ಕ್ರಿಕೆಟ್ ಲೋಕದಿಂದ ಶಾಕಿಂಗ್ ಸುದ್ದಿಯೊಂದು ಹೊರಬೀಳುತ್ತಿದೆ. ವಿಶ್ವಕಪ್ (World Cup) ವಿಜೇತ ತಂಡದ ನಾಯಕ ಇಯಾನ್ ಮಾರ್ಗನ್ (Eoin Morgan) ಇಂದು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೊಷಿಸಿದ್ದಾರೆ. ಅವರು ಎಲ್ಲಾ ಮೂರು ಮಾದರಿಗಳಿಗೆ ನಿವೃತ್ತಿ ಘೋಷಿಸಿದ್ದಾರೆ. ಐಪಿಎಲ್‌ನ (IPL) ಕೊನೆಯ ಋತುವಿನಲ್ಲಿಯೂ ಅವರು ಮಾರಾಟವಾಗದೆ ಉಳಿದಿದ್ದರು. ಇದೀಗ ಏಕಾಏಕಿ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ. ಇಂಗ್ಲೆಂಡ್ನ ಈ ಆಟಗಾರ ವಿಶ್ವಕಪ್ ಗೆಲ್ಲಿಸುವ ಮೂಲಕ ಇಂಗ್ಲೆಂಡ್‌ಗೆ ಮೊದಲ ವಿಶ್ವಕಪ್ ಗೆಲ್ಲಿಸಿದ ಖ್ಯಾತಿಗೆ ಪಾತ್ರರಾಗಿದ್ದರು.
ನಿವೃತ್ತಿ ಘೋಷಿಸಿದ ಮಾರ್ಗನ್:
ಇಂಗ್ಲೆಂಡ್‌ಗೆ 2019ರ ವಿಶ್ವಕಪ್ ಗೆದ್ದುಕೊಟ್ಟ ಇಯಾನ್ ಮಾರ್ಗನ್ ಅವರು ಎಲ್ಲಾ ಮೂರು ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಇಯಾನ್ ಮಾರ್ಗನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಈ ಮಾಹಿತಿಯನ್ನು ನೀಡಿದ್ದಾರೆ. ಇಯಾನ್ ಮಾರ್ಗನ್ ಕ್ರಿಕೆಟ್ ವೃತ್ತಿಜೀವನವನ್ನು ಆರಂಭಿಸಿದ್ದು ಐರ್ಲೆಂಡ್ ದೇಶದ ಪರವಾಗಿ ಆದರೆ ನಂತರ ಇಂಗ್ಲೆಂಡ್ ತಂಡದ ಪರ ಆಡಿದರು. ಆದರೆ, ಮೊರ್ಗನ್ ಕಾಮೆಂಟೇಟರ್ ಆಗಿ, ಕ್ರಿಕೆಟ್ ಎಕ್ಸ್‌ಪರ್ಟ್ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇರುವುದಾಗಿ ತಿಳಿಸಿದ್ದಾರೆ.
🏆 ODI World Cup winner
🏆 T20 World Cup winner
🎖️ CBE for services to Cricket
Our greatest EVER white-ball captain! 🐐#ThankYouMorgs 👏 pic.twitter.com/RwiJ40DiQS
— England Cricket (@englandcricket) February 13, 2023
ಇಯಾನ್ ಮಾರ್ಗನ್ 225 ಏಕದಿನ ಪಂದ್ಯಗಳಲ್ಲಿ 13 ಶತಕಗಳೊಂದಿಗೆ 6957 ರನ್ ಗಳಿಸಿದ್ದಾರೆ. ಮಾರ್ಗನ್ ಏಕದಿನ ಕ್ರಿಕೆಟ್‌ನಲ್ಲಿ 14 ಶತಕಗಳೊಂದಿಗೆ 7701 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಇಯಾನ್ ಮಾರ್ಗನ್ 126 ಪಂದ್ಯಗಳಲ್ಲಿ ಇಂಗ್ಲೆಂಡ್ ಅನ್ನು ಮುನ್ನಡೆಸಿದರು, ಅದರಲ್ಲಿ ಅವರು 76 ಅನ್ನು ಗೆದ್ದರು ಮತ್ತು ಅವರ ಗೆಲುವಿನ ಶೇಕಡಾವಾರು ಈ ಬಾರಿ 65.25 ಆಗಿತ್ತು. ಅವರ ನಾಯಕತ್ವದಲ್ಲಿ ಇಂಗ್ಲೆಂಡ್ ಮೊದಲ ವಿಶ್ವಕಪ್ ಗೆದ್ದಿತ್ತು.
ಇಯಾನ್ ಮಾರ್ಗನ್ ಐರ್ಲೆಂಡ್‌ಗಾಗಿ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು. ಐರ್ಲೆಂಡ್ ನಂತರ, ಮಾರ್ಗನ್ ಇಂಗ್ಲೆಂಡ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಇಯಾನ್ ಮೋರ್ಗನ್ಅ ತಮ್ಮ ವೃತ್ತಿಜೀವನದಲ್ಲಿ ಕೇವಲ 16 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.
ಟ್ವೀಟ್ ಮೂಲಕ ನಿವೃತ್ತಿ ಘೋಷಿಸಿದ ನಾಯಕ:
ಇನ್ನು, ಇಯಾನ್ ಮಾರ್ಗನ್ ತಮ್ಮ ನಿವೃತ್ತಿಯನ್ನು ಟ್ವಿಟರ್ ಮೂಲಕ ಅಧಿಕೃತವಾಗಿ ತಿಳಿಸಿದರು. ಕ್ರಿಕೆಟಿಗನಾಗಿ ನಾನು ವೃತ್ತಿಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಎದುರಿಸಿದ್ದೇನೆ. ಈ ಸಮಯದಲ್ಲಿ ನನಗೆ ಬೆಂಬಲಿಸಿದ ನನ್ನ ಪತ್ನಿ ತಾರಾ ರಿಡ್ಗ್ವೇ, ನನ್ನ ಕುಟುಂಬ, ನನ್ನ ಸ್ನೇಹಿತರಿಗೆ ಧನ್ಯವಾದಗಳು ಎಂದು ಮೊರ್ಗಾನ್ ಬರೆದುಕೊಂಡಿದ್ದಾರೆ. ನನ್ನ ನಿವೃತ್ತಿಯ ನಂತರ ಹೆಚ್ಚಿನ ಸಮಯವನ್ನು ನನ್ನ ಕುಟುಂಬದ ಜೊತೆ ಕಳೆಯುತ್ತೇನೆ ಎಂದು ಹೇಳಿದ್ದಾರೆ.
ವಿಶ್ವದ ವಿವಿಧ ಲೀಗ್‌ಗಳಲ್ಲಿ ಮೊರ್ಗನ್ ಆಡಿದ್ದಾರೆ. ಐಪಿಎಲ್‌ನಲ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಆಡಿದ್ದರು. ಇದಲ್ಲದೇ ಕೌಂಟಿ, ಬಿಗ್ ಬ್ಯಾಷ್ ಲೀಗ್, ಪಾಕಿಸ್ತಾನ ಸೂಪರ್ ಲೀಗ್, ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸಹ ಮಾರ್ಗನ್ ಆಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ