ಭಾರತ-ಇಂಗ್ಲೆಂಡ್ ಟೆಸ್ಟ್​​: ಆಂಗ್ಲರ 8 ವಿಕೆಟ್ ಪತನ; ಆದರೂ 233 ರನ್​ಗಳ ಮುನ್ನಡೆ

news18
Updated:September 2, 2018, 12:15 AM IST
ಭಾರತ-ಇಂಗ್ಲೆಂಡ್ ಟೆಸ್ಟ್​​: ಆಂಗ್ಲರ 8 ವಿಕೆಟ್ ಪತನ; ಆದರೂ 233 ರನ್​ಗಳ ಮುನ್ನಡೆ
news18
Updated: September 2, 2018, 12:15 AM IST
ನ್ಯೂಸ್ 18 ಕನ್ನಡ

4ನೇ ಟೆಸ್ಟ್ 3ನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡ ಟೀಂ ಇಂಡಿಯಾ ವೇಗಿಗಳೆದುರು ತರಗುಟ್ಟಿ ಹೋಗಿದ್ದು ಸುಳ್ಳಲ್ಲ. ಉತ್ತಮ ಆರಂಭ ಪಡೆದರು ಅಲೆಸ್ಟರ್ ಕುಕ್ ಹಾಗೂ ಕೀಟನ್ ಜೆನ್ನಿಂಗ್ಸ್ ಉತ್ತಮ ಜೊತೆಯಾಟವಾಡದೆ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಬುಮ್ರಾ ಬೌಲಿಂಗ್​ನಲ್ಲಿ ಕುಕ್ ಔಟಾದರೆ ಮೋಯಿನ್ ಅಲಿ ಇಶಾಂತ್ ಬೌಲಿಂಗ್​​​ನಲ್ಲಿ ರಾಹುಲ್ ಹಿಡಿದ ಉತ್ತಮ ಕ್ಯಾಚ್​ಗೆ ಔಟಾಗಿ ಪೆವಿಲಿಯನ್ ಸೇರಿಕೊಂಡರು. ಬಳಿಕ 3ನೇ ವಿಕೆಟ್​ಗೆ ಇಂಗ್ಲೆಂಡ್ ಮರು ಹೋರಾಟ ಪ್ರದರ್ಶಿಸಿತು. ಆದರೆ ಶಮಿ ಈ ಜೋಡಿಯ ಆಟಕ್ಕೆ ಬ್ರೇಕ್ ಹಾಕಿದರು. ಭೋಜನಾ ವಿರಾಮಕ್ಕೆ ಇನ್ನೊಂದು ಎಸೆತ ಬಾಕಿ ಇರುವಂತೆ 36 ರನ್​ಗಳಿಸಿದ್ದ ಕೀಟನ್ ಜೆನ್ನಿಂಗ್ಸ್ ಎಲ್​ಬಿ ಬಲೆಗೆ ಬಿದ್ದರು. ಆ ನಂತರ ಊಟ ಮುಗಿಸಿ ಬಂದ ಮೊದಲ ಎಸೆತದಲ್ಲೇ ಜಾನಿ ಬೈಸ್ಟ್ರೋವ್ ಶೂನ್ಯಕ್ಕೆ ಮೊದಲ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು.

ಹೀಗೆ 4 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ನಾಯಕ ಜೋ ರೂಟ್ ಸ್ವಲ್ಪ ಮಟ್ಟಿಗೆ ಶಕ್ತಿ ತುಂಬಿದರು. ಆದರೆ ರನ್ ಕದಿಯುವ ಆತುರದಲ್ಲಿ 48 ರನ್​​ಗಳಿಸಿದ್ದಾಗ ರನ್ಔಟ್ ಆದರು. ಬೆನ್ ಸ್ಟೋಕ್ಸ್ -ಜಾಸ್ ಬಟ್ಲರ್ 6ನೇ ವಿಕೆಟ್ ಜೊತೆಯಾಗಿ ಭಾರತವನ್ನು ಸ್ವಲ್ಪ ಮಟ್ಟಿಗೆ ಕಾಡಿದರು. ಈ ಸಂದರ್ಭದಲ್ಲಿ ಅಶ್ವಿನ್ ಅವರು ಸ್ಟೋಕ್ಸ್ ವಿಕೆಟ್ ಎಗರಿಸಿದರು. ಅರ್ಧಶತಕ ದಾಖಲಿಸಿದ್ದ ಬಟ್ಲರ್ ಇಶಾಂತ್ ಬೌಲಿಂಗ್​ನಲ್ಲಿ 66ರನ್​ಗಳಿಸಿ ಔಟಾದರು. ಒಂದೆಡೆ ಸ್ಯಾಮ್ ಕುರ್ರನ್ ಮಾತ್ರ ಉತ್ತಮ ಬ್ಯಾಟಿಂಗ್ ಮುಂದುವರಿಸಿದ್ದು ಅಜೇಯ 37ರನ್ ಗಳಿಸಿದ್ದಾರೆ. ದಿನದಾಟದ ಕೊನೆಯಲ್ಲಿ ಆದಿಲ್ ರಶೀದ್ ಶಮಿಗೆ ವಿಕೆಟ್ ಒಪ್ಪಿಸಿದ್ದಾರೆ

ಒಟ್ಟಾರೆ 3ನೇ ದಿನದಾಟದಂತ್ಯಕ್ಕೆ ಇಂಗ್ಲೆಂಡ್ 8 ವಿಕೆಟ್ ನಷ್ಟಕ್ಕೆ 260 ರನ್ ಕಲೆಹಾಕಿದ್ದು, 233 ರನ್​​ಗಳ ಮುನ್ನಡೆ ಪಡೆದುಕೊಂಡಿದೆ. ಇನ್ನು ಭಾರತ 4ನೇ ದಿನ ಬಹುಬೇಗ 2 ವಿಕೆಟ್ ಉರುಳಿಸುವ ಯೋಜನೆ ಹಾಕಿಕೊಂಡಿದೆ.
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...