ವಿಶ್ವ ಸೈಕ್ಲಿಂಗ್​ನಲ್ಲಿ ಭಾರತದ ಹೊಸ ಆಧ್ಯಾಯ; ಬೆಳ್ಳಿ ಗೆದ್ದ ಇಸೋ ಆಲ್ಬೆನ್


Updated:August 17, 2018, 8:42 PM IST
ವಿಶ್ವ ಸೈಕ್ಲಿಂಗ್​ನಲ್ಲಿ ಭಾರತದ ಹೊಸ ಆಧ್ಯಾಯ; ಬೆಳ್ಳಿ ಗೆದ್ದ ಇಸೋ ಆಲ್ಬೆನ್

Updated: August 17, 2018, 8:42 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಆ. 17): ಕಳೆದ ತಿಂಗಳು ಹಿಮಾ ದಾಸ್ ಐಎಎಫ್ ವಿಶ್ವ ಅಂಡರ್-20 ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​ನಲ್ಲಿ ಚಿನ್ನ ಗೆದ್ದು ಹೊಸ ಮೈಲಿಗಲ್ಲು ಸೃಷ್ಟಿಸಿದ್ದರು. ಇದೀಗ ಸೈಕ್ಲಿಂಗ್​ನಲ್ಲೂ ಭಾರತೀಯರು ಹೊಸ ಹೊಸ ಆಧ್ಯಾಯ ಪ್ರಾರಂಭಿಸಿದ್ದಾರೆ. ಸ್ವಿಜರ್​ಲೆಂಡ್​ನಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್​ಶಿಪ್​ನಲ್ಲಿ ಭಾರತದ ಇಸೋ ಆಲ್ಬೆನ್ ಬೆಳ್ಳಿ ಪದಕ ಜಯಿಸಿದ್ದಾರೆ. ವಿಶ್ವ ಸೈಕ್ಲಿಂಗ್​ನ ಇತಿಹಾಸದಲ್ಲಿ ಭಾರತಕ್ಕೆ ಪದಕ ಸಿಕ್ಕಿದ್ದು ಇದೇ ಮೊದಲು. 200 ಮೀಟರ್ ಟ್ರ್ಯಾಕ್ ಸೈಕ್ಲಿಂಗ್​ನಲ್ಲಿ ಭಾರತದ ಆಲ್ಬೆನ್ ಅವರು 10.851 ಸೆಕೆಂಡ್​ನಲ್ಲಿ ಗುರಿ ಮುಟ್ಟಿದರು. ಚಿನ್ನದ ಪದಕ ಪಡೆದ ಚೆಕ್ ಗಣರಾಜ್ಯದ ಜಾಕುಬ್ ಸ್ಟಾಸ್​ಟ್ನಿ ಅವರಿಗೂ ಭಾರತೀಯ ಆಟಗಾರನಿಗೂ ಇದ್ದ ವ್ಯತ್ಯಾಸ 0.017 ಸೆಕೆಂಡ್ ಮಾತ್ರವಾಗಿತ್ತು. ಸ್ಪರ್ಧೆಯಲ್ಲಿ ಕೊನೆಯ ಕೆಲ ಮೀಟರ್​ಗಳ ಹಿಂದೆಯೇ ಮೊದಲ ಸ್ಥಾನಕ್ಕಾಗಿ ಇಸೋ ಆಲ್ಬೆನ್ ತೀವ್ರ ಪೈಪೋಟಿ ಕೊಟ್ಟರು. ಒಂದೆರಡು ಸೆಕೆಂಡ್ ಅವಧಿ ಇದ್ದಿದ್ದರೆ ಆಲ್ಬೆನ್ ಅವರು ಮೊದಲಿಗರಾಗಿ ಗುರಿ ಮುಟ್ಟುತ್ತಿದ್ದರು.

ಇಸೋ ಆಲ್ಬೆನ್ ಸಾಧನೆಗೆ ಭಾರತೀಯ ಸೈಕ್ಲಿಂಗ್ ಒಕ್ಕೂಟವು ಶ್ಲಾಘನೆ ವ್ಯಕ್ತಪಡಿಸಿದೆ. ಜಕಾರ್ತದಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಸೈಕ್ಲಿಂಗ್ ತಂಡ ಪಾಲ್ಗೊಳ್ಳಲಿದೆ. ಅಂಡಮಾನ್-ನಿಕೋಬಾರ್ ನಿವಾಸಿಯಾಗಿರುವ ಇಸೋ ಆಲ್ಬೆನ್ ಅವರು ಏಷ್ಯಾಡ್ ಸೈಕ್ಲಿಂಗ್​ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಡುವ ನಿರೀಕ್ಷೆ ಮೂಡಿಸಿದ್ದಾರೆ.
First published:August 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ