• Home
  • »
  • News
  • »
  • sports
  • »
  • Rishabh Pant Accident: ರಿಷಭ್​ ಪಂತ್​ ಆರೋಗ್ಯದಲ್ಲಿ ಚೇತರಿಕೆ, Get Well Soon ಎಂದ ಮಾಜಿ ಕ್ರಿಕೆಟಿಗರು

Rishabh Pant Accident: ರಿಷಭ್​ ಪಂತ್​ ಆರೋಗ್ಯದಲ್ಲಿ ಚೇತರಿಕೆ, Get Well Soon ಎಂದ ಮಾಜಿ ಕ್ರಿಕೆಟಿಗರು

ರಿಷಭ್ ಪಂತ್

ರಿಷಭ್ ಪಂತ್

Rishabh Pant Accident: ಟೀಂ ಇಂಡಿಯಾದ ವಿಕೆಟ್ ಕೀಪರ್- ಬ್ಯಾಟ್ಸ್​ಮನ್ ರಿಷಭ್​ ಪಂತ್ (Rishabh Pant) ಅವರಿಗೆ ಕಾರು ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ರಿಷಭ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳು ಸಹ ಅವರ ಆರೋಗ್ಯದ ಕುರಿತು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಮುಂದೆ ಓದಿ ...
  • Share this:

ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್​ ಪಂತ್ (Rishabh Pant) ಕಾರು ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತ (Accident) ಎಷ್ಟು ಗಂಭೀರವಾಗಿದೆ ಎಂದರೆ ಪಂತ್ ಅವರ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಪಂತ್ ಉತ್ತರಾಖಂಡದಿಂದ ದೆಹಲಿಗೆ (Delhi) ಹೋಗುತ್ತಿದ್ದಾಗ ಕಾರು (Car) ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಉತ್ತರಾಖಂಡದ ರೂರ್ಕಿ ಬಳಿ ಬೆಳಗ್ಗೆ 5.15ಕ್ಕೆ ಅಪಘಾತ ಸಂಭವಿಸಿದೆ. ಅಪಘಾತದ ನಂತರ, ಪಂತ್ ಸ್ವತಃ ಕಿಟಕಿಯಿಂದ ಹೊರಬಂದಿದ್ದಾರೆ. ಬಳಿಕ ಸ್ಥಳೀಯರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮೊದಲು ಅವರನ್ನು ರೂರ್ಕಿಯ ಆಸ್ಪತ್ರೆಗೆ ದಾಖಲಿಸಲಾಯಿತು, ನಂತರ ಡೆಹ್ರಾಡೂನ್‌ಗೆ ಕರೆದೊಯ್ಯಲಾಗಿದೆ. ರಸ್ತೆಯಲ್ಲಿ ಮಂಜು ಕವಿದಿದ್ದರಿಂದ ಮುಂಭಾಗ ಕಾಣದ ಕಾರಣ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ಅಪಘಾತದಲ್ಲಿ ಪಂತ್ ಅವರ ತಲೆಗೆ ಪೆಟ್ಟಾಗಿದ್ದು, ಅವರ ಕಾಲಿನ ಮೂಳೆ ಮುರಿತವಾಗಿದೆ.


ಪಂತ್​ ಆರೋಗಕ್ಕಾಗಿ ಪ್ರಾರ್ಥನೆ:


ಇದೀಗ ಟೀಂ ಇಂಡಿಯಾ ಸ್ಟಾರ್ ಆಟಗಾರ ರಿಷಭ್ ಪಂತ್ ಅವರ ಅಭಿಮಾನಿಗಳು ಹಾಗೂ ಕ್ರಿಕೆಟಿಗರು ಪಂತ್​ ಅಪಘಾತದಿಂದ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಜೊತೆಗೆ ಆರೋಗ್ಯದ ಬಗ್ಗೆ, ಮಾಜಿ ಕ್ರಿಕೆಟಿಗರು ಸಹ ಟ್ವೀಟ್ ಮಾಡುತ್ತಿದ್ದಾರೆ. ಪಂತ್​ ಕಾರು ಮೊದಲು ಡಿವೈಡರ್​ಗೆ ಹೊಡೆದಿದೆ. ಇದಾದ ಬಳಿಕ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಈ ಸುದ್ದಿ ತಿಳಿದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪಂತ್ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಪಂತ್ ಶೀಘ್ರ ಗುಣಮುಖರಾಗಲಿ ಎಂದು ವಿವಿಎಸ್ ಲಕ್ಷ್ಮಣ್, ಹರ್ಷಾ ಭೋಗ್ಲೆ ಮತ್ತು ಹಾಲಿ ಮತ್ತು ಮಾಜಿ ಕ್ರಿಕೆಟಿಗರೂ ಸಹ ಪ್ರಾರ್ಥಿಸುತ್ತಿದ್ದಾರೆ.ಇದರ ನಡುವೆ ರಿಷಭ್ ಪಂತ್ ನಿದ್ದೆ ಮಾಡಿದ್ದರಿಂದ ಕಾರು ಅಪಘಾತ ಸಂಭವಿಸಿರಬಹುದು ಎಂದು ಊಹಿಸಲಾಗಿದೆ. ಪಂತ್ ಗಾಯಗೊಂಡಿರುವ ಹಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.ಅಲ್ಲದೆ, ರಿಷಬ್ ಪಂತ್ ಅವರ ಆರೋಗ್ಯದ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್ ಅವರು ತಂಡದ ನಾಯಕ ರಿಷಬ್ ಪಂತ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಟ್ವೀಟ್​ ಮೂಲಕ ಪ್ರಾರ್ಥಿಸಿದ್ದಾರೆ.ಇದಲ್ಲದೆ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಟ್ವೀಟ್ ಮಾಡಿದ್ದಾರೆ, 'ರಿಷಬ್ ಪಂತ್ ಅವರು ಚೇತರಿಕೆಯ ಹಾದಿಯಲ್ಲಿ ಹೋರಾಡುತ್ತಿರುವಾಗ ನನ್ನ ಪ್ರಾರ್ಥನೆಗಳು ಅವರೊಂದಿಗೆ ಇವೆ. ನಾನು ಅವರ ಕುಟುಂಬ ಮತ್ತು ವೈದ್ಯರೊಂದಿಗೆ ಮಾತನಾಡಿದ್ದೇನೆ. ರಿಷಭ್ ಸ್ಥಿರವಾಗಿದ್ದು, ಸ್ಕ್ಯಾನ್ ಮಾಡಲಾಗುತ್ತಿದೆ. ನಾವು ಅವರ ಪ್ರಗತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಮತ್ತು ಅವರಿಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡುತ್ತೇವೆ‘ ಎಂದು ಅವರು ಹೇಳಿದರು.


ಇದನ್ನೂ ಓದಿ: Rishabh Pant Accident: ರಿಷಭ್​ ಪಂತ್​ ಕುರಿತು ಮಹತ್ವದ ಹೇಳಿಕೆ ನೀಡಿದ ಬಿಸಿಸಿಐ


ಪಂತ್​ ಬ್ಯಾಗ್​ ಕಳವು:


ರಿಷಭ್​ ಪಂತ್​ ಆ್ಯಕ್ಸಿಡೆಂಟ್ ಆಗಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಒಂದಿಷ್ಟು ಜನ ಯಾರಿಗೆ ಏನಾಗಿದೆ ಅಂತ ಮೊದಲು ನೋಡಿದ್ದಾರೆ. ನಂತರ ಅದು ರಿಷಭ್​ ಪಂತ್ ಅಂತ ಗೊತ್ತಾಗುತ್ತಿದ್ದಂತೆ ಮೊಬೈಲ್ ತೆಗೆದು ವಿಡಿಯೋ ಮಾಡಿಕೊಂಡಿದ್ದಾರೆ. ಆ್ಯಂಬುಲೆನ್ಸ್​ಗೆ ಕಾಲ್​ ಮಾಡಿ ಅಂದರೂ, ರಿಷಭ್​ ಬ್ಯಾಗ್​ನಲ್ಲಿದ್ದ ಹಣವನ್ನು ದೋಚಿ ಎಸ್ಕೇಪ್​ ಆಗಿದ್ದಾರಂತೆ. ಇನ್ನೂ ಮೂಲಗಳ ವರದಿ ಪ್ರಕಾರ ಸ್ವತಃ ರಿಷಭ್ ಪಂತ್​ ಅವ್ರೇ ಆ್ಯಂಬುಲೆನ್ಸ್​ಗೆ ಕರೆ ಮಾಡಿದ್ದಾರಂತೆ.

Published by:shrikrishna bhat
First published: