ಫಿಫಾ ವಿಶ್ವಕಪ್ 2018: ನಾಕೌಟ್ ಪಂದ್ಯಕ್ಕೆ ವೇದಿಕೆ ಸಜ್ಜು: ಯಾವ ಯಾವ ತಂಡ ಮುಖಾಮುಖಿ..?

news18
Updated:June 29, 2018, 4:24 PM IST
ಫಿಫಾ ವಿಶ್ವಕಪ್ 2018: ನಾಕೌಟ್ ಪಂದ್ಯಕ್ಕೆ ವೇದಿಕೆ ಸಜ್ಜು: ಯಾವ ಯಾವ ತಂಡ ಮುಖಾಮುಖಿ..?
news18
Updated: June 29, 2018, 4:24 PM IST
ನ್ಯೂಸ್ 18 ಕನ್ನಡ

ರಷ್ಯಾ (ಜೂ. 29): ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿ ಸಾಕಷ್ಟು ಕುತೂಹಲದಿಂದ ಕೂಡಿದ್ದು, ಸದ್ಯ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡಿದೆ. ಮುಂದಿನ 16ರ ಘಟ್ಟದ ವೇಳಾಪಟ್ಟಿಯು ಸಿದ್ದಗೊಂಡಿದ್ದು ಜೂನ್ 30 ರಿಂದ ಜುಲೈ 3ರ ತನಕ ನಡೆಯಲಿದೆ.

32 ತಂಡಗಳೊಂದಿಗೆ ಆರಂಭವಾದ ಫಿಫಾ ವಿಶ್ವಕಪ್​​​​​ನಲ್ಲಿ ಈಗ 16 ತಂಡಗಳು ಉಳಿದಿದ್ದು, ನೈಜ ಕಾದಾಟ ಇಲ್ಲಿಂದ ಆರಂಭವಾಗಲಿದೆ. ಹಾಲಿ ಚಾಂಪಿಯನ್ ಜರ್ಮನಿ ತಂಡ ಲೀಗ್ ಹಂತದಲ್ಲೇ ಹೊರ ಬಿದ್ದಿದ್ದು ಅಭಿಮಾನಿಗಳಿಗೆ ದೊಡ್ಡ ಆಘಾತ ಉಂಟುಮಾಡಿದೆ. ಫ್ರಾನ್ಸ್, ಅರ್ಜೆಂಟೀನಾ, ಉರುಗ್ವೆ, ಪೋರ್ಚುಗಲ್, ಸ್ಪೇನ್, ರಷ್ಯಾ, ಕ್ರೋವೇಶಿಯಾ, ಡೆನ್ಮಾರ್ಕ್, ಬ್ರೆಜಿಲ್, ಮೆಕ್ಸಿಕೋ, ಬೆಲ್ಜಿಯಂ, ಜಪಾನ್, ಸ್ವೀಡನ್, ಸ್ವಿಟ್ಜರ್​ಲೆಂಡ್, ಕೊಲಂಬಿಯಾ ಹಾಗೂ ಇಂಗ್ಲೆಂಡ್ ತಂಡಗಳು ನಾಕೌಟ್​ಗೆ ಲಗ್ಗೆ ಇಟ್ಟಿವೆ. ಇನ್ನು ಜುಲೈ 6 ಮತ್ತು 7ರಂದು ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿದ್ದು, ಜುಲೈ 10 ಹಾಗೂ 11ರಂದು ಸೆಮಿಫೈನಲ್ ಮತ್ತು ಜುಲೈ 14ರಂದು ಮೂರನೇ ಸ್ಥಾನಕ್ಕೆ ಪಂದ್ಯ ನಡೆಯಲಿದೆ. ಅಂತಿಮವಾಗಿ ಜುಲೈ 15ರಂದು ಫೈನಲ್ ಪಂದ್ಯ ನಡೆಯಲಿದೆ.

16ರ ಘಟ್ಟದ ವೇಳಾಪಟ್ಟಿ:
Loading...


ತಂಡ ದಿನಾಂಕ ಸಮಯ
ಫ್ರಾನ್ಸ್​ vs ಅರ್ಜೆಂಟೀನಾ 30-06-2018 07:30 PM
ಉರುಗ್ವೆ vs ಪೋರ್ಚುಗಲ್ 30-06-2018 11:30 PM
ಸ್ಪೈನ್ vs ರಷ್ಯಾ 01-07-2018 07:30 PM
ಕ್ರೋವೇಶಿಯಾ vs ಡೆನ್ಮಾರ್ಕ್ 01-07-2018 11:30 PM
ಬ್ರೆಜಿಲ್ vs ಮೆಕ್ಸಿಕೋ 02-07-2018 07:30 PM
ಬೆಲ್ಜಿಯಂ vs ಜಪಾನ್ 02-07-2018 11:30 PM
ಸ್ವೀಡನ್ vs ಸ್ವಿಟ್ಜರ್​​ಲೆಂಡ್ 03-07-2018 07:30 PM
ಕೊಲಂಬಿಯಾ vs ಇಂಗ್ಲೆಂಡ್ 03-07-2018 11:30 PM

 
First published:June 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...