ಅಮೆರಿಕ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್ ಆಗಿ ಕರ್ನಾಟಕದ ಮಾಜಿ ಆಟಗಾರ ಆಯ್ಕೆ!

USA Cricket Team: ಕ್ರಿಕೆಟ್‌ ಲೋಕದಲ್ಲಿ ಯುಎಸ್‌ಎ ಇನ್ನೂ ಅಂಬೆಗಾಲಿಡುತ್ತಿದೆಯಷ್ಟೆ. ಕ್ರಿಕೆಟ್ ಜನಪ್ರಿಯವಲ್ಲದ ದೇಶವಾದ ಕಾರಣ ಈ ಕ್ರೀಡೆಯಲ್ಲಿ ಸಾಧನೆ ಮಾಡಲು ಯುಎಸ್‌ಎಯಂತಾ ರಾಷ್ಟ್ರಕ್ಕೂ ಸಾಧ್ಯವಾಗಲಿಲ್ಲ.

ಆರ್. ವಿನಯ್ ಕುಮಾರ್ ಜೊತೆ ಅರುಣ್ ಕುಮಾರ್.

ಆರ್. ವಿನಯ್ ಕುಮಾರ್ ಜೊತೆ ಅರುಣ್ ಕುಮಾರ್.

 • Share this:
  ಕರ್ನಾಟಕ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಯಶಸ್ವಿ ಕೋಚ್ ಆಗಿದ್ದ ಜೆ. ಅರುಣ್ ಕುಮಾರ್ ಅವರು, ಯುಎಸ್​ಎ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ದೇಸಿ ಕ್ರಿಕೆಟ್‌ನ ಕೋಚಿಂಗ್ ವಿಭಾಗದಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಿಸಿದ ಅರುಣ್ ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಕಾಶವನ್ನು ಗಳಿಸಿದ್ದಾರೆ.

  ಅನೇಕ ವರ್ಷಗಳ ಕಾಲ ಕರ್ನಾಟಕ ತಂಡದ ಕೋಚ್‌ ಆಗಿದ್ದ ಇವರು ಐಪಿಎಲ್‌ನಲ್ಲಿ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ಬ್ಯಾಟಿಂಗ್‌ ತರಬೇತುದಾರರಾಗಿಯೂ ಕೆಲಸ ಮಾಡಿದ್ದಾರೆ. ಅಲ್ಲದೆ ಪುದುಚೇರಿ ತಂಡಕ್ಕೂ ಮಾರ್ಗದರ್ಶನ ನೀಡಿದ್ದರು.

     ಕತ್ತಲೆಯಲ್ಲಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ..!

  ಅರುಣ್‌ ಅವರ ಗರಡಿಯಲ್ಲಿ ಪಳಗಿದ್ದ ರಾಜ್ಯ ತಂಡವು 2013-14 ಹಾಗೂ 2014-15ನೇ ಋತುಗಳಲ್ಲಿ ರಣಜಿ ಟ್ರೋಫಿ, ಇರಾನಿ ಕಪ್‌ ಹಾಗೂ ವಿಜಯ್‌ ಹಜಾರೆ ಟ್ರೋಫಿಗಳನ್ನು ಗೆದ್ದು 'ಡಬಲ್‌ ತ್ರಿಬಲ್‌' ಸಾಧನೆ ಮಾಡಿತ್ತು.

  'ಅಮೆರಿಕ ಪುರುಷರ ತಂಡದ ಕೋಚ್‌ ಹುದ್ದೆಗೆ ಅರುಣ್ ಸೂಕ್ತ ವ್ಯಕ್ತಿ. ಹೀಗಾಗಿ ಅವರ ಜೊತೆ ಎರಡೂವರೆ ವರ್ಷ ಒಪ್ಪಂದ ಮಾಡಿಕೊಂಡಿದ್ದೇವೆ. ಹಲವು ಸಮಯದಿಂದ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಮಾಜಿ ರಣಜಿ ಆಟಗಾರ, ಐಪಿಎಲ್‌ ಆಟಗಾರ ಮತ್ತು ಕೋಚ್‌ ಜೆ ಅರುಣ್ ಕುಮಾರ್‌ ಅವರನ್ನು ಆಯ್ಕೆ ಮಾಡಿದ್ದೇವೆ' ಎಂದು ಅಮೆರಿಕ ಕ್ರಿಕೆಟ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಇಯಾನ್‌ ಹಿಗ್ಗಿನ್ಸ್‌, ಮಂಗಳವಾರ ಹೇಳಿದ್ದಾರೆ.

  ಯುವಿ ಸ್ನೇಹಕ್ಕಾಗಿ ಪ್ರೀತಿಯನ್ನೇ ತ್ಯಾಗ ಮಾಡಿದ್ರಂತೆ ಧೋನಿ..!

  ಕ್ರಿಕೆಟ್‌ ಲೋಕದಲ್ಲಿ ಯುಎಸ್‌ಎ ಇನ್ನೂ ಅಂಬೆಗಾಲಿಡುತ್ತಿದೆಯಷ್ಟೆ. ಕ್ರಿಕೆಟ್ ಜನಪ್ರಿಯವಲ್ಲದ ದೇಶವಾದ ಕಾರಣ ಈ ಕ್ರೀಡೆಯಲ್ಲಿ ಸಾಧನೆ ಮಾಡಲು ಯುಎಸ್‌ಎಯಂತಾ ರಾಷ್ಟ್ರಕ್ಕೂ ಸಾಧ್ಯವಾಗಲಿಲ್ಲ. ಈ ಮಧ್ಯೆ ಕನ್ನಡಿಗ ಕೋಚ್ ಅರುಣ್ ಕುಮಾರ್‌ಗೆ ದೊಡ್ಡ ಜವಾಬ್ಧಾರಿ ಸಿಕ್ಕಿದೆ. ಅರುಣ್ 109 ಪ್ರಥಮ ದರ್ಜೆ ಪಂದ್ಯಗಳಿಂದ 7208 ರನ್​, 100 ಲಿಸ್ಟ್​ ಎ ಪಂದ್ಯಗಳನ್ನು 3227 ರನ್​ಗಳಿಸಿದ್ದಾರೆ.
  First published: