ನಮ್ಮ ಭಾರತೀಯ ಮಹಿಳೆಯರ ಹಾಕಿ ತಂಡವು ಸೆಮಿಫೈನಲ್ ಪ್ರವೇಶಿಸಿದ್ದು ನಮಗೆಲ್ಲರಿಗೂ ತಿಳಿದಿದೆ, ಇದು ಎಲ್ಲಾ ಭಾರತೀಯರಿಗೆ ಹೆಮ್ಮೆಯ ಕ್ಷಣವಾಗಿದೆ. ಭಾರತದಾದ್ಯಂತ ಪ್ರತಿಯೊಬ್ಬರೂ ಮಹಿಳೆಯರ ಹಾಕಿ ತಂಡಕ್ಕೆ ತಮ್ಮ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ ಮತ್ತು ತಂಡಕ್ಕೆ ಶುಭ ಹಾರೈಸುತ್ತಿದ್ದಾರೆ.ಈ ಕ್ಷಣ ಶಾರುಖ್ ಖಾನ್ ಅವರಿಗೆ ವಿಶೇಷವಾಗಿದೆ ಏಕೆಂದರೆ ಅವರು ಭಾರತ ಮಹಿಳೆಯರ ಹಾಕಿ ತಂಡದ ತರಬೇತುದಾರರ ಪಾತ್ರವನ್ನು ನಿರ್ವಹಿಸಿದ್ದರು. ಭಾರತೀಯ ಮಹಿಳಾ ಹಾಕಿ ತರಬೇತುದಾರ ಜೋರ್ಡ್ ಮರಿಜೆ ಅವರ ಸೆಲ್ಫಿಗೆ ಶಾರುಖ್ ಖಾನ್ ಅವರಿಂದ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ನಾವು ಬಾಲಿವುಡ್‌ನಲ್ಲಿ ಶಾರುಖ್ ಖಾನ್ ರೋಮ್ಯಾಂಟಿಕ್ ಚಲನಚಿತ್ರಗಳ ಹೊರೆತಾಗಿಯೂ ಅವರು ಹಲವಾರು ವಿಭಿನ್ನ ಚಿತ್ರಗಳಲ್ಲಿ ನಟಿಸಿದ್ದಾರೆ, ಅವರ ವಿಭಿನ್ನ ಚಿತ್ರಗಳು ಯಾವಾಗಲೂ ಬಾಕ್ಸ್‌ಆಫೀಸ್‌ನಲ್ಲಿ ಭಾರಿ ಸದ್ದು ಮಾಡುತ್ತವೆ ಉದಾ: ಸ್ವದೇಶ್,ಬಾಜಿಗರ್ ಇತ್ಯಾದಿ. ಆದರೆ ಎಲ್ಲಾ ವರ್ಗಕ್ಕೂ ಇಷ್ಟವಾಗುವ ಒಂದು ಚಿತ್ರವೆಂದರೆ ಚಕ್ ದೇ! ಇಂಡಿಯಾ ಮಹಿಳಾ ಹಾಕಿ ತಂಡದ ಕೋಚ್ ಆಗಿದ್ದ ಕಬೀರ್ ಖಾನ್‌ರವರ ಪಾತ್ರ ಆಧಾರಿತ ಚಿತ್ರವಿದು. ಈ ಚಿತ್ರದಲ್ಲಿ ಶಾರುಖ್ ಖಾನ್‌ರವರು ಕಬೀರ್ ಖಾನ್ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ, ಮಹಿಳಾ ಹಾಕಿ ತಂಡದ ತರಬೇತುದಾರ ನಿಜವಾದ, ಶಿಸ್ತಿನ ಮತ್ತು ಕಠಿಣ ಪರಿಶ್ರಮದ ಪಾತ್ರ ಎಲ್ಲಾರಿಗೂ ಇಷ್ಟವಾಗುತ್ತದೆ. "70 ನಿಮಿಷಗಳ" ಭಾಷಣವು ಈಗಲೂ ಅತ್ಯಂತ ಜನಪ್ರಿಯ ಮೆಮ್ ಆಗಿದೆ. ಈ ಚಲನಚಿತ್ರವೂ ಸಹ ಅತಿ ಹೆಚ್ಚು ಜನರ ಪ್ರೀತಿಯನ್ನು ಗಳಿಸಿತ್ತು. ಚೆಕ್ ದೇ ಇಂಡಿಯಾ ಚಿಲನಚಿತ್ರವನ್ನು ನಮ್ಮ ಟಿವಿ ಪರದೆಯ ಮೇಲೆ ಎಷ್ಟೇ ಬಾರಿ ನೋಡಿದರು ನಮಗೆ ಬೇಜಾರೆನಿಸುವುದಿಲ್ಲ.
ಟೀಮ್ ಇಂಡಿಯಾ ಹಾಕಿ ಮಹಿಳಾ ಹಾಕಿ ತಂಡವು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮೊಟ್ಟಮೊದಲ ಬಾರಿಗೆ ಸೆಮಿಫೈನಲ್ ತಲುಪುವ ಮೂಲಕ ಆಸ್ಟ್ರೇಲಿಯಾ ತಂಡವನ್ನು (1-0) ಗೋಲ್‌ನಿಂದ ಸೋಲಿಸಿದೆ. ಅಭಿಮಾನಿಗಳು ಟ್ವಿಟ್ಟರ್‌ನಲ್ಲಿ ಈಗೀನ ಮಹಿಳಾ ಹಾಕಿ ತಂಡ ಕೋಚ್ ಜೊರ್ಡ್ ಮರಿಜ್ನೆ ಅವರನ್ನು ಎಸ್‌ಆರ್‌ಕೆ ಅವರ ಕಾಲ್ಪನಿಕ ಕಬೀರ್ ಖಾನ್‌ಗೆ ಪಾತ್ರಕ್ಕೆ ಹೋಲಿಸುತ್ತಿದ್ದಾರೆ. ಈ ಮೂಲಕ ಕೋಚ್ನ ಸಮರ್ಪಣಾ ಕೆಲಸವನ್ನು ಶ್ಲಾಘಿಸುತ್ತಿದ್ದಾರೆ.
Haan haan no problem. Just bring some Gold on your way back….for a billion family members. This time Dhanteras is also on 2nd Nov. From: Ex-coach Kabir Khan. https://t.co/QcnqbtLVGX
— Shah Rukh Khan (@iamsrk) August 2, 2021
ಮರಿಜ್ನೆ ಈ ಹಿಂದೆ ಟ್ವಿಟ್ಟರ್ ನಲ್ಲಿ ತಮ್ಮ ಬಾಲಕಿಯರ ಹಾಕಿ ತಂಡದೊಂದಿಗೆ ಅತ್ಯಂತ ಖುಷಿಯ ಸೆಲ್ಫಿಯನ್ನು ಹಂಚಿಕೊಂಡಿದ್ದರು, ಮತ್ತು ಶಾರುಖ್ ಮರಿಜ್ನೆ ರವರ ಟ್ವಿಟ್‌ಗೆ ಅತ್ಯಂತ ಸಿಹಿಯಾದ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಭಾರತೀಯ ತಂಡದ ಮಾಜಿ ಕೋಚ್ ಆಗಿ, ಶಾರುಖ್ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಒಂದು ವಿನಂತಿಯನ್ನು ಮುಂದಿಟ್ಟಿರುವುದಾಗಿ ಹೇಳುತ್ತ, "ಪರವಾಗಿಲ್ಲ. ನೀವು ಮರಳುವಾಗ ಕೆಲವು ಚಿನ್ನದ ನಾಣ್ಯಗಳನ್ನು ತನ್ನಿ ... 1 ಶತಕೋಟಿ ಕುಟುಂಬ ಸದಸ್ಯರರು ಕಾಯುತ್ತಿದ್ದಾರೆ. ಈ ಬಾರಿ ಧಂತೇರಾಸ್ ಕೂಡ ನವೆಂಬರ್ 2 ರಂದು ಎಂದು ಮರಿಜ್ನೆ ರವರ ಟ್ವಿಟ್‌ಗೆ ಶಾರುಖ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅಭಿಮಾನಿಯೊಬ್ಬರು ಟ್ವೀಟ್ಟರ್‌ನಲ್ಲಿ "ಭಾರತೀಯ ಮಹಿಳಾ ಹಾಕಿ ತಂಡವನ್ನು ಬದಲಾಯಿಸಿದ ಇಬ್ಬರು ಪುರುಷರು. ಕಬೀರ್ ಖಾನ್ (ರೀಲ್ ಲೈಫ್) ಮರಿಜ್ನೆ ( ನಿಜ ಜೀವನ) ಎಂದು ಕಾಮೆಂಟ್ ಮಾಡಿದ್ದಾರೆ. ಈ ಕುರಿತು ಇನ್ನಷ್ಟು ಮಾಹಿತಿ ಅಥವಾ ಮರಿಜ್ನೆ ಹಂಚಿಕೊಂಡಿರುವ ಫೋಟೋವನ್ನು ನೋಡಲು ಶಾರುಖ್ ಅಥವಾ ಮರಿಜ್ನೆ ಟ್ವೀಟರ್ ಖಾತೆಗೆ ಭೇಟಿ ನೀಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ