• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Rohan Bopanna: ನಿಮ್ಮ ಪತ್ನಿ ಮೋಸ್ಟ್ ಬ್ಯೂಟಿಫುಲ್ ವುಮನ್ ಎಂದ ಅಭಿಮಾನಿ, ಬೋಪಣ್ಣ ಪ್ರತಿಕ್ರಿಯೆ ಹೇಗಿತ್ತು ನೋಡಿ!

Rohan Bopanna: ನಿಮ್ಮ ಪತ್ನಿ ಮೋಸ್ಟ್ ಬ್ಯೂಟಿಫುಲ್ ವುಮನ್ ಎಂದ ಅಭಿಮಾನಿ, ಬೋಪಣ್ಣ ಪ್ರತಿಕ್ರಿಯೆ ಹೇಗಿತ್ತು ನೋಡಿ!

ರೋಹನ್ ಬೋಪಣ್ಣ

ರೋಹನ್ ಬೋಪಣ್ಣ

Rohan Bopanna: ಪಂದ್ಯದ ನಂತರ ಅಭಿಮಾನಿಯೊಬ್ಬರು ಬೋಪಣ್ಣ ಅವರ ಪತ್ನಿಯನ್ನು 'ಮೋಸ್ಟ್ ಬ್ಯೂಟಿಫುಲ್ ವುಮನ್' ಎಂದು ಬಣ್ಣಿಸಿದ್ದಾರೆ. ಈ ಟ್ವೀಟ್​ ಇದೀಗ ಸಖತ್ ವೈರಲ್ ಆಗಿದೆ.

  • Trending Desk
  • 4-MIN READ
  • Last Updated :
  • Share this:

ಸಾಮಾನ್ಯವಾಗಿ ಈ ಬಾಲಿವುಡ್ ನಟರ, ಕ್ರಿಕೆಟ್ ಆಟಗಾರರ ಹೆಂಡತಿಯರು ತುಂಬಾನೇ ಸುಂದರವಾಗಿರುತ್ತಾರೆ. ಎಷ್ಟೋ ಜನ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರ ಮತ್ತು ನಟರ ಪತ್ನಿಯರು ಹೇಗೆ ಕಾಣಿಸುತ್ತಾರೆ, ಜೋಡಿ ಹೇಗಿದೆ ಅಂತ ತಿಳಿದುಕೊಳ್ಳಲು ತುಂಬಾನೇ ಕಾತುರರಾಗಿರುತ್ತಾರೆ. ಈಗೇಕೆ ಇದರ ಬಗ್ಗೆ ಮಾತು ಅಂತೀರಾ? ಇಲ್ಲೊಬ್ಬ ಅಭಿಮಾನಿ ಓಪನ್ ಆಗಿ ಒಬ್ಬ ಟೆನಿಸ್ (Tennis) ಆಟಗಾರನ ಹೆಂಡತಿ ತುಂಬಾನೇ ಸುಂದರವಾಗಿದ್ದಾರೆ ಎಂದು ಹೇಳಿದ್ದಾರೆ. ಇದನ್ನು ಕೇಳಿ ನಿಮಗೆ ಸ್ವಲ್ಪ ಆಶ್ಚರ್ಯವಂತೂ ಗ್ಯಾರೆಂಟಿ ಆಗಬಹುದು. ಭಾರತದ ಟೆನಿಸ್ ತಾರೆಗಳಾದ ರೋಹನ್ ಬೋಪಣ್ಣ (Rohan Bopanna) ಮತ್ತು ಸಾನಿಯಾ ಮಿರ್ಜಾ (Sania Mirza) ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ವಿಭಾಗದ ಫೈನಲ್ ನಲ್ಲಿ ಸೋತಿದ್ದಾರೆ.


ಸಾನಿಯಾ-ರೋಹನ್ ಪಂದ್ಯ ನೋಡೋದಕ್ಕೆ ಯಾರೆಲ್ಲಾ ಬಂದಿದ್ರು?


ಗ್ರ್ಯಾಂಡ್ ಸ್ಲ್ಯಾಮ್ ನಲ್ಲಿ ತಮ್ಮ ಕೊನೆಯ ಪಂದ್ಯವನ್ನು ನೋಡಲು ಸಾನಿಯಾ ಅವರ ಮಗ ಇಜಾನ್ ಸೇರಿದಂತೆ ಅವರ ಕುಟುಂಬವು ಮೆಲ್ಬೋರ್ನ್ ಪಾರ್ಕ್ ನಲ್ಲಿ ಹಾಜರಿದ್ದರೆ, ಇತ್ತ ರೋಹನ್ ಬೋಪಣ್ಣ ಅವರ ಪತ್ನಿ ಮತ್ತು ಮಕ್ಕಳು ಸಹ ಭಾರತೀಯ ಜೋಡಿಯನ್ನು ಹುರಿದುಂಬಿಸುತ್ತಿರುವುದು ಕಂಡು ಬಂದಿತ್ತು.


ಬೋಪಣ್ಣ ಅವರ ಪತ್ನಿಯನ್ನ ನೋಡಿ ಏನಂದ್ರು ಅಭಿಮಾನಿ?:


ಪಂದ್ಯದ ನಂತರ ಅಭಿಮಾನಿಯೊಬ್ಬರು ಬೋಪಣ್ಣ ಅವರ ಪತ್ನಿಯನ್ನು 'ಮೋಸ್ಟ್ ಬ್ಯೂಟಿಫುಲ್ ವುಮನ್' ಎಂದು ಬಣ್ಣಿಸಿದ್ದಾರೆ. ವೈರಲ್ ಆಗಿರುವ ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ ಬೋಪಣ್ಣ ಅವರು "ಹೌದು.. ನಾನೂ ಅದನ್ನ ಒಪ್ಪುತ್ತೇನೆ" ಎಂದು ಬರೆದುಕೊಂಡಿದ್ದಾರೆ.



ಆಸ್ಟ್ರೇಲಿಯನ್ ಓಪನ್ ನಲ್ಲಿ ರನ್ನರ್ ಅಪ್ :


ಆಸ್ಟ್ರೇಲಿಯನ್ ಓಪನ್ ನಲ್ಲಿ ರನ್ನರ್ ಅಪ್ ಸ್ಥಾನ ಪಡೆಯುವ ಮೂಲಕ ಸಾನಿಯಾ ತಮ್ಮ ಅದ್ಭುತ ಗ್ರ್ಯಾಂಡ್ ಸ್ಲಾಮ್ ವೃತ್ತಿಜೀವನವನ್ನು ಕೊನೆಗೊಳಿಸಿದರು. ನಾನು ಅಳುತ್ತಿದ್ದರೆ, ಅದು ಸಂತೋಷದ ಕಣ್ಣೀರು ಅಷ್ಟೇ. ನಾನು ಇನ್ನೂ ಒಂದೆರಡು ಪಂದ್ಯಾವಳಿಗಳನ್ನು ಆಡಲಿದ್ದೇನೆ ಆದರೆ ನನ್ನ ವೃತ್ತಿಪರ ವೃತ್ತಿಜೀವನದ ಪ್ರಯಾಣವು ಮೆಲ್ಬೋರ್ನ್ ನಲ್ಲಿ ಪ್ರಾರಂಭವಾಯಿತು ಎಂದು ಸಾನಿಯಾ ಭಾವುಕರಾಗಿ ಹೇಳಿದ್ದರು.


ಇದನ್ನೂ ಓದಿ: Shubman Gill: ಒಂದಲ್ಲಾ ಎರಡಲ್ಲಾ ಬರೋಬ್ಬರಿ 159 ಆಟಗಾರರಿಗಿಂತ ಮುಂದಿದ್ದಾರೆ ಗಿಲ್​, ಈ ವರ್ಷ ಶುಭ್​ಮನ್ ಟಚ್​ ಮಾಡೋದು ಕಷ್ಟ


ನಾನು 14 ವರ್ಷದವಳಾಗಿದ್ದಾಗ ರೋಹನ್ ನನ್ನ ಮೊದಲ ಮಿಶ್ರ ಡಬಲ್ಸ್ ನ ಜೋಡಿದಾರರಾಗಿದ್ದರು ಮತ್ತು ನಾವು ಇದುವರೆಗೂ ಅನೇಕ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದೇವೆ. ಅವರು ನನ್ನ ಉತ್ತಮ ಸ್ನೇಹಿತ ಮತ್ತು ನನ್ನ ವೃತ್ತಿಜೀವನವನ್ನು ಕೊನೆಗೊಳಿಸುವ ಪಂದ್ಯದಲ್ಲಿ ಆಡಿದ ಅತ್ಯುತ್ತಮ ಜೋಡಿದಾರರಲ್ಲಿ ಒಬ್ಬರು ಎಂದು ಸಾನಿಯಾ ಮಿರ್ಜಾ ಹೇಳಿಕೊಂಡಿದ್ದಾರೆ.


ಸಾನಿಯಾಗೆ ಕೊನೆಯ ಟೂರ್ನಮೆಂಟ್ ಯಾವುದು?:


ಮುಂದಿನ ತಿಂಗಳು ದುಬೈನಲ್ಲಿ ನಡೆಯಲಿರುವ ಡಬ್ಲ್ಯುಟಿಎ ಈವೆಂಟ್ ತನ್ನ ಕೊನೆಯ ಟೂರ್ನಮೆಂಟ್ ಆಗಲಿದೆ ಎಂದು ಈ ಹಿಂದೆ ಘೋಷಿಸಿದ್ದ 36 ವರ್ಷದ ಆಟಗಾರ್ತಿ, ಮೂರು ಮಿಶ್ರ ಡಬಲ್ಸ್ ಟ್ರೋಫಿಗಳು ಸೇರಿದಂತೆ ಆರು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಭಾರತದ ಅತ್ಯಂತ ನಿಪುಣ ಮಹಿಳಾ ಟೆನಿಸ್ ಆಟಗಾರ್ತಿಯಾಗಿದ್ದಾರೆ.




ಅವರು 2009ರ ಆಸ್ಟ್ರೇಲಿಯನ್ ಓಪನ್ ಮತ್ತು 2012ರ ಫ್ರೆಂಚ್ ಓಪನ್ ನಲ್ಲಿ ಮಹೇಶ್ ಭೂಪತಿ ಅವರೊಂದಿಗೆ ಮಿಶ್ರ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದರು ಮತ್ತು 2014ರ ಯುಎಸ್ ಓಪನ್ ನಲ್ಲಿ ಬ್ರೆಜಿಲ್ ನ ಬ್ರೂನೋ ಸೊರೆಸ್ ಅವರೊಂದಿಗೆ ಸಹ ಪ್ರಶಸ್ತಿಗಳನ್ನು ಗೆದ್ದಿದ್ದರು.

Published by:shrikrishna bhat
First published: