3ನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 114/2: ಬೃಹತ್ ಮುನ್ನಡೆಯತ್ತ ಆಂಗ್ಲರು

news18
Updated:September 9, 2018, 11:05 PM IST
3ನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 114/2: ಬೃಹತ್ ಮುನ್ನಡೆಯತ್ತ ಆಂಗ್ಲರು
  • News18
  • Last Updated: September 9, 2018, 11:05 PM IST
  • Share this:
ನ್ಯೂಸ್ 18 ಕನ್ನಡ

ಲಂಡನ್​​ನ ಕೆನ್ನಿಂಗ್ಟನ್​ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಣ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಂಗ್ಲರು ತನ್ನ 2ನೇ ಇನ್ನಿಂಗ್ಸ್​ನಲ್ಲಿ 3ನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 114 ರನ್ ಕಲೆಹಾಕಿದೆ. ಈ ಮೂಲಕ 153 ರನ್​ಗಳ ಮುನ್ನಡೆಯೊಂದಿಗೆ ಇಂಗ್ಲೆಂಡ್ ಬೃಹತ್ ರನ್ ಕಲೆಹಾಕುವ ಮುನ್ಸೂಚನೆ ನೀಡಿದೆ.

ಟೀಂ ಇಂಡಿಯಾವನ್ನು 292 ರನ್​ಗೆ ಆಲೌಟ್ ಮಾಡಿ 2ನೇ ಇನ್ನಿಂಗ್ಸ್ ಶುರುಮಾಡಿದ ಆಂಗ್ಲರಿಗೆ ಆರಂಭದಲ್ಲೇ ಜೆನ್ನಿಂಗ್ಸ್​(10) ಔಟ್ ಆಗುವ ಮೂಲಕ ಶಾಕ್ ನೀಡಿದರೆ, ಮೊಯೀನ್ ಅಲಿ ಅಲಿ 20 ಗಳಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಬಳಿಕ ಒಂದಾದ ಅಲೆಸ್ಟರ್ ಕುಕ್ ಹಾಗೂ ನಾಯಕ ಜೋ ರೂಟ್ ಎಚ್ಚರಿಕೆಯ ಆಟಕ್ಕೆ ಮುಂದಾಗಿ 52 ರನ್​ಗಳ ಕಾಣಿಕೆ ನೀಡಿದ್ದಾರೆ. ಅಂತಿಮವಾಗಿ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 2 ವಿಕೆಟ್ ಕಳೆದುಕೊಂಡು 114 ರನ್ ಬಾರಿಸಿದೆ. ಅಲೆಸ್ಟರ್ ಕುಕ್ 46 ಹಾಗೂ ನಾಯಕ ಜೋ ರೂಟ್ 29 ರನ್ ಬಾರಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ ಪರ ಜಡೇಜಾ ಹಾಗೂ ಶಮಿ 1 ವಿಕೆಟ್ ಕಿತ್ತಿದ್ದಾರೆ.

ಇದಕ್ಕೂ ಮೊದಲು 2ನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 174 ರನ್ ಕಲೆಹಾಕಿದ್ದ ಭಾರತ, ಮೂರನೇ ದಿನದ ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಹನುಮ ವಿಹಾರಿ ಹಾಗೂ ರವೀಂದ್ರ ಜಡೇಜಾ 77 ರನ್​ಗಳ ಜೊತೆಯಾಟವಾಡಿದರು. ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ ಹನುಮ ವಿಹಾರಿ ತನ್ನ ಮೊದಲ ಅರ್ಧಶತಕ ಸಿಡಿಸಿ 56 ರನ್​ಗೆ ಔಟ್ ಆದರು. ಬಳಿಕ ಬ್ಯಾಟ್ ಬೀಸಲು ಆರಂಭಿಸಿದ ಜಡೇಜಾಗೆ ಯಾವೊಬ್ಬ ಬ್ಯಾಟ್ಸ್​ಮನ್​​ಗಳು ಸಾತ್ ನೀಡಲಿಲ್ಲ. ವಿಹಾರಿ ಔಟ್ ಆದ ಬೆನ್ನಲ್ಲೆ ಇಶಾಂತ್ ಶರ್ಮಾ(4), ಮೊಹಮ್ಮದ್ ಶಮಿ(1) ಬೇಗನೆ ನಿರ್ಗಮಿಸಿದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೆ ಭಿರುಸಿನ ಬ್ಯಾಟಿಂಗ್ ನಡೆಸಿದ ಜಡೇಜಾ ಟೆಸ್ಟ್ ಕ್ರಿಕೆಟ್​​​ನಲ್ಲಿ ತನ್ನ 9ನೇ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು. ಅಂತಿಮವಾಗಿ ಬುಮ್ರಾ ಔಟ್ ಆದರೆ ಹೊರತು ಜಡೇಜಾ 86 ರನ್ ಬಾರಿಸಿ ಅಜೇಯರಾಗಿ ಉಳಿದರು. ಈ ಮೂಲಕ ಭಾರತ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 292 ರನ್​ಗೆ ಸರ್ವಪತನ ಕಂಡು, 40 ರನ್​ಗಳ ಹಿನ್ನಡೆ ಅನುಭವಿಸಿತ್ತು. ಇಂಗ್ಲೆಂಡ್ ಪರ ಜೇಮ್ಸ್​ ಆಂಡರ್ಸನ್ 2, ಬೆನ್ ಸ್ಟೋಕ್ಸ್ 2 ಹಾಗೂ ಮೊಯೀನ್ ಅಲಿ 2 ವಿಕೆಟ್ ಕಿತ್ತು ಮಿಂಚಿದರೆ, ಸ್ಟುವರ್ಟ್ ಬ್ರಾಡ್, ಸ್ಯಾಮ್ ಕುರ್ರನ್ ಹಾಗೂ ಆದಿಲ್ ರಶೀದ್ ತಲಾ 1 ವಿಕೆಟ್ ಪಡೆದರು.
First published: September 9, 2018, 4:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading