ಭಾರತ ಕ್ರಿಕೆಟ್ ತಂಡ ಇದೀಗ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಈ ಪ್ರವಾಸ ಜನವರಿ ಮೂರನೇ ವಾರದಲ್ಲಿ ಮುಕ್ತಾಯವಾಗಲಿದ್ದು, ಮುಂದಿನ ವರ್ಷ ಫೆಬ್ರವರಿಯಲ್ಲಿ ಇಂಗ್ಲೆಂಡ್ ತಂಡ ಭಾರತಕ್ಕೆ ನಾಲ್ಕು ಟೆಸ್ಟ್, ಮೂರು ಏಕದಿನ ಮತ್ತು ಐದು ಟಿ-20 ಪಂದ್ಯಗಳಿಗಾಗಿ ಭಾರತಕ್ಕೆ ಆಗಮಿಸಲಿರುವುದು ಖಚಿತವಾಗಿದೆ. ಈ ಪ್ರವಾಸವು ಫೆಬ್ರವರಿ 5 ರಿಂದ ಚೆನ್ನೈನಲ್ಲಿ ಪ್ರಾರಂಭವಾಗಲಿದ್ದು, ಫೆಬ್ರವರಿ 24 ರಂದು ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯ ಅಹಮದಾಬಾದ್ನಲ್ಲಿ ಹಗಲು-ರಾತ್ರಿ ಪಂದ್ಯವನ್ನಾಗಿ ಆಯೋಜನೆ ಮಾಡಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಗುರುವಾರ ದೃಢಪಡಿಸಿದೆ. ಅಲ್ಲದೆ, ಕೊರೋನಾ ಸಮಸ್ಯೆಯಿಂದಾಗಿ ನಾಲ್ಕನೇ ಟೆಸ್ಟ್ ಪಂದ್ಯ ಹಾಗೂ ಐದು ಟಿ-20 ಪಂದ್ಯಗಳನ್ನು ಅಹಮದಾಬಾದ್ನಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಮೊಟೇರಾ ಕ್ರೀಡಾಂಗಣದಲ್ಲೇ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಪ್ರಕಟಣೆ ಹೊರಡಿಸಿದೆ.
ಇಂಗ್ಲೆಂಡ್ ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಈ ಪ್ರವಾಸದಲ್ಲಿ ಮೂರು ಟಿ-20 ಪಂದ್ಯಗಳು ನಡೆದಿದ್ದು ಇಂಗ್ಲೆಂಡ್ ಕ್ಲೀನ್ ಸ್ವೀಪ್ ಸಾಧಿಸಿತ್ತು. ಆದರೆ, ದಕ್ಷಿಣ ಆಫ್ರಿಕಾದ ಕೆಲವು ಆಟಗಾರರು ಕೊರೋನಾ ಸೋಂಕಿಗೆ ತುತ್ತಾದ ಪರಿಣಾಮ ಟೆಸ್ಟ್ ಹಾಗೂ ಏಕದಿನ ಸರಣಿಗಳನ್ನು ರದ್ದುಮಾಡಲಾಗಿದೆ. ಈ ಸರಣಿ ನಂತರ ಇಂಗ್ಲೆಂಡ್ ಕೈಗೊಳ್ಳುತ್ತಿರುವ ಎರಡನೇ ವಿದೇಶಿ ಸರಣಿ ಭಾರತದ್ದೇ ಆಗಿದೆ.
ಇನ್ನೂ ಕಳೆದ ಮಾರ್ಚ್ ಮಾರ್ಚ್-ಮೇ 2020 ರಿಂದ ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯಬೇಕಿತ್ತು. ಆದರೆ, ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಈ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಾಯಿತು.
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಲಿದ್ದು, ಈ ವರ್ಷದ ಕೊನೆಯಲ್ಲಿ ಲಾರ್ಡ್ಸ್‌ನಲ್ಲಿ ನಡೆಯಲಿರುವ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಉಭಯ ತಂಡಗಳು ಅರ್ಹತೆ ಗಿಟ್ಟಿಸಲು ಈ ಗೆಲುವು ಅವಶ್ಯಕವಾಗಿದೆ.
ಪೂರ್ಣ ವೇಳಾಪಟ್ಟಿ
1 ನೇ ಟೆಸ್ಟ್, ಚೆನ್ನೈ: ಫೆಬ್ರವರಿ 5 ರಿಂದ 9
2 ನೇ ಟೆಸ್ಟ್, ಚೆನ್ನೈ: ಫೆಬ್ರವರಿ 13 ರಿಂದ 17
3 ನೇ ಟೆಸ್ಟ್, ಅಹಮದಾಬಾದ್ (ಹಗಲು ರಾತ್ರಿ): ಫೆಬ್ರವರಿ 24 ರಿಂದ 28 ರವರೆಗೆ
4 ನೇ ಟೆಸ್ಟ್, ಅಹಮದಾಬಾದ್: ಮಾರ್ಚ್ 4 ರಿಂದ 8
ಐದು ಟಿ 20 ಪಂದ್ಯಗಳು
1 ನೇ ಟಿ-20 ಅಹಮದಾಬಾದ್: ಮಾರ್ಚ್ 12
2 ನೇ ಟಿ-20 ಅಹಮದಾಬಾದ್: ಮಾರ್ಚ್ 14
3 ನೇ ಟಿ-20 ಅಹಮದಾಬಾದ್: ಮಾರ್ಚ್ 16
4 ನೇ ಟಿ-20 ಅಹಮದಾಬಾದ್: ಮಾರ್ಚ್ 18
5 ನೇ ಟಿ-20 ಅಹಮದಾಬಾದ್: ಮಾರ್ಚ್ 20
ಮೂರು ಏಕದಿನ ಪಂದ್ಯಗಳು
1 ನೇ ಏಕದಿನ, ಪುಣೆ: ಮಾರ್ಚ್ 23
2 ನೇ ಏಕದಿನ, ಪುಣೆ: ಮಾರ್ಚ್ 26
3 ನೇ ಏಕದಿನ, ಪುಣೆ: ಮಾರ್ಚ್ 28
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ