ಪಾಕಿಸ್ತಾನ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ (PAK vs ENG Test) 8 ವಿಕೆಟ್ ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಇಂಗ್ಲೆಂಡ್ 3-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ. ಇದರೊಂದಿಗೆ ಬೆನ್ ಸ್ಟೋಕ್ಸ್ (Ben Stokes) ನಾಯಕತ್ವದ ಇಂಗ್ಲೆಂಡ್ ಕ್ರಿಕೆಟ್ ತಂಡ (England Cricket Team) ಇತಿಹಾಸ ನಿರ್ಮಿಸಿದೆ. ಪಾಕಿಸ್ತಾನದಲ್ಲಿ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಇಂಗ್ಲೆಂಡ್ ಪಾತ್ರವಾಗಿದೆ. ಈ ಮೂಲಕ 2022ರಲ್ಲಿ ತವರಿನಲ್ಲಿ ಪಾಕಿಸ್ತಾನ ಸತತ ಎರಡನೇ ಟೆಸ್ಟ್ ಸರಣಿಯನ್ನು ಕಳೆದುಕೊಂಡಿದೆ. ಪಾಕಿಸ್ತಾನವು ಈ ಹಿಂದೆ ಮಾರ್ಚ್ 2022ರಲ್ಲಿ ಆಸ್ಟ್ರೇಲಿಯಾ ವಿರುದ್ಧ 3-ಟೆಸ್ಟ್ ಸರಣಿಯನ್ನು ಸಹ ಕಳೆದುಕೊಂಡಿತ್ತು. ನಂತರ ಆಸ್ಟ್ರೇಲಿಯಾ ಸರಣಿಯ ಕೊನೆಯ ಟೆಸ್ಟ್ ಪಂದ್ಯವನ್ನು 115 ರನ್ಗಳಿಂದ ಗೆದ್ದುಕೊಂಡಿತು. ಪಾಕಿಸ್ತಾನವು ತವರಿನಲ್ಲಿ ಸತತ ನಾಲ್ಕನೇ ಸೋಲನ್ನು ಅನುಭವಿಸಿದೆ.
ಪಾಕ್ ತಂಡಕ್ಕೆ ಹೀನಾಯ ಸೋಲು:
ತವರಿನಲ್ಲಿ ಸತತ ನಾಲ್ಕು ಟೆಸ್ಟ್ಗಳಲ್ಲಿ ಸೋತ ಏಷ್ಯಾದ ಎರಡನೇ ತಂಡ ಎಂಬ ಬೇಡದ ದಾಖಲೆಗೆ ಪಾಕಿಸ್ತಾನ ಪಾತ್ರವಾಯಿತು. ಮೊದಲು ಇದು ಬಾಂಗ್ಲಾದೇಶದ ಹೆಸರಿನಲ್ಲಿತ್ತು. ಬಾಂಗ್ಲಾದೇಶ 6 ಪ್ರತ್ಯೇಕ ಸಂದರ್ಭಗಳಲ್ಲಿ ಈ ರೀತಿಯ ಪಂದ್ಯಗಳಲ್ಲಿ ಸೋತಿದೆ. ಬಾಂಗ್ಲಾದೇಶ 2001ರಿಂದ 2004ರ ವರೆಗೆ ತವರಿನಲ್ಲಿ ಸತತ 13 ಪಂದ್ಯಗಳನ್ನು ಸೋತಿತ್ತು. ಹಾಗಾಗಿ ಪಾಕಿಸ್ತಾನ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಸೋಲನ್ನು ಅನುಭವಿಸಿದೆ. ಪಾಕಿಸ್ತಾನ ತನ್ನ ಮೊದಲ ಟೆಸ್ಟ್ ಸರಣಿಯನ್ನು 1955ರಲ್ಲಿ ತವರಿನಲ್ಲಿ ಆಡಿತು. ಆಗ 5 ಪಂದ್ಯಗಳ ಸರಣಿ ಸಮಬಲವಾಯಿತು. ಆಗ ಯಾರೂ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.
Historic series win. Incredible from everyone involved from start to finish 🔥 what a team 🙌🏼 pic.twitter.com/dcqWICRk68
— Ben Duckett (@BenDuckett1) December 20, 2022
WTC ರೇಸ್ನಿಂದ ಹೊರ ಬಿದ್ದ ಪಾಕ್:
3 ಟೆಸ್ಟ್ ಸರಣಿಯ ಮೊದಲ ಪಂದ್ಯ ರಾವಲ್ಪಿಂಡಿಯಲ್ಲಿ ನಡೆಯಿತು. ಈ ಪಂದ್ಯವನ್ನು ಇಂಗ್ಲೆಂಡ್ 4 ರನ್ಗಳಿಂದ ಗೆದ್ದುಕೊಂಡಿತು. ಮುಲ್ತಾನ್ ನಲ್ಲಿ ನಡೆದ ಎರಡನೇ ಟೆಸ್ಟ್ ನಲ್ಲೂ ಆತಿಥೇಯ ತಂಡದ ಬ್ಯಾಟ್ಸ್ ಮನ್ ಗಳು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಈ ಪಂದ್ಯವನ್ನು ಇಂಗ್ಲೆಂಡ್ ರೋಚಕ ರೀತಿಯಲ್ಲಿ 26 ರನ್ಗಳಿಂದ ಗೆದ್ದುಕೊಂಡಿತು. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗಾಗಿ ಪಾಕಿಸ್ತಾನ ತಂಡವು ಈಗಾಗಲೇ ರೇಸ್ನಿಂದ ಹೊರಬಿದ್ದಿದೆ.
ಇದನ್ನೂ ಓದಿ:
ಬಾಬರ್ ಅಜಮ್ ವಿಫಲ್:
ಸರಣಿ ಸೋಲಿನ ಬಳಿಕ ಪಾಕಿಸ್ತಾನದ ಮಾಜಿ ಕ್ರಿಕೆಟಿಗರೂ ಕಂಗಾಲಾಗಿದ್ದಾರೆ. ಟೆಸ್ಟ್ ತಂಡದ ನಾಯಕತ್ವವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಅವರು ಬಾಬರ್ ಅಜಮ್ ಅವರನ್ನು ಕೇಳಿದ್ದಾರೆ. ಮಾಜಿ ಲೆಗ್ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ, ಬಾಬರ್ ಅಜಮ್ ನಾಯಕನಾಗಿ ಮಾತ್ರವಲ್ಲದೆ ಇಂಗ್ಲೆಂಡ್ ವಿರುದ್ಧ ಬ್ಯಾಟ್ಸ್ಮನ್ ಆಗಿಯೂ ವಿಫಲರಾಗಿದ್ದಾರೆ. ಟೆಸ್ಟ್ ತಂಡದ ನಾಯಕನಾಗಿ ಶೂನ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ. ಬಾಬರ್ ತಂಡದ ನಾಯಕತ್ವಕ್ಕೆ ಯೋಗ್ಯರಲ್ಲ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ