ವಿಡಿಯೋದ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ (Social Media) ಹಂಚಿ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಈ ಸುದ್ದಿ ದೇಶದೆಲ್ಲೆಡೆ ಕ್ರಿಕೆಟ್ ಪ್ರೇಮಿಗಳ ಟಾಕಿಂಗ್ ಪಾಯಿಂಟ್ ಆಗಿದೆ ಹಾಗು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡು ಆರಂಭಿಕ ಬ್ಯಾಟರ್​ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ಹಾಗೂ ಭಾರತ ತಂಡಗಳ ನಡುವಿನ ಸರಣಿ ನಿರ್ಣಾಯಕ ಪಂದ್ಯ
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ನಡೆಯುತ್ತಿದ್ದ ದಕ್ಷಿಣ ಆಫ್ರಿಕಾ ಹಾಗೂ ಭಾರತ ತಂಡಗಳ ನಡುವಿನ ಸರಣಿ ನಿರ್ಣಾಯಕ ಪಂದ್ಯದ ಸಂದರ್ಭದಲ್ಲಿ ಮಳೆರಾಯ ಕೋಪಗೊಂಡ ಕಾರಣ ತವರಿನ ತಂಡ ಭಾರತ ಹಾಗು ಸಂದರ್ಶಕ ತಂಡ ದಕ್ಷಿಣ ಆಫ್ರಿಕಾದ T20 ಸರಣಿ ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆ ಉಂಟು ಮಾಡಿ ಅಂತ್ಯವಾಯಿತು.

ಗ್ರೌಂಡ್ ಮ್ಯಾನ್ ಗೆ ಸೆಲ್ಫಿ ಕೊಡಲು ನಿರಾಕರಿಸಿ ಅಗೌರವ ತೋರಿಸಿದ ಋತುರಾಜ್‌ ಗಾಯಕ್ವಾಡ್‌
ಆದರೆ ಕ್ರಿಕೆಟ್ ಪ್ರೇಮಿಗಳು ಕೋಪಗೊಳ್ಳಲು ಅದೊಂದೇ ಕಾರಣವಾಗಿರಲಿಲ್ಲ. ಮಳೆ ವಿಳಂಬದ ಸಂದರ್ಭದಲ್ಲಿ ವೈರಲ್ ಆದ ವಿಡಿಯೋ ಒಂದು ಕ್ರಿಕೆಟ್ ಪ್ರೇಮಿಗಳನ್ನು ಕೆರಳಿಸಿದೆ. ಭಾರತೀಯ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಅವರು ಡಗೌಟ್ ಪ್ರದೇಶದಲ್ಲಿ ಸೆಲ್ಫಿ ಕೇಳಿ ಬಂದ ಗ್ರೌಂಡ್ ಮ್ಯಾನ್ ಗೆ ಸೆಲ್ಫಿ ಕೊಡಲು ನಿರಾಕರಿಸಿ ಅಗೌರವ ತೋರಿಸಿದ್ದಾರೆ. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ತಂಡದ ಪರ ಇನಿಂಗ್ಸ್ ಆರಂಭಿಸಲು ಋತುರಾಜ್‌ ಗಾಯಕ್ವಾಡ್‌ ಡಗೌಟ್‌ನಲ್ಲಿ ಕುಳಿತಿದ್ದರು. ಈ ವೇಳೆ ಗ್ರೌಂಡ್ಸ್‌ಮ್ಯಾನ್‌, ಗಾಯಕ್ವಾಡ್‌ ಪಕ್ಕ ಕುಳಿತು ಸೆಲ್ಫಿಗೆ ಮನವಿ ಮಾಡಿದರು. ಆ ಸಂದರ್ಭದಲ್ಲಿ ಋತುರಾಜ್ ಹತ್ತಿರ ಬರಬೇಡಿ ಎಂದು ಅಂತರ ಕಾಯ್ದು ಕೊಳ್ಳುವಂತೆ ಹೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ: Rahul Dravid: ಭಾರತ ತಂಡಕ್ಕೆ 8 ತಿಂಗಳಲ್ಲಿ 6 ನಾಯಕರು! ರಾಹುಲ್ ದ್ರಾವಿಡ್ ಹೇಳಿದ್ದೇನು?

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ , ಕೆಲ ಕ್ರಿಕೆಟ್ ಅಭಿಮಾನಿಗಳು ಕೋಪಗೊಂಡರೆ ಮತ್ತಷ್ಟು ಜನ ಕೋವಿಡ್ 19 ಇಂದಾಗಿ ಅಂತರ ಕಾಯ್ದುಕೊಳ್ಳುವಂತೆ ಋತುರಾಜ್ ಹೇಳಿ ಆ ರೀತಿಯಾಗಿ ವರ್ತಿಸಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟ್ವಿಟ್ಟರ್ ನಲ್ಲಿ ಗಾಯಕ್ವಾಡ್ ವರ್ತನೆಗೆ ಖಂಡನೆ
ಋತುರಾಜ್ ಗಾಯಕ್ವಾಡ್ ಅವರ ಈ ರೀತಿಯ ವರ್ತನೆ ಅನ್ನು ಖಂಡಿಸಿ ಕೆಲವು ನೆಟ್ಟಿಗರು ಕಿಡಿಕಾರಿದ್ದಾರೆ ಹಾಗೆ ಹಲವಾರು ಟ್ವಿಟ್ಟರ್ ಮೂಲಕ ಆ ವಿಡಿಯೋ ಅನ್ನು ಪೋಸ್ಟ್ ಮಾಡಿ ತಮ್ಮ ಕೋಪವನ್ನು ಹೊರಹಾಕಿದ್ದಾರೆ.

ಅಕ್ಷತ್ ಎಂಬ ಬಳಕೆದಾರರು ತುಂಬಾ ಕೆಟ್ಟ ಹಾಗು ಅಗೌರವ ತೋರುವಂತೆ ಋತುರಾಜ್ ಗಾಯಕ್ವಾಡ್ ವರ್ತಿಸಿದ್ದಾರೆ. ಇದು ಅವರಿಗೆ ಶೋಭೆ ತರುವಂತಹ ವರ್ತನೆ ಅಲ್ಲ, ಒಬ್ಬ ಮೈದಾನದ ಆಟಗಾರನ ಜೊತೆ ಈ ರೀತಿಯಾಗಿ ನಡೆದು ಕೊಳ್ಳುವುದನ್ನು ನೋಡಲು ನಮಗೆ ಬೇಸರ ಆಗುತ್ತದೆ ಎಂದು ವಿಡಯೋ ಹಂಚಿಕೊಂಡು ಬರೆದಿದ್ದಾರೆ. ಮತ್ತೊಂದು ಟ್ರೋಲ್ ಪೇಜ್ “ಋತುರಾಜ್ ಗಾಯಕ್ವಾಡ್ ಸೆಲ್ಫಿ ತೆಗೆದುಕೊಳ್ಳಲು ಬಂದ ಮೈದಾನದ ಆಟಗಾರನ ಜೊತೆ ಅಹಂಕಾರದ ವರ್ತನೆ ಅನ್ನು ತೋರಿದ್ದಾರೆ. ಎಲ್ಲರೂ ಎಲ್ಲರನ್ನು ಸಮಾನ ದೃಷ್ಟಿಯಿಂದ ನೋಡಲು ಸಾಧ್ಯವಿಲ್ಲ, ಹಾಗೆ ನಡೆದು ಕೊಳ್ಳುವುದು ರೋಹಿತ್ ಶರ್ಮಾ ಮಾತ್ರ ಅಂತಾ ಹೊಗಳಿದ್ದಾರೆ.

ಇದನ್ನೂ ಓದಿ: Ravindra Jadeja: ಕ್ರಿಕೆಟ್​ ಮಾತ್ರವಲ್ಲ, ಜಡೇಜಾಗೆ ಪ್ರಾಣಿಗಳನ್ನು ಸಾಕೋದು ಅಂದ್ರೆ ಶಾನೆ ಇಷ್ಟ!

ಸರ್ ದಿಂಡಾ ಎಂಬ ಮತ್ತೊಬ್ಬ ಬಳಕೆದಾರರು ಋತುರಾಜ್ ಗಾಯಕ್ವಾಡ್ ಅವರಿಗೆ ನಾಚಿಕೆ ಆಗಬೇಕು, ಅವರು ತುಂಬಾ ಅಸಭ್ಯವಾಗಿ ವರ್ತಿಸಿದ್ದಾರೆ ಅಂತಾ ಚೀಮಾರಿ ಹಾಕಿದ್ದಾರೆ. ಕೋವಿಡ್ ಇರಲಿ ಏನೇ ಇರಲಿ ಒಬ್ಬ ವ್ಯಕ್ತಿಯಿಂದ ಇದನ್ನು ನೀರಿಕ್ಷಿಸುವುದು ಕಷ್ಟ. ಈ ರೀತಿಯಾದಂತಹ ನಡವಳಿಕೆಯನ್ನು ಋತುರಾಜ್ ಗಾಯಕ್ವಾಡ್ ಅವರಿಂದ ನಾವೆಂದು ಊಹಿಸಿರಲಿಲ್ಲ ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ಐದನೇ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಬಗ್ಗೆಯೂ ಅಭಿಮಾನಿಗಳು ಋತುರಾಜ್‌ ಗಾಯಕ್ವಾಡ್‌ ಅವರನ್ನು ಟೀಕಿಸಿದ್ದಾರೆ.
Published by:Ashwini Prabhu
First published: