ಭಾರತ ವಿರುದ್ಧದ ಸರಣಿಗೂ ಮುನ್ನ ಇಂಗ್ಲೆಂಡ್ (England) ಕ್ರಿಕೆಟ್ ತಂಡ ಭಾರೀ ಆಘಾತವಾಗಿದೆ. 2019 ರ ಏಕದಿನ ವಿಶ್ವಕಪ್‌ನಲ್ಲಿ (ODI World Cup) ಇಂಗ್ಲೆಂಡ್ ತಂಡಕ್ಕೆ ಚೊಚ್ಚಲ ಏಕದಿನ ವಿಶ್ವಕಪ್ ಗೆಲ್ಲಲು ನೆರವಾದ ಇಯಾನ್ ಮಾರ್ಗನ್ (Eoin Morgan) ಅಂತರಾಷ್ಟ್ರೀಯ ಕ್ರಿಕೆಟ್‌ಗೆ (Cricket) ಇಂದು ನಿವೃತ್ತಿ (Retirement) ಘೋಷಿಸಿದ್ದಾರೆ. ಅದರೊಂದಿಗೆ ಭಾರತದ ವಿರುದ್ಧದ ಸೀಮಿತ ಓವರ್‌ಗಳ ಸರಣಿಯು ಮಾರ್ಗನ್‌ಗೆ ಕೊನೆಯದಾಗಿದೆ ಎಂದು ಪರಿಗಣಿಸಲಾಗಿದೆ. ಆದರೆ, ಇಯಾನ್ ಮಾರ್ಗನ್ ಅನಿರೀಕ್ಷಿತವಾಗಿ ಭಾರತದೊಂದಿಗೆ ಸರಣಿಗೆ ಮುಂಚೆಯೇ ನಿವೃತ್ತಿ ಘೋಷಿಸುವ ಮೂಲಕ ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್ ತಂಡಕ್ಕೆ ಭಾರಿ ಆಘಾತವಾಗಿದೆ. ವಿಶ್ವಕಪ್ ಹೀರೋ ರಾಜೀನಾಮೆ ತಂಡಕ್ಕೆ ದೊಡ್ಡ ಹೊಡೆತ ನೀಡಿದಂತಾಗಿದೆ.
ಇಂಗ್ಲೆಂಡ್ನ ಯಶಸ್ವಿ ನಾಯಕನ ಕ್ರಿಕೆಟ್ ಜರ್ನಿ:
ಇಯಾನ್ ಮಾರ್ಗನ್ ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ಜನಿಸಿದರು. ಆ ತಂಡದ ಪರವಾಗಿ ಮೊದಲು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಅವರು 2006 ರಲ್ಲಿ ಐರ್ಲೆಂಡ್‌ಗಾಗಿ ತಮ್ಮ ODI ಚೊಚ್ಚಲ ಪಂದ್ಯವನ್ನು ಆಡಿದರು. ಐರ್ಲೆಂಡ್ ಪರ 23 ODIಗಳನ್ನು ಆಡಿದ್ದಾರೆ ಮತ್ತು 744 ರನ್ ಗಳಿಸಿದ್ದಾರೆ. ನಂತರ ಅವರು ಐರ್ಲೆಂಡ್‌ಗೆ ವಿದಾಯ ಹೇಳಿದರು ಮತ್ತು 2010 ರಲ್ಲಿ ಇಂಗ್ಲೆಂಡ್ ತಂಡಕ್ಕೆ ಪಾದಾರ್ಪಣೆ ಮಾಡಿದರು. ಇಂಗ್ಲೆಂಡ್‌ಗೆ ಎಂಟ್ರಿ ನೀಡಿದ ನಂತರ ಮಾರ್ಗನ್ ಅವರ ಹೊಸ ವೃತ್ತಿಜೀವನವು ಪ್ರಾರಂಭವಾಯಿತು.
"I'm hugely proud of what I have achieved, but what I will cherish and remember most are the memories I made with some of the greatest people I know."#ThankYouMorgs 👏
— England Cricket (@englandcricket) June 28, 2022
ಇದನ್ನೂ ಓದಿ: IND vs IRE T20: ಸರಣಿ ಗೆಲುವಿನ ತವಕದಲ್ಲಿ ಹಾರ್ದಿಕ್ ಪಡೆ, ಟೀಂ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಪ್ರಕಟ
ಮಾರ್ಗನ್ ವೃತ್ತಿ ಜೀವನದ ಸಾಧನೆ:
ಇಂಗ್ಲೆಂಡ್ ಪರ ಆಡುತ್ತಿರುವ ಮಾರ್ಗನ್ 225 ಏಕದಿನ ಪಂದ್ಯಗಳಲ್ಲಿ 13 ಶತಕಗಳ ನೆರವಿನಿಂದ 6,957 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅವರು 14 ಶತಕಗಳೊಂದಿಗೆ 7,701 ರನ್ ಗಳಿಸಿದ್ದಾರೆ. ಇಯಾನ್ ಮಾರ್ಗನ್ ನೇತೃತ್ವದಲ್ಲಿ ಇಂಗ್ಲೆಂಡ್ 126 ಪಂದ್ಯಗಳಲ್ಲಿ 76 ಪಂದ್ಯಗಳನ್ನು ಗೆದ್ದಿದೆ. 2019 ರಲ್ಲಿ ತವರಿನಲ್ಲಿ ಲಾರ್ಡ್ಸ್‌ನಲ್ಲಿ ODI ವಿಶ್ವಕಪ್ ಗೆದ್ದಿರುವುದು ಮೋರ್ಗನ್ ಅವರ ವೃತ್ತಿಜೀವನದ ಪ್ರಮುಖ ಅಂಶವಾಗಿದೆ.
ಇದನ್ನೂ ಓದಿ: Varinder Singh: ಭಾರತ ತಂಡದ ಹಾಕಿ ದಂತಕಥೆ, ವಿಶ್ವಕಪ್ ಪದಕ ವಿಜೇತ ಆಟಗಾರ ನಿಧನ
ಏಕದಿನವಲ್ಲದೆ ಟಿ20 ಕ್ರಿಕೆಟ್‌ನಲ್ಲೂ ಮೋರ್ಗನ್ ಯಶಸ್ವಿಯಾಗಿದ್ದರು. ಅವರು 115 ಪಂದ್ಯಗಳಲ್ಲಿ 14 ಅರ್ಧಶತಕ ಮತ್ತು 136.18 ಸ್ಟ್ರೈಕ್ ರೇಟ್‌ನೊಂದಿಗೆ 2,458 ರನ್ ಗಳಿಸಿದರು. ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲೂ ಮೋರ್ಗನ್ ಯಶಸ್ವಿ ನಾಯಕರಾಗಿದ್ದಾರೆ. ಮಾರ್ಗನ್ ನಾಯಕತ್ವದಲ್ಲಿ ಇಂಗ್ಲೆಂಡ್ 72 ಟಿ20 ಪಂದ್ಯಗಳಲ್ಲಿ 42ರಲ್ಲಿ ಜಯ ಸಾಧಿಸಿದೆ. ಇದಲ್ಲದೇ ಅವರು ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್, ಕಿಂಗ್ಸ್ XI ಪಂಜಾಬ್ ಮತ್ತು ಕೆಕೆಆರ್ ಪರ ನಾಯಕನಾಗಿಯೂ ಆಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ