ಬೆನ್ ಸ್ಟೋಕ್ಸ್ ವಿರುದ್ಧ ಕೋರ್ಟ್​ನಲ್ಲಿ ವಿಚಾರಣೆ ಆರಂಭ; ಸಂಕಷ್ಟದಲ್ಲಿ ಇಂಗ್ಲೆಂಡ್ ಕ್ರಿಕೆಟರ್​​

news18
Updated:August 7, 2018, 3:58 PM IST
ಬೆನ್ ಸ್ಟೋಕ್ಸ್ ವಿರುದ್ಧ ಕೋರ್ಟ್​ನಲ್ಲಿ ವಿಚಾರಣೆ ಆರಂಭ; ಸಂಕಷ್ಟದಲ್ಲಿ ಇಂಗ್ಲೆಂಡ್ ಕ್ರಿಕೆಟರ್​​
news18
Updated: August 7, 2018, 3:58 PM IST
ನ್ಯೂಸ್ 18 ಕನ್ನಡ

ಕಳೆದ ವರ್ಷ ನೆಟ್​​​ಕ್ಲಬ್​​ನಲ್ಲಿ ಮಧ್ಯಪಾನ ಮಾಡಿ ಜಗಳವಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಆಲ್ರೌಂಡರ್ ಆಟಗಾರ ಬೆನ್ ಸ್ಟೋಕ್ಸ್ ವಿರುದ್ಧ ಕೋರ್ಟ್​ ವಿಚಾರಣೆ ಆರಂಭಿಸಿದೆ.

ಈ ವೇಳೆ ಬ್ರಿಸ್ಟಲ್ ಕ್ರೌನ್ ಕೋರ್ಟ್​, ಬೆನ್​ಸ್ಟೋಕ್ಸ್​​​​​​ ಅವರು 2017 ಸೆಪ್ಟೆಂಬರ್ 25 ರಂದು ರಾತ್ರಿ 2 ಗಂಟೆ ಸುಮಯದಲ್ಲಿ ತಮ್ಮ ಮೇಲೆ ನಿಯಂತ್ರಣವನ್ನು ಕಳೆದುಕೊಂಡಿದ್ದರು ಎಂದು ಹೇಳಿದೆ. ಆದರೆ ​ಸ್ಟೋಕ್ಸ್ ಅವರು, ನಾನು ನನ್ನ ಆತ್ಮ ರಕ್ಷಣೆಗಾಗಿ ಈ ರೀತಿ ಮಾಡಬೇಕಾಗಿ ಬಂತು. ಉದ್ದೇಶಪೂರ್ವಕವಾಗಿ ನಾನು ಹಲ್ಲೆ ನಡೆಸಿಲ್ಲ ಎಂದು ಹೇಳಿದ್ದಾರೆ.

ಈ ಪ್ರಕರಣದ ಕುರಿತು ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದ್ದು, ಒಟ್ಟು 5 ದಿನ ಮುಂದುವರಿಯಲಿದೆ. ಸದ್ಯ ಸ್ಟೋಕ್ಸ್ ತಮ್ಮನ್ನು ರಕ್ಷಿಸಲು ವಿಫಲವಾದರೆ ಇಕ್ಕಟ್ಟಿಗೆ ಸಿಲುಕಲಿದ್ದಾರೆ. ಆ. 9ರಿಂದ ಆರಂಭವಾಗುವ ಭಾರತ-ಇಂಗ್ಲೆಂಡ್ ನಡುವಣ 2ನೇ ಟೆಸ್ಟ್​ನಿಂದಲೂ ಸ್ಟೋಕ್ಸ್​ ಹೊರಗುಳಿದಿದ್ದಾರೆ.
First published:August 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...