ಏಷ್ಯನ್ ಗೇಮ್ಸ್​​​ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ; ದಾಖಲೆ ಬರೆದ 16 ವರ್ಷದ ಸೌರಭ್

news18
Updated:August 21, 2018, 2:47 PM IST
ಏಷ್ಯನ್ ಗೇಮ್ಸ್​​​ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ; ದಾಖಲೆ ಬರೆದ 16 ವರ್ಷದ ಸೌರಭ್
news18
Updated: August 21, 2018, 2:47 PM IST
ನ್ಯೂಸ್ 18 ಕನ್ನಡ

ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್​ ಕ್ರೀಡಾಕೂಟದ 3ನೇ ದಿನದಲ್ಲಿ ಭಾರತ ಮತ್ತೆ 3 ಪದಕಗಳನ್ನ ತನ್ನದಾಗಿಸಿಕೊಂಡಿದೆ. ಇಂದು ಮೂರು ಪದಕಗಳು ಶೂಟಿಂಗ್​​ ಕ್ರೀಡೆಯಲ್ಲಿ ಬಂದಿದ್ದು 1 ಚಿನ್ನ, 1 ಬೆಳ್ಳಿ ಹಾಗೂ 1 ಕಂಚು ಭಾರತಕ್ಕೆ ದಕ್ಕಿದೆ.

10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್​ ಸ್ಪರ್ಧೆಯಲ್ಲಿ ಉತ್ತರಪ್ರದೇಶ ಮೂಲದ 16 ವರ್ಷದ ಬಾಲಕ ಸೌರಭ್ ಚೌದರಿ ಅವರು 240.7 ಪಾಯಿಂಟ್ ಗಿಟ್ಟಿಸಿ ಚಿನ್ನಕ್ಕೆ ಗುರಿಯಿಟ್ಟು ದಾಖಲೆ ನಿರ್ಮಿಸಿದ್ದಾರೆ. ಜಪಾನ್​​ನ ಟೊಮೋಯುಕಿ ಮಟ್ಸುಡಾ ಅವರನ್ನು ಮಣಿಸುವ ಮೂಲಕ ಚಿನ್ನದ ಪದಕಕ್ಕೆ ಸೌರಭ್ ಕೊರಳೊಡ್ಡಿದ್ದಾರೆ. ಜೊತೆಗೆ ಇದೇ ಸ್ಪರ್ಧೆಯಲ್ಲಿ 29 ವರ್ಷ ಪ್ರಾಯದ ಭಾರತದ ಶೂಟಿಂಗ್ ಪಟು ಅಭಿಷೇಕ್ ವರ್ಮಾ ಅವರು 219.3 ಅಂಕಗಳಿಸಿ 3ನೇ ಸ್ಥಾನ ಪಡೆದು ಕಂಚಿನ ಪದಕ ಗೆದ್ದಿದ್ದಾರೆ. ಇನ್ನು ಪುರುಷರ 50 ಮೀ. ರೈಫಲ್ ವಿಭಾಗದಲ್ಲಿ ಹರಿಯಾಣದ ಸಂಜೀವ್ ರಜಪೂತ್ ಬೆಳ್ಳಿ ಪದಕ ತಮ್ಮದಾಗಿಸಿದ್ದು, ಶೂಟರ್​ಗಳು ಪದಕದ ಬೇಟೆ ಮುಂದುವರೆಸಿದ್ದಾರೆ.

ಈ ಮೂಲಕ ಭಾರತ ಒಟ್ಟಾರೆ 8 ಪದಕ ಗೆದ್ದಿದ್ದು 3 ಚಿನ್ನ 3 ಬೆಳ್ಳಿ ಹಾಗೂ 2 ಕಂಚಿನ ಪದಕ ತನ್ನದಾಗಿಸಿಕೊಂಡಿದೆ. ಒಟ್ಟಾರೆ ಪದಕಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ 7ನೇ ಸ್ಥಾನಕ್ಕೇರಿದೆ.
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ