ಆಂಗ್ಲರ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಕೊಹ್ಲಿ ಕನಸು ಭಗ್ನ: 4ನೇ ಟೆಸ್ಟ್​ನಲ್ಲಿ ಇಂಗ್ಲೆಂಡ್​ಗೆ ಜಯ

news18
Updated:September 2, 2018, 10:43 PM IST
ಆಂಗ್ಲರ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಕೊಹ್ಲಿ ಕನಸು ಭಗ್ನ: 4ನೇ ಟೆಸ್ಟ್​ನಲ್ಲಿ ಇಂಗ್ಲೆಂಡ್​ಗೆ ಜಯ
news18
Updated: September 2, 2018, 10:43 PM IST
ನ್ಯೂಸ್ 18 ಕನ್ನಡ

ಇಂಗ್ಲೆಂಡ್​​ನ ಸೌತಾಂಪ್ಟನ್​ನಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಣ 4ನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡಿದೆ. ಆಂಗ್ಲರು ನೀಡಿದ್ದ 245 ರನ್​​ ಗುರಿ ಬೆನ್ನಟ್ಟಿದ ಭಾರತ 184 ರನ್​ಗೆ ಆಲೌಟ್ ಆಗುವ ಮೂಲಕ, ಸರಣಿ ಸೋಲು ಅನುಭವಿಸಿದೆ. ಈ ಮೂಲಕ ಆಂಗ್ಲರ ನೆಲದಲ್ಲಿ ಟೆಸ್ಟ್​​ ಸರಣಿ ಗೆಲ್ಲುವ ಕೊಹ್ಲಿ ಕನಸು ಭಗ್ನವಾಗಿದೆ.

ಮೊದಲ ಇನ್ನಿಂಗ್ಸ್​​ನಲ್ಲಿ ಇಂಗ್ಲೆಂಡ್ 246 ರನ್​ಗೆ ಸರ್ವಪತನ ಕಂಡಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಭಾರತ ಪೂಜಾರ ಅವರ ಭರ್ಜರಿ ಶತಕದ ನೆರವಿನಿಂದ 273 ರನ್​ಗೆ ಆಲೌಟ್ ಆಗಿ 27 ರನ್​ಗಳ ಮುನ್ನಡೆ ಸಾಧಿಸಿತ್ತು. ಬಳಿಕ ತನ್ನ 2ನೇ ಇನ್ನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್​ 3ನೇ ದಿನದಾಟದ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 260 ರನ್ ಕಲೆಹಾಕಿತ್ತು. 4ನೇ ದಿನವಾದ ಇಂದು ಬ್ಯಾಟಿಂಗ್ ಆರಂಭಿಸಿದ ಆಂಗ್ಲರು ದಿನದ ಆರಂಭದಲ್ಲೇ ಉಳಿದ 2 ವಿಕೆಟ್ ಕಳೆದುಕೊಂಡು 271 ರನ್​ಗೆ ಆಲೌಟ್ ಆಯಿತು. ಈ ಮೂಲಕ ಭಾರತಕ್ಕೆ ಗೆಲ್ಲಲು 245 ರನ್​​ ಟಾರ್ಗೆಟ್ ನೀಡಿತು.

245 ರನ್​ ಗುರಿ ಬೆನ್ನಟ್ಟಿದ ಭಾರತ ಮಾತ್ರ ಆರಂಭದಲ್ಲೇ ಮುಗ್ಗರಿಸಿತು. ಓಪನರ್​ಗಳಾದ ಶಿಖರ್ ಧವನ್(17), ಕೆ.ಎಲ್ ರಾಹುಲ್(0) ಹಾಗೂ ಮೊದಲ ಇನ್ನಿಂಗ್ಸ್​​ನಲ್ಲಿ ಶತಕ ಸಿಡಿಸಿದ್ದ ಚೇತೇಶ್ವರ ಪೂಜಾರ(5) ಬೇಗನೆ ಪೆವಿಲಿಯನ್ ಸೇರಿಕೊಂಡರು. ಬಳಿಕ 4ನೇ ವಿಕೆಟ್​​ಗೆ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪ ನಾಯಕ ಅಜಿಂಕ್ಯ ರಹಾನೆ ತಾಳ್ಮೆಯುತ ಬ್ಯಾಟಿಂಗ್ ಮೂಲಕ ಆರಂಭಿಕ ಕುಸಿತದಿಂದ ತಂಡವನ್ನ ಮೇಲೆತ್ತುವ ಪ್ರಯತ್ನ ನಡೆಸಿದರು. ಆದರೆ 2ನೇ ಇನ್ನಿಂಗ್ಸ್​​ನಲ್ಲೂ ಟೀಂ ಇಂಡಿಯಾಕ್ಕೆ ಮೊಯೀನ್ ಅಲಿ ಮಾರಕವಾಗಿ ಪರಿಣಮಿಸಿದರು. 58 ರನ್ ಗಳಿಸಿ ಕೊಹ್ಲಿ ಔಟ್ ಆದರೆ, ಇದರ ಬೆನ್ನಲ್ಲೆ ರಹಾನೆ ಕೂಡ 51 ರನ್ ಬಾರಿಸಿ ಅಲಿ ಎಸೆತದಲ್ಲಿ ಎಲ್​ಬಿಗೆ ಬಲಿಯಾದರು. ಬಳಿಕ ಬಂದ ಬ್ಯಾಟ್ಸ್​ಮನ್​ ಪೈಕಿ ಅಶ್ವಿನ್ 25 ರನ್ ಬಾರಿಸಿದ್ದು ಬಿಟ್ಟರೆ ಹಾರ್ದಿಕ್ ಪಾಂಡ್ಯ(0), ರಿಷಭ್ ಪಂತ್(18), ಇಶಾಂತ್ ಶರ್ಮಾ(0), ಮೊಹಮ್ಮದ್ ಶಮಿ(8) ಔಟ್ ಆಗುವ ಮೂಲಕ 184 ರನ್​ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಇದರಿಂದ ಭಾರತ 60 ರನ್​ಗಳ ಸೋಲು ಅನುಭವಿಸಿದೆ. ಇಂಗ್ಲೆಂಡ್ ಪರ ಮೊಯೀನ್ ಅಲಿ 4 ವಿಕೆಟ್ ಕಿತ್ತರೆ, ಜೇಮ್ಸ್ ಆಂಡರ್ಸನ್ ಹಾಗೂ ಬೆನ್ ಸ್ಟೋಕ್ಸ್ ತಲಾ 2 ವಿಕೆಟ್ ಪಡೆದರು.

ಈ ಮೂಲಕ ಆಂಗ್ಲರ ನೆಲದಲ್ಲಿ ಟೆಸ್ಟ್​ ಸರಣಿ ಗೆಲ್ಲುವ ವಿರಾಟ್ ಕೊಹ್ಲಿ ಕನಸು ಭಗ್ನಗೊಂಡಿದೆ. 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಇಂಗ್ಲೆಂಡ್ 3-1ರ ಮುನ್ನಡೆಯೊಂದಿಗೆ ಸರಣಿ ಜಯ ಸಾಧಿಸಿದೆ. ಇನ್ನು 5ನೇ ಟೆಸ್ಟ್​ ಪಂದ್ಯ ಬಾಕಿ ಉಳಿದಿದ್ದು ಸೆಪ್ಟೆಂಬರ್ 7ರಿಂದ ಆರಂಭವಾಗಲಿದೆ.

ಪಂದ್ಯ ಶ್ರೇಷ್ಠ: ಮೊಯೀನ್ ಅಲಿ

ಸಂಕ್ಷಿಪ್ತ ಸ್ಕೋರ್:
Loading...

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್​: 246/10 (ಸ್ಯಾಮ್ ಕುರ್ರನ್ 78, ಮೊಯೀನ್ ಅಲಿ 40, ಜಸ್​ಪ್ರೀತ್ ಬುಮ್ರಾ 46/3, ಇಶಾಂತ್ ಶರ್ಮಾ 26/2)

ಭಾರತ ಮೊದಲ ಇನ್ನಿಂಗ್ಸ್​​: 273/10 (ಚೇತೇಶ್ವರ ಪೂಜಾರ 132*, ವಿರಾಟ್ ಕೊಹ್ಲಿ 46, ಮೊಯೀನ್ ಅಲಿ 62/5, ಸ್ಟುವರ್ಟ್​ ಬ್ರಾಡ್ 63/3)

ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್​: 271/10 (ಜಾಸ್ ಬಟ್ಲರ್ 69, ಜೋ ರೂಟ್ 48, ಮೊಹಮ್ಮದ್ ಶಮಿ 57/4, ಇಶಾಂತ್ ಶರ್ಮಾ 36/2)

ಭಾರತ ಎರಡನೇ ಇನ್ನಿಂಗ್ಸ್​: 184/10 (ವಿರಾಟ್ ಕೊಹ್ಲಿ 58, ಅಜಿಂಕ್ಯ ರಹಾನೆ 51, ಮೊಯೀನ್ ಅಲಿ 71/4, ಬೆನ್ ಸ್ಟೋಕ್ಸ್ 34/2)
First published:September 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...